Upendra: ತೆಲುಗು ಸಿನಿಮಾದಲ್ಲಿ ಉಪೇಂದ್ರ: ಮೆಗಾ ಕುಟುಂಬದ ಕುಡಿಯ ಜೊತೆ ನಟಿಸಲಿರುವ ರಿಯಲ್​ ಸ್ಟಾರ್​..!

Varun Tej: ಮೆಗಾಕುಟುಂಬದ ಕುಡಿ ವರುಣ್​ ತೇಜ್​ ಅವರ ಅಭಿನಯದ ವಿಟಿ10ನಲ್ಲಿ ಉಪೇಂದ್ರ ಅಭಿನಯಿಸಲಿದ್ದಾರೆ. ಫಿದಾ ಖ್ಯಾತಿಯ ನಟ ವರುಣ್​ ಅವರ ಹತ್ತನೇ ಸಿನಿಮಾ ಇದಾಗಿದ್ದು, ಇದಕ್ಕೆ ಇನ್ನೂ ಟೈಟಲ್​ ಇಟ್ಟಿಲ್ಲ. ಇದೇ ಕಾರಣಕ್ಕೆ ಇದನ್ನು ವಿಟಿ10 ಎಂದು ಕರೆಯಲಾಗುತ್ತಿದೆ.

Anitha E | news18-kannada
Updated:September 19, 2020, 12:09 PM IST
Upendra: ತೆಲುಗು ಸಿನಿಮಾದಲ್ಲಿ ಉಪೇಂದ್ರ: ಮೆಗಾ ಕುಟುಂಬದ ಕುಡಿಯ ಜೊತೆ ನಟಿಸಲಿರುವ ರಿಯಲ್​ ಸ್ಟಾರ್​..!
ಉಪೇಂದ್ರ
  • Share this:
ರಿಯಲ್​ ಸ್ಟಾರ್ ಉಪೇಂದ್ರ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಬುದ್ಧಿವಂತ  2, ತ್ರಿಶೂಲಂ, ಕಬ್ಜ ಹೀಗೆ ಹಲವಾರು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ ಉಪೇಂದ್ರ. ನಿನ್ನೆಯಷ್ಟೆ ಉಪೇಂದ್ರ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅವರ ಹುಟ್ಟುಹಬ್ಬದಂದು ಹೊಸ ಸಿನಿಮಾಗಳ ಅಪ್ಡೇಟ್​ ಸಿಕ್ಕಿವೆ.  ಅದರಲ್ಲೂ ಉಪ್ಪಿ ನಿರ್ದೇಶಕರಾಗಿ ಮತ್ತೆ ಮರಳುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಆದರೆ ಉಪೇಂದ್ರ ಅವರ ಕೈಯಲ್ಲಿರುವ ಸಿನಿಮಾಗಳ ಕೆಲಸಗಳು ಮುಗಿದ ನಂತರವಷ್ಟೆ ಚಿತ್ರದ ನಿರ್ದೇಶನದ ಬಗ್ಗೆ ಯೋಚಿಸಲು ಸಾಧ್ಯ ಎಂದಿದ್ದಾರೆ ರಿಯಲ್​ ಸ್ಟಾರ್. ಹೀಗಿರುವಾಗಲೇ ಉಪೇಂದ್ರ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಅದು ಉಪೇಂದ್ರ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ಉಪ್ಪಿ, ಈ ಸಲ ಯಾರ ಜೊತೆ ಹಾಗೂ ಯಾವ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿಯಲು ಅಭಿಮಾನಿಗಳು ಕಾತರರಾಗಿದ್ದಾರೆ.

ಮೆಗಾಕುಟುಂಬದ ಕುಡಿ ವರುಣ್​ ತೇಜ್​ ಅವರ ಅಭಿನಯದ ವಿಟಿ10ನಲ್ಲಿ ಉಪೇಂದ್ರ ಅಭಿನಯಿಸಲಿದ್ದಾರೆ. ಫಿದಾ ಖ್ಯಾತಿಯ ನಟ ವರುಣ್​ ಅವರ ಹತ್ತನೇ ಸಿನಿಮಾ ಇದಾಗಿದ್ದು, ಇದಕ್ಕೆ ಇನ್ನೂ ಟೈಟಲ್​ ಇಟ್ಟಿಲ್ಲ. ಇದೇ ಕಾರಣಕ್ಕೆ ಇದನ್ನು ವಿಟಿ10 ಎಂದು ಕರೆಯಲಾಗುತ್ತಿದೆ.








View this post on Instagram





My kinda work from home! 🥊🥊🥊 #stayhome#stayhealthy


A post shared by Varun Tej Konidela (@varunkonidela7) on













View this post on Instagram





Decide, Commit and Conquer!!!🥊 #training#underprogress#VT10


A post shared by Varun Tej Konidela (@varunkonidela7) on






ನಿನ್ನೆ ಉಪೇಂದ್ರ ಅವರ ಹುಟ್ಟುಹಬ್ಬದಂದು ಶುಭ ಕೋರಿರುವ ವರುಣ್​, ನಿಮ್ಮೊಂದಿಗೆ ನಟಿಸಲು ಕಾತರನಾಗಿದ್ದೇನೆ ಎಂದು ಟ್ವೀಟ್​ ಮಾಡಿದ್ದಾರೆ. ಈ ಮೂಲಕ ಉಪ್ಪಿ ತೆಲುಗು ಸಿನಿಮಾದಲ್ಲಿ ನಟಿಸುತ್ತಿರುವ ವಿಷಯ ಬಹಿರಂಗವಾಗಿದೆ.

Wish you a very happy birthday @nimmaupendra sir!



ಈ ಸಿನಿಮಾಗಾಗಿ ವರುಣ್​ ತೇಜ್​ ಬಾಕ್ಸಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಈ ಹಿಂದೆಯೂ ವರುಣ್​ ತಮ್ಮ ವಿಟಿ10 ಸಿನಿಮಾದ ಕುರಿತಾಗಿ ಸಾಕಷ್ಟು ಅಪ್ಡೇಟ್​ ಕೊಟ್ಟಿದ್ದಾರೆ. ಇನ್ನು ಈ ಚಿತ್ರಕ್ಕಾಗಿ ವಿದೇಶಿ ತರಬೇತುದಾರರಿಂದ ವರುಣ್​ ಬಾಕ್ಸಿಂಗ್​ ಕಲಿತಿದ್ದಾರೆ.
Published by: Anitha E
First published: September 19, 2020, 11:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading