IPL

  • associate partner

Chris Gayle: ಸಿಟ್ಟಿನಿಂದ ಬ್ಯಾಟ್ ಎಸೆದ ಕ್ರಿಸ್​ ಗೇಲ್​ಗೆ ಬಿದ್ದ ದಂಡವೆಷ್ಟು ಗೊತ್ತಾ?

ಈ ಮಧ್ಯೆ 99 ರನ್​ ಗಳಿಸಿದ್ದ ಕ್ರಿಸ್​ ಗೇಲ್​ ಆರ್ಚರ್​ ಬೌಲಿಂಗ್​ನಲ್ಲಿ ಬೋಲ್ಡ್​ ಆದರು. ಈ ವೇಳೆ ಬೇಸರ ಹಾಗು ಸಿಟ್ಟಿನಿಂದ ಕ್ರಿಸ್​ಗೇಲ್​ ಬ್ಯಾಟ್​ ಬೀಸಿ ಎಸೆದರು.

news18-kannada
Updated:October 31, 2020, 12:14 PM IST
Chris Gayle: ಸಿಟ್ಟಿನಿಂದ ಬ್ಯಾಟ್ ಎಸೆದ ಕ್ರಿಸ್​ ಗೇಲ್​ಗೆ ಬಿದ್ದ ದಂಡವೆಷ್ಟು ಗೊತ್ತಾ?
ಈ ಮಧ್ಯೆ 99 ರನ್​ ಗಳಿಸಿದ್ದ ಕ್ರಿಸ್​ ಗೇಲ್​ ಆರ್ಚರ್​ ಬೌಲಿಂಗ್​ನಲ್ಲಿ ಬೋಲ್ಡ್​ ಆದರು. ಈ ವೇಳೆ ಬೇಸರ ಹಾಗು ಸಿಟ್ಟಿನಿಂದ ಕ್ರಿಸ್​ಗೇಲ್​ ಬ್ಯಾಟ್​ ಬೀಸಿ ಎಸೆದರು.
  • Share this:
ಕಿಂಗ್ಸ್​ ಇಲವೆನ್​ ಪಂಜಾಬ್​ ಹಾಗೂ ರಾಜಸ್ಥಾನ್​ ರಾಯಲ್ಸ್​ ನಡುವಿನ ಪಂದ್ಯದಲ್ಲಿ ರಾಜಸ್ಥಾನ್​ ಗೆದ್ದು ಬೀಗಿದೆ. 185ರನ್​ಗಳ ಬೃಹತ್​ ಮೊತ್ತವನ್ನು ಬೆನ್ನು ಹತ್ತಿದ ಆರ್​ಆರ್​ ಅನಾಯಾಸವಾಗಿ ಗೆದ್ದು ಬೀಗಿತ್ತು. ಈ ಮಧ್ಯೆ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು ಗೇಲ್​. ಅವರು ಬ್ಯಾಟ್​ ಬೀಸಿ ಎಸೆದ ವಿಡಿಯೋ ಈಗ ಸಾಕಷ್ಟು ವೈರಲ್​ ಆಗಿದೆ.

ಟಾಸ್ ಗೆದ್ದ ಆರ್​ಆರ್ ನಾಯಕ ಸ್ಟೀವ್ ಸ್ಮಿತ್ ಬೌಲಿಂಗ್ ಆಯ್ದುಕೊಂಡರು. ಕಪ್ತಾನನ ನಿರ್ಧಾರ ಸರಿ ಎಂಬಂತೆ ಮೊದಲ ಓವರ್​ನಲ್ಲೇ ಮಂದೀಪ್ ಸಿಂಗ್​ ಅವರನ್ನು ಔಟ್ ಮಾಡುವ ಮೂಲಕ ಜೋಫ್ರಾ ಆರ್ಚರ್ ರಾಜಸ್ಥಾನ್​ಗೆ ಮೊದಲ ಯಶಸ್ಸು ತಂದುಕೊಟ್ಟರು.

ಬಳಿಕ ಕ್ರೀಸ್​ಗಿಳಿದ ಕ್ರಿಸ್ ಗೇಲ್ ಆರಂಭದಲ್ಲೇ ಆರ್ಭಟಿಸಲು ಆರಂಭಿಸಿದರು. ಅದರಲ್ಲೂ ಕಾರ್ತಿಕ್ ತ್ಯಾಗಿ ಎಸೆದ 5ನೇ ಓವರ್​ನಲ್ಲಿ ಫೋರ್, ಸಿಕ್ಸ್, ಫೋರ್ ಬಾರಿಸುವ ಮೂಲಕ ರನ್​ಗತಿಯನ್ನು ಹೆಚ್ಚಿಸಿದರು. ಮತ್ತೊಂದೆಡೆ ನಾಯಕ ಕೆಎಲ್ ರಾಹುಲ್ ಸಹ ಬಿರುಸಿನ ಆಟಕ್ಕೆ ಒತ್ತು ನೀಡಿದರು. ಪರಿಣಾಮ ಪವರ್​ಪ್ಲೇ ಮುಕ್ತಾಯದ ವೇಳೆಗೆ ಕಿಂಗ್ಸ್ ಇಲೆವೆನ್ ತಂಡದ ಮೊತ್ತ 53 ಕ್ಕೆ ಬಂದು ನಿಂತಿತು. ಅಲ್ಲದೆ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ಈ ಜೋಡಿ ಮೊದಲ ಹತ್ತು ಓವರ್ ಮುಕ್ತಾಯಕ್ಕೆ 81 ರನ್​ ಪೇರಿಸಿತು. ಇದರ ಬೆನ್ನಲ್ಲೇ ಕ್ರಿಸ್ ಗೇಲ್ ಭರ್ಜರಿ ಸಿಕ್ಸರ್​ನೊಂದಿಗೆ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ವೇಳೆಗೆ ಯುನಿವರ್ಸ್ ಬಾಸ್​ ಬ್ಯಾಟ್​ನಿಂದ 4 ಸಿಕ್ಸರ್ ಹಾಗೂ 4 ಬೌಂಡರಿಗಳು ಮೂಡಿ ಬಂದಿದ್ದವು.

ತಂಡದ ಮೊತ್ತ 121 ರನ್​ ಆಗಿದ್ದ ವೇಳೆ ಭರ್ಜರಿ ಹೊಡೆತಕ್ಕೆ ಮುಂದಾದ ಕೆಎಲ್ ರಾಹುಲ್ (46) ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿ ಅರ್ಧಶತಕವನ್ನು ತಪ್ಪಿಸಿಕೊಂಡರು. ಬಳಿಕ ಗೇಲ್ ಜೊತೆಗೂಡಿದ ಪೂರನ್ ಆರಂಭದಲ್ಲೇ ಸಿಕ್ಸರ್​ಗಳ ಮೂಲಕ ಪವರ್ ತೋರಿಸಿದರು. ಪರಿಣಾಮ 16 ಓವರ್ ಮುಕ್ತಾಯದ ವೇಳೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ 137 ರನ್​ಗಳಿಸಿತು.ಅಂತಿಮ ಓವರ್​ಗಳಲ್ಲಿ ಆರ್ಭಟಿಸಲು ಆರಂಭಿಸಿದ ಪೂರನ್-ಗೇಲ್ ಸಿಕ್ಸ್, ಫೋರ್​ಗಳ ಮೂಲಕ ರನ್ ಗತಿಯನ್ನು ಹೆಚ್ಚಿಸಿದರು.

ಈ ಮಧ್ಯೆ 99 ರನ್​ ಗಳಿಸಿದ್ದ ಕ್ರಿಸ್​ ಗೇಲ್​ ಆರ್ಚರ್​ ಬೌಲಿಂಗ್​ನಲ್ಲಿ ಬೋಲ್ಡ್​ ಆದರು. ಈ ವೇಳೆ ಬೇಸರ ಹಾಗು ಸಿಟ್ಟಿನಿಂದ ಕ್ರಿಸ್​ಗೇಲ್​ ಬ್ಯಾಟ್​ ಬೀಸಿ ಎಸೆದರು. ಸಿಟ್ಟಿನಿಂದ ಎಸೆದ ಬ್ಯಾಟ್​ ದೂರ ಹೋಗಿ ಬಿದ್ದಿತ್ತು. ನಂತರ ಸ್ವಲ್ಪ ಕೋಪ ತಗ್ಗಿಸಿಕೊಂಡ ಗೇಲ್​ ಆರ್ಚರ್​ಗೆ ಶೇಕ್​​ ಹ್ಯಾಂಡ್​ ಮಾಡಿ ಮೈದಾನದಿಂದ ನಿರ್ಗಮಿಸಿದರು. ಈ ವಿಡಿಯೋ ಸಾಕಷ್ಟು ವೈರಲ್​ ಆಗಿದೆ.

ಅಲ್ಲದೆ, ಗೇಲ್​ ಐಪಿಎಲ್​ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ದಂಡ ಹಾಕಲಾಗಿದೆ. ಅವರ ಮ್ಯಾಚ್​ ಸಂಭಾವನೆಯ ಶೇ.10ರನ್ನು ದಂಡವಾಗಿ ನೀಡುವಂತೆ ಐಪಿಎಲ್​ ಮಂಡಳಿ ಸೂಚಿಸಿದೆ.

ಕಿಂಗ್ಸ್​ ಇಲವೆನ್​ ಪಂಜಾಬ್ ತಂಡ ನಿನ್ನೆಯ ಪಂದ್ಯದಲ್ಲಿ ಸೋತಿದೆ.
Published by: Rajesh Duggumane
First published: October 31, 2020, 11:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading