IPL

  • associate partner

IPL 2020: ವಿಷಲ್ ಹೊಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ಪ್ಲೇ ಆಫ್ ಪ್ರವೇಶಿಸಲು CSK ಗೆ ಇನ್ನೂ ಇದೆ ಅವಕಾಶ

CSK Play offs Chances: ಸನ್​ರೈಸರ್ಸ್ ಹೈದರಾಬಾದ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಲಾ 2 ರಲ್ಲಿ ಸೋಲು ಕಾಣಬೇಕು. ಹಾಗೆಯೇ 4 ಪಂದ್ಯಗಳಲ್ಲಿ ಕೆಕೆಆರ್ 3 ರಲ್ಲಿ ಸೋತರೆ ಸಿಎಸ್​ಕೆ ಪ್ಲೇ ಆಫ್ ಕನಸು ಮತ್ತಷ್ಟು ಸರಾಗವಾಗಲಿದೆ.

news18-kannada
Updated:October 22, 2020, 7:01 PM IST
IPL 2020: ವಿಷಲ್ ಹೊಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್: ಪ್ಲೇ ಆಫ್ ಪ್ರವೇಶಿಸಲು  CSK ಗೆ ಇನ್ನೂ ಇದೆ ಅವಕಾಶ
CSK
  • Share this:
ಐಪಿಎಲ್​ನಲ್ಲಿ 8 ಬಾರಿ ಐಪಿಎಲ್ ಫೈನಲ್ ಆಡಿದ ಟೀಮ್, ಮೂರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡ, 10 ಬಾರಿ ಪ್ಲೇ ಆಫ್ ಪ್ರವೇಶಿಸಿದ ಏಕೈಕ ಪಡೆ, ಎಸ್...ಅದು ಚೆನ್ನೈ ಸೂಪರ್ ಕಿಂಗ್ಸ್. ಆದರೆ​ ಈ ಬಾರಿ ಮಾತ್ರ ಸೋಲಿನ ಸುಳಿಯಲ್ಲಿ ಸಿಲುಕಿದೆ. ಆಡಿರುವ 10 ಪಂದ್ಯಗಳಲ್ಲಿ 7ರಲ್ಲಿ ಸೋತು ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದಿದೆ. ಇದರೊಂದಿಗೆ ಪ್ಲೇ ಆಫ್​ ಹಂತಕ್ಕೇರುವ ಸಿಎಸ್​ಕೆ ಅವಕಾಶಗಳು ಮುಚ್ಚಿವೆ ಎಂದು ನೀವಂದುಕೊಂಡರೆ ನಿಮ್ಮ ಊಹೆ ತಪ್ಪು. ಏಕೆಂದರೆ ಇನ್ನೂ 4 ಪಂದ್ಯಗಳು ಬಾಕಿ ಉಳಿದಿವೆ. ಅದು ಕೂಡ ಅಂಕ ಪಟ್ಟಿಯಲ್ಲಿ ಟಾಪ್-4 ರಲ್ಲಿ ಸ್ಥಾನಗಿಟ್ಟಿಸಿರುವ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಎಂಬುದು ವಿಶೇಷ. ಹಾಗೆಯೇ 5ನೇ ಸ್ಥಾನದಲ್ಲಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೊನೆಯ ಪಂದ್ಯವಾಡಲಿದೆ.

ಪ್ರಸ್ತುತ ಯಾವುದೇ ತಂಡ ಪ್ಲೇ ಆಫ್​ ಖಚಿತಪಡಿಸಿಕೊಂಡಿಲ್ಲ. ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್​ಸಿಬಿ ಮುಂದಿನ ಹಂತಕ್ಕೇರಲು ಇನ್ನೂ ಕೂಡ ಒಂದು ಗೆಲ್ಲಬೇಕಿದೆ. ಮುಂಬೈ ಎರಡು ಪಂದ್ಯಗಳನ್ನು ಗೆದ್ದರೆ ಬಹುತೇಕ ಪ್ಲೇ ಆಫ್ ಆಡಲಿದೆ. ಇದಾಗ್ಯೂ 4ನೇ ಸ್ಥಾನಕ್ಕೇರಲು 5 ತಂಡಗಳಿಗೂ ಇನ್ನೂ ಅವಕಾಶವಿದೆ. ಹೀಗಾಗಿ ಮುಂದಿನ 4 ಪಂದ್ಯಗಳು ಜಿದ್ದಾಜಿದ್ದಿನಿಂದ ಕೂಡಿರಲಿದೆ.

ಒಂದು ವೇಳೆ ಈ 4 ಪಂದ್ಯಗಳಲ್ಲಿ ಧೋನಿ ಪಡೆ ಭರ್ಜರಿ ಜಯಗಳಿಸಿದರೆ 8 ಅಂಕಗಳನ್ನು ಪಡೆಯಬಹುದು. ಅದರೊಂದಿಗೆ ಉತ್ತಮ ನೆಟ್ ರನ್ ರೇಟ್​ ಜೊತೆ ಒಟ್ಟು 14 ಅಂಕಗಳನ್ನು ಪಡೆಯಬಹುದು. ಇದರೊಂದಿಗೆ ಉಳಿದ ತಂಡಗಳ ಫಲಿತಾಂಶದೊಂದಿಗೆ ಅದೃಷ್ಟ ಕೂಡ ಸಿಎಸ್​ಕೆ ಸಾಥ್ ನೀಡಬೇಕಿದೆ. ಏಕೆಂದರೆ ಧೋನಿ ಸೈನ್ಯ 4ರಲ್ಲಿ ಜಯಿಸಿದ್ರೆ, ಅತ್ತ ರಾಜಸ್ಥಾನ್ ರಾಯಲ್ಸ್, ಸನ್​ರೈಸರ್ಸ್ ಹೈದರಾಬಾದ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಲಾ 2 ರಲ್ಲಿ ಸೋಲು ಕಾಣಬೇಕು. ಹಾಗೆಯೇ 4 ಪಂದ್ಯಗಳಲ್ಲಿ ಕೆಕೆಆರ್ 3 ರಲ್ಲಿ ಸೋತರೆ ಸಿಎಸ್​ಕೆ ಪ್ಲೇ ಆಫ್ ಕನಸು ಮತ್ತಷ್ಟು ಸರಾಗವಾಗಲಿದೆ.

ಇನ್ನೊಂದು ಲೆಕ್ಕಾಚಾರದ ಪ್ರಕಾರ, ರಾಜಸ್ಥಾನ ರಾಯಲ್ಸ್, ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡಗಳು ಬಾಕಿ ಉಳಿದಿರುವ 4 ಪಂದ್ಯಗಳ ಪೈಕಿ ಕನಿಷ್ಠ 1ರಲ್ಲಿ ಸೋಲಬೇಕು. ಹಾಗೆಯೇ ಸನ್​ರೈಸರ್ಸ್ ಹೈದರಾಬಾದ್​ ತಂಡವೂ ಬಾಕಿ ಉಳಿದಿರುವ 5 ಪಂದ್ಯಗಳಲ್ಲಿ 1ರಲ್ಲಿ ಪರಾಜಯಗೊಳ್ಳಬೇಕು. ಮತ್ತೊಂದಡೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 4 ಪಂದ್ಯಗಳಲ್ಲಿ 2 ರಲ್ಲಿ ಸೋಲಬೇಕು. ಆಗ ಈ 4 ತಂಡಗಳು ಅಂಕ ಪಟ್ಟಿಯಲ್ಲಿ 14 ಅಂಕಗಳೊಂದಿಗೆ ಸ್ಥಾನ ಪಡೆಯಲಿದೆ. ಈ ವೇಳೆ ನೆಟ್ ರನ್​ ರೇಟ್ ಲೆಕ್ಕಚಾರದಲ್ಲಿ ಉಳಿದೆಲ್ಲಾ ತಂಡಗಳಿಂದ ಸಿಎಸ್​ಕೆ ಮುಂದಿದ್ರೆ ಪ್ಲೇ ಆಫ್ ಪ್ರವೇಶಿಸಬಹುದು.

ಇದೆಲ್ಲಾ ನಡೆಯುವುದು ಪವಾಡ ಎಂದು ನೀವಂದುಕೊಂಡರೆ ನಿಮ್ಮ ಊಹೆ ತಪ್ಪು. ಏಕೆಂದರೆ ಐಪಿಎಲ್​ನಲ್ಲಿ 7 ಬಾರಿ ಪ್ಲೇಆಫ್‌ಗೆ ಅರ್ಹತೆ ಪಡೆಯುವ ಅಂತಿಮ ತಂಡವು ಸಾಮಾನ್ಯವಾಗಿ 14 ಪಾಯಿಂಟ್‌ಗಳು ಅಥವಾ ಅದಕ್ಕಿಂತ ಕಡಿಮೆ ಅಂಕಗಳೊಂದಿಗೆ ಎಂಟ್ರಿ ಕೊಟ್ಟಿರುವ ಇತಿಹಾಸವಿದೆ. ಅದರಲ್ಲೂ ಮುಖ್ಯವಾಗಿ 2019ರ ಐಪಿಎಲ್​ನಲ್ಲಿ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡ ಸನ್​ರೈಸರ್ಸ್​ ಹೈದರಾಬಾದ್ ಕೇವಲ 12 ಪಾಯಿಂಟ್‌ಗಳನ್ನು ಹೊಂದಿತ್ತು. ನೆಟ್ ರನ್ ರೇಟ್​ ಮೂಲಕ ಕೆಕೆಆರ್ ತಂಡವನ್ನು ಹಿಂದಿಕ್ಕಿ ಹೈದರಾಬಾದ್ ನಾಕೌಟ್ ಹಂತಕ್ಕೆ ಪ್ರವೇಶಿಸಿತ್ತು. ಹೀಗಾಗಿ ಸಿಎಸ್​ಕೆ ತಂಡವು ಮುಂದಿನ ಪಂದ್ಯಗಳ ಮೂಲಕ ಪ್ಲೇ ಆಫ್ ಪ್ರವೇಶಿಸಿದ್ರೆ ಅಚ್ಚರಿಪಡಬೇಕಿಲ್ಲ.
POINTS TABLE:

SCHEDULE TIME TABLE: ORANGE CAP:

PURPLE CAP:

RESULT DATA:

MOST SIXES:

ಇದನ್ನೂ ಓದಿ: IPL 2020: 3ನೇ ವರ್ಷಕ್ಕೆ CSK ಸುಸ್ತು: ಡ್ಯಾಡಿಸ್ ಆರ್ಮಿ ವಿರುದ್ಧ ಕಿಡಿಕಾರಿದ ಕೋಚ್​
Published by: zahir
First published: October 22, 2020, 7:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading