IPL

  • associate partner

CSK vs RR, IPL 2020: ಐಪಿಎಲ್​ನಿಂದ ಬಹುತೇಕ ಹೊರಬಿದ್ದ ಚೆನ್ನೈ: ಆರ್​ಆರ್​ ಪ್ಲೇ ಆಫ್ ಕನಸು ಜೀವಂತ

IPL 2020, Chennai Super Kings vs Rajasthan Royals: ಈ ಸಂದರ್ಭ ಒಂದಾದ ನಾಯಕ ಸ್ಟೀವ್ ಸ್ಮಿತ್ ಹಾಗೂ ಜಾಸ್ ಬಟ್ಲರ್ ಎಚ್ಚರಿಕೆಯ ಆಟ ಪ್ರದರ್ಶಿಸಿದರು. ಆರಂಭದಲ್ಲಿ ನಿಧಾನಗತಿಯ ಆಟ ಪ್ರದರ್ಶಿಸಿದ ಈ ಜೋಡಿ ಬಳಿಕ ಆರ್ಭಟಿಸಿತು.

news18-kannada
Updated:October 19, 2020, 10:53 PM IST
CSK vs RR, IPL 2020: ಐಪಿಎಲ್​ನಿಂದ ಬಹುತೇಕ ಹೊರಬಿದ್ದ ಚೆನ್ನೈ: ಆರ್​ಆರ್​ ಪ್ಲೇ ಆಫ್ ಕನಸು ಜೀವಂತ
RR
  • Share this:
ಅಬುಧಾಬಿ (ಅ. 19): ಇಲ್ಲಿನ ಶೇಕ್ ಝಯೇದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ 37ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 7 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ತನ್ನ ಪ್ಲೇ ಆಫ್ ಕನಸನ್ನ ಜೀವಂತವಾಗಿರಿಸಿದೆ. ಇತ್ತ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಹೀನಾಯ ಸೋಲುಕಂಡ ಧೋನಿ ಪಡೆ ಬಹುತೇಕ ಟೂರ್ನಿಯಿಂದಲೇ ಹೊರಬಿದ್ದಿದೆ.

ಚೆನ್ನೈ ನೀಡಿದ್ದ 126 ರನ್​ಗಳ ಸುಲಭ ಟಾರ್ಗೆಟ್ ಬೆನ್ನಟ್ಟಿದ ಆರ್​ಆರ್​ ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬೆನ್ ಸ್ಟೋಕ್ಸ್​ 11 ಎಸೆತಗಳಲ್ಲಿ 19 ರನ್ ಬಾರಿಸಿ ದೀಪಕ್ ಚಹಾರ್ ಬೌಲಿಂಗ್​ನಲ್ಲಿ ಬೌಲ್ಡ್​ ಆದರೆ, ರಾಬಿನ್ ಉತ್ತಪ್ಪ 4 ರನ್​ಗೆ ಔಟ್ ಆದರು. ಸಂಜು ಸ್ಯಾಮ್ಸನ್(0) ಧೋನಿ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು.

ಆದರೆ, ಸಿಎಸ್​ಕೆ ಬೌಲರ್​ಗಳು ಆರಂಭದಲ್ಲಿ ಅಬ್ಬರಿಸಿದ್ದು ಬಿಟ್ಟರೆ ನಂತರ ಸಂಪೂರ್ಣ ವಿಫಲರಾದರು. 4ನೇ ವಿಕೆಟ್​ಗೆ ಒಂದಾದ ನಾಯಕ ಸ್ಟೀವ್ ಸ್ಮಿತ್ ಹಾಗೂ ಜಾಸ್ ಬಟ್ಲರ್ ಎಚ್ಚರಿಕೆಯ ಆಟ ಪ್ರದರ್ಶಿಸಿದರು. ಆರಂಭದಲ್ಲಿ ನಿಧಾನಗತಿಯ ಆಟಕ್ಕೆ ಮೊರೆಹೋದರೆ, ನಂತರ ಬಟ್ಲರ್ ಬಿರುಸಿನ ಬ್ಯಾಟಿಂಗ್ ನಡೆಸಿರು. ಇವರಿಗೆ ಸ್ಮಿತ್ ಅತ್ಯುತ್ತಮ ಸಾತ್ ನೀಡಿದರು. ಈ ಜೋಡಿ ಬರೋಬ್ಬರಿ 98 ರನ್​ಗಳ ಜೊತೆಯಾಟ ಆಡಿತು.



ಪರಿಣಾಮ ಆರ್​ಆರ್​ 17.3 ಓವರ್​ನಲ್ಲಿ 3 ವಿಕೆಟ್ ಕಳೆದುಕೊಂಡು 126 ರನ್ ಬಾರಿಸುವ ಮೂಲಕ ಗೆಲುವು ಸಾಧಿಸಿತು. ಬಟ್ಲರ್ 48 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ ಸಿಡಿಸಿ ಅಜೇಯ 70 ರನ್ ಚಚ್ಚಿದರೆ, ಸ್ಮಿತ್ 34 ಎಸೆತಗಳಲ್ಲಿ 2 ಬೌಂಡರಿ ಬಾರಿಸಿ ಅಜೇಯ 26 ರನ್ ಗಳಿಸಿದರು. ಚೆನ್ನೈ ಪರ ದೀಪಕ್ ಚಹಾರ್ 2 ವಿಕೆಟ್ ಕಿತ್ತರೆ, ಜೋಷ್ ಹ್ಯಾಜ್ಲೆವುಡ್ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಚೆನ್ನೈ ಮತ್ತೆ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು. ಓಪನರ್​ ಆಗಿ ಸ್ಯಾಮ್ ಕುರ್ರನ್ ಜೊತೆ ಕಣಕ್ಕಿಳಿದ ಫಾಪ್ ಡುಪ್ಲೆಸಿಸ್ ಕೇವಲ 10 ರನ್​ಗೆ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ನಂತರ ಬಂದ ಶೇನ್ ವಾಟ್ಸನ್ ಕೂಡ 8 ರನ್​ಗೆ ಬ್ಯಾಟ್ ಕೆಳಗಿಟ್ಟರು. ಕುರ್ರನ್ 25 ಎಸೆತಗಳಲ್ಲಿ 22 ರನ್ ಬಾರಿಸಿ ನಿರ್ಗಮಿಸಿದರು.





ಕಳೆದ ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗಿದ್ದ ಅಂಬಟಿ ರಾಯುಡು ಈ ಬಾರಿ ಕೇವಲ 13 ರನ್​ಗೆ ಸುಸ್ತಾದರು. ಈ ಮೂಲಕ 56 ರನ್ ಆಗುವ ಹೊತ್ತಿಗೆ ಚೆನ್ನೈ ತಂಡ ತನ್ನ 4 ಪ್ರಮುಖ ವಿಕೆಟ್ ಕಳೆದುಕೊಂಡಿತು. ಈ ಸಂದರ್ಭ ಒಂದಾದ ರವೀಂದ್ರ ಜಡೇಜಾ ಹಾಗೂ ನಾಯಕ ಎಂ ಎಸ್ ಧೋನಿ ಎಚ್ಚರಿಕೆಯ ಆಟ ಪ್ರದರ್ಶಿಸಿದರು.

ವಿಕೆಟ್ ಕಳೆದುಕೊಳ್ಳದಂತೆ ರನ್ ಕಲೆಹಾಕಿದ ಈ ಜೋಡಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು. ಅರ್ಧಶತಕದ ಜೊತೆಯಾಟ ಆಡಿತು. ಆದರೆ, 18ನೇ ಓವರ್​ನಲ್ಲಿ 2 ರನ್ ಕಲೆಹಾಕಲೋಗಿ ಧೋನಿ ರನೌಟ್​ಗೆ ಬಲಿಯಾದರು. ಎಂಎಸ್​ಡಿ 28 ಎಸೆತಗಳಲ್ಲಿ 28 ರನ್ ಗಳಿಸಿದರು.

ಕೊನೆ ಹಂತದಲ್ಲಿ ಜಡೇಜಾ ಒಂದಿಷ್ಟು ರನ್ ಕಲೆಹಾಕಿದರು. ಜಡೇಜಾ 30 ಎಸೆತಗಳಲ್ಲಿ 35 ರನ್ ಬಾರಿಸಿದರು. ಅಂತಿಮವಾಗಿ ಚೆನ್ನೈ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು. ರಾಜಸ್ಥಾನ್ ಪರ ಜೋಫ್ರಾ ಆರ್ಚರ್, ಕಾರ್ತಿಕ್ ತ್ಯಾಗಿ ಶ್ರೇಯಸ್ ಗೋಪಾಲ್ ಹಾಗೂ ರಾಹುಲ್ ತೇವಾಟಿಯ ತಲಾ 1 ವಿಕೆಟ್ ಪಡೆದರು.

ರಾಜಸ್ಥಾನ್ ರಾಯಲ್ಸ್: ಜಾಸ್ ಬಟ್ಲರ್, ಬೆನ್ ಸ್ಟೋಕ್ಸ್, ರಾಬಿನ್ ಉತ್ತಪ್ಪ, ಸ್ಟೀವ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ರಾಹುಲ್ ತೇವಾಟಿಯಾ, ಶ್ರೇಯಸ್ ಗೋಪಾಲ್, ಜೋಫ್ರಾ ಆರ್ಚರ್, ಕಾರ್ತಿಕ್ ತ್ಯಾಗಿ, ಅಂಕಿತ್ ರಜಪೂತ್.

ಚೆನ್ನೈ ಸೂಪರ್‌ ಕಿಂಗ್ಸ್: ಶೇನ್‌ ವ್ಯಾಟ್ಸನ್‌, ಫಾಪ್ ಡುಪ್ಲೆಸಿಸ್, ಅಂಬಟಿ ರಾಯುಡು, ಎಂಎಸ್‌ ಧೋನಿ (ನಾಯಕ, ವಿಕೆಟ್‌ ಕೀಪರ್‌), ಕೇದರ್ ಜಾಧವ್, ರವೀಂದ್ರ ಜಡೇಜಾ, ಸ್ಯಾಮ್ ಕುರ್ರನ್, ದೀಪಕ್‌ ಚಹರ್‌, ಶಾರ್ದೂಲ್ ಠಾಕೂರ್, ಪಿಯೂಷ್ ಚಾವ್ಲಾ, ಜೋಷ್ ಹ್ಯಾಜ್ಲೆವುಡ್.
Published by: Vinay Bhat
First published: October 19, 2020, 10:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading