HOME » NEWS » Entertainment » RRR MOVIE WRITER VIJAYENDRA PRASAD WANTS KANGANA RANAUT TO PLAY SITA ROLE INSTEAD OF KAREENA KAPOOR IN SITA MOVIE SCT

Sita Movie: 12 ಕೋಟಿ ಸಂಭಾವನೆ ಕೇಳಿದ್ದ ಕರೀನಾಗಿಲ್ಲ ಚಾನ್ಸ್; ಸೀತೆ ಪಾತ್ರಕ್ಕೆ ಈ ವಿವಾದಿತ ನಟಿಯೇ ಬೇಕಂತೆ!

Sita- The Incarnation Movie: ಬಹುನಿರೀಕ್ಷಿತ ಸೀತಾ- ದಿ ಇನ್​ಕಾರ್ನೇಷನ್ ಸಿನಿಮಾದಲ್ಲಿ ಸೀತೆಯ ಪಾತ್ರವನ್ನು ಆಲಿಯಾ ಭಟ್, ಕರೀನಾ ಕಪೂರ್ ಮಾಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಈ ಸಿನಿಮಾಗೆ ಚಿತ್ರಕತೆ ಬರೆದಿರುವ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ವಿವಾದಿತ ನಟಿಯೊಬ್ಬರ ಹೆಸರನ್ನು ಸೂಚಿಸಿದ್ದಾರಂತೆ.

Sushma Chakre | news18-kannada
Updated:June 24, 2021, 11:54 AM IST
Sita Movie: 12 ಕೋಟಿ ಸಂಭಾವನೆ ಕೇಳಿದ್ದ ಕರೀನಾಗಿಲ್ಲ ಚಾನ್ಸ್; ಸೀತೆ ಪಾತ್ರಕ್ಕೆ ಈ ವಿವಾದಿತ ನಟಿಯೇ ಬೇಕಂತೆ!
ಕರೀನಾ ಕಪೂರ್
  • Share this:
ಪಂಚಭಾಷೆಗಳಲ್ಲಿ ನಿರ್ಮಾಣವಾಗಲಿರುವ 'ಸೀತಾ- ದಿ ಇನ್​ಕಾರ್ನೇಷನ್' (Sita – The Incarnation) ಸಿನಿಮಾ ಸೆಟ್ಟೇರುವ ಮೊದಲೇ ಸಾಕಷ್ಟು ಸುದ್ದಿಯಲ್ಲಿದೆ. ಈ ಸಿನಿಮಾದ ಸೀತೆ ಪಾತ್ರಕ್ಕಾಗಿ ಬಾಲಿವುಡ್ ಬೇಬೋ ಕರೀನಾ ಕಪೂರ್ (Kareena Kapoor) 12 ಕೋಟಿ ರೂ. ಸಂಭಾವನೆ ಕೇಳಿದ್ದಾರೆ ಎಂಬುದು ಕೆಲವು ದಿನಗಳ ಹಿಂದೆ ಭಾರೀ ಸುದ್ದಿಯಾಗಿತ್ತು. ಈ ಪೌರಾಣಿಕ ಸಿನಿಮಾಗೆ ಸಾಕಷ್ಟು ಸಿದ್ಧತೆ ಮತ್ತು 8ರಿಂದ 10 ತಿಂಗಳು ಕಾಲ್​ಶೀಟ್ ಕೊಡಬೇಕಾಗಿದ್ದರಿಂದ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಕೇಳಿದ್ದಾಗಿ ಅವರು ಹೇಳಿದ್ದರು. ಈ ಬಹುನಿರೀಕ್ಷಿತ 'ಸೀತಾ' ಸಿನಿಮಾಗೆ 'ಬಾಹುಬಲಿ', 'ಭಜರಂಗಿ ಭಾಯಿಜಾನ್', 'ಮಣಿಕರ್ಣಿಕಾ' ಮುಂತಾದ ಸೂಪರ್ ಹಿಟ್ ಸಿನಿಮಾಗಳಿಗೆ ಕತೆ ಬರೆದ ಕೆ.ವಿ. ವಿಜಯೇಂದ್ರ ಪ್ರಸಾದ್ ಅವರೇ ಚಿತ್ರಕತೆ ಬರೆದಿದ್ದಾರೆ. ಹೀಗಾಗಿ, ಸಿನಿಮಾದ ಕಾಸ್ಟಿಂಗ್ ವಿಚಾರದಲ್ಲೂ ತಲೆ ಹಾಕಿರುವ ಅವರು ಸೀತಾ ಪಾತ್ರಕ್ಕೆ ಕರೀನಾ ಕಪೂರ್ ಬದಲಾಗಿ ಕಂಗನಾ ರಣಾವತ್ (Kangana Ranaut) ಅವರನ್ನು ಆಯ್ಕೆ ಮಾಡಿ ಎಂದು ಸೂಚಿಸಿದ್ದಾರಂತೆ.

ಈಗಾಗಲೇ ವಿಜಯೇಂದ್ರ ಪ್ರಸಾದ್ ಚಿತ್ರಕತೆ ಬರೆದಿರುವ 'ಮಣಿಕರ್ಣಿಕಾ'ಹಾಗೂ ಜಯಲಲಿತಾ ಬಯೋಪಿಕ್ 'ತಲೈವಿ' ಸಿನಿಮಾಗಳ ನಾಯಕಿಯಾಗಿ ನಟಿಸಿರುವ ಕಂಗನಾ ರಣಾವತ್ ನಟನೆಗೆ ವಿಜಯೇಂದ್ರ ಪ್ರಸಾದ್ ಮರುಳಾಗಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ತಮ್ಮ ಮಗ ಎಸ್.ಎಸ್. ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​ (RRR) ಸಿನಿಮಾಗೆ ಚಿತ್ರಕಥೆ ಬರೆದಿದ್ದು, ಬಹುತಾರಾಗಣವಿರುವ ಈ ಸಿನಿಮಾ ಕೂಡ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.ಅಂದಹಾಗೆ, 'ಸೀತಾ; ದಿ ಇನ್​ಕಾರ್ನೇಷನ್' (Sita – The Incarnation) ಸಿನಿಮಾವನ್ನು ಖ್ಯಾತ ನಿರ್ದೇಶಕ ಅಲೌಕಿಕ್ ದೇಸಾಯಿ ನಿರ್ದೇಶನ ಮಾಡುತ್ತಿದ್ದಾರೆ. ರಾಮನ ಪತ್ನಿ ಸೀತೆಯ ಪಾತ್ರಕ್ಕೆ ಕರೀನಾ ಕಪೂರ್ ಅವರನ್ನು ಕರೆತರಲು ಚಿತ್ರತಂಡ ಯೋಚಿಸಿತ್ತು. ಹೀಗಾಗಿ, ಅವರನ್ನು ಸಂಪರ್ಕಿಸಿದಾಗ ಕರೀನಾ 12 ಕೋಟಿ ರೂ. ಸಂಭಾವನೆ ಬೇಕೆಂದಿದ್ದರು. ಮದುವೆಯಾಗಿ ಮಕ್ಕಳಾಗಿದ್ದರೂ ಕರೀನಾಗೆ ಇನ್ನೂ ಬೇಡಿಕೆ ಕಡಿಮೆಯಾಗಿಲ್ಲ. ಆದರೆ, ತಮ್ಮ ಕತೆಯ ಸೀತೆ ಪಾತ್ರಕ್ಕೆ ಕರೀನಾ ಮ್ಯಾಚ್ ಆಗುವುದಿಲ್ಲ ಎಂದು ವಿಜಯೇಂದ್ರ ಪ್ರಸಾದ್ ಅವರಿಗೆ ಅನಿಸಿದೆಯಂತೆ. ಹೀಗಾಗಿ, ಅವರು ಕರೀನಾ ಸೀತೆಯ ಪಾತ್ರ ಮಾಡುವುದು ಬೇಡ ಎಂದಿದ್ದಾರಂತೆ. ಹಾಗೇ, 12 ಕೋಟಿ ರೂ. ಸಂಭಾವನೆ ಕೇಳಿರುವುದರಿಂದ ಚಿತ್ರತಂಡ ಕೂಡ ಕರೀನಾ ಕಪೂರ್ ಆಯ್ಕೆಯಿಂದ ಹಿಂದೆ ಸರಿದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Sonu Sood: ಗರ್ಲ್‌ಫ್ರೆಂಡ್‌ಗಾಗಿ ಸೋನು ಸೂದ್ ಬಳಿ ಐಫೋನ್ ಬೇಡಿಕೆ ಇಟ್ಟ ಟ್ವಿಟ್ಟರ್‌ ಬಳಕೆದಾರ: ನಟನ ಪ್ರತಿಕ್ರಿಯೆ ಹೀಗಿದೆ ನೋಡಿ

ತಾವು ಕತೆ ಬರೆದಿದ್ದ 'ಮಣಿಕರ್ಣಿಕಾ', 'ತಲೈವಿ' ಪಾತ್ರಗಳಿಗೆ ಜೀವ ತುಂಬಿದ್ದ ಕಂಗನಾ ಅವರನ್ನೇ ಸೀತೆಯಾಗಿ ತೆರೆಯ ಮೇಲೆ ತಂದರೆ ಹೇಗಿರುತ್ತದೆ? ಎಂಬ ಪ್ರಸ್ತಾಪವನ್ನು ವಿಜಯೇಂದ್ರ ಪ್ರಸಾದ್ ನಿರ್ದೇಶಕ ಅಲೌಕಿಕ್ ದೇಸಾಯಿ ಮುಂದಿಟ್ಟಿದ್ದಾರಂತೆ. ಇನ್ನೊಂದು ವಿಷಯವೆಂದರೆ, ಜಯಲಲಿತಾ ಪಾತ್ರಕ್ಕೆ ತಲೈವಿ ಸಿನಿಮಾಗೂ ಕಂಗನಾಳನ್ನು ಸೂಚಿಸಿದ್ದು ಇದೇ ವಿಜಯೇಂದ್ರ ಪ್ರಸಾದ್! ಇದೀಗ ಪ್ಯಾನ್ ಇಂಡಿಯಾ ಸಿನಿಮಾ 'ಸೀತಾ'ಗೂ ಕಂಗನಾ ನಾಯಕಿಯಾದರೆ ಚೆನ್ನಾಗಿರುತ್ತದೆ ಎನ್ನುತ್ತಿದ್ದಾರಂತೆ ರಾಜಮೌಳಿಯ ತಂದೆ.

'ಸೀತಾ' ಸಿನಿಮಾ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಯಲ್ಲಿ ತೆರೆಕಾಣಲಿದೆ. ರಾಮಾಯಣವನ್ನು ಸೀತೆಯ ದೃಷ್ಟಿಕೋನದಿಂದ ಹೊಸ ರೀತಿಯಲ್ಲಿ ನಿರೂಪಣೆ ಮಾಡಿರುವ ವಿಜಯೇಂದ್ರ ಪ್ರಸಾದ್ ಇಡೀ ದೇಶಕ್ಕೆ ಸೀತೆಯ ಕತೆ ಹೇಳಲಿದ್ದಾರೆ. ಈ ಸಿನಿಮಾದಲ್ಲಿ ರಾಮನನ್ನು ಮದುವೆಯಾಗುವ ಮೊದಲು ಸೀತೆಯ ಜೀವನದಲ್ಲಿ ಏನೆಲ್ಲ ಆಗಿತ್ತು? ಎಂಬುದನ್ನು ಹೆಚ್ಚಾಗಿ ಹೈಲೈಟ್ ಮಾಡಲಾಗುತ್ತಿದೆಯಂತೆ. ಸೀತಾ ಸಿನಿಮಾದ ಸ್ಕ್ರಿಪ್ಟಿಂಗ್ ಕೆಲಸ ಇನ್ನೂ ನಡೆಯುತ್ತಿದ್ದು, ಸೀತೆ ಪಾತ್ರಕ್ಕೆ ಇನ್ನೂ ಯಾರನ್ನೂ ಫೈನಲ್ ಮಾಡಿಲ್ಲ ಎಂದು ಚಿತ್ರತಂಡ ಸ್ಪಷ್ಟನೆ ಕೊಟ್ಟಿದೆ.

Takht, Kareena kapoor khan demand 12 cr for mythological role of sita, ಸಂಭಾವನೆ, ಬಾಲಿವುಡ್, ಕರೀನಾ ಕಪೂರ್ ಖಾನ್, sita the incarnation movie, kareena kapoor khan remuneration, Kareena Kapoor Khan, Bollywood, Kareena Kapoor demanded 12 crore for mythological role of sita ae

ಈ ಮೊದಲು ಕರೀನಾ ಕಪೂರ್ ಜೊತೆಗೆ ಅಲಿಯಾ ಭಟ್ ಅವರನ್ನು ಕೂಡ ಸೀತೆ ಪಾತ್ರಕ್ಕೆ ಸಂಪರ್ಕ ಮಾಡಲಾಗಿತ್ತು ಎನ್ನಲಾಗಿತ್ತು. ಆದರೀಗ, ವಿವಾದಗಳಿಂದಲೇ ಸದಾ ಸುದ್ದಿಯಲ್ಲಿರುವ ನಟಿ ಕಂಗನಾ ರಣಾವತ್ ಹೆಸರು ಸೀತೆ ಪಾತ್ರಕ್ಕೆ ಕೇಳಿಬರುತ್ತಿದೆ. ಒಟ್ಟಾರೆ, ಸೀತೆಯಾಗಿ ಯಾರು ತೆರೆ ಮೇಲೆ ರಾರಾಜಿಸಲಿದ್ದಾರೆ ಎಂಬ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ.
Published by: Sushma Chakre
First published: June 24, 2021, 11:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories