IPL

  • associate partner

IPL 2020: ಸಂದೇಹವೇ ಇಲ್ಲ, ಈ ಬಾರಿ ಇದೇ ತಂಡ ಚಾಂಪಿಯನ್ ಆಗಲಿದೆ: ಸಚಿನ್ ಭವಿಷ್ಯ

ಸಚಿನ್ ತೆಂಡೂಲ್ಕರ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆರು ವರ್ಷಗಳ ಕಾಲ ಆಡಿದ್ದರು. ಆದರೆ ಅವರ ನಾಯಕತ್ವದಲ್ಲಿ ಟ್ರೋಫಿ ಗೆಲ್ಲುಲು ಸಾಧ್ಯವಾಗಿರಲಿಲ್ಲ. ಬಳಿಕ ನಾಯಕರಾದ ರೋಹಿತ್ ಶರ್ಮಾ ತಂಡವನ್ನು ನಾಲ್ಕು ಬಾರಿ ಚಾಂಪಿಯನ್ ಸ್ಥಾನಕ್ಕೇರಿಸಿದ್ದರು.

news18-kannada
Updated:September 20, 2020, 5:16 PM IST
IPL 2020: ಸಂದೇಹವೇ ಇಲ್ಲ, ಈ ಬಾರಿ ಇದೇ ತಂಡ ಚಾಂಪಿಯನ್ ಆಗಲಿದೆ: ಸಚಿನ್ ಭವಿಷ್ಯ
Sachin Tendulkar
  • Share this:
ಇಂಡಿಯನ್ ಪ್ರೀಮಿಯರ್ ಲೀಗ್ ಚುಟುಕು ಕದನ ಶುರುವಾಗಿದೆ. ಮೊದಲ ಪಂದ್ಯದಲ್ಲೇ ಭರ್ಜರಿ ಜಯಗಳಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್​ ಶುಭಾರಂಭ ಮಾಡಿದೆ. ಇತ್ತ ಉತ್ತಮ ಆಟವಾಡಿದ ಮುಂಬೈ ಇಂಡಿಯನ್ಸ್ ಸೋತರೂ ತಿಂಗಳುಗಳ ಬಳಿಕ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದೆ. ಬಲಿಷ್ಠ ಎರಡು ತಂಡಗಳ ಮುಖಾಮುಖಿಯೊಂದಿಗೆ ಈ ಬಾರಿಯ ಐಪಿಎಲ್ ಚಾಂಪಿಯನ್ ಯಾರಾಗಲಿದ್ದಾರೆ ಎಂಬ ಚರ್ಚೆ ಸಹ ಶುರುವಾಗಿದೆ. ಈ ಬಗ್ಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಕೇಳಿದ್ರೆ ಸಿಗುವ ಉತ್ತರ ನಮ್ಮದೇ ತಂಡ.

ಹೌದು, ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರ ಸಂದರ್ಶನದಲ್ಲಿ ಈ ಬಾರಿ ಯಾರು ಚಾಂಪಿಯನ್ ಆಗಲಿದ್ದಾರೆ ಎಂಬ ಪ್ರಶ್ನೆ ಕೇಳಲಾಗಿತ್ತು. ಇದೇ ಯಾವುದೇ ಸಂದೇಹವಿಲ್ಲ. ಈ ಸಲ ಕಪ್ ಮುಂಬೈ ಇಂಡಿಯನ್ಸ್ ತಂಡದ್ದು ಎಂಬ ಉತ್ತರವನ್ನು ಸಚಿನ್ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ನಾನು ಯಾವಾಗಲೂ ನೀಲಿ ಬಣ್ಣದ ಜರ್ಸಿಯನ್ನು ಧರಿಸಿದ್ದೇನೆ. ಯಾವಾಗ ಮುಂಬೈ ಮತ್ತು ಭಾರತ ಒಗ್ಗೂಡಿದಾಗ ನಾನು ಮುಂಬೈ ಇಂಡಿಯನ್ಸ್ ಆಗುತ್ತೇನೆ ಎಂದು ಸಚಿನ್ ತೆಂಡೂಲ್ಕರ್ ತಿಳಿಸಿದರು.

ಎಲ್ಲಾ ತಂಡಗಳು ಸಾಕಷ್ಟು ಸಮತೋಲಿತವಾಗಿವೆ. ಈ ಬಾರಿ ರೋಚಕ ಸ್ಪರ್ಧೆ ಏರ್ಪಡಲಿದೆ ಮತ್ತು ಪಂದ್ಯಗಳು ಸಮವಾಗಿ ಸ್ಪರ್ಧಿಸಲ್ಪಡುತ್ತವೆ. ಮುಂಬೈ ಇಂಡಿಯನ್ಸ್ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವಂತೆ ನಾವು ಒತ್ತು ನೀಡುತ್ತೇವೆ. ನಾವು ಮೊದಲ ಪಂದ್ಯದಲ್ಲಿ ಉತ್ತಮವಾಗಿ ಆಡಿದರೆ, ಸರಣಿಯು ಉತ್ತಮವಾಗಿ ಮುಗಿಯುತ್ತದೆ. ಅದೇ ಇಲ್ಲಿಯೂ ಅನ್ವಯಿಸುತ್ತದೆ. ಆರಂಭವು ಉತ್ತಮವಾಗಿದ್ದರೆ, ತಂಡದ ಸಭೆಗಳು ಸಹ ಚಿಕ್ಕದಾಗಿದೆ, ಮತ್ತು ಅದು ತಂಡವನ್ನು ಉತ್ತಮ ಸ್ಥಾನದಲ್ಲಿರಿಸುತ್ತದೆ ಎಂದು ಸಚಿನ್ ಅಭಿಪ್ರಾಯಪಟ್ಟರು.

ಸಚಿನ್ ತೆಂಡೂಲ್ಕರ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆರು ವರ್ಷಗಳ ಕಾಲ ಆಡಿದ್ದರು. ಅವರ ನಾಯಕತ್ವದಲ್ಲಿ ತಂಡಕ್ಕೆ ಗೆಲ್ಲುಲು ಸಾಧ್ಯವಾಗಿರಲಿಲ್ಲ. ಬಳಿಕ ನಾಯಕರಾದ ರೋಹಿತ್ ಶರ್ಮಾ ತಂಡವನ್ನು ನಾಲ್ಕು ಬಾರಿ ಚಾಂಪಿಯನ್ ಮಾಡಿದರು. ಆದರೆ 2014 ರಲ್ಲಿ ಯುಎಇಯಲ್ಲಿ ನಡೆದ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಐದು ಪಂದ್ಯಗಳನ್ನಾಡಿತ್ತು. ಆದರೆ ಪ್ರತಿ ಬಾರಿಯೂ ಸೋಲನುಭವಿಸಿ ಹೀನಾಯ ದಾಖಲೆ ಬರೆದಿತ್ತು. ಇದೀಗ ಮೊದಲ ಪಂದ್ಯದಲ್ಲಿ ಸಿಎಸ್​ಕೆ ವಿರುದ್ದ ಸೋಲನುಭವಿಸುವ ಮೂಲಕ 2020 ಐಪಿಎಲ್ ಅಭಿಯಾನ ಆರಂಭಿಸಿದೆ. ಮುಂದಿನ ಪಂದ್ಯದಲ್ಲಿ ಕಂಬ್ಯಾಕ್ ಮಾಡುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭವಿಷ್ಯ ನಿಜ ಮಾಡಲಿದ್ದಾರಾ ಕಾದು ನೋಡಬೇಕಿದೆ.
Published by: zahir
First published: September 20, 2020, 5:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading