Trishulam Teaser: ರಿಲೀಸ್​ ಆಯ್ತು ಉಪೇಂದ್ರ ಅಭಿನಯದ ತ್ರಿಶೂಲಂ ಚಿತ್ರದ ಟೀಸರ್​: ​ವಿಷ್ಣು ಅಭಿಮಾನಿಗಳಿಗಿದೆ ಸರ್ಪ್ರೈಸ್​..!

Trishulam Teaser: ರಿಯಲ್​ ಸ್ಟಾರ್​ಗೆ ಈ ಸಿನಿಮಾದಲ್ಲಿ ಶಾನ್ವಿ ಹಾಗೂ ನಿಮಿತಾ ರತ್ನಾಕರ್​ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟೀಸರ್​ ಅನ್ನು ನಿನ್ನೆ ಉಪೇಂದ್ರ ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ರಿಲೀಸ್​ ಮಾಡಲಾಗಿದೆ.

Anitha E | news18-kannada
Updated:September 19, 2020, 2:28 PM IST
Trishulam Teaser: ರಿಲೀಸ್​ ಆಯ್ತು ಉಪೇಂದ್ರ ಅಭಿನಯದ ತ್ರಿಶೂಲಂ ಚಿತ್ರದ ಟೀಸರ್​: ​ವಿಷ್ಣು ಅಭಿಮಾನಿಗಳಿಗಿದೆ ಸರ್ಪ್ರೈಸ್​..!
ತ್ರಿಶೂಲಂ ಸಿನಿಮಾದಲ್ಲಿ ನಿಮಿತಾ ಹಾಗೂ ಉಪೇಂದ್ರ
  • Share this:
ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಅವರ ಅಭಿನಯದ ಕಬ್ಜ ಸಿನಿಮಾದ ಥೀಮ್​ ಪೋಸ್ಟರ್​ ಅನ್ನು ಖ್ಯಾತ ನಿರ್ದೇಶಕ ರಾಮ್​ ಗೋಪಾಲ್​ ವರ್ಮ ರಿಲೀಸ್​ ಮಾಡಿದ್ದರು. ಇನ್ನು ಉಪ್ಪಿ ಅವರ ಹೊಸ ಸಿನಿಮಾಗಳ ಅಪ್ಡೇಟ್​ಗಳ ನಿನ್ನೆ ಹೊರಬೀಳಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಅದಕ್ಕೆ ತಕ್ಕಂತೆ ಉಪ್ಪಿ ಅಭಿಯನದ ಹೊಸ ತೆಲುಗು ಸಿನಿಮಾದ ಸುದ್ದಿ ಸೇರಿದಂತೆ ಕನ್ನಡ ಚಿತ್ರದ ಟೀಸರ್ ನಿನ್ನೆ ರಿಲೀಸ್ ಆಗಿದೆ. ಉಪೇಂದ್ರ ಕೈಯಲ್ಲಿ ಸದ್ಯ ಮೂರರಿಂದ ನಾಲ್ಕು ಸಿನಿಮಾಗಳಿವೆ. ಈ ಸಿನಿಮಾಗಳ ಪೈಕಿ ತ್ರಿಶೂಲಂ ಸಹ ಒಂದು. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರು ನಟಿಸಿದ್ದು, ಉಪೇಂದ್ರ ಮಾಸ್​ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಅದಕ್ಕೂ ಮೊದಲು ಲಾಕ್​ಡೌನ್​ ಆಗುವ ಮುನ್ನವೇ ಶೂಟಿಂಗ್​ಗೆ ಕಿಕ್​ಸ್ಟಾರ್ಟ್​ ಸಿಕ್ಕಿತ್ತು. ಈ ಸಿನಿಮಾ ಮಾಸ್​ ಹಾಗೂ ಕೌಟುಂಬಿಕ ಕಥಾಹಂದರ ಹೊಂದಿದೆ. 

ಈ ಚಿತ್ರಕ್ಕೆ ಈ ಹಿಂದೆ ರವಿಚಂದ್ರ ಎಂದು ಹೆಸರಿಡಲಾಗಿತ್ತು. ಅದನ್ನು ನಂತರದಲ್ಲಿ ವೇದವ್ಯಾಸ ಎಂದು ಬದಲಾಯಿಸಲಾಗಿತ್ತು. ಈಗ ಇದೇ ಚಿತ್ರಕ್ಕೆ ತ್ರಿಶೂಲಂ ಎಂದು ಹೆಸರಿಡಲಾಗಿದೆ. ಈ ಸಿನಿಮಾದಲ್ಲಿ ಕ್ರೇಜಿ ಸ್ಟಾರ್​ ರವಿ ಚಂದ್ರನ್​ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.



ರಿಯಲ್​ ಸ್ಟಾರ್​ಗೆ ಈ ಸಿನಿಮಾದಲ್ಲಿ ಶಾನ್ವಿ ಹಾಗೂ ನಿಮಿತಾ ರತ್ನಾಕರ್​ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟೀಸರ್​ ಅನ್ನು ನಿನ್ನೆ ಉಪೇಂದ್ರ ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ರಿಲೀಸ್​ ಮಾಡಲಾಗಿದೆ.



ಈ ಸಿನಿಮಾದ ಟೀಸರ್​ನಲ್ಲಿ ವಿಷ್ಣು ಅಭಿಮಾನಿಗಳಿಗೆ ಒಂದು ಸರ್ಪ್ರೈಸ್​ ಇದೆ. ವಿಷ್ಣು ಅವರ ಹುಟ್ಟುಹಬ್ಬದಂದೇ ಉಪೇಂದ್ರ ಅವರ ಬರ್ತ್​ಡೇ ಇದ್ದು, ಈ ಟೀಸರ್​ನಲ್ಲಿ ಸಾಹಸ ಸಿಂಹನ ಹೆಸರನ್ನೂ ತರಲಾಗಿದೆ. ಸಾಹಸ ಸಿಂಹನ ಪಾದದ ಮೇಲಾಣೆ ಅನ್ನೋ ಡೈಲಾಗ್​ ಹೇಳ್ತಾರೆ ರಿಯಲ್ ಸ್ಟಾರ್​.

ಇದನ್ನೂ ಓದಿ: Upendra: ತೆಲುಗು ಸಿನಿಮಾದಲ್ಲಿ ಉಪೇಂದ್ರ: ಮೆಗಾ ಕುಟುಂಬದ ಕುಡಿಯ ಜೊತೆ ನಟಿಸಲಿರುವ ರಿಯಲ್​ ಸ್ಟಾರ್​..!ಇನ್ನು ಈ ಸಿನಿಮಾದ ಚಿತ್ರೀಕರಣ ಬೆಂಗಳೂರು ಹಾಗೂ ಮೈಸೂರಿನಲ್ಲಿ ನಡೆದಿದ್ದು, ಇನ್ನು ಕೆಲವೇ ದಿನಗಳಲ್ಲಿ ರಾಜ್ಯದಿಂದ ಹೊರಗಡೆ ನಡೆಯಲಿದೆ. ಕೊರೋನಾ ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಈ ಸಿನಿಮಾದ ಉಳಿದ ಭಾಗದ ಚಿತ್ರೀರಕಣ ಆರಂಭವಾಗಿದೆ. ಇನ್ನು ಉಪ್ಪಿ, ವರುಣ್​ ತೇಜ್​ ಅವರೊಂದಿಗೆ ವಿಟಿ10 ಸಿನಿಮಾದಲ್ಲೂ ನಟಿಸಲು ಓಕೆ ಮಾಡಿದ್ದು, ಅದರ ಚಿತ್ರೀಕರಣಕ್ಕೆ ಇನ್ನೂ ಸಮಯ ಬಾಕಿ ಇದೆ. ಈ ಕುರಿತಾಗಿ ವರುಣ್​ ತೇಜ್​ ನಿನ್ನೆ ಉಪೇಂದ್ರ ಅವರಿಗೆ ಹುಟ್ಟುಹಬ್ಬಕ್ಕೆ ವಿಶ್​ ಮಾಡುವಾಗ ಈ ಚಿತ್ರದ ಬಗ್ಗೆ ಬಹಿರಂಗಪಡಿಸಿದ್ದಾರೆ.
Published by: Anitha E
First published: September 19, 2020, 2:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading