Prabhas: ನನಸಾಯ್ತು ಪ್ರಭಾಸ್​ ಕಂಡಿದ್ದ ಕನಸು: ಅಮಿತಾಭ್​ ಬಚ್ಚನ್​ ಜೊತೆ ತೆರೆ ಹಂಚಿಕೊಳ್ಳುತ್ತಿರುವ ರೆಬೆಲ್​ ಸ್ಟಾರ್​..!

Amitabh Bachchan: ಚಿತ್ರತಂಡ ಅಧಿಕೃತವಾಗಿ ಪ್ರಭಾಸ್​ 21ನೇ ಸಿನಿಮಾದ ನಾಯಕಿ ಬಗ್ಗೆ ಪ್ರಕಟಿಸಿದಂತೆಯೇ ಈಗ ​ಮತ್ತೊಂದು ದೊಡ್ಡ ಪ್ರಕಟಣೆ ಮಾಡಿದೆ. ಅದು ಪ್ರಭಾಸ್​ಗೆ​ ಈ ಸಿನಿಮಾದಲ್ಲಿ ಬಿಗ್​ ಬಿ ಅಮಿತಾಭ್​ ಬಚ್ಚನ್​ ಜೊತೆಯಾಗಲಿದ್ದಾರಂತೆ. ಇದು ಕೇವಲ ತೆಲುಗ ಅಲ್ಲದೆ ಹಿಂದಿ, ತಮಿಳು ಸೇರಿದಂತೆ ಹಲವಾರು ಭಾಷೆಗಳಲ್ಲಿ ಸಿದ್ಧಗೊಳ್ಳುತ್ತಿದೆ. ಇದೇ ಕಾರಣದಿಂದ ಈ ಸಿನಿಮಾದಲ್ಲಿ ಟಾಲಿವುಡ್​ ಜತೆಗೆ ಬಾಲಿವುಡ್​ನ ಸ್ಟಾರ್ ನಟರನ್ನೂ ತೆಗೆದುಕೊಳ್ಳಲಾಗುತ್ತಿದೆ.

Anitha E | news18-kannada
Updated:October 9, 2020, 2:38 PM IST
Prabhas: ನನಸಾಯ್ತು ಪ್ರಭಾಸ್​ ಕಂಡಿದ್ದ ಕನಸು: ಅಮಿತಾಭ್​ ಬಚ್ಚನ್​ ಜೊತೆ ತೆರೆ ಹಂಚಿಕೊಳ್ಳುತ್ತಿರುವ ರೆಬೆಲ್​ ಸ್ಟಾರ್​..!
ಪ್ರಭಾಸ್​-ದೀಪಿಕಾಗೆ ಜೊತೆಯಾದ ಅಮಿತಾಭ್​
  • Share this:
ಪ್ರಭಾಸ್ ‘ರಾಧೆ ಶ್ಯಾಮ್​​​’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ರಾಧಕೃಷ್ಣ ನಿರ್ದೇಶನದ ಈ ಸಿನಿಮಾ ದೊಡ್ಡ ಮಟ್ಟದಲ್ಲೇ ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ ಈ ಸಿನಿಮಾ ಫಸ್ಟ್ ಲುಕ್ ರಿಲೀಸ್​​​ ಆಗಿದ್ದು, ಚಿತ್ರಪ್ರೇಮಿಗಳಿಂದ ಸಾಕಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಹೀಗಿರುವಾಗಲೇ ಪ್ರಭಾಸ್ ನಟನೆಯ 21ನೇ ಸಿನಿಮಾ ಬಗ್ಗೆ ಟಾಕ್ ಜೋರಾಗಿದೆ. ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಇದೊಂದು ಸೈನ್ಸ್​​​ ಫಿಕ್ಷನ್​​​ ಆ್ಯಕ್ಷನ್ ಸಿನಿಮಾವಾಗಿರಲಿದೆಯಂತೆ. ಈ ಹಿಂದೆ ಕಂಡು ಕೇಳರಿಯದ ಬಜಟ್​ನಲ್ಲಿ ಸಿನಿಮಾ ನಿರ್ಮಾಣ ಆಗಲಿದೆಯಂತೆ. ‘ರಾಧೆ ಶ್ಯಾಮ್’​​​​ ನಂತರ 21ನೇ ಸಿನಿಮಾ ಶೂಟಿಂಗ್ ಶುರು ಆಗಲಿದೆ. ಅದಕ್ಕೂ ಮುನ್ನ ಚಿತ್ರಕ್ಕೆ ಬೇಕಾದ ತಯಾರಿಗಳು ಭರದಿಂದ ನಡೆಯುತ್ತಿವೆ. ಅದರಂತೆ ಈ ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ರೊಮ್ಯಾನ್ಸ್ ಮಾಡಲು ನೀಳ ಕಾಳಿನ ಸುಂದರಿ ದೀಪಿಕಾರನ್ನು ಆಯ್ಕೆ ಮಾಡಲಾಗಿದೆ. ಅದಕ್ಕೆ ದೀಪಿಕಾ ಸಹ ಒಪ್ಪಿಗೆ ನೀಡಿದ್ದಾರೆ. ಈಗ ಚಿತ್ರದ ಬಗ್ಗೆ ಮತ್ತೊಂದು ಬ್ರೇಕಿಂಗ್​ ಸುದ್ದಿ ಹೊರ ಬಿದ್ದಿದೆ. 

ಚಿತ್ರತಂಡ ಅಧಿಕೃತವಾಗಿ ಪ್ರಭಾಸ್​ 21ನೇ ಸಿನಿಮಾದ ನಾಯಕಿ ಬಗ್ಗೆ ಪ್ರಕಟಿಸಿದಂತೆಯೇ ಈಗ ​ಮತ್ತೊಂದು ದೊಡ್ಡ ಪ್ರಕಟಣೆ ಮಾಡಿದೆ. ಅದು ಪ್ರಭಾಸ್​ಗೆ​ ಈ ಸಿನಿಮಾದಲ್ಲಿ ಬಿಗ್​ ಬಿ ಅಮಿತಾಭ್​ ಬಚ್ಚನ್​ ಜೊತೆಯಾಗಲಿದ್ದಾರಂತೆ. ಇದು ಕೇವಲ ತೆಲುಗ ಅಲ್ಲದೆ ಹಿಂದಿ, ತಮಿಳು ಸೇರಿದಂತೆ ಹಲವಾರು ಭಾಷೆಗಳಲ್ಲಿ ಸಿದ್ಧಗೊಳ್ಳುತ್ತಿದೆ. ಇದೇ ಕಾರಣದಿಂದ ಈ ಸಿನಿಮಾದಲ್ಲಿ ಟಾಲಿವುಡ್​ ಜತೆಗೆ ಬಾಲಿವುಡ್​ನ ಸ್ಟಾರ್ ನಟರನ್ನೂ ತೆಗೆದುಕೊಳ್ಳಲಾಗುತ್ತಿದೆ.





ಅಮಿತಾಭ್​ ಬಚ್ಚನ್​ ಅವರೊಂದಿಗೆ ನಟಿಸಬೇಕೆಂದು ಕನಸು ಕಂಡಿದ್ದೆ. ಅದು ಕೊನೆಗೂ ನನಸಾಗುತ್ತಿದೆ ಎಂದು ಪ್ರಭಾಸ್​ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅಮಿತಾಭ್​ ಅವರನ್ನು ಚಿತ್ರತಂಡಕ್ಕೆ ಸ್ವಾಗತಿಸಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.




ಅಮಿತಾಭ್ ನಟಿಸುತ್ತಿರುವ ಮೂರನೇ ​ ಟಾಲಿವುಡ್​ ಸಿನಿಮಾ. ಮೊದಲು ಅಕ್ಕಿನೇನಿ ನಾಗೇಶ್ವರ ರಾವ್​, ನಾಗಾರ್ಜುನ, ನಾಗ ಚೈತನ್ಯ ಹಾಗೂ ಅಖಿಲ್​ ನಟಿಸಿರುವ ಮನಂ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದರು. ನಂತರ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ನಾಗ ಅಶ್ವಿನಿ ಅವರ ಚಿತ್ರದಲ್ಲಿದ್ದಾರೆ. ಅಂದಾಜು 500 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾದಲ್ಲಿ 50-100 ಕೋಟಿಯನ್ನು ವಿಎಫ್​ಕ್ಸ್​ಗಾಗಿ ಇಡಲಾಗಿದೆಯಂತೆ.
Published by: Anitha E
First published: October 9, 2020, 2:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading