IPL

  • associate partner

IPL 2020: ಐಪಿಎಲ್​ನಲ್ಲಿ ಯುವ ಭಾರತೀಯರ ಮಿಂಚು: ಟೀಂ ಇಂಡಿಯಾದಲ್ಲಿ ಮುಂದೆ ಇವರದ್ದೇ ಹವಾ!

ಈ ಬಾರಿಯ ಐಪಿಎಲ್​ನಲ್ಲಿ ಈವರೆಗೆ ಹೆಸರೇ ತಿಳಿದಿರದ ಅನೇಕ ಆಟಗಾರರು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿ ಕತ್ತಲು ಕಳೆದು ಬೆಳಗಾಗುವಷ್ಟರಲ್ಲಿ ಫೇಮಸ್ ಆಗಿದ್ದಾರೆ.

news18-kannada
Updated:October 22, 2020, 8:23 PM IST
IPL 2020: ಐಪಿಎಲ್​ನಲ್ಲಿ ಯುವ ಭಾರತೀಯರ ಮಿಂಚು: ಟೀಂ ಇಂಡಿಯಾದಲ್ಲಿ ಮುಂದೆ ಇವರದ್ದೇ ಹವಾ!
IPL 2020
  • Share this:
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ದೂರದ ಯುಎಇನಲ್ಲಿ ನಡೆಯುತ್ತಿದೆ. ಪ್ರೇಕ್ಷಕರಿಲ್ಲದೆ ಕಾಲಿ ಮೈದಾನದಲ್ಲಿ ಏರ್ಪಡಿಸಲಾಗಿದೆ. ಆದರೂ ಐಪಿಎಲ್ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಆಟಗಾರರಂತು ಖಾಲಿ ಮೈದಾನದಲ್ಲೇ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಭಾರತದ ಯುವ ಆಟಗಾರರು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕುತ್ತಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಡುವ ಸೂಚನೆ ನೀಡುತ್ತಿದ್ದಾರೆ. ಈವರೆಗೆ ಹೆಸರೇ ತಿಳಿದಿರದ ಅನೇಕ ಆಟಗಾರರು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿ ಕತ್ತಲು ಕಳೆದು ಬೆಳಗಾಗುವಷ್ಟರಲ್ಲಿ ಫೇಮಸ್ ಆಗಿದ್ದಾರೆ.

ದೇವದತ್ ಪಡಿಕ್ಕಲ್:

ಕರ್ನಾಟಕದ ಮತ್ತೊಬ್ಬ ಯುವ ಪ್ರತಿಭೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಅವರೇ ಆರ್​ಸಿಬಿ ತಂಡದ ನಂಬಿಕೆಯ ಓಪನರ್ ದೇವದತ್ ಪಡಿಕ್ಕಲ್. ಕಳೆದ ವರ್ಷವೇ ಇವರು ಆರ್​ಸಿಬಿ ತಂಡದಲ್ಲಿದ್ದರೂ ಅವಕಾಶ ಸಿಕ್ಕಿರಲಿಲ್ಲ. ಆದರೆ, ಈ ಬಾರಿ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಆಡಿದ 10 ಪಂದ್ಯಗಳಲ್ಲಿ 3 ಅರ್ಧಶತಕ ಸಹಿತ 321 ರನ್ ಬಾರಿಸಿದ್ದಾರೆ.

RR vs SRH, IPL 2020 Live Score

ರವಿ ಬಿಷ್ಟೋಯಿ:

ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ಸ್ಟಾರ್ ಸ್ಪಿನ್ನರ್ ಆಗಿರುವ ರವಿ ಬಿಷ್ಟೋಯಿ ಕಳೆದ ವರ್ಷ ನಡೆದ ಅಂಡರ್-19 ವಿಶ್ವಕಪ್​ನಲ್ಲಿ ಗರಿಷ್ಠ ವಿಕೆಟ್ ಪಡೆದವರಾಗಿದ್ದಾರೆ. ಈ ಬಾರಿಯ ಐಪಿಎಲ್​ನಲ್ಲಿ ಆಡಿರುವ 10 ಪಂದ್ಯಗಳಲ್ಲಿ 9 ವಿಕೆಟ್ ಕಿತ್ತು ಎದುರಾಳಿಗೆ ಮಾರಕವಾಗಿ ಪರಿಣಮಿಸಿದ್ದಾರೆ. ಬಿಷ್ಣೋಯ್ ಈ ಋತುವಿನಲ್ಲಿ ಡೇವಿಡ್ ವಾರ್ನರ್, ಜಾನಿ ಬೈರ್​ಸ್ಟೋ, ರಿಷಭ್ ಪಂತ್, ಇಯಾನ್ ಮಾರ್ಗನ್ ಸೇರಿದಂತೆ ಕೆಲವು ಟಾಪ್ ಬ್ಯಾಟ್ಸ್​ಮನ್​ಗಳಿಗೆ ಪೆವಿಲಿಯನ್ ದಾರಿ ತೋರಿಸಿದ್ದಾರೆ.

ರಾಹುಲ್ ತೇವಾಟಿಯ:ಐಪಿಎಲ್​,ನಲ್ಲಿ ಈ ವರ್ಷ ಹೆಚ್ಚು ಪ್ರಸಿದ್ದಿ ಪಡೆಯುತ್ತಿರುವ ಆಟಗಾರ ಎಂದರೆ ರಾಹುಲ್ ತೇವಾಟಿಯ. ಅನೇಕ ಬಾರಿ ಆರ್​ಆರ್​ ಸೋಲುವ ಪಂದ್ಯವನ್ನು ತಮ್ಮ ಬ್ಯಾಟಿಂಗ್ ಶಕ್ತಿಯಿಂದ ಗೆಲ್ಲಿಸಿಕೊಟ್ಟಿದ್ದಾರೆ. ಅದರಲ್ಲೂ ಪಂಜಾಬ್ ತಂಡದ ಬೌಲರ್ ಶೆಲ್ಡನ್ ಕಾಟ್ರೆಲ್ ಅವರ ಒಂದೇ ಓವರ್​ನಲ್ಲಿ 5 ಸಿಕ್ಸರ್ ಸಿಡಿಸಿ ದಾಖಲೆ ಬರೆದರು. ತೇವಾಟಿಯ ಕೇವಲ ಬ್ಯಾಟಿಂಗ್​ನಲ್ಲಿ ಮಾತ್ರವಲ್ಲದೆ ಬೌಲಿಂಗ್​ನಲ್ಲೂ ಕಮಾಲ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.ಕಾರ್ತಿಕ್ ತ್ಯಾಗಿ:

ಬ್ರೆಟ್ ಲಿ ಹಾಗೂ ಇಶಾಂತ್ ಶರ್ಮಾ ಮಾದರಿಯಲ್ಲಿ ಚೆಂಡನ್ನು ಉಗುಳುವ ತ್ಯಾಗಿ ಈ ಬಾರಿಯ ಐಪಿಎಲ್​ನಲ್ಲಿ ಪ್ರಮುಖ ಆಕರ್ಷಣೆ ಆಗಿದ್ದಾರೆ. ನಿಖರ ವೇಗದ ಜೊತೆ, ಉತ್ತಮ ಬೌಲಿಂಗ್ ಲೆಂತ್ ಮಾಡುವ ಇವರು ಈಗಾಗಲೇ ಭಾರತ ತಂಡದ ಭವಿಷ್ಯದ ಬೌಲರ್ ಎಂದೇ ಹೇಳಲಾಗುತ್ತಿದೆ.
Published by: Vinay Bhat
First published: October 22, 2020, 8:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading