IPL

  • associate partner

Devdutt Padikkal: ಕೊನೆಗೂ ರಿಲೇಶನ್​ಶಿಪ್ ಸ್ಟೇಟಸ್​ ಬಿಟ್ಟುಕೊಟ್ಟ​ ದೇವದತ್​ ಪಡಿಕಲ್​ !

ದೇವದತ್​ ಮೊದಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿ ಎಲ್ಲರ ಗಮನ ಸೆಳೆದಿದ್ದರು. ಅಲ್ಲದೆ, ದೇವದತ್​ ತುಂಬಾನೇ ಸ್ಮಾರ್ಟ್​ ಆಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ, ದೇವದತ್​ ಸಿಂಗಲ್ಲೋ ಅಥವಾ ಅವರಿಗೆ ಗರ್ಲ್​ ಫ್ರೆಂಡ್​ ಇದೆಯೋ ಎನ್ನವು ಪ್ರಶ್ನೆ ಅನೇಕರನ್ನು ಕಾಡಿತ್ತು.

news18-kannada
Updated:October 21, 2020, 11:29 AM IST
Devdutt Padikkal: ಕೊನೆಗೂ ರಿಲೇಶನ್​ಶಿಪ್ ಸ್ಟೇಟಸ್​ ಬಿಟ್ಟುಕೊಟ್ಟ​ ದೇವದತ್​ ಪಡಿಕಲ್​ !
ದೇವದತ್ ಪಡಿಕ್ಕಲ್
  • Share this:
ಐಪಿಎಲ್​ಗೆ ಪದಾರ್ಪಣೆ ಮಾಡಿರುವ ಕನ್ನಡಿಗ ದೇವದತ್​ ಪಡಿಕ್ಕಲ್ ಅವರಿಗೆ ಇನ್ಸ್​ಟಾಗ್ರಾಂನಲ್ಲಿ ಫಾಲೋವರ್​ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಕಾರಣ ಅವರ ಆಟದ ಶೈಲಿ ಮತ್ತು ಮುಗ್ಧನಂತೆ ಕಾಣುವ ಮುಖ. ಈವರೆಗೆ 9 ಐಪಿಎಲ್​ ಪಂದ್ಯಗಳನ್ನು ಆಡಿರುವ ಅವರು 296 ರನ್​ ಕಲೆ ಹಾಕಿದ್ದಾರೆ. ಅಲ್ಲದೆ, ಮೂರು ಅರ್ಧಶತಕ ಬಾರಿಸಿದ್ದಾರೆ. ಈಗ ಅವರು ತಮ್ಮ ರಿಲೇಶನ್​ ಸ್ಟೇಟಸ್​ ಬಗ್ಗೆ ಹೇಳಿಕೊಂಡಿದ್ದಾರೆ.

ದೇವದತ್​ ಮೊದಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿ ಎಲ್ಲರ ಗಮನ ಸೆಳೆದಿದ್ದರು. ಅಲ್ಲದೆ, ದೇವದತ್​ ತುಂಬಾನೇ ಸ್ಮಾರ್ಟ್​ ಆಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ, ದೇವದತ್​ ಸಿಂಗಲ್ಲೋ ಅಥವಾ ಅವರಿಗೆ ಗರ್ಲ್​ ಫ್ರೆಂಡ್​ ಇದೆಯೋ ಎನ್ನವು ಪ್ರಶ್ನೆ ಅನೇಕರನ್ನು ಕಾಡಿತ್ತು.

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಈ ಬಗ್ಗೆ ದೇವದತ್​ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ನೀವು ಸಿಂಗಲ್ಲೋ ಅಥವಾ ನಿಮಗೆ ಗರ್ಲ್​ಫ್ರೆಂಡ್​ ಇದ್ದಾರೋ ಎಂದು ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ಉತ್ತರಿಸಿದ್ದ ದೇವದತ್​, ನಾನು ಸಿಂಗಲ್​ ಎಂದಿದ್ದಾರೆ. ಸದ್ಯ ಈ ವಿಡಿಯೋ ಸಾಕಷ್ಟು ವೈರಲ್​ ಆಗಿದೆ.ದೇವದತ್​ ಪಡಿಕಲ್​ ಆರ್​ಸಿಬಿಯಲ್ಲಿರುವ ಏಕೈಕ ಕನ್ನಡಿಗ. ಈ ಮೊದಲು ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ರನ್​ ಹೊಳೆಯನ್ನೇ ಹರಿಸಿದ್ದ ಅವರು, ಈಗ ಐಪಿಎಲ್​ಗೆ ಪದಾರ್ಪಣೆ ಮಾಡಿದ್ದಾರೆ. ದೇವದತ್ 2019ರಲ್ಲಿ ರಾಯಲ್​ ಚಾಲೆಂಜರ್ಸ್​ ತಂಡ ಸೇರಿಕೊಂಡಿದ್ದರು. ಆದರೆ, ಅವರ ಶಕ್ತಿ ಪ್ರದರ್ಶನಕ್ಕೆ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.ಅವರು ಈಗ ರಣಜಿ ಟ್ರೋಫಿ ಹಾಗೂ ಹಜಾರೆ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದರಿಂದ ಅವರಿಗೆ ಆಡೋಕೆ ಅವಕಾಶ ಸಿಕ್ಕಿದೆ.
Published by: Rajesh Duggumane
First published: October 21, 2020, 11:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading