news18-kannada Updated:April 16, 2021, 4:08 PM IST
ಹಿರಿಯ ನಟ ದ್ವಾರಕೀಶ್ -ಪತ್ನಿ ಅಂಬುಜಾ
ಸ್ಯಾಂಡಲ್ವುಡ್ನ ಹಿರಿಯ ನಟ, ಕನ್ನಡದ ಕುಳ್ಳ ಎಂದೇ ಪ್ರಸಿದ್ಧರಾಗಿರುವ ದ್ವಾರಕೀಶ್ ಅವರ ಮೊದಲ ಪತ್ನಿ ಅಂಬುಜಾ ನಿಧರಾಗಿದ್ದಾರೆ. 83 ವರ್ಷ ವಯಸ್ಸಿನ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕೆಲವು ವರ್ಷಗಳಿಂದ ಮಂಡಿ ನೋವಿನ ಸಮಸ್ಯೆಗೂ ತುತ್ತಾಗಿದ್ದರು. ಆ ಬಳಿಕ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು ಚೇತರಿಕೆ ಕಾಣಲಿಲ್ಲ.
ಅಂಬುಜಾ ಅವರು ಶುಕ್ರವಾರ ಮಧ್ಯಾಹ್ನದಂದು ಎಚ್.ಎಸ್. ಆರ್ ಲೇಜೌಟ್ನಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ನಟ ದ್ವಾರಕೀಶ್ ಅವರ ಮೊದಲ ಪತ್ನಿಯಾಗಿದ್ದಾರೆ.
ಹಿರಿಯ ನಟರಾದ ದ್ವಾರಕೀಶ್ ಎರಡು ವಿವಾಹವಾಗಿದ್ದಾರೆ. ಅದರಲ್ಲಿ ಅಂಬುಜಾ ಅವರು ಮೊದಲಿನವರಾಗಿದ್ದು, ಪ್ರೀತಿಸಿ ಮದುವೆಯಾದರು. ಆ ಬಳಿಕ ಶೈಲಜಾ ಅವರನ್ನು ಕೂಡ ದ್ವಾರಕೀಶ್ ಇಷ್ಟ ಪಟ್ಟು ವಿವಾಹವಾದರು. ದ್ವಾರಕೀಶ್ ಅವರ ಎರಡನೇ ವಿವಾಹಕ್ಕೆ ಅಂಬುಜಾ ಅವರ ಒಪ್ಪಿಗೆ ಇತ್ತು. ಈ ವಿಚಾರವನ್ನು ಕಾರ್ಯಕ್ರಮವೊಂದರಲ್ಲಿ ದ್ವಾರಕೀಶ್ ಹೇಳಿಕೊಂಡಿದ್ದರು.
ಇನ್ನು ದ್ವಾರಕೀಶ್ ಮತ್ತು ಅಂಬುಜಾ ಅವರಿಗೆ ಇವರಿಗೆ ಐದು ಗಂಡು ಮಕ್ಕಳಿದ್ದಾರೆ.
Published by:
Harshith AS
First published:
April 16, 2021, 4:07 PM IST