ಒಟಿಟಿ ಮೂಲಕ ರಿಲೀಸ್​ ಆಗಲಿದೆಯಾ ರಾಣಾ ಅಭಿನಯದ ಪ್ಯಾನ್​ ಇಂಡಿಯಾ ಸಿನಿಮಾ ಅರಣ್ಯ..?

ಈ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಲಾಕ್​ಡೌನ್​ ಆಗುವ ಮೊದಲೇ ರಾಣಾ ತೆಲುಗು ವರ್ಷನ್​ನ ಡಬ್ಬಿಂಗ್​ ಸಹ ಮುಗಿಸಿದ್ದರು. ಇಂತಹ ಪ್ಯಾನ್​ ಇಂಡಿಯಾ ಸಿನಿಮಾಗಾಗಿ ದೊಡ್ಡ ಮೊತ್ತ ನೀಡಲು ನೆಟ್​ಫ್ಲಿಕ್ಸ್​ ಕಾಯುತ್ತಿದೆಯಂತೆ.

Anitha E | news18-kannada
Updated:June 30, 2020, 2:47 PM IST
ಒಟಿಟಿ ಮೂಲಕ ರಿಲೀಸ್​ ಆಗಲಿದೆಯಾ ರಾಣಾ ಅಭಿನಯದ ಪ್ಯಾನ್​ ಇಂಡಿಯಾ ಸಿನಿಮಾ ಅರಣ್ಯ..?
ಅರಣ್ಯ ಸಿನಿಮಾದ ಪೋಸ್ಟರ್​ನಲ್ಲಿ ರಾಣಾ ದಗ್ಗುಬಾಟಿ
  • Share this:
ರಾಣಾ ದಗ್ಗುಬಾಟಿ ಅಭಿನಯದ ಬಹು ನಿರೀಕ್ಷಿತ ಚಿತ್ರ ಅರಣ್ಯ. ವಿಭಿನ್ನ ಪಾತ್ರದಲ್ಲಿ ರಾಣಾ ನಟಿಸಿದ್ದು, ಇದು ಪ್ಯಾನ್​ ಇಂಡಿಯಾ ಚಿತ್ರವಾಗಿದೆ. ಬಾಲಿವುಡ್​ ನಟ ಪುಲಕಿತ್​ ಸಾಮ್ರಾಟ್​ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 

ಬಾಲಿವುಡ್​ನ ಬಿಗ್​ ಬಿ ಅಮಿತಾಭ್​ ಅಭಿನಯದ ಸಿನಿಮಾ ಗುಲಾಬೊ ಸಿತಾಬೊ ಒಟಿಟಿ ಮೂಲಕ ತೆರೆಕಂಡ ನಂತರ, ಮೆಲ್ಲನೆ ಒಂದೊಂದೇ ಸ್ಟಾರ್​ ನಟರ ಹಿಂದಿ ಸಿನಿಮಾಗಳು ಡಿಜಿಟಲ್​ ವೇದಿಕೆಗೆ ಲಗ್ಗೆ ಇಡಲು ಸಿದ್ಧವಾಗುತ್ತಿವೆ. ಇದಕ್ಕೆ ರಾಣಾ ದಗ್ಗುಬಾಟಿ ಅಭಿನಯದ ಅರಣ್ಯ ಸಹ ಹೊರತಾಗಿಲ್ಲ.

ತೆಲುಗು, ಹಿಂದಿ ಹಾಗೂ ತಮಿಳಿನಲ್ಲಿ ತೆರೆ ಕಾಣಲಿರುವ ರಾಣಾ ಅವರ ಅರಣ್ಯ ಚಿತ್ರ ಸಹ ಈಗ ಒಟಿಟಿ ಮೂಲಕ ರಿಲೀಸ್​ ಆಗಲಿದೆಯಂತೆ. ಹೀಗೊಂದು ಸುದ್ದಿ ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: Vakeel Saab: ಲೀಕ್ ಆಯ್ತು ಪವನ್​ ಕಲ್ಯಾಣ್​ ಅಭಿನಯದ ವಕೀಲ್​ ಸಾಬ್​ ಚಿತ್ರದ ಫೋಟೋ..!

ಪ್ರಭು ಸೊಲೊಮನ್​​ ನಿರ್ದೇಶನದ ಈ ಚಿತ್ರವನ್ನು ಏಪ್ರಿಲ್​ 2ಕ್ಕೆ ರಿಲೀಸ್ ಮಾಡಲು ದಿನಾಂಕ ಫಿಕ್ಸ್​ ಮಾಡಲಾಗಿತ್ತು. ಆದರೆ ಕೊರೋನ ಕಾರಣದಿಂದ ಅದನ್ನು ಮುಂದೂಡಲಾಯಿತು.ಈ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಲಾಕ್​ಡೌನ್​ ಆಗುವ ಮೊದಲೇ ರಾಣಾ ತೆಲುಗು ವರ್ಷನ್​ನ ಡಬ್ಬಿಂಗ್​ ಸಹ ಮುಗಿಸಿದ್ದರು. ಇಂತಹ ಪ್ಯಾನ್​ ಇಂಡಿಯಾ ಸಿನಿಮಾಗಾಗಿ ದೊಡ್ಡ ಮೊತ್ತ ನೀಡಲು ನೆಟ್​ಫ್ಲಿಕ್ಸ್​ ಕಾಯುತ್ತಿದೆಯಂತೆ. ಈ ಕುರಿತು ಈಗಾಗಲೇ ಸುರೇಶ್​ ಪ್ರೊಡಕ್ಷನ್ಸ್​ ಬಳಿ ಮಾತುಕತೆ ನಡೆಸಿದೆ ಎನ್ನಲಾಗುತ್ತಿದೆ. 
View this post on Instagram
 

And done with the Telugu dubb!! 👊👊👊


A post shared by Rana Daggubati (@ranadaggubati) on


ಎರೋಸ್​ ಇಂಟರ್​ನ್ಯಾಷನಲ್​ ಈ ಸಿನಿಮಾವನ್ನು ನಿರ್ಮಿಸಿದೆ. ಆದರೆ ಈ ಚಿತ್ರದ ನಾಯಕ ರಾಣಾ ಆಗಿರುವ ಕಾಣರಕ್ಕೆ ಅವರ ತಂದೆ ಸುರೇಶ್​ ಪ್ರೊಡಕ್ಷನ್ಸ್ ಮಾಲೀಕ ತಂದೆ ಸುರೇಶ್ ಬಾಬು ಅವರೊಂದಿಗೆ ನೆಟ್​ಫ್ಲಿಕ್ಸ್  ಮಾತುಕತೆ ನಡೆಸಿದೆಯಂತೆ. ನಿರ್ದೇಶಕ ಹಾಗೂ ನಿರ್ಮಾಪಕರೊಂದಿಗೆ ಮಾತನಾಡಿ ತಿಳಿಸುವುದಾಗಿ ಸುರೇಶ್ ಬಾಬು ಹೇಳಿದ್ದಾರೆ ಎನ್ನಲಾಗುತ್ತಿದೆ.

Ranjani Raghavan: ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ ಪುಟ್ಟಗೌರಿ ರಂಜನಿ ರಾಘವನ್..!


ಇದನ್ನೂ ಓದಿ: Radhika Pandit: ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ರಾಕಿಂಗ್ ದಂಪತಿ: ಏನಂತಾರೆ ರಾಧಿಕಾ..?
First published: June 30, 2020, 2:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading