ಓಟಿಟಿ ಹೆಸರಲ್ಲಿ ಕಾಲವೇ ಮೋಸಗಾರ ಟೀಂಗೆ ಮಹಾವಂಚನೆ; ನಿರ್ಮಾಪಕರೇ ಎಚ್ಚರ!
ಲಾಕ್ಡೌನ್ನಿಂದಾಗಿ ಸಿನಿಮಾ ರಿಲೀಸ್ ಮಾಡಲಾಗದೇ ನಷ್ಟದ ಭಯದಲ್ಲಿದ್ದ ಕಾಲವೇ ಮೋಸಗಾರ ಚಿತ್ರತಂಡವನ್ನು ಮಿಸ್ಟಿಕ್ ಸ್ಟುಡಿಯೋಸ್ನ ವೆಂಕಟೇಶ್ ಆಚಾರ್ಯ ಎಂಬಾತ ಸಂಪರ್ಕಿಸಿದ್ದ.
news18-kannada Updated:November 29, 2020, 1:16 PM IST

ಕಾಲವೇ ಮೋಸಗಾರ ಸಿನಿಮಾ ಪೋಸ್ಟರ್
- News18 Kannada
- Last Updated: November 29, 2020, 1:16 PM IST
ಕೊರೋನಾ ಲಾಕ್ಡೌನ್ನಿಂದಾಗಿ ಬರೋಬ್ಬರಿ ಎಂಟು ತಿಂಗಳ ಕಾಲ ಥಿಯೇಟರ್ಗಳು, ಮಲ್ಟಿಪ್ಲೆಕ್ಸ್ಗಳು ಬಾಗಿಲು ಮುಚ್ಚಿದ್ದವು. ಸಿನಿಮಾಗಳು ರೆಡಿಯಿದ್ದರೂ ರಿಲೀಸ್ ಮಾಡಲಾಗದೆ ನಿರ್ಮಾಪಕರು ಪರದಾಡುವಂತಾಗಿತ್ತು. ಮತ್ತೊಂದೆಡೆ ಓಟಿಟಿ ಹಾಗೂ ಡಿಜಿಟಲ್ ಪ್ಲ್ಯಾಟ್ಫಾರ್ಮ್ಗಳಲ್ಲಿ ಹೊಸ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಯ್ತು. ಹೀಗಾಗಿ ಅಲ್ಲಿ ಸಿನಿಮಾ ಹಕ್ಕುಗಳನ್ನು ಮಾರಲು ಚಿತ್ರತಂಡಗಳು ಉತ್ಸಾಹ ತೋರಿದವು. ಇದ್ದಕ್ಕಿದ್ದಂತೆ ಓಟಿಟಿಗಳಲ್ಲಿ ಸಿನಿಮಾಗಳಿಗೆ ಬೇಡಿಕೆ ಹೆಚ್ಚುತ್ತಲೇ ಸಿನಿಮಾ ಹಾಗೂ ಓಟಿಟಿ ನಡುವಿನ ಮಧ್ಯವರ್ತಿಗಳೂ ಹೆಚ್ಚಾಗಿದ್ದಾರೆ. ಓಟಿಟಿಯಲ್ಲಿ ಕೋಟಿ ಕೋಟಿಗೆ ಸಿನಿಮಾ ಮಾರಿಸಿಕೊಡುತ್ತೇನೆ ಎಂದು ಸಿನಿಮಾ ತಂಡಗಳಿಂದ ಲಕ್ಷ-ಲಕ್ಷ ರೂ. ಪೀಕುತ್ತಿದ್ದಾರೆ.
ಹೀಗೆ ವಂಚಕನೊಬ್ಬನಿಂದ ಮೋಸ ಹೋದ 'ಕಾಲವೇ ಮೋಸಗಾರ' ಚಿತ್ರತಂಡ ಸದ್ಯ ಫಿಲ್ಮ್ ಚೇಂಬರ್ ಮೊರೆ ಹೋಗಿದೆ. ಲಾಕ್ಡೌನ್ನಿಂದಾಗಿ ಸಿನಿಮಾ ರಿಲೀಸ್ ಮಾಡಲಾಗದೇ ನಷ್ಟದ ಭಯದಲ್ಲಿದ್ದ 'ಕಾಲವೇ ಮೋಸಗಾರ' ಚಿತ್ರತಂಡವನ್ನು ಮಿಸ್ಟಿಕ್ ಸ್ಟುಡಿಯೋಸ್ನ ವೆಂಕಟೇಶ್ ಆಚಾರ್ಯ ಎಂಬಾತ ಸಂಪರ್ಕಿಸಿದ್ದ. ಅಮೇಜಾನ್ ಪ್ರೈಮ್ನಲ್ಲಿ 5 ಕೋಟಿ ರೂಪಾಯಿಗೆ ನಿಮ್ಮ ಸಿನಿಮಾವನ್ನು ಮಾರಾಟ ಮಾಡಿಸುತ್ತೇನೆ, ಓಡಾಟಕ್ಕೆ ಸ್ವಲ್ಪ ದುಡ್ಡು ಕೊಡಿ ಎಂದು ಕೇಳಿದ್ದ. ಆತ ಕೇಳಿದಂತೆ 1.3 ಲಕ್ಷ ರೂಪಾಯಿ ಹಣವನ್ನು 'ಕಾಲವೇ ಮೋಸಗಾರ' ಟೀಮ್ ನೀಡಿದೆ. 
ಇದನ್ನೂ ಓದಿ: Happy Birthday Ramya: 38ನೇ ವಸಂತಕ್ಕೆ ಕಾಲಿಟ್ಟ ಮೋಹಕ ತಾರೆ ರಮ್ಯಾ: ಸ್ಯಾಂಡಲ್ವುಡ್ ಕ್ವೀನ್ಗೆ ಶುಭಾಶಯಗಳ ಮಹಾಪೂರ
ಆದರೆ, 45 ದಿನಗಳಲ್ಲಿ ಡೀಲ್ ಮುಗಿದು, ದುಡ್ಡು ಅಕೌಂಟ್ಗೆ ಬರುತ್ತದೆ ಅಂತ ಹೇಳಿದ್ದ ವೆಂಕಟೇಶ್ 150 ದಿನ ಕಳೆದರೂ ಅತ್ತ ಹಣವನ್ನೂ ನೀಡದೇ ಇತ್ತ ಸಿನಿಮಾವನ್ನೂ ಮಾರಿಸದೇ ಸತಾಯಿಸುತ್ತಿದ್ದಾನೆ ಎಂದು ಆರೋಪಿಸುತ್ತಿದೆ 'ಕಾಲವೇ ಮೋಸಗಾರ' ಟೀಂ. ಇನ್ನು, ಸಿನಿಮಾ ಮಾಡುವ ಕನಸು ಹೊತ್ತು ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಹೀಗೆ ಐದು ಭಾಷೆಗಳಲ್ಲಿ 'ಕಾಲವೇ ಮೋಸಗಾರ' ಚಿತ್ರವನ್ನು ರೆಡಿ ಮಾಡಿಕೊಂಡಿದ್ದಾರೆ ನಿರ್ಮಾಪಕ ರಜತ್ ದುರ್ಗೋಜಿ. ಹೊಸ ನಿರ್ಮಾಪಕರಿಗೆ ಹಾಗೂ ಹೊಸ ಸಿನಿಮಾ ತಂಡಗಳಿಗೆ ಕೊರೊನಾದಂತಹ ಕಷ್ಟದ ಸಮಯದಲ್ಲಿ ಹೀಗೆ ವಂಚಿಸಿದರೆ, ಹೊಸಬರು ಯಾವ ಧೈರ್ಯದಲ್ಲಿ ಸಿನಿಮಾ ಮಾಡೋದು ಎಂದು ಹತಾಶೆಯಿಂದ ನುಡಿಯುತ್ತಾರೆ.
ಈ ಬಗ್ಗೆ ಈಗಾಗಲೇ ಫಿಲ್ಮ್ ಚೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್ ಅವರ ಗಮನಕ್ಕೆ ತಂದಿರುವ 'ಕಾಲವೇ ಮೋಸಗಾರ' ಚಿತ್ರತಂಡ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಲು ಸಿದ್ಧತೆ ಮಾಡಿಕೊಂಡಿದೆ. ಓಟಿಟಿ ಹಾಗೂ ಡಿಜಿಟಲ್ ಪ್ಲ್ಯಾಟ್ಫಾರ್ಮ್ಗಳಲ್ಲಿ ಸಿನಿಮಾ ಹಕ್ಕು ಸೇಲ್ ಮಾಡಿಸಿಕೊಡುತ್ತೇನೆ ಅಂತ ಹಣ ಗುಳುಂ ಮಾಡುವ ವಂಚಕರ ಬಗ್ಗೆ ಎಚ್ಚರ ವಹಿಸುವಂತೆ ಚಿತ್ರತಂಡ ಮನವಿ ಮಾಡಿಕೊಂಡಿದೆ.