Puneeth Rajkumar: ಅಭಿಮಾನಿಯ ಅಭಿಮಾನಕ್ಕೆ ಮನಸೋತ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​: ಇಲ್ಲಿವೆ ವಿಡಿಯೋ..!

ಅಪ್ಪು ಅಭಿಮಾನಿಯೊಬ್ಬರು ತಮ್ಮ ಮೊಣಕೈಯಿಂದ ಪುನೀತ್​ ಅವರ ಚಿತ್ರ ಬಿಡಿಸಿದ್ದಾರೆ. ಆ ವಿಡಿಯೋವನ್ನು ನೋಡಿದ ಅಪ್ಪು ಸಖತ್​ ಖುಷಿಯಾಗಿದ್ದು, ಅದನ್ನು ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

Anitha E | news18-kannada
Updated:October 7, 2020, 2:55 PM IST
Puneeth Rajkumar: ಅಭಿಮಾನಿಯ ಅಭಿಮಾನಕ್ಕೆ ಮನಸೋತ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​: ಇಲ್ಲಿವೆ ವಿಡಿಯೋ..!
ಪುನೀತ್​ ರಾಜ್​ಕುಮಾರ್​ ಹಾಗೂ ಅಭಿಮಾನಿ
  • Share this:
ಅಪ್ಪ ರಾಜ್​ಕುಮಾರ್​ ಅವರಂತೆಯೇ ಅಭಿಮಾನಿಗಳು ದೇವರು ಎಂದು ಕರೆಯುವ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಪುನೀತ್​ ರಾಜ್​ಕುಮಾರ್​ ಅವರು ಪೋಸ್ಟ್​ ಮಾಡುವ ವಿಡಿಯೋಗಳು ಕೆಲವೇ ಗಂಟೆಗಳಲ್ಲಿ ವೈರಲ್​ ಆಗುತ್ತವೆ. ಅದರಲ್ಲೂ ಪುನೀತ್ ಮಾಡುವ ಒಂದು ಡ್ಯಾನ್ಸಿಂಗ್​ ಹಾಗೂ ವರ್ಕೌಟ್​ ವಿಡಿಯೋ ತುಣಿಕಿಗಾಗಿ ಅಭಿಮಾನಿಗಳು ಕಾತರರಾಗಿರುತ್ತಾರೆ. ಸಿನಿಮಾ ಸುದ್ದಿ ಇಲ್ಲದಿದ್ದರೂ ಪರವಾಗಿಲ್ಲ, ಅಪ್ಪು ಅವರ ಯಾವುದಾದರು ಒಂದು ವಿಡಿಯೋ ತುಣುಕು ಸಿಕ್ಕರೆ ಸಾಕು ಅಂತ ಫ್ಯಾನ್ಸ್​ ಕಾಯುತ್ತಿರುತ್ತಾರೆ. ಕೆಲವು ಅಭಿಮಾನಿಗಳು ತಮ್ಮ ದೇಹದ ಮೇಲೆ ಪುನೀತ್​ ಅವರ ಹೆಸರು ಹಾಗೂ ಫೋಟೋಗಳ ಟ್ಯಾಟು ಹಾಕಿಸಿಕೊಳ್ಳುವ ಮೂಲಕ ಅಭಿಮಾನವನ್ನು ತೋರುತ್ತಾರೆ. ಮತ್ತೆ ಕೆಲವರು ಅಪ್ಪು ಮಾಡಿರುವ ಸ್ಟಂಟ್​ ಹಾಗೂ ಡ್ಯಾನ್ಸ್​ ಅನ್ನು ನೋಡಿ ಅದರಂತೆಯೇ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇಲ್ಲೊಬ್ಬರು ಅಭಿಮಾನಿಗಳು ಪುನೀತ್​ ಕಂಡರೆ ಎಷ್ಟು ಇಷ್ಟ ಅಂತ ಒಂದು ವಿಶೇಷವಾಗ ವಿಡಿಯೋ ಮೂಲಕ ತೋರಿಸಿಕೊಂಡಿದ್ದಾರೆ. 

ಅಪ್ಪು ಅಭಿಮಾನಿಯೊಬ್ಬರು ತಮ್ಮ ಮೊಣಕೈಯಿಂದ ಪುನೀತ್​ ಅವರ ಚಿತ್ರ ಬಿಡಿಸಿದ್ದಾರೆ. ಆ ವಿಡಿಯೋವನ್ನು ನೋಡಿದ ಅಪ್ಪು ಸಖತ್​ ಖುಷಿಯಾಗಿದ್ದು, ಅದನ್ನು ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.




ಅಷ್ಟೇಅಲ್ಲ, ಅಭಿಮಾನಿಯ ಅಭಿಮಾನಕ್ಕೆ ಮನಸೋತ ಪುನೀತ್​ ರಾಜ್​ಕುಮಾರ್​, ಕಲೆಗೆ ಬೆಲೆ ಕಟ್ಟೋದಕ್ಕೆ ಆಗಲ್ಲ ನಿಜ, ಆದರೆ ಅಭಿಮಾನಿಗಳ ಪ್ರೀತಿಗೂ ಬೆಲೆ ಕಟ್ಟೋದಕ್ಕೇ ಆಗಲ್ಲ. ಮಾತುಗಳಲ್ಲಿ ಅಂತೂ ಏನು ಹೇಳೋದಕ್ಕೆ ಆಗಲ್ಲ. ತುಂಬಾ ತುಂಬಾ ಥ್ಯಾಂಕ್ಸ್​ ಎಂದು ಟ್ವೀಟ್​ ಮಾಡಿದ್ದಾರೆ.
Puneeth Rajkumar Praying for speed recovery of sp balasubramanyam
ಪುನೀತ್​ ರಾಜ್​ಕುಮಾರ್​


ಇನ್ನು , ನಿನ್ನೆಯಷ್ಟೆ ರಶ್ಮಿಕಾ ತಮ್ಮ ಟ್ವಿಟರ್​ನಲ್ಲಿ ಅಭಿಮಾನಿಯೊಬ್ಬರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ಅವರ ಚಿತ್ರ ಬಿಡಿಸಿರುವ ವಿಡಿಯೋ ಹಂಚಿಕೊಂಡಿದ್ದಾರೆ.





ಇನ್ನು ಪುನೀತ್​ ರಾಜ್​ಕುಮಾರ್​, ಸದ್ಯ ಗೋವಾದಲ್ಲಿದ್ದು, ಯುವರತ್ನ ಸಿನಿಮಾದ ಹಾಡಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಂತೋಷ್​ ಆನಂದ್​ ರಾಮ್​ ನಿರ್ದೇಶದ ಯುವರತ್ನ ಸಿನಿಮಾದ  ಚಿತ್ರೀಕರಣದ ಬಹುತೇಕ ಪೂರ್ಣಗೊಂಡಿದೆ. ಇನ್ನು, ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಪುನೀತ್ ಅವರು ಡಬ್ಬಿಂಗ್​ ಕೆಲಸ ಆರಂಭಿಸಿದ್ದರು.
Published by: Anitha E
First published: October 7, 2020, 2:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading