ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಕಾಣಿಸಿಕೊಂಡ ಅಮಿತಾಭ್​ ಬಚ್ಚನ್​!

ಅಮಿತಾಭ್​ ಹಾಗೂ ದಾವೂದ್​ನಂತೆ ಕಾಣುವ ವ್ಯಕ್ತಿ ಫೋಟೋ ಒಂದನ್ನು ಟ್ವಿಟ್ಟರ್​ನಲ್ಲಿ ಹಾಕಲಾಗಿತ್ತು. ಈ ಫೋಟೋ ಸಾಕಷ್ಟು ವೈರಲ್​ ಆಗಿತ್ತು. ಫೋಟೋದಲ್ಲಿ ಅಮಿತಾಭ್​ ಹಾಗೂ ಅಭಿಷೇಕ್​ ಹಸ್ತಲಾಘ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ.

news18-kannada
Updated:September 19, 2020, 12:13 PM IST
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಕಾಣಿಸಿಕೊಂಡ ಅಮಿತಾಭ್​ ಬಚ್ಚನ್​!
ಅಮಿತಾಭ್​ ಫೋಟೋ
  • Share this:
ದಾವೂದ್​ ಇಬ್ರಾಹಿಂ ಕರಾಚಿಯಲ್ಲಿರುವುದಾಗಿ ಪಾಕಿಸ್ತಾನ ಒಪ್ಪಿಕೊಂಡಿತ್ತು. ಅಷ್ಟೇ ಅಲ್ಲ, ಆತನ ವಿಳಾಸವನ್ನು ಕೂಡ ಬಹಿರಂಗ ಮಾಡಿತ್ತು. ಆದರೆ ದಾವೂದ್​ ಕರಾಚಿಯಲ್ಲಿದ್ದಾನೆ ಎನ್ನುವ ವಿಚಾರವನ್ನು ಆತನ ಆಪ್ತ ಛೋಟಾ ಶಕೀಲ್​ ಅಲ್ಲಗಳೆದಿದ್ದ. ಈ ವಿಚಾರ ಚರ್ಚೆಯಲ್ಲಿರುವಾಗಲೇ ಬಾಲಿವುಡ್​ ಖ್ಯಾತ ನಟ ಅಮಿತಾ ಬಚ್ಚನ್​, ದಾವೂದ್​ ಇಬ್ರಾಹಿಂ ಜೊತೆ ಇರುವ ಫೋಟೋ ಒಂದು ವೈರಲ್​ ಆಗಿದೆ. ಇದು ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಅಷ್ಟಕ್ಕೂ ಈ ಫೋಟೋದ ಅಸಲಿಯತ್ತೇನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಅಮಿತಾಭ್​ ಹಾಗೂ ದಾವೂದ್​ನಂತೆ ಕಾಣುವ ವ್ಯಕ್ತಿ ಫೋಟೋ ಒಂದನ್ನು ಟ್ವಿಟ್ಟರ್​ನಲ್ಲಿ ಹಾಕಲಾಗಿತ್ತು. ಈ ಫೋಟೋ ಸಾಕಷ್ಟು ವೈರಲ್​ ಆಗಿತ್ತು. ಫೋಟೋದಲ್ಲಿ ಅಮಿತಾಭ್​ ಹಾಗೂ ಅಭಿಷೇಕ್​ ಹಸ್ತಲಾಘ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. ಈ ಫೋಟೋ ದಾವೂದ್​ ಜೊತೆಗಿನದ್ದು ಎಂದೇ ಹೇಳಲಾಗಿತ್ತು.

ಇದಕ್ಕೆ ಇತ್ತರಿಸಿರುವ ಅಭಿಷೇಕ್​, ಅದು ನನ್ನ ತಂದೆ ಹಾಗೂ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್​ ಶಂಕರ್​ರಾವ್​ ಚೌಹಾಣ್  ಜೊತೆಗಿನ ಫೋಟೋ ಎಂದಿದ್ದಾರೆ ಅಭಿಷೇಕ್​. ನಂತರ ವ್ಯಕ್ತಿ ಮೂಲ ಟ್ವೀಟ್​ ಅನ್ನು ಡಿಲೀಟ್​ ಮಾಡಿದ್ದಾನೆ.

View this post on Instagram

... be safe .. and be in protection ..


A post shared by Amitabh Bachchan (@amitabhbachchan) on


ಕೊರೋನಾ ವೈರಸ್​ ಹೆಚ್ಚುತ್ತಿರುವುದರಿಂದ ಈಗಾಗಲೇ ಸಾಕಷ್ಟು ರಿಯಾಲಿಟಿ ಶೋಗಳು ಅರ್ಧಕ್ಕೆ ನಿಂತಿವೆ. ಈಗ ಲಾಕ್​ಡೌನ್​ ನಿಯಮ ಸಡಿಲ ಮಾಡಿದ ಅಮಿತಾಭ್​ಗೆ ಕೊರೋನಾ ಪಾಸಿಟಿವ್​ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೊರೋನಾದಿಂದ ಮುಕ್ತಿ ಹೊಂದಿದ ನಂತರದಲ್ಲಿ ಮರಳಿ ಮನೆಗೆ ಆಗಮಿಸಿದ್ದರು. ಈಗ ಅಮಿತಾಭ್​ ಮತ್ತೆ ತಮ್ಮ ಕೆಲಸಕ್ಕೆ ಮರಳಿದ್ದರು. ಈ ಬಗ್ಗೆ ಟ್ವೀಟ್​ ಮಾಡಿ ಕೌನ್​ ಬನೇಗಾ ಕರೋಡ್ಪತಿ ಪ್ರೋಮೋ ಶೂಟ್​ನಲ್ಲಿ ಪಾಲ್ಗೊಲ್ಗೊಂಡಿದ್ದಾಗಿ ತಿಳಿಸಿದ್ದರು.
Published by: Rajesh Duggumane
First published: September 19, 2020, 10:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading