Prajwal Devaraj: ಪ್ರಜ್ವಲ್​ ದೇವರಾಜ್​ ಅಭಿನಯದ ಈ ಸಿನಿಮಾ ದಸರಾಗೆ ರಿಲೀಸ್​ ಆಗಲಿದೆ..!

Prajwal Devaraj: ಚಿತ್ರಮಂದಿರಗಳು ತೆರೆಯುತ್ತಿದ್ದಂತೆಯೇ ಹೊಸ ಸಿನಿಮಾಗಳಿಗಿಂತ ಹೆಚ್ಚಾಗಿ ಈ ಹಿಂದೆ ಲಾಕ್​ಡೌನ್​ ಆರಂಭವಾಗುವಾಗ ರಿಲೀಸ್​ ಆಗಿದ್ದ ಸಿನಿಮಾಗಳೇ ಮತ್ತೆ ರಿರಿಲೀಸ್​ ಆಗಲಿವೆ. ಅವುಗಳಲ್ಲಿ ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ ಪ್ರಮುಖವಾಗಿದೆ. ಇದರ ಜೊತೆಗೆ ಈಗ ನಟ ಪ್ರಜ್ವಲ್​ ದೇವರಾಜ್​ ಅವರ ಜಂಟಲ್​ಮನ್  ಸೇರಿಕೊಂಡಿದೆ.

Anitha E | news18-kannada
Updated:October 8, 2020, 9:28 AM IST
Prajwal Devaraj: ಪ್ರಜ್ವಲ್​ ದೇವರಾಜ್​ ಅಭಿನಯದ ಈ ಸಿನಿಮಾ ದಸರಾಗೆ ರಿಲೀಸ್​ ಆಗಲಿದೆ..!
ಪ್ರಜ್ವಲ್​ ದೇವರಾಜ್​
  • Share this:
ಆರೂವರೆ ತಿಂಗಳ ನಂತರ ಈಗ ಚಿತ್ರಮಂದಿರಗಳು ಹಾಗೂ ಮಲ್ಪಿಪ್ಲೆಕ್ಸ್​ಗಳು ಸಿನಿಮಾ ಪ್ರದರ್ಶನಕ್ಕೆ ಸಜ್ಜಾಗುತ್ತಿವೆ. ಕೇಂದ್ರ ಸರ್ಕಾರ ಸಿನಿಮಾ ಪ್ರದರ್ಶಕ್ಕೆ ಅನುಮತಿ ನೀಡಿದ್ದು, ಸಿನಿಪ್ರಿಯರು, ನಿರ್ಮಾಪಕರು, ವಿತರಕರು, ಸಿನಿಮಾ ಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್​ಗಳ ಮಾಲೀಕರು  ಫುಲ್​ ಖುಷಿಯಾಗಿದ್ದಾರೆ. ಒಂದು ಕಡೆ ಚಿತ್ರಮಂದಿರಗಳು, ಮತ್ತೊಂದು ಕಡೆ ಮಲ್ಟಿಪ್ಲೆಕ್ಸ್​ನವರು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಳೆದ ಆರು ತಿಂಗಳಿನಿಂದ ಬಾಗಿಲು ಹಾಕಿದ್ದ ಚಿತ್ರಮಂದಿರಗಳನ್ನು ಮತ್ತೆ ಮೊದಲಿನ ಸ್ಥಿತಿಗೆ ತರಲು ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ. ಹೀಗಿರುವಾಗಲೇ ಸಿನಿಮಾಗಳು ಮತ್ತೆ ಬೆಳ್ಳಿ ತೆರೆ ಮೇಲೆ ಬರಲು ಸಾಲು ಗಟ್ಟಿ ನಿಂತಿವೆ. ಅದರಲ್ಲೂ ಚಿತ್ರಮಂದಿರಗಳು ತೆರೆಯುತ್ತಿದ್ದಂತೆಯೇ ಸಿನಿಮಾಗಳು ಒಂದರ ಹಿಂದೆ ಒಂದರಂತೆ ರಿಲೀಸ್ ಆಗಲಿವೆ. ಅ.15ರಿಂದ ಸಿನಿಮಾ ಪ್ರದರ್ಶನ ಆರಂಭವಾಗಲಿದೆ. ಆದರೆ ಅದಕ್ಕೂ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸಿನಿಮಾ ಪ್ರದರ್ಶನದ ವೇಳೆ ಕೆಲವು ನಿಯಮಗಳನ್ನು ಪಾಲಿಸಲೇಬೇಕಾಗಿದೆ. 

ಚಿತ್ರಮಂದಿರಗಳು ತೆರೆಯುತ್ತಿದ್ದಂತೆಯೇ ಹೊಸ ಸಿನಿಮಾಗಳಿಗಿಂತ ಹೆಚ್ಚಾಗಿ ಈ ಹಿಂದೆ ಲಾಕ್​ಡೌನ್​ ಆರಂಭವಾಗುವಾಗ ರಿಲೀಸ್​ ಆಗಿದ್ದ ಸಿನಿಮಾಗಳೇ ಮತ್ತೆ ರಿರಿಲೀಸ್​ ಆಗಲಿವೆ. ಅವುಗಳಲ್ಲಿ ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ ಪ್ರಮುಖವಾಗಿದೆ. ಇದರ ಜೊತೆಗೆ ಈಗ ನಟ ಪ್ರಜ್ವಲ್​ ದೇವರಾಜ್​ ಅವರ ಜಂಟಲ್​ಮನ್  ಸೇರಿಕೊಂಡಿದೆ.








View this post on Instagram





#gentleman


A post shared by Prajwal Devaraj (@prajwaldevaraj) on






ಈ ವಿಷಯವನ್ನು ಪ್ರಜ್ವಲ್​ ದೇವರಾಜ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜಂಟಲ್​ಮನ್​ ಸಿನಿಮಾ ದಸರಾ ಹಬ್ಬಕ್ಕೆ ಮತ್ತೆ ರಿಲೀಸ್​ ಆಗಲಿದೆ. ಹೀಗೆ ರಿರಿಲೀಸ್​ ಆಗಲಿರುವ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಎಷ್ಟರ ಮಟ್ಟಿಗೆ ಚಿತ್ರಮಂದಿರಗಳಿಗೆ ಬರಲಿದ್ದಾರೆ ಅನ್ನೋ ಅಂದಾಜು ಯಾರಿಗೂ ಇಲ್ಲ.

ಇದನ್ನೂ ಓದಿ: ಅಟಲ್​ ಸುರಂಗ ಮಾರ್ಗದಲ್ಲಿ ಪಯಣಿಸಿದ ಪ್ರಣೀತಾ ಸುಭಾಷ್​..!

ಇನ್ನು ಚಿತ್ರಮಂದಿರಗಳು ತೆರೆದರೂ ಹೊಸ ಸಿನಿಮಾಗಳು ತೆರೆ ಕಾಣುವ ಬಗ್ಗೆ ಯಾವುದೇ ನಿಖರವಾದ ಮಾಹಿತಿ ಇಲ್ಲ. ಕೆಲ ನಿರ್ಮಾಪಕರು ಈಗಾಗಲೇ ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ತೆರೆಯುವವರೆಗೂ ತಮ್ಮ ಸಿನಿಮಾಗಳನ್ನು ರಿಲೀಸ್​ ಮಾಡುವುದಿಲ್ಲ ಎಂದಿದ್ದಾರೆ.










View this post on Instagram





Lockdown timepass.. #Abusadamente with the Mrs!❤️ @raginic @thewilliamsfam


A post shared by Prajwal Devaraj (@prajwaldevaraj) on






ಲಾಕ್​ಡೌನ್​ನಲ್ಲಿ ತಮ್ಮ ನೆಚ್ಚಿನ ನಟರ ಸಿನಿಮಾ ಅಪ್ಡೇಟ್​ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಈಗಲೂ ನಿರಾಸೆಯೇ ಎದುರಾಗಿದೆ. ಸಿನಿಮಾಗಳು ತೆರೆಗೆ ಬರಲು ಸಿದ್ಧವಿದ್ದರೂ ಅವುಗಳನ್ನು ರಿಲೀಸ್​ ಮಾಡುವುದು ಅನುಮಾನವಾಗಿದೆ. ಈ ಕಾರಣದಿಂದ ಚಿತ್ರಮಂದಿರ ತೆರೆದರೂ ಸಿನಿಮಾ ನೋಡಲು ಹೋಗುವವರ ಸಂಖ್ಯೆ ತುಂಬಾ ಕಡಿಮೆ ಇರಲಿದೆ ಎನ್ನಲಾಗುತ್ತಿದೆ.










View this post on Instagram





ಗೌರಿ ಗಣೇಶ ಹಬ್ಬದ ಶುಭಾಶಯಗಳು


A post shared by Prajwal Devaraj (@prajwaldevaraj) on






ನಟ ಪ್ರಜ್ವಲ್ ದೇವರಾಜ್​ ಅವರ ಸಾಲು ಸಾಲು ಸಿನಿಮಾಗಳು ರಿಲೀಸ್​ಗಾಗಿ ಕಾಯುತ್ತಿವೆ. ಇನ್ನೂ ಹೆಸರನ್ನೇ ಪ್ರಕಟಿಸಿದ ಒಂದು ಸಿನಿಮಾದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಇದರಲ್ಲಿ ನಮಿತಾ ರತ್ನಾಕರ್​ ಪ್ರಜ್ವಲ್​ಗೆ ನಾಯಕಿಯಾಗಿ ನಟಿಸಿದ್ದಾರೆ. ಆದರೆ ಲಾಕ್​ಡೌನ್​ ಆರಂಭವಾಗುವ ಮೊದಲು ಈ ಸಿನಿಮಾ ಟೈಟಲ್​ ಪ್ರಕಟಣೆ ಮಾಡಲು ರೆಡಿಯಾಗಿತ್ತು ಚಿತ್ರತಂಡ. ಆದರೆ ಕೊರೋನಾ ಲಾಕ್​ಡೌನ್​ನಿಂದಾಗಿ ಎಲ್ಲವೂ ಮುಂದಕ್ಕೆ ಹೋಗುವಂತಾಯಿತು.
Published by: Anitha E
First published: October 8, 2020, 9:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading