IPL

  • associate partner

IPL 2020 DC VS KXIP: ಹೊಡಿಬಡಿ ಆಟಗಾರ ಕ್ರಿಸ್ ಗೇಲ್ ಹೊರಕ್ಕಿಟ್ಟು ಇಳಿದರೆ ಪಂಜಾಬ್​ಗೆ ಲಾಭ; ಏಕೆ ಗೊತ್ತಾ?

. ಈ ಪಂದ್ಯದಲ್ಲಿ ಕ್ರಿಸ್​ ಗೇಲ್​ ಅವರನ್ನು ಕೈ ಬಿಟ್ಟರೆ ಪಂಜಾಬ್​ಗೆ ಲಾಭವಾಗಲಿದೆ ಎನ್ನುವ ಅಭಿಪ್ರಾಯವನ್ನು ಟೀಂ ಇಂಡಿಯಾ ಮಾಜಿ ಓಪನರ್ ಆಕಾಶ್​ ಚೋಪ್ರಾ ಹೊರ ಹಾಕಿದ್ದಾರೆ.

news18-kannada
Updated:September 20, 2020, 12:23 PM IST
IPL 2020 DC VS KXIP: ಹೊಡಿಬಡಿ ಆಟಗಾರ ಕ್ರಿಸ್ ಗೇಲ್ ಹೊರಕ್ಕಿಟ್ಟು ಇಳಿದರೆ ಪಂಜಾಬ್​ಗೆ ಲಾಭ; ಏಕೆ ಗೊತ್ತಾ?
ಗೇಲ್
  • Share this:
ಇಂಡಿಯನ್​ ಪ್ರೀಮಿಯರ್​ ಲೀಗ್​ನ (ಐಪಿಎಲ್​) 13ನೇ ಆವೃತ್ತಿಯ 2ನೇ ಪಂದ್ಯದಲ್ಲಿ ಕನ್ನಡಿಗ ಕೆಎಲ್​ ರಾಹುಲ್​ ನೇತೃತ್ವದ ಕಿಂಗ್ಸ್​ ಇಲವೆನ್​ ಪಂಜಾಬ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ನಡುವೆ ಸೆಣೆಸಾಟ ನಡೆಯಲಿದೆ. ದುಬೈ ಅಂತಾರಾಷ್ಟ್ರೀಯ  ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಪಂದ್ಯ ರಾತ್ರಿ 7.30ಕ್ಕೆ ಆರಂಭಗೊಳ್ಳಲಿದೆ. ಈ ಎರಡೂ ತಂಡಗಳು ಕಳೆದ 12 ಆವೃತ್ತಿಯಲ್ಲಿ ಒಮ್ಮೆಯೂ ಕಪ್​ ಎತ್ತಿಲ್ಲ. ಹೀಗಾಗಿ, ಈ ಬಾರಿ ಕಪ್​ ಎತ್ತಲೇ ಬೇಕು ಎನ್ನುವ ಉದ್ದೇಶದಿಂದ ಇಬ್ಬರೂ ಕಣಕ್ಕೆ ಇಳಿಯುತ್ತಿದ್ದಾರೆ. ಈ ಪಂದ್ಯದಲ್ಲಿ ಕ್ರಿಸ್​ ಗೇಲ್​ ಅವರನ್ನು ಕೈ ಬಿಟ್ಟರೆ ಪಂಜಾಬ್​ಗೆ ಲಾಭವಾಗಲಿದೆ ಎನ್ನುವ ಅಭಿಪ್ರಾಯವನ್ನು ಟೀಂ ಇಂಡಿಯಾ ಮಾಜಿ ಓಪನರ್ ಆಕಾಶ್​ ಚೋಪ್ರಾ ಹೊರ ಹಾಕಿದ್ದಾರೆ.

ಇಂದಿನ ಪಂದ್ಯದ ಬಗ್ಗೆ ವಿಮರ್ಷೆ ವೇಳೆ ಅವರು ಈ ಅಭಿಪ್ರಾಯ ಹೊರ ಹಾಕಿದ್ದಾರೆ. ಒಂದು ತಂಡದಲ್ಲಿ ನಾಲ್ಕು ವಿದೇಶಿ ಆಟಗಾರನ್ನು ಮಾತ್ರ ಆಡಿಸಲು ಅವಕಾಶ ಇದೆ. ಹೀಗಾಗಿ ಗ್ಲೆನ್​ ಮ್ಯಾಕ್ಸ್​ವೆಲ್​, ನಿಕೋಲಸ್ ಪೂರಣ್, ಕ್ರಿಸ್​ ಜೋರ್ಡನ್, ಮುಜೀಬ್ ಉರ್ ರೆಹ್ಮಾನ್​ರನ್ನು ಕಣಕ್ಕೆ ಇಳಿಸಬೇಕು ಎಂಬುದು ಅವರ ಅಭಿಪ್ರಾಯ.


ಕ್ರಿಸ್​​ ಗೇಲ್ ಇತ್ತೀಚಿನ ದಿನಗಳಲ್ಲಿ ಮೊದಲಿನಷ್ಟು ಫಾರ್ಮ್​ ಉಳಿಸಿಕೊಂಡಿಲ್ಲ. ಅವರು ಅಬ್ಬರದ ಆಟ ಆಡುವುದು ತುಂಬಾನೇ ಅಪರೂಪ. ಹೀಗಾಗಿ, ವಿದೇಶಿ ಆಟಗಾರರ ಸಾಲಿನಲ್ಲಿ ಗ್ಲೆನ್​ ಮ್ಯಾಕ್ಸ್​ವೆಲ್​, ನಿಕೋಲಸ,  ಜೋರ್ಡನ್, ರೆಹ್ಮಾನ್​ಗೆ ಮಣೆ ಹಾಕಿದರೆ ಉತ್ತಮ ಎನ್ನೋದು ಅವರ ಅಭಿಪ್ರಾಯ.

ಇದನ್ನೂ ಓದಿ: IPL 2020 DC VS KXIP: ಇಂದು ಡೆಲ್ಲಿ- ಪಂಜಾಬ್​ ನಡುವೆ ಹಣಾಹಣಿ; ಯಾವ ತಂಡ ಸ್ಟ್ರಾಂಗ್? ಇಲ್ಲಿದೆ ವಿವರ

ದೆಹಲಿ ತಂಡದಿಂದ ಅಜಿಂಕ್ಯಾ ರಹಾನೆ ಆಡದಿದ್ದರೆ ತಂಡಕ್ಕೆ ಲಾಭ ಆಗಲಿದೆಯಂತೆ. “ಅಜಿಂಕ್ಯಾ ನನ್ನ ಫೆವರಿಟ್​ ಆಟಗಾರರಲ್ಲಿ ಒಬ್ಬರು. ಆದರೆ, ಅವರು ಈ ತಂಡದಲ್ಲಿ ಫಿಟ್​ ಆಗುವುದಿಲ್ಲ. ಒಂದೊಮ್ಮೆ ಅವರನ್ನು ಆಡಿಸಿದರೆ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್​ಗೆ ಇಳಿಯಬೇಕು. ಹೀಗೆ ಮಾಡಿದರೆ ಶ್ರೇಯಸ್​ ಅಯ್ಯರ್​ 4, ಪಂತ್​ 5, ಹೆಟ್ಮಿಯರ್ 6ನೇ ಸ್ಥಾನದಲ್ಲಿ ಆಡಬೇಕಾಗುತ್ತದೆ. ಇದು ವರ್ಕ್​ ಆಗುವುದಿಲ್ಲ,” ಎಂದು ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ.
Published by: Rajesh Duggumane
First published: September 20, 2020, 12:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading