ಅಮಿತಾಭ್​ ಬಚ್ಚನ್​ ಮನಗೆದ್ದ ಕನ್ನಡದ ಖ್ಯಾತ ನಟ!; ಕರೆ ಮಾಡಿದ ಬಿಗ್​ ಬಿ ಹೇಳಿದ್ದೇನು ಗೊತ್ತಾ?

ಸಣ್ಣ ವಯಸ್ಸಿನಿಂದಲೇ ಸಿನಿಮಾ ರಂಗಕ್ಕೆ ಪ್ರವೇಶ ಪಡೆದ ಅವರು ಮೇರು ನಟರೊಂದಿಗೆ ನಟಿಸಿದ್ದಾರೆ. ಇಂದಿನವರೆಗೆ ಬಿರಾದರ್​ ಶೂಟಿಂಗ್​ ತಡವಾಗಿ ಬಂದಂತಹ ಉದಾಹರಣೆ ಇಲ್ಲವಂತೆ. ಮತ್ತೊಂದು ವಿಚಾರವೆಂದರೆ ಇವರ ಅಭಿನಯಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ ಕೂಡ ಲಭಿಸಿದೆ.

news18-kannada
Updated:October 7, 2020, 3:11 PM IST
ಅಮಿತಾಭ್​ ಬಚ್ಚನ್​ ಮನಗೆದ್ದ ಕನ್ನಡದ ಖ್ಯಾತ ನಟ!; ಕರೆ ಮಾಡಿದ ಬಿಗ್​ ಬಿ ಹೇಳಿದ್ದೇನು ಗೊತ್ತಾ?
ಅಮಿತಾಭ್​ ಬಚ್ಚನ್​
  • Share this:
ಒಂದೆರಡು ಸಿನಿಮಾ ಮಾಡಿ ಸಣ್ಣ ಪುಟ್ಟ ಪ್ರಶಸ್ತಿ ಬಂದೊಡನೆ ತಾನೊಬ್ಬ ದೊಡ್ಡ ನಟ ಎಂಬುದನ್ನು ತಲೆಯಲ್ಲಿ ಇರಿಸಿಕೊಂಡು ಓಡಾಡುವ ಕೆಲವು ಮಂದಿ ಸ್ಯಾಂಡಲ್​ವುಡ್​ನಲ್ಲಿ​ ಇದ್ದಾರೆ. ಅಂತವರ ಮಧ್ಯದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ ಬಂದರು ನಾನೊಬ್ಬ ಸಾಮಾನ್ಯ ಕಲಾವಿದನೆಂದು ಹೇಳುತ್ತಾ ಇಂದಿಗೂ ಬಣ್ಣ ಹಚ್ಚಿ ಜನರಿಗೆ ಸರಿಯಾಗಿ ಮನರಂಜನೆ ಒದಗಿಸುವ ನಟರು ಇದ್ದಾರೆ. ಅವರ ಬಗ್ಗೆ ಅನೇಕರಿಗೆ ಗೊತ್ತಿಲ್ಲ!. ಅಂತವರಲ್ಲಿ ಕನ್ನಡದ ಖ್ಯಾತ ಕಲಾವಿದ ವೈಜನಾಥ್​ ಬಿರಾದರ್​ ಕೂಡ ಒಬ್ಬರು. ಸ್ಯಾಂಡಲ್​ವುಡ್​ನ  ಹಲವಾರು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ಮನರಂಜಿಸಿದ್ದ ಖ್ಯಾತಿ ಬಿರಾದರ್​ ಅವರಿಗಿದೆ. ಅವರ ಕುರಿತಾದ ಕೆಲವು ಮಾಹಿತಿ ಇಲ್ಲಿದೆ..

ಬಿರಾದರ್​ ಕನ್ನಡ ಅನೇಕ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ವಿಧ ವಿಧವಾದ ಪಾತ್ರ ಮಾಡಿದ್ದಾರೆ. ಭಿಕ್ಷುಕ, ಕುಡುಕ ಪಾತ್ರದ ಮೂಲಕ ಮನರಂಜಿಸಿದ್ದಾರೆ. ಮಾತ್ರವಲ್ಲದೆ, ಆ ಪಾತ್ರಕ್ಕೆ ತಕ್ಕಂತೆ ಜೀವ ತುಂಬಿಸಿದ್ದಾರೆ. ಈ ಪಾತ್ರ ಬೇಡ, ಆ ಪಾತ್ರ ಬೇಡ ಎನ್ನುವ ಕಾಲಘಟ್ಟದಲ್ಲಿ ವಿಜನಾಥ್​ ಬಿರಾದರ್​ ಯಾವ ಪಾತ್ರವನ್ನು ಕೊಟ್ಟರು ಹಿಂಜರಿಯದೆ ನಟಿಸಿ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಯಾವುದೇ ಸಿನಿಮಾವಿರಲಿ ಆ ಸಿನಿಮಾದಲ್ಲಿ ನೀಡಿದ ಪಾತ್ರಕ್ಕೆ ಬಿರಾದರ್​ ಸರಿಯಾಗಿ ಜೀವ ತುಂಬುವ ಕೆಲಸ ಮಾಡುತ್ತಿದ್ದಾರೆ. ಕನ್ನಡದಲ್ಲಿ ಬಿರಾದರ್​ ಒಂದೆರಡು ಸಿನಿಮಾ ಮಾಡಿದಲ್ಲ, ಬದಲಾಗಿ 350ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ.

ವಿಜನಾಥ್​ ಬಿರಾದರ್


ಸಣ್ಣ ವಯಸ್ಸಿನಿಂದಲೇ ಸಿನಿಮಾ ರಂಗಕ್ಕೆ ಪ್ರವೇಶ ಪಡೆದ ಅವರು ಮೇರು ನಟರೊಂದಿಗೆ ನಟಿಸಿದ್ದಾರೆ. ಇಂದಿನವರೆಗೆ ವಿಜನಾಥ್​ ಬಿರಾದರ್​ ಶೂಟಿಂಗ್​ ತಡವಾಗಿ ಬಂದಂತಹ ಉದಾಹರಣೆ ಇಲ್ಲವಂತೆ. ಮತ್ತೊಂದು ವಿಚಾರವೆಂದರೆ ಇವರ ಅಭಿನಯಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ ಕೂಡ ಲಭಿಸಿದೆ. ಈ ವಿಚಾರ ಸಾಕಷ್ಟು ಜನರಿಗೆ ತಿಳಿದಿಲ್ಲ.

ಬಿರಾದರ್


ಕಲೆಯನ್ನು ದೇವರೆಂದು ನಂಬಿರುವ ವಿಜನಾಥ್​ ಬಿರಾದರ್​ ಅವರು ಗಿರೀಶ್​​ ಕಾಸರವಳ್ಳಿ ಕನಸೆಂಬ ಕುದುರೆಯನೇರಿ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದರು. ಸ್ಪೇನ್​ನ ಮ್ಯಾಡ್ರಿಡ್​ನಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಎಂಬ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.ಬಿರಾದರ್​ಗೆ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿರುವ ವಿಚಾರ ತಿಳಿದು ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ ಕಾಲ್​​ ಮಾಡಿದ್ದರು, ಶುಭಾಶಯ ತಿಳಿಸಿದ್ದರು. ಭಾರತೀಯನಿಗೆ ಈ ಗೌರವ ಸಿಕ್ಕಿರುವುದು ನಮಗೆ ಹೆಮ್ಮೆ ತಂದಿದೆ ಎಂದು ಹೇಳಿದ್ದರು.
Published by: Harshith AS
First published: October 7, 2020, 2:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading