ನಟಿ ಆಲಿಯಾ ಭಟ್ ಸಹೋದರಿಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ; ಸಾಮಾಜಿಕ ಜಾಲತಾಣದಲ್ಲಿ ಸ್ಕ್ರೀನ್​​​​​​ಶಾಟ್ ಶೇರ್ ಮಾಡಿದ ಶಹೀನ್ ಭಟ್

Shaheen Bhatt: ಸುಶಾಂತ್ ಸಿಂಗ್​ ರಜಪೂತ್​ ಸಾವಿನ ನಂತರ ಬಾಲಿವುಡ್​ನಲ್ಲಿ ಸ್ವಜನ ಪಕ್ಷಪಾತ (ನೆಪೊಟಿಸಂ) ತಾಂಡವವಾಡುತ್ತಿದೆ ಎಂಬ ಮಾತುಗಳು ಕೇಳಿಬಂದಿತ್ತು. ಮಹೇಶ್​ ಭಟ್​ ಅವರ ಕುಟುಂಬ ಕೂಡ ನೆಪೊಟಿಸಂನಲ್ಲಿ ತೊಡಗಿಸಿಕೊಂಡಿದೆ ಎಂಬ ಮಾತುಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡಿತ್ತು. ಇದೀಗ ಅದೇ ವಿಚಾರಕ್ಕಾಗಿ ಕೆಲವು ನೆಟ್ಟಿಗರು ಆಲಿಯಾ ಭಟ್​ ಸಹೋದರಿ ಶಹೀನ್ ಭಟ್​ಗೆ ಬೆದರಿಗೆ ಮೆಸೇಜ್​ ಮಾಡಿದ್ದಾರೆ

news18-kannada
Updated:July 14, 2020, 6:56 PM IST
ನಟಿ ಆಲಿಯಾ ಭಟ್ ಸಹೋದರಿಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆ; ಸಾಮಾಜಿಕ ಜಾಲತಾಣದಲ್ಲಿ ಸ್ಕ್ರೀನ್​​​​​​ಶಾಟ್ ಶೇರ್ ಮಾಡಿದ ಶಹೀನ್ ಭಟ್
ಶಹೀನ್​ ಭಟ್​- ಆಲಿಯಾ ಭಟ್​
  • Share this:
ಬಾಲಿವುಡ್​ ಪ್ರತಿಭಾನ್ವಿತ ನಟ ಸುಶಾಂತ್​ ಸಿಂಗ್​ ರಜಪೂತ್​ ನಿಧನದ ನಂತರ ಸಾಮಾಜಿಕ ಜಾಲತಾಣದಲ್ಲಿ ಖ್ಯಾತನಾಮರನ್ನು ಗುರಿಯಾಗಿಸಿಕೊಂಡು ಕೆಲವು ಕಿಡಿಗೇಡಿಗಳು ಬೆದರಿಕೆ ಒಡ್ಡುತ್ತಿದ್ದಾರೆ. ಇದೀಗ ನಟಿ ಆಲಿಯಾ ಭಟ್​ ಸಹೋದರಿಗೆ ಅತ್ಯಾಚಾರ​ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ. ಈ ವಿಚಾರವನ್ನು ಶಹೀನ್ ಭಟ್ ಸ್ಕ್ರೀನ್​ ಶಾಟ್​ ತೆಗೆದು ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಬೆದರಿಕೆಯ ಸಂದೇಶ ಕಳುಹಿಸಿದ ಕಿಡಿಗೇಡಿಗಳ ಕುರಿತಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಸುಶಾಂತ್ ಸಿಂಗ್​ ರಜಪೂತ್​ ಸಾವಿನ ನಂತರ ಬಾಲಿವುಡ್​ನಲ್ಲಿ ಸ್ವಜನ ಪಕ್ಷಪಾತ (ನೆಪೊಟಿಸಂ) ತಾಂಡವವಾಡುತ್ತಿದೆ ಎಂಬ ಮಾತುಗಳು ಕೇಳಿಬಂದಿತ್ತು. ಮಹೇಶ್​ ಭಟ್​ ಅವರ ಕುಟುಂಬ ಕೂಡ ನೆಪೊಟಿಸಂನಲ್ಲಿ ತೊಡಗಿಸಿಕೊಂಡಿದೆ ಎಂಬ ಮಾತುಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡಿತ್ತು. ಇದೀಗ ಅದೇ ವಿಚಾರಕ್ಕಾಗಿ ಕೆಲವು ನೆಟ್ಟಿಗರು ಆಲಿಯಾ ಭಟ್​ ಸಹೋದರಿ ಶಹೀನ್ ಭಟ್​ಗೆ ಬೆದರಿಗೆ ಮೆಸೇಜ್​ ಮಾಡಿದ್ದಾರೆ.

ನೆಟ್ಟಿಗರು ಮಾಡಿರುವ ಬೆದರಿಕೆಯ ಮೆಸೇಜ್​ ಅನ್ನು ಶಹೀನ್ ಭಟ್​ ಸ್ಕ್ರೀನ್​ಶಾಟ್​ ತೆಗೆದು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ‘ಇದು ನಿಮಗೆ ಅಚ್ಚರಿ ಎನಿಸಿತಾ? ಯಾಕೆ? ನನಗಂತೂ ಅಚ್ಚರಿ ಎನಿಸಿಲ್ಲ ಎಂದು ಬರೆದುಕೊಂಡಿದ್ದಾರೆ. ಇಂತಹ ಮೆಸೇಜ್​ ಕಳುಹಿಸಿದ ಕಿಡಿಗೇಡಿಗಳ ವಿರುದ್ದ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಆಲಿಯಾ ಭಟ್​- ಮಹೇಶ್​ ಭಟ್​- ಶಹೀನ್​ ಭಟ್​


ಶಹೀನ್ ಭಟ್​ ಕಿಡಿಗೇಡಿಗಳ ಸಾಮಾಜಿಕ ಖಾತೆಯನ್ನು ಬ್ಲಾಕ್​ ಮಾಡುವುದರ ಜೊತೆಗೆ ರಿಪೋರ್ಟ್​ ಕೂಡ ಮಾಡಿದ್ದಾರೆ. ನಿಮ್ಮ ಗುರುತನ್ನು ನಾನು ಮುಚ್ಚಿಡುವುದಿಲ್ಲ. ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಎಲ್ಲೋ ಕುಳಿತಿರುವ ನಿಮ್ಮನ್ನು ಪತ್ತೆ ಹಚ್ಚುವುದು ಕಷ್ಟ ಎಂದು ನೀವು ಭಾವಿಸಿರಬಹುದು. ಆದರೆ ಐಪಿ ವಿಳಾಸದಿಂದ ನಿಮ್ಮನ್ನು ಸುಲಭವಾಗಿ ಪತ್ತೆಹಚ್ಚಬಹುದು. ನೀವು ಕಣ್ಣಿಗೆ ಕಾಣದವರಂತೂ ಅಲ್ಲ. ಈ ರೀತಿ ಬೆದರಿಗೆ ಹಾಕುವುದು ಅಪರಾಧ ಎಂದು ಬರೆದುಕೊಂಡಿದ್ದಾರೆ.

1


2
3


4


5


ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆಯ ಸಂದೇಶಗಳು ಹೆಚ್ಚಾಗುತ್ತಲೇ ಇದೆ. ಸುಶಾಂತ್ ಸಿಂಗ್​ ಸಾವಿನ ನಂತರ ಬಾಲಿವುಡ್​ ನಟ ಸಲ್ಮಾನ್​ ಖಾನ್​, ಆಲಿಯಾ ಭಟ್​, ಕೆಲವು ನಿರ್ದೇಶಕರು ನೆಪೊಟಿಸಂ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಇನ್ನು ಕೆಲವು ಟ್ರೋಲ್​ ಪೇಜ್​ಗಳು ಇವರ ಫೋಟೋವನ್ನು ಇಟ್ಟುಕೊಂಡು ಟ್ರೋಲ್ ಮಾಡಿದ್ದವು. ಇದೀಗ ಮಹೇಶ್​ ಭಟ್​ ಫ್ಯಾಮಿಲಿಗೆ ಕೆಲವು ಕಿಡಿಗೇಡಿಗಳು ಬೆದರಿಗೆ ಹಾಕುತ್ತಿದ್ದಾರೆ. ಹಾಗಾಗಿ ಆಲಿಯಾ ಭಟ್​​, ಅವರ ತಾಯಿ ಸೋನಿ ರಾಝ್ದಾನ್​​ ಮುಂತಾದವರು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್​​ ಆಯ್ಕೆಯನ್ನು ನಿಷ್ಕ್ರೀಯಗೊಳಿಸಿದ್ದಾರೆ.



ಜುಲೈ 16ಕ್ಕೆ ಭಾರತೀಯ ಮಾರುಕಟ್ಟೆಗೆ ವಿವೋ X50 ಸಿರೀಸ್​​; ಬೆಲೆಗೆ ತಕ್ಕಂತೆ ವಿಶೇಷತೆ

ಲವ್​ ಮಾಕ್ಟೇಲ್​ ತೆಲುಗಿಗೆ ರಿಮೇಕ್​​; ತಮನ್ನಾ ನಾಯಕಿ; ಹೀರೋ ಯಾರು ಗೊತ್ತಾ?
Published by: Harshith AS
First published: July 14, 2020, 6:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading