Nikhil Kumaraswamy: ನಿಖಿಲ್​-ರೇವತಿಯ ಫನ್ನಿ ವಿಡಿಯೋಗೆ ಅಭಿಮಾನಿಗಳು ಫಿದಾ..!

Revathi: ನಿಈ ವಿಡಿಯೋದಲ್ಲಿ ನಿಖಿಲ್​ ಹಾಗೂ ರೇವತಿ ಮನೆಯ ಒಳಗಿರುವ ಮೆಟ್ಟಿಲುಗಳ ಮೇಲೆ ಕುಳಿತ್ತಿದ್ದಾರೆ. ರೇವತಿ ಜೊತೆ ಮಾತನಾಡುತ್ತಿರುವ ನಿಖಿಲ್​ ಯಾರನ್ನೋ ಅನುಕರಿಸುತ್ತಿರುವಂತಿದೆ. ನಿಖಿಲ್​ ಏನೋ ಒಂಡು ಡೈಲಾಗ್​ ಅನ್ನು ಆ್ಯಕ್ಷನ್​ ಮಾಡುತ್ತಾ ಹೇಳುತ್ತಾರೆ. ಅವರನ್ನೇ ನೋಡುತ್ತಿದ್ದ ರೇವತಿ ನಗಲಾರಂಭಿಸುತ್ತಾರೆ.

Anitha E | news18-kannada
Updated:September 21, 2020, 8:23 AM IST
Nikhil Kumaraswamy: ನಿಖಿಲ್​-ರೇವತಿಯ ಫನ್ನಿ ವಿಡಿಯೋಗೆ ಅಭಿಮಾನಿಗಳು ಫಿದಾ..!
ನಿಖಿಲ್​ ಕುಮಾರಸ್ವಾಮಿ ಹಾಗೂ ರೇವತಿ
  • Share this:
ನಿಖಿಲ್​ ಕುಮಾರಸ್ವಾಮಿ ಹಾಗೂ ರೇವತಿ ಸ್ಯಾಂಡಲ್​ವುಡ್​ನ ಸ್ಟಾರ್​ ದಂಪತಿ. ಜೊತೆಗೆ ನೆಟ್ಟಿಗರ ಅಚ್ಚುಮೆಚ್ಚಿನ ಜೋಡಿ. ನಿಖಿಲ್​, ರೇವತಿ ಜೊತೆ ಮದುವೆ ಫಿಕ್ಸ್​ ಆದಾಗಿನಿಂದ ಅವರೊಂದಿಗೆ ತೆಗೆದ ಯಾವುದೇ ಫೋಟೋ ಪೋಸ್ಟ್​ ಮಾಡಿದರೂ ಅದು ವೈರಲ್​ ಆಗಿತ್ತದೆ. ಅದರಲ್ಲೂ ತಮ್ಮ ಫೋಟೋಗಳಿಗೆ ನಿಖಿಲ್​ ಬರೆದಯುವ ಪುಟ್ಟ ಪುಟ್ಟ ಕವಿತೆಗಳಂತೂ ನೆಟ್ಟಿಗರಿಗೆ ಫೇವರಿಟ್. ಆದರೆ ನಿಖಿಲ್​ ಹಾಗೂ ರೇವತಿಗೆ ನೆಟ್ಟಿಗರು ಸಾಕಷ್ಟು ಸಲ ಸಲಹೆ ನೀಡಿದ್ದಾರೆ. ನೀವು ಫೋಟೋಗೆ ಪೋಸ್​ ಕೊಡುವ ಸ್ಟೈಲ್​ ಅನ್ನು ಕೊಂಚ ಬದಲಿಸಿ ಎಂದು. ಅದರಂತೆ ನಿಖಿಲ್​ ಸಹ ಈಗ ಸುಧಾರಿಸಿದ್ದಾರೆ. ರೇವತಿ ಹಾಗೂ ಕುಟುಂಬದೊಂದಿಗೆ ತಗೆದ ಹಲವಾರು ಫೋಟೋಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ. ಜೊತೆಗೆ ಪ್ರಸಕ್ತ ವಿವಷಯಗಳ ಬಗ್ಗೆಯೂ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿರುತ್ತಾರೆ. ಈಗಲೂ ಸಹ ನಿಖಿಲ್​ ರೇವತಿ ಜೊತೆ ಸೇರಿ ಮಾಡಿರುವ ಒಂದು ಫನ್ನಿ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. 

ಈ ವಿಡಿಯೋದಲ್ಲಿ ನಿಖಿಲ್​ ಹಾಗೂ ರೇವತಿ ಮನೆಯ ಒಳಗಿರುವ ಮೆಟ್ಟಿಲುಗಳ ಮೇಲೆ ಕುಳಿತ್ತಿದ್ದಾರೆ. ರೇವತಿ ಜೊತೆ ಮಾತನಾಡುತ್ತಿರುವ ನಿಖಿಲ್​ ಯಾರನ್ನೋ ಅನುಕರಿಸುತ್ತಿರುವಂತಿದೆ. ನಿಖಿಲ್​ ಏನೋ ಒಂಡು ಡೈಲಾಗ್​ ಅನ್ನು ಆ್ಯಕ್ಷನ್​ ಮಾಡುತ್ತಾ ಹೇಳುತ್ತಾರೆ. ಅವರನ್ನೇ ನೋಡುತ್ತಿದ್ದ ರೇವತಿ ನಗಲಾರಂಭಿಸುತ್ತಾರೆ.








View this post on Instagram





#candidmoments 🤗


A post shared by Nikhil Kumar (@nikhilgowda_jaguar) on






ನಿಖಿಲ್​ ಹಾಗೂ ರೇವತಿಯ ವಿಡಿಯೋಗೆ ಸಖತ್​ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೊತೆಗೆ ರೇವತಿ ಹಸಿರು ಬಣ್ಣದ ಸೀರೆಯುಟ್ಟಿದ್ದು, ಕೂದಲನ್ನು ಗಂಡು ಹಾಕಿ, ಮಲ್ಲಿಗೆ ಹೂ ಮುಡಿದಿದ್ದಾರೆ. ರೇವತಿಯ ಈ ಸ್ಟೈಲ್​ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ನೀವಿಬ್ಬರೂ ಸೇರಿ ಒಂದು ಸಿನಿಮಾ ಮಾಡಿ ಅಂತ ಸಾಕಷ್ಟು ಮಂದಿ ಕಮೆಂಟ್​ ಮಾಡುತ್ತಿದ್ದಾರೆ. ಈ ವಿಡಿಯೋದಲ್ಲಿ ನಿಖಿಲ್​ ಅನುಕರಿಸುತ್ತಿರುವುದು ನೋಡಿದರೆ, ಅದು ರೇವತಿ ಅವರನ್ನೇ ಇಮಿಟೇಟ್​ ಮಾಡಿದಂತಿದೆ. ಆದರೆ, ಈ ವಿಡಿಯೋಗೆ ಆಡಿಯೋ ಇಲ್ಲ. ಆದರೂ ಅಲ್ಲಿ ಏನಾಗಿಬಹದುದೆಂದು ನೆಟ್ಟಿಗರು ತಮ್ಮ ಮನಸ್ಸಿಗೆ ಅನಿಸಿದಂತೆ ಊಹಿಸಿಕೊಳ್ಳುತ್ತಿದ್ದಾರೆ.




ಇನ್ನು ನಿಖಿಲ್​ ಇತ್ತೀಚೆಗೆ ಹಿದಿ ಹೇರಿಕೆ ಹಾಗೂ ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸುವ ಕುರಿತು ಟ್ವೀಟ್​ ಮಾಡುವ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಇನ್ನು ನಿಖಿಲ್ ಅವರು ಅಭಿನಯಿಸುತ್ತಿರುವ ಸಿನಿಮಾಗಳ ವಿಷಯಕ್ಕೆ ಬಂದರೆ,​ ಟಾಲಿವುಡ್​ ನಿರ್ದೇಶಕರ ಜೊತೆ ಮಾಡುತ್ತಿರುವ ಸಿನಿಮಾ ರೈಡರ್​ ಪೋಸ್ಟರ್​ ಇತ್ತೀಚೆಗಷ್ಟೆ ರಿಲೀಸ್​ ಆಗಿದೆ. ವಿಜಯ್​ ಕುಮಾರ್​ ಕೊಂಡ ನಿರ್ದೇಶನದ ಈ ಚಿತ್ರ ನಿಖಿಲ್​ ಅವರ ನಾಲ್ಕನೇ ಸಿನಿಮಾ ಆಗಿದೆ. ಈ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಇದಲ್ಲದೆ ಇನ್ನೂ ನಾಲ್ಕು ಹೊಸ ಸಿನಿಮಾಗಳು ನಿಖಿಲ್​ ಕೈಯಲ್ಲಿವೆ. ಲಾಕ್​ಡೌನ್​ ಸಡಿಲಗೊಂಡ ನಂತರ ಮೆಲ್ಲನೆ ಸಿನಿಮಾ ಚಿತ್ರೀಕರಣದ ಕೆಲಸಗಳು ಆರಂಭವಾಗುತ್ತಿದ್ದು, ನಿಖಿಲ್​ ಅವರ ಹೊಸ ಚಿತ್ರಗಳ ಶೂಟಿಂಗ್​ ಸಹ ಆರಂಭವಾಗುವ ಹಂತದಲ್ಲಿವೆ.
Published by: Anitha E
First published: September 21, 2020, 8:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading