Sandalwood Drugs Case: ಸಿಸಿಬಿ ಮುಂದೆ ಹಾಜರಾದ ಅಕುಲ್​ ಬಾಲಾಜಿ ಹೇಳಿದ್ದೇನು?

ಬೆಳಗ್ಗೆಯಿಂದ ಸಂಜೆ 5ಗಂಟೆವರೆಗೂ ಅಕುಲ್​ ಬಾಲಾಜಿ, ಸಂತೋಷ್​ ಸೇರಿದಂತೆ ಮೂವರನ್ನು ವಿಚಾರಣೆ ನಡೆಸಲಾಗಿದೆ.

news18-kannada
Updated:September 19, 2020, 7:40 PM IST
Sandalwood Drugs Case: ಸಿಸಿಬಿ ಮುಂದೆ ಹಾಜರಾದ ಅಕುಲ್​ ಬಾಲಾಜಿ ಹೇಳಿದ್ದೇನು?
ಬೆಳಗ್ಗೆಯಿಂದ ಸಂಜೆ 5ಗಂಟೆವರೆಗೂ ಅಕುಲ್​ ಬಾಲಾಜಿ, ಸಂತೋಷ್​ ಸೇರಿದಂತೆ ಮೂವರನ್ನು ವಿಚಾರಣೆ ನಡೆಸಲಾಗಿದೆ.
  • Share this:
ಬೆಂಗಳೂರು (ಸೆ.19): ಡ್ರಗ್ಸ್​ ಪ್ರಕರಣ ವಿಚಾರಣೆಯಲ್ಲಿ  ನೋಟಿಸ್​ ಪಡೆದಿದ್ದ ನಟ, ನಿರೂಪಕ ಅಕುಲ್​ ಬಾಲಾಜಿ ಇಂದು ಸಿಸಿಬಿ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿನ ಈ ಡ್ರಗ್ಸ್​ ದಂಧೆ ಪ್ರಕರಣ ವಿಚಾರಣೆಗೆ ಒಳಪಟ್ಟವರ ಮಾಹಿತಿ ಮೇರೆಗೆ ಅಕುಲ್​ ಬಾಲಾಜಿ ಸೇರಿದಂತೆ ಮೂವರಿಗೆ ನಿನ್ನೆ ಸಿಸಿಬಿ ನೋಟಿಸ್​ ನೀಡಿತ್ತು. ಈ ನೋಟಿಸ್​ಗೆ ತಕ್ಷಣ ಪ್ರತಿಕ್ರಿಯಿಸಿದ ಅವರು, ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದರು. ಅದರಂತೆ ಇಂದು ಬೆಳಗ್ಗೆ 10ಗಂಟೆಗೆ ಅವರು ಸಿಸಿಬಿ ಕಚೇರಿಗೆ ಹಾಜರಾಗಿ ಅವರು ಹೇಳಿಕೆ ದಾಖಲಿಸಿದ್ದಾರೆ.  ಬೆಳಗ್ಗೆಯಿಂದ ಸಂಜೆ 5ಗಂಟೆವರೆಗೂ ಅಕುಲ್​ ಬಾಲಾಜಿ, ಸಂತೋಷ್​ ಸೇರಿದಂತೆ ಮೂವರನ್ನು ವಿಚಾರಣೆ ನಡೆಸಲಾಗಿದೆ. ಈ ವೇಳೆ  ಪೊಲೀಸರಿಗೆ ಅಗತ್ಯ ಮಾಹಿತಿಯನ್ನು ನೀಡಿರುವುದಾಗಿ ಅವರು ತಿಳಿಸಿದ್ದು, ಮತ್ತೆ ವಿಚಾರಣೆಗೆ ಕರೆದರೆ ಬರುತ್ತೇವೆ. ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಅಕುಲ್​ ಬಾಲಾಜಿ ತಿಳಿಸಿದ್ದಾರೆ. 



ಪ್ರಕರಣದ ಹೆಚ್ಚಿನ ವಿಚಾರಣೆಗೆ ಮೂವರ ಮೊಬೈಲ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಅಕುಲ್​ ಬಾಲಾಜಿ ಬಳಸುತ್ತಿದ್ದ ಐಫೋನ್​ ಸೇರಿದಂತೆ ಎರಡು ಮೊಬೈಲ್​ ಬಳಸುತ್ತಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಕೆಲ ಸಂದೇಶ ಹಾಗೂ ಕಾಂಟಾಕ್ಟ್ ನಂಬರ್ ಡಿಲಿಟ್ ಸಾಧ್ಯತೆ ಹಿನ್ನಲೆ‌  ಮೂವರ ಮೊಬೈಲ್​ಗಳನ್ನು ಮಡಿವಾಳದ ಟೆಕ್ನಿಕಲ್​ ಸೆಲ್​ಗೆ ರವಾನೆ ಮಾಡಲಾಗಿದೆ

ಇನ್ನು ಮೊಬೈಲ್​ ವಶಪಡಿಸಿಕೊಂಡಿರುವ ಕುರಿತು ಪ್ರತಿಕ್ರಿಯಿಸಿರುವ ಅಕುಲ್​ ಬಾಲಾಜಿ, ವಿಚಾರಣೆ ವಿಷಯವನ್ನು ಮಾತನಾಡಬೇಡಿ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನಲೆ ಯಾವ ಮಾಹಿತಿ ನೀಡಲಾರೆ. ಆದರೆ, ತನಿಖೆಗೆ ಸಹಕಾರ ನೀಡುತ್ತೇವೆ ಎಂದರು.
Published by: Seema R
First published: September 19, 2020, 7:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading