HOME » NEWS » Explained » WHAT LOSS OF SAFE HARBOUR MEANS FOR TWITTER STG KVD

Explained: ಭಾರತದ ಕಾನೂನು ರಕ್ಷಣೆ ಕಳೆದುಕೊಂಡ Twitter‌ಗೆ ಆಗುವ ನಷ್ಟವೇನು?

ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ ಸಂದೇಶ ಕಳುಹಿಸುವ ಮತ್ತು ಪಡೆಯುವ ವಾಹಕವಾಗಿ ಅಷ್ಟೇ ಕೆಲಸ ಮಾಡಿರಬೇಕು. ತಾನು ಯಾವುದೇ ಹಸ್ತಕ್ಷೇಪ ಮಾಡಿರಬಾರದು. ಆಗ ಅದರ ವಿರುದ್ಧ ಯಾವುದೇ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲ್ಲ.

Trending Desk
Updated:June 17, 2021, 5:49 PM IST
Explained: ಭಾರತದ ಕಾನೂನು ರಕ್ಷಣೆ ಕಳೆದುಕೊಂಡ Twitter‌ಗೆ ಆಗುವ ನಷ್ಟವೇನು?
ಟ್ವಿಟ್ಟರ್​
  • Share this:
ಮಾಹಿತಿ ತಂತ್ರಜ್ಞಾನ ಸಚಿವಾಲಯದೊಂದಿಗೆ ಹೊಸದೊಂದು ಜಟಾಪಟಿಗೆ ಸಿಲುಕಿಕೊಂಡಿರುವ ಟ್ವಿಟ್ಟರ್‌ ಹೊಸ ನಿಯಮಗಳನ್ನು ಪಾಲಿಸದ ಕಾರಣ ಭಾರತದಲ್ಲಿ ಕಾನೂನು ರಕ್ಷಣೆಯನ್ನು ಕಳೆದುಕೊಂಡಿದೆ. ಪದೇ ಪದೇ ಎಚ್ಚರಿಕೆ ನೀಡಿದರೂ ಮಾಹಿತಿ ತಂತ್ರಜ್ಞಾನದ ಹೊಸ ನಿಯಮಗಳ ಅನುಸಾರ ನೇಮಿಸಬೇಕಿದ್ದ ಪ್ರಮುಖ ಅಧಿಕಾರಿಗಳನ್ನು ಟ್ವಿಟ್ಟರ್ ನೇಮಿಸಿಲ್ಲ. ಹಾಗಾಗಿ ಟ್ವಿಟ್ಟರ್ ಬಳಕೆದಾರರ ಟ್ವೀಟ್‌ಗಳಲ್ಲಿ ಕಾನೂನುಬಾಹಿರ ಅಂಶಗಳಿದ್ದರೆ ಟ್ವಿಟ್ಟರ್ ಸಂಸ್ಥೆಯ ವಿರುದ್ಧವೂ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಕ್ರಮ ಕೈಗೊಳ್ಳಲು ಅವಕಾಶ ತೆರೆದುಕೊಂಡಿದೆ. ಈ ಮೂಲಕ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79ರ ಅಡಿಯಲ್ಲಿ ದೊರೆತಿದ್ದ ಸುರಕ್ಷಾ ಕವಚವನ್ನು ಕಳೆದುಕೊಂಡ ಏಕೈಕ ಅಮೆರಿಕದ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎನಿಸಿಕೊಂಡಿದೆ ಟ್ವಿಟ್ಟರ್.

ಹಾಗಿದ್ದರೆ, ಸೆಕ್ಷನ್ 79ರ ಅಡಿ ಸಿಗುತ್ತಿದ್ದ ರಕ್ಷಣೆ ಏನು?

ಯಾವುದೇ ಮೂರನೇ ವ್ಯಕ್ತಿಗೆ (ಥರ್ಡ್ ಪಾರ್ಟಿ) ಸಂಬಂಧಿಸಿದ ಡೇಟಾ, ಮಾಹಿತಿ ಅಥವಾ ಸಂವಹನದ ಲಿಂಕ್ ತಮ್ಮ ಪ್ಲಾಟ್‌ಫಾರ್ಮ್ ಮೂಲಕ ದೊರೆಯುವಂತೆ ಆದಲ್ಲಿ ಅಥವಾ ಹೋಸ್ಟ್ ಆದಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಇದರ ಪ್ರಕಾರವಾಗಿ ಸಾಮಾಜಿಕ ಮಾಧ್ಯಮದ ಮಧ್ಯವರ್ತಿಗಳು ಕಾನೂನು ಕ್ರಮದ ವ್ಯಾಪ್ತಿಗೆ ಬರುವುದಿಲ್ಲ. ಇನ್ನೂ ಮುಂದುವರಿದು ಹೇಳುವುದಾದರೆ, ಆ ಮಧ್ಯವರ್ತಿ ಯಾವುದೇ ಬಗೆಯಲ್ಲೂ ಸಂದೇಶವನ್ನು ಮಾರ್ಪಡಿಸಿರಬಾರದು. ಪ್ರಶ್ನೆ ರೀತಿ ಸಂದೇಶವನ್ನು ಹಂಚಿರಬಾರದು. ಸರಳವಾಗಿ ಹೇಳಬೇಕೆಂದರೆ, ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ ಸಂದೇಶ ಕಳುಹಿಸುವ ಮತ್ತು ಪಡೆಯುವ ವಾಹಕವಾಗಿ ಅಷ್ಟೇ ಕೆಲಸ ಮಾಡಿರಬೇಕು. ತಾನು ಯಾವುದೇ ಹಸ್ತಕ್ಷೇಪ ಮಾಡಿರಬಾರದು. ಆಗ ಅದರ ವಿರುದ್ಧ ಯಾವುದೇ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲ್ಲ.

ಜಾಗತಿಕ ನಿಯಮಾವಳಿಗಳ ಸೆಕ್ಷನ್ 230, ಕಮ್ಯುನಿಕೇಷನ್ಸ್ ಡೀಸೆನ್ಸಿ ಕಾಯ್ದೆ 1996ರ ಪ್ರಕಾರ, ಬೇರೆಯವರು ಮಾಹಿತಿ ಒದಗಿಸುವವರಿಂದ ಏನಾದರೂ ಸುದ್ದಿ ಅಥವಾ ಮಾಹಿತಿ ನೀಡುವ ಇಂಟರ‍್ಯಾಕ್ಟೀವ್ ಕಂಪ್ಯೂಟರ್ ಸೇವೆ ಅಥವಾ ಯಾವುದೇ ಸಂಸ್ಥೆಯನ್ನು ಪ್ರಕಾಶಕ ಅಥವಾ ಸ್ಪೀಕರ್ ಎಂದು ಪರಿಗಣಿಸಲು ಸಾಧ್ಯವಾಗುವುದಿಲ್ಲ. ಅವರಿಗೆ ಯಾವುದೇ ಉತ್ತರದಾಯಿತ್ವ ಇರುವುದಿಲ್ಲ.

ಕೇಂದ್ರ ಸರ್ಕಾರದ ತಕರಾರು ಏನು?

ಹೊಸ ಐಟಿ ನಿಯಮ 2021 ಎಂದೇ ಗುರುತಿಸಲಾಗುವ, ಮಧ್ಯವರ್ತಿ ಸಂಸ್ಥೆಗಳ ಮಾರ್ಗಸೂಚಿ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ನೈತಿಕ ನಿಯಮಗಳು 2021 ಮೇ 26ರಿಂದ ಜಾರಿಯಾಗಿವೆ. ಡಿಜಿಟಲ್ ಮಾಧ್ಯಮಗಳು, ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳನ್ನು ಗಮನದಲ್ಲಿಟ್ಟು ಫೆಬ್ರುವರಿಯಲ್ಲಿ ರೂಪಿಸಲಾಗಿದ್ದ ಈ ನಿಯಮಗಳ ಜಾರಿಗೆ ಮೂರು ತಿಂಗಳ ಕಾಲಾವಕಾಶವನ್ನು ಸಂಸ್ಥೆಗಳಿಗೆ ನೀಡಲಾಗಿತ್ತು.

ಭಾರತದಲ್ಲಿನ ನೂತನ ಐಟಿ ನಿಯಮವನ್ನು ಟ್ವಿಟ್ಟರ್ ಸಂಸ್ಥೆ ಪಾಲಿಸಬೇಕು ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೂಚಿಸಿತ್ತು. ಆದರೆ ಟ್ವಿಟ್ಟರ್ ಕೇಂದ್ರದ ನೂತನ ಐಟಿ ನಿಯಮಕ್ಕೆ ಸಡ್ಡು ಹೊಡೆದಿತ್ತು. ಕೊಟ್ಟ ಅವಧಿಯೊಳಗೆ ಸರ್ಕಾರದ ನಿಯಮಗಳಿಗೆ ಬದ್ಧತೆ ತೋರದಿದ್ದರೆ ಟ್ವಿಟ್ಟರ್ ಅನ್ನು ಬಳಕೆದಾರರ ವಿಷಯಗಳನ್ನು ಅಥವಾ ಸಂದೇಶಗಳನ್ನು ಪ್ರಕಟಿಸುವ ಒಂದು ಮಧ್ಯವರ್ತಿಯಾಗಿ ಪರಿಗಣಿಸಲಾಗುವುದಿಲ್ಲ. ಬಳಕೆದಾರರು ಪ್ರಕಟಿಸುವ ಎಲ್ಲಾ ಪೋಸ್ಟ್ಗಳಿಗೆ ಖುದ್ದು ಟ್ವಿಟ್ಟರ್ ಹೊಣೆಗಾರನಾಗಿರುತ್ತದೆ ಎಂದು ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.'ಹಲವು ಅವಕಾಶ ಕೊಟ್ಟರೂ ಸಂಸ್ಥೆಯು ಉದ್ದೇಶಪೂರ್ವಕವಾಗಿ ನಿಯಮ ಪಾಲನೆ ಮಾಡದಿರುವ ದಾರಿಯನ್ನು ಆಯ್ಕೆ ಮಾಡಿಕೊಂಡಿದೆ' ಎಂದು ಅವರು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರು, ನಿಯಮಗಳನ್ನು ಪಾಲಿಸದ ಟ್ವಿಟ್ಟರ್ ಸಂಸ್ಥೆಯ ವಿರುದ್ಧ ಹರಿಹಾಯ್ದಿದ್ದರು.

ಟ್ವಿಟ್ಟರ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಸದ್ಯ ಮಾರ್ಗಸೂಚಿಗಳ ಪ್ರಕಾರ, ಸಾಮಾಜಿಕ ಮಾಧ್ಯಮ ಕಂಪನಿಯಾದ ಟ್ವಿಟ್ಟರ್ ಹೊಸ ನಿಯಮಗಳನ್ನು ಅನುಸರಿದಿದ್ದರೆ, 'ಮಧ್ಯಸ್ಥ' ಸಂಸ್ಥೆಗಳಾಗಿ ಪಡೆದಿರುವ ರಕ್ಷಣೆಯನ್ನು ಕಳೆದುಕೊಳ್ಳಲಿವೆ ಹಾಗೂ ಕಾನೂನು ಕ್ರಮಗಳನ್ನು ಎದುರಿಸಬೇಕಾಗಬಹುದು. ಆದರೆ, ದೀರ್ಘಾವಧಿಯಲ್ಲಿ ಟ್ವಿಟ್ಟರ್‌ನಲ್ಲಿ ಕೇವಲ ಶೇ. 26ರಷ್ಟು ವಿದೇಶಿ ಹೂಡಿಕೆಗೆ ಅವಕಾಶವಾಗಲಿದ್ದು, ಉಳಿದ 74ರಷ್ಟು ಭಾರತೀಯ ಹೂಡಿಕೆದಾರರನ್ನೇ ಅವಲಂಬಿಸಬೇಕಾಗಬಹುದು.

ಇದನ್ನೂ ಓದಿ: Explained: ಗ್ರೀನ್ ಫಂಗಸ್ ಎಂದರೇನು? ಹಸಿರು ಶಿಲೀಂಧ್ರಿಯ ರೋಗ ಲಕ್ಷಣಗಳು ಹೇಗಿರುತ್ತೆ?

ಇತರೆ ಕಂಪನಿಗಳು ಹೊಸ ನಿಯಮಗಳನ್ನು ಅನುಸರಿಸುತ್ತಿವೆಯೇ?

ಟ್ವಿಟ್ಟರ್‌ ರೀತಿಯ ಮೈಕ್ರೊ ಬ್ಲಾಗಿಂಗ್ ಸೈಟ್ ಆದ ಭಾರತದ 'ಕೂ' ಸಾಮಾಜಿಕ ಮಾಧ್ಯಮ ಮಾತ್ರವೇ ಸರ್ಕಾರದ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಅನುಸರಿಸುತ್ತಿರುವುದಾಗಿ ಘೋಷಿಸಿದೆ. ಫೇಸ್‌ಬುಕ್ ಮತ್ತು ಗೂಗಲ್ ಹೊಸ ನಿಯಮಗಳನ್ನು ಒಪ್ಪಿಕೊಳ್ಳುವ ಸೂಚನೆ ನೀಡಿವೆ. ಫೇಸ್‌ಬುಕ್ ಒಡೆತನದ ವಾಟ್ಸ್‌ಆ್ಯಪ್‌, ಮಾಹಿತಿ ತಂತ್ರಜ್ಞಾನ ಸಚಿವಾಲಯವು ಪ್ರಕಟಿಸಿರುವ ಹೊಸ ನಿಯಮಗಳಲ್ಲಿ ಭಾರತದ ಸಂವಿಧಾನ ನೀಡಿರುವ ಖಾಸಗಿತನದ ಹಕ್ಕು ಉಲ್ಲಂಘನೆಯಾಗಿದೆ ದೆಹಲಿ ಹೈಕೋರ್ಟ್ನಲ್ಲಿ ದೂರು ದಾಖಲಿಸಿದೆ.

ಬಿಜೆಪಿಯ ವಕ್ತಾರರ ಖಾತೆಯಿಂದ ತಿದ್ದುಪಡಿ ಮಾಡಿದ ಕಂಟೆಂಟ್‌ಗಳನ್ನು ಪ್ರಕಟಿಸಲಾಗಿದೆ ಎಂದು ಟ್ವಿಟ್ಟರ್‌ ಸೂಚಿಸಿತ್ತು. 'ನಕಲಿ ಟೂಲ್‌ಕಿಟ್' ಕುರಿತು ರಾಜಕೀಯ ಪಕ್ಷಗಳ ನಡುವೆ ಚರ್ಚೆ ಕಾವೇರಿತ್ತು ಹಾಗೂ ಅದರ ಬೆನ್ನಲ್ಲೇ ಪೊಲೀಸರು ಟ್ವಿಟ್ಟರ್‌ ಕಚೇರಿಗೆ ಭೇಟಿ ನೀಡಿ ವಿಚಾರಣೆಗೆ ಮುಂದಾಗಿದ್ದರು. ಟ್ವಿಟ್ಟರ್‌ ಹೊಸ ನಿಯಮಗಳ ಕುರಿತು ಈವರೆಗೂ ಮೌನ ವಹಿಸಿದೆ.
Published by: Kavya V
First published: June 17, 2021, 5:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories