news18-kannada Updated:April 15, 2021, 12:45 PM IST
ZOMBIE ಸಿನಿಮಾ
ಭಾರತದಲ್ಲೇ ಮೊದಲ ಸೂಪರ್ ವುಮೆನ್ ಸಿನಿಮಾ ಮಾಡಿ ಎಲ್ಲರ ಗಮನ ಸೆಳೆದಿದ್ದ ‘ಆನಾ’ ಚಿತ್ರ ತಂಡದಿಂದ ಮಾತೊಂದು ಹೊಸ ಪ್ರಯತ್ನ.. ಆನ ಮತ್ತು ಬ್ಯಾಂಗ್ ಚಿತ್ರಕ್ಕೆ ಕೆಲಸ ಮಾಡಿರುವ ಆನಂದ್ ರಾಜ್ ಅವರು ಮೊದಲ ಬಾರಿಗೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಆನ ನಿರ್ದೇಶಕ ಮನೋಜ್ ಪಿ ನಡಲುಮನೆ ಅವರು ಈ ಸಿನಿಮಾಗೆ ಕಥೆ ಬರೆದಿದ್ದಾರೆ. AANA ಸಿನಿಮಾದಲ್ಲಿ ಪ್ರಮುಖಪಾತ್ರದಲ್ಲಿ ಕಾಣಿಸ್ಕೋತಿರೋ ರನ್ವಿತ್ ಶಿವಕುಮಾರ್ ಈ ಬಾರಿ ನಟನೆಯ ಜೊತೆಗೆ ಕ್ರಿಯೇಟಿವ್ ಹೆಡ್ ಆಗಿ ಸಿನಿಮಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೊಂದು ಝೋಂಬಿ ಸಿನಿಮಾವಾಗಿರಲಿದ್ದು, ಕನ್ನಡ ಇಂಡಸ್ಟ್ರಿಯಲ್ಲೇ ಮೊದಲ ಪ್ರಯತ್ನ.
ಹೌದು...ಕನ್ನಡದ ಸಿನಿಮಾರಂಗದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಝೋಂಬಿ ಕಾನ್ಸೆಪ್ಟ್ ತರುವುದಕ್ಕೆ ಸಿನಿಮಾತಂಡ ರೆಡಿಯಾಗಿದ್ದು, ಸಿನಿಮಾ ತುಂಬಾನೆ ರಿಚ್ ಆಗಿಯೇ ನಿರ್ಮಾಣವಾಗಲಿದೆ. ‘ಆನಾ’ ಸಿನಿಮಾದ ಟೀಮ್ ಈ ಸಿನಿಮಾದಲ್ಲೂ ಕೆಲಸ ಮಾಡಲಿರುವುದು ವಿಶೇಷ.
ಇನ್ನೂ ತಾರಾಬಳಗದ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಚಿತ್ರ ತಂಡ ಹೇಳಿದೆ. ಅಂದುಕೊಂಡಂತೆ ಎಲ್ಲವೂ ಆದ್ರೆ ಸಿನಿಮಾ ಶೂಟಿಂಗ್ ಮುಂದಿನ ತಿಂಗಳ ಅಂತ್ಯದ ವೇಳೆಗೆ ಶುರುವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ. ಈ ಸಿನಿಮಾ ಕನ್ನಡ ಇಂಡಸ್ಟ್ರಿಯಲ್ಲಿ ಒಂದು ಹೊಸ ವಿಭಿನ್ನ ಪ್ರಯತ್ನ, ಪ್ರಯೋಗ ಅಂತ ಹೇಳಬಹುದು. ಕಾರಣ ಈ ರೀತಿಯಾದ ಕಥೆ / ಸಿನಿಮಾ ಮೂಡಿಬರುತ್ತಿರುವುದು ನಿಜಕ್ಕೂ ಕನ್ನಡ ಇಂಡಸ್ಟ್ರಿಯಲ್ಲಿ ಮೊದಲು.
ತುಂಬಿ ತುಳುಕುತ್ತಿವೆ ಸ್ಮಶಾನಗಳು..! ಕೋವಿಡ್ ಸಾವುಗಳನ್ನು ಮರೆಮಾಚುತ್ತಿದ್ದೆಯೇ ಮಧ್ಯಪ್ರದೇಶ ಸರ್ಕಾರ..?
ಅದು ಅಲ್ಲದೇ ಹೊಸಬರ ಟೀಮ್ ನಿಂದಲೇ ಇಂತಹ ಅದ್ಭುತ ಪ್ರಯೋಗಗಳಾಗುತ್ತಿದ್ದು, ಸಹಜವಾಗಿಯೇ ಸಿನಿಮಾ ತಂಡ ಅಥವ ನಡಲುಮನೆಯವರು ಈಗಿನ ಯೂತ್ಸ್ ಅಭಿರುಚಿ ಗಮನದಲ್ಲಿಟ್ಟುಕೊಂಡು , ಈಗಿನ ಜೆನರೇಷನ್ ಯಾವ ರೀತಿಯಾದ ಕಥೆ ಕಾನ್ಸೆಪ್ಟ್ ಇಷ್ಟಪಡುತ್ತಾರೆ ಅನ್ನೋದನ್ನ ಗಮನದಲ್ಲಿಟ್ಟಿಯೇ ಸಿನಿಮಾ ಮಾಡ್ತಿದ್ದಾರೆ.
ಅಂದ್ಹಾಗೆ ಏನಿದು ಝೋಂಬಿ…?
ಝೋಂಬಿ ಅಂದ್ರೆ ಸಹಜವಾಗಿ ರಕ್ತಪಿಶಾಚಿಯ ಕಾನ್ಸೆಪ್ಟ್.. ಅಥವ ಒಂದು ವೈರಸ್ ರೀತಿ.. ಸಾಮಾನ್ಯವಾಗಿ ಈ ಝೋಂಬಿ ಕಥೆಗಳಲ್ಲಿ ವೈರಸ್ ಇರುವ ವ್ಯಕ್ತಿ ಮತ್ತೊಬ್ಬರಿಗೆ ಕಚ್ಚಿದಾಗ ಅವರೂ ಸಹ ರಕ್ತಪಿಶಾಚಿ ಅಥವಾ ಝೋಂಬಿ ರೀತಿ ಆಗಿ ಬೇರೆಯವರನ್ನ ಬೇಟೆಯಾಡಲು ಹೋಗುತ್ತಾರೆ. ಈ ರೀತಿಯಾದ ಸಿನಿಮಾಗಳು ಈಗಿನ ಜೆನರೇಷನ್ ನ ಮಕ್ಕಳು ಹಾಗೂ ಯೂತ್ಸ್ ಗೆ ತುಂಬಾನೆ ಇಷ್ಟವಾಗುತ್ತೆ.
ಸಾಮಾನ್ಯವಾಗಿ ಹಾಲಿವುಡ್ ಸಿನಿಮಾಗಳಲ್ಲಿ ಝೋಂಬಿ ತುಂಬಾನೆ ಫೇಮಸ್ ಸೀರೀಸ್.. ವಿಶ್ವಾದ್ಯಂತ ಎಲ್ಲಾ ಜನರು ಇಷ್ಟಪಟ್ಟು ನೋಡುವ ಒಂದು ಹಾರರ್ ಅಂಡ್ ಟೆರರ್ ಕಾನ್ಸೆಪ್ಟ್ ಕೂಡ ಹೌದು.. ಹೀಗಾಗಿಯೇ ಝೋಂಬೀಸ್ ಆಧರಿತ ಅನೇಕ ಸಿನಿಮಾಗಳು ಅದರ ಸೀರೀಸ್ ಗಳು ಬಂದುಬಿಟ್ಟಿವೆ. ಈ ಝೋಂಬಿ ಕಥೆಗೆ ಸಿಕ್ಕಿರುವ ಒಳ್ಳೆ ರೆಸ್ಪಾನ್ಸ್. ಇಂತಹ ಸಿನಿಮಾಗಳ ಮೇಲೆ ಭಾರತದಲ್ಲಿ ಇರುವ ಕ್ರೇಜ್ ಗಮನಿಸಿ ಭಾರತದಲ್ಲೂ ಇಂತಹ ಕೆಲ ಸಿನಿಮಾಗಳು ಬಂದಿವೆ. ಆದ್ರೆ ಇದೀಗ ಕನ್ನಡದಲ್ಲಿ ಮೊಟ್ಟ ಮೊದಲ ಸಿನಿಮಾ ಬರುತ್ತಿದೆ.
Published by:
Latha CG
First published:
April 15, 2021, 12:45 PM IST