HOME » NEWS » Entertainment » RAKSHIT SHETTY RELEASE A SNEAK PEEK INTO THE WORLD OF HOSTEL HUDUGARU BEKAGIDDARE KANNADA MOVIE PROMOTIONAL VIDEO HG

ಹಾಸ್ಟೆಲ್ ಹುಡುಗರ ಮುಂಜಾನೆ ದಿನಚರಿಯನ್ನ ನೋಡಿ ಎಲ್ಲಿಗೋ ದಿಢೀರಂತ ಹೊರಟಿದ್ದಾರೆ ನಟ ರಕ್ಷಿತ್​ ಶೆಟ್ಟಿ!

ಆ್ಯಬ್ಸ್​ ಸ್ಟುಡಿಯೋ ತನ್ನ ಯ್ಯೂಟೂಬ್ ಖಾತೆಯಲ್ಲಿ ಹಾಸ್ಟೆಲ್​ ಹುಡಗರು ಬೇಕಾಗಿದ್ದಾರೆ- ಸ್ನೀಕ್​ ಪೀಕ್​ ಎಂಬ ಪ್ರಮೋಷನ್​ ವಿಡಿಯೋವನ್ನು ಅಪ್ಲೋಡ್​ ಮಾಡಿದೆ. ಅಂದಹಾಗೆಯೇ ಈ ವಿಡಿಯೋದಲ್ಲಿ ನಟ ಪ್ರಮೋದ್​ ಶೆಟ್ಟಿ ಕೂಡ ನಟಿಸಿದ್ದಾರೆ.

news18-kannada
Updated:April 15, 2021, 9:56 PM IST
ಹಾಸ್ಟೆಲ್ ಹುಡುಗರ ಮುಂಜಾನೆ ದಿನಚರಿಯನ್ನ ನೋಡಿ ಎಲ್ಲಿಗೋ ದಿಢೀರಂತ ಹೊರಟಿದ್ದಾರೆ ನಟ ರಕ್ಷಿತ್​ ಶೆಟ್ಟಿ!
ರಕ್ಷಿತ್​ ಶೆಟ್ಟಿ
  • Share this:
ಸ್ಯಾಂಡಲ್​ವುಡ್​ಗೆ ಯುವ ಪ್ರತಿಭೆಗಳು ಎಂಟ್ರಿ ನೀಡುತ್ತಿದ್ದಾರೆ. ವಿನೂತನ ಪ್ರಯತ್ನಗಳ ಮೂಲಕ ಸಿನಿಮಾ ಮಾಡಿ ಗಮನ ಸೆಳೆಯುತ್ತಿದ್ದಾರೆ. ಅಂದಹಾಗೆಯೇ ಕಳೆದ ಹಲವು ತಿಂಗಳಿಂದ ಹೊಸಬರ ತಂಡವೊಂದು ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’ ಎಂಬ ಟೈಟಲ್​ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ. ವಿಭಿನ್ನವಾದ ಟೈಟಲ್​ ಇಟ್ಟುಕೊಂಡು ನಟ ಪುನೀತ್​ ರಾಜ್​ ಕುಮಾರ್​ ಬಳಿ ಟೈಟಲ್​ ಪೋಸ್ಟರ್​ ಕೂಡ ರಿಲೀಸ್​ ಮಾಡಿದ್ದರು. ಇದೀಗ ಅದೇ ತಂಡ ನಟ ರಕ್ಷಿತ್​ ಶೆಟ್ಟಿ ಅವರನ್ನು ಹಾಕಿಕೊಂಡು ಪ್ರಮೋಷನ್​ ವಿಡಿಯೋವೊಂದನ್ನು ಚಿತ್ರಿಸಿ  ಹರಿಯಬಿಟ್ಟಿದೆ. ಸದ್ಯ ಯ್ಯೂಟೂಬ್​ನಲ್ಲಿ ಈ ವಿಡಿಯೋ ರಾರಾಜಿಸುತ್ತಿದೆ.

ತುಂಟಾಟಿಕೆ, ಹುಡುಗಾಟ ಮತ್ತು ಕಾಲೇಜಿನ ಪುಡಿ ರೌಡಿಗಳ ಸಹವಾಸ ಬಿಟ್ಟಿರುವ ‘ಕಿರಿಕ್​ ಪಾರ್ಟಿ’ ಕರ್ಣ ಇದೀಗ ಸಂಪೂರ್ಣವಾಗಿ ಬದಲಾಗಿದ್ದಾನೆ. ಅಂದಹಾಗೆಯೇ ಬೆಳಗ್ಗೆ ಬ್ರಾಹ್ಮಿ ಮೂಹರ್ತದಲ್ಲಿ ಎದ್ದು ಯೋಗ ಅಭ್ಯಾಸ ಮಾಡುತ್ತಿದ್ದಾನೆ, ನಂತರ ಬಿಸಿಯಾದ ಕಾಫಿ ಕುಡಿದು ಸೂರ್ಯೋದಯ ಆನಂದಿಸುತ್ತಾರೆ. ಪಕ್ಷಿ ವೀಕ್ಷಣೆ ಎಂಬ ಹೊಸ ಹವ್ಯಾಸ ಬೆಳೆಸಿಕೊಂಡಿದ್ದಾರೆ ಎಂಬ ಬ್ಯಾಗ್​ಗ್ರೌಂಟ್​ ಧ್ವನಿ ಮೂಲಕ ರಕ್ಚಿತ್​ ಶೆಟ್ಟಿಯನ್ನು ವಿಭಿನ್ನವಾಗಿ ತೋರಿಸಿದ್ದಾರೆ. ಅದರ ಮೂಲಕ ಹಾಸ್ಟೆಲ್​ನಲ್ಲಿ ನಡೆಯುವ ಕೆಲವು ತುಣಕನ್ನು ತೋರಿಸಿದ್ದಾರೆ. ಸದ್ಯ ಸಿನಿ ಪ್ರಿಯರು ಈ ವಿಡಿಯೋ ಕಂಡು ಬಗೆ ಬಗೆಯ ಕಾಮೆಂಟ್​ ಬರೆಯುತ್ತಿದ್ದಾರೆ.

ಆ್ಯಬ್ಸ್​ ಸ್ಟುಡಿಯೋ ತನ್ನ ಯ್ಯೂಟೂಬ್ ಖಾತೆಯಲ್ಲಿ ಹಾಸ್ಟೆಲ್​ ಹುಡಗರು ಬೇಕಾಗಿದ್ದಾರೆ- ಸ್ನೀಕ್​ ಪೀಕ್​ ಎಂಬ ಪ್ರಮೋಷನ್​ ವಿಡಿಯೋವನ್ನು ಅಪ್ಲೋಡ್​ ಮಾಡಿದೆ. ಅಂದಹಾಗೆಯೇ ಈ ವಿಡಿಯೋದಲ್ಲಿ ನಟ ಪ್ರಮೋದ್​ ಶೆಟ್ಟಿ ಕೂಡ ನಟಿಸಿದ್ದಾರೆ.



ನಿತಿನ್​ ಕೃಷ್ಣಮೂರ್ತಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಅಜನೀಶ್​ ಲೋಕನಾಥ್​ ಅವರ ಸಂಗೀತ ಇದರಲ್ಲಿದೆ. ಅಂದಹಾಗೆಯೇ ಈ ಸಿನಿಮಾದ ಟೈಟಲ್​ ಲಾಂಚ್​ ಆದ ಸಮಯದಿಂದ ಸದಾ ಸುದ್ದಿಯಾಗುತ್ತಲೇ ಇದೆ. ಮಾತ್ರವಲ್ಲದೆ ಪುನೀತ್​ ರಾಜ್​ ಕುಮಾರ್​ ಅವರ ಕೈಯಲ್ಲಿ ವಿಭಿನ್ನವಾಗಿ ಟೈಟಲ್​ ಪೋಸ್ಟರ್​ ಅನ್ನು ಈ ಚಿತ್ರ ಲಾಂಚ್​ ಮಾಡಿತ್ತು. ಇದೀಗ ನಟ ರಕ್ಷಿತ್​ ಶೆಟ್ಟಿ ಅವರನ್ನು ಪ್ರಮೋಷನ್ ವಿಡಿಯೋಗೆ ಬಳಸುವ ಮೂಲಕ ವಿಭಿನ್ನವಾಗಿ ಸಿನಿಮಾದ ಬಗ್ಗೆ ಪ್ರಮೋಷನ್​ ಮಾಡಿದೆ.
First published: April 15, 2021, 9:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories