Rashmika Mandanna: ಫ್ಯಾನ್ಸ್​ಗೆ ಹೊಸ ಹೆಸರು ಕೊಟ್ಟ ರಶ್ಮಿಕಾ: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕಿರಿಕ್​ ಹುಡುಗಿಯ ಚಿತ್ರ ಬಿಡಿಸಿದ ಅಭಿಮಾನಿ..!

Anitha E | news18-kannada
Updated:October 7, 2020, 7:47 AM IST
Rashmika Mandanna: ಫ್ಯಾನ್ಸ್​ಗೆ ಹೊಸ ಹೆಸರು ಕೊಟ್ಟ ರಶ್ಮಿಕಾ: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕಿರಿಕ್​ ಹುಡುಗಿಯ ಚಿತ್ರ ಬಿಡಿಸಿದ ಅಭಿಮಾನಿ..!
ರಶ್ಮಿಕಾ ಮಂದಣ್ಣ
  • Share this:
ರಶ್ಮಿಕಾ ಮಂದಣ್ಣ ಅವರಿಗೆ ಸಾಮಜಿಕ ಜಾಲತಾಣದಲ್ಲಿ ಎಷ್ಟು ದೊಡ್ಡ ಅಭಿಮಾನಿ ಬಳಗವಿದೆ ಎಂದು ಹೇಳಬೇಕಿಲ್ಲ. ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು ಹಾಗೂ ತಮಿಳಿನ ಪ್ರೇಕ್ಷಕರು ಲಿಲ್ಲಿ ಎಂದರೆ ಜೀವ ಬಿಡುತ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ದಿನೇ ದಿನೇ ರಶ್ಮಿಕಾರ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೇ ಕಾರಣಕ್ಕೆ ರಶ್ಮಿಕಾರನ್ನು ಟ್ರೋಲಿಗರು ಎಷ್ಟೇ ಟ್ರೋಲ್​ ಮಾಡಿದರೂ, ಅವರು ತಮ್ಮ ಅಭಿಮಾನಿಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುತ್ತಾರೆ. ರಶ್ಮಿಕಾ ಕೆಲವೊಮ್ಮೆ ಟ್ರೋಲ್​ ಮಾಡುವರಿಂದ ಬೇಸರಗೊಂಡು ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದೂ ಇದೆ. ಆದರೆ ಈಗ ಟ್ರೋಲಿಗರಿಗೆ ಸರಿಯಾಗಿ ಉತ್ತರ ಕೊಡುವುದನ್ನು ಅಭ್ಯಾಸ ಮಾಡಿಕೊಂಡಿರುವ ಕೊಡಗಿನ ಬೆಡಗಿ, ಯಾವುದೇ ಕಾರಣಕ್ಕೂ ಅವರಿಂದಾಗಿ ತಾನು ಅಭಿಮಾನಿಗಳಿಂದ ದೂರ ಇರುವುದಿಲ್ಲ ಎಂದು ನಿರ್ಧರಿಸಿಕೊಂಡಿದ್ದಾರೆ. ರಶ್ಮಿಕಾ ಒಂದು ವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವುದಿಲ್ಲ ಅಂದರೆ ಸಾಕು ಅಭಿಮಾನಿಗಳು ಕಾರಣ ಕೇಳುತ್ತಾ ನಟಿಗೆ ಪೋಸ್ಟ್​ ಮಾಡಲಾರಂಭಿಸುತ್ತಾರೆ.

ಇನ್ನು ಅಭಿಮಾನಿಗಳಿಗಾಗಿ ಆಗಾಗ ಟ್ವಿಟರ್, ಇನ್​ಸ್ಟಾಗ್ರಾಂನಲ್ಲಿ ಲೈವ್​ ಬರುವ ರಶ್ಮಿಕಾಗೆ ಸಾಕಷ್ಟು ಮಂದಿ ನಾನಾ ರೀತಿಯಲ್ಲಿ ತಮ್ಮ ಪ್ರೀತಿ ಹಾಗೂ ಅಭಿಮಾನವನ್ನು ವ್ಯಕ್ತಪಡಿಸುತ್ತಿರುತ್ತಾರೆ. ಈಗಲೂ ಸಹ ಓರ್ವ ಅಭಿಮಾನಿ ತಮ್ಮ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಟಿಯ ಚಿತ್ರ ಬಿಡಿಸಿದ್ದಾರೆ.

Woah.. just woaaahhh!! 😭🤍 pic.twitter.com/2rlp0jDYts



ಕಣ್ಣು ಮುಚ್ಚಿಕೊಂಡು ಆ ಅಭಿಮಾನಿ ಬಿಡಿಸಿರುವ ಚಿತ್ರದ ವಿಡಿಯೋ ಈಗ ವೈರಲ್​ ಆಗುತ್ತಿದೆ. ಆ ವಿಡಿಯೋವನ್ನು ರಶ್ಮಿಕಾ ಸಹ ತಮ್ಮ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ಇನ್ನು ಈ ಅಭಿಮಾನಿಯ ಕಲೆ ಹಾಗೂ ಕೈಚಳಕಕ್ಕೆ ಮೆಚ್ಚು ವ್ಯಕ್ತವಾಗುತ್ತಿದೆ.





ಇನ್ನು, ತಮ್ಮ ಅಭಿಮಾನಿಗಳಿಗೆ ರಶ್ಮಿಕಾ ಮಂದಣ್ಣ ಹೊಸ ಹೆಸರು ಕೊಟ್ಟಿದ್ದಾರೆ. ಕಿಚ್ಚ ಸುದೀಪ್​ ಅಭಿಮಾನಿಗಳನ್ನು 'ಸುದೀಪಿಯನ್ಸ್​' ಎನ್ನುವಂತೆಯೇ ರಶ್ಮಿಕಾರ ಅಭಿಮಾನಿಗಳನ್ನು 'ರೋಶಿಯನ್ಸ್​' ಎಂದು ಕರೆಯಲಾಗುತ್ತಿದೆ.










View this post on Instagram





🤍


A post shared by Rashmika Mandanna (@rashmika_mandanna) on






ಇನ್ನು ರಶ್ಮಿಕಾರ ಸಿನಿಮಾ ವಿಷಯಕ್ಕೆ ಬಂದರೆ, ಸದ್ಯ ಫೋಟೋಶೂಟ್​ಗಳಲ್ಲಿ ಬ್ಯುಸಿ ಇರುವ ಲಿಲ್ಲಿ, ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ಜೊತೆ ಪುಪ್ಪ ಸಿನಿಮಾದಲ್ಲಿ ನಟಿಸುತ್ತಿಸುತ್ತಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಧ್ರುವ ಸರ್ಜಾ ಹಾಗೂ ರಶ್ಮಿಕಾ ಅಭಿನಯದ ಪೊಗರು ರಿಲೀಸ್​ಗೆ ಸಿದ್ಧವಾಗುತ್ತಿದೆ. ತಮಿಳಿನಲ್ಲಿ ಕಾರ್ತಿ ಜೊತೆ ನಟಿಸಿರುವ ಸುಲ್ತಾನ್​ ಸಹ ತೆರೆಗೆ ಬರಬೇಕಿದೆ.
Published by: Anitha E
First published: October 7, 2020, 7:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading