HOME » NEWS » Entertainment » ACTRESS ANITHA BHAT AND HER DAUTHER TESTED COVID POSITIVE HTV SESR

ಟಗರು ನಟಿ ಅನಿತಾ ಭಟ್​ಗೆ ಕೋವಿಡ್​; ಹೋಮ್ ಕ್ವಾರಂಟೈನ್‌ನಲ್ಲಿ ಅಮ್ಮ, ಮಗಳು... 

ಮಗಳ ಜೊತೆ ಖುದ್ದು ನಟಿ ಅನಿತಾ ಭಟ್ ಕೂಡ ಕೋವಿಡ್ ಟೆಸ್ಟ್ ಮಾಡಿಸಿದ್ದಾರೆ. ರಿಪೋರ್ಟ್ ನೋಡಿದರೆ ಅಮ್ಮ, ಮಗಳು ಇಬ್ಬರಿಗೂ ಕೋವಿಡ್ ಪಾಸಿಟಿವ್ ಎಂದು ಬಂದಿದೆ.

news18-kannada
Updated:May 6, 2021, 6:32 PM IST
ಟಗರು ನಟಿ ಅನಿತಾ ಭಟ್​ಗೆ ಕೋವಿಡ್​; ಹೋಮ್ ಕ್ವಾರಂಟೈನ್‌ನಲ್ಲಿ ಅಮ್ಮ, ಮಗಳು... 
ಮಗಳ ಜೊತೆ ಖುದ್ದು ನಟಿ ಅನಿತಾ ಭಟ್ ಕೂಡ ಕೋವಿಡ್ ಟೆಸ್ಟ್ ಮಾಡಿಸಿದ್ದಾರೆ. ರಿಪೋರ್ಟ್ ನೋಡಿದರೆ ಅಮ್ಮ, ಮಗಳು ಇಬ್ಬರಿಗೂ ಕೋವಿಡ್ ಪಾಸಿಟಿವ್ ಎಂದು ಬಂದಿದೆ.
  • Share this:
ಸೈಕೋ, ದಾಸವಾಳ, ಟಗರು, ಪರಪಂಚ, ಶಟರ್ ದುಲಾಯಿ, ಹೊಸ ಕ್ಲೈಮಾಕ್ಸ್​​ , ಡೇಸ್ ಆಫ್ ಬೋರಾಪುರ, ನಗೆ ಬಾಂಬ್, ತಿಪ್ಪಜ್ಜಿ ಸರ್ಕಲ್ ಸೇರಿದಂತೆ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸುವ ಜೊತೆಗೆ ತೆಲುಗಿನಲ್ಲೂ ಮಿಂಚಿರುವ ನಟಿ ಅನಿತಾ ಭಟ್. ಸದ್ಯ ನಿನ್ನೆಯಿಂದ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ. ಅದಕ್ಕೆ ಕಾರಣ ಕೊರೊನಾ ಸೋಂಕು ಎಂದು ಮತ್ತೆ ಹೇಳಬೇಕಿಲ್ಲ. ಹೌದು, ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳನ್ನು ಕೋವಿಡ್ ಸೋಂಕು ಬೆಂಬಿಡದೇ ಕಾಡುತ್ತಿದೆ. ಕಳೆದ ಎರಡು ವಾರಗಳಲ್ಲಿ ಒಂದು ಡಜನ್‌ಗೂ ಹೆಚ್ಚು ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು ಹಲವರು ಚಿಕಿತ್ಸೆ ಪಡೆದು ಗುಣಮುಖರಾಗಿ, ಸೋಂಕಿನ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ.

ಕಳೆದ ಕೆಲ ದಿನಗಳಿಂದ ನಟಿ ಅನಿತಾ ಭಟ್ ಮಗಳಿಗೂ ಅನಾರೋಗ್ಯವಿತ್ತಂತೆ. ಸ್ವಲ್ಪ ಜ್ವರವಿದ್ದ ಕಾರಣ ಮುನ್ನೆಚ್ಚರಿಕೆ ವಹಿಸಿ ಮಂಗಳವಾರ ಆಸ್ಪತ್ರೆಗೆ ಹೋಗಿದ್ದಾರೆ. ವೈದ್ಯರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ತಿಳಿಸಿದ್ದು, ಅದರಂತೆ ಮಗಳ ಜೊತೆ ಖುದ್ದು ನಟಿ ಅನಿತಾ ಭಟ್ ಕೂಡ ಕೋವಿಡ್ ಟೆಸ್ಟ್ ಮಾಡಿಸಿದ್ದಾರೆ. ರಿಪೋರ್ಟ್ ನೋಡಿದರೆ ಅಮ್ಮ, ಮಗಳು ಇಬ್ಬರಿಗೂ ಕೋವಿಡ್ ಪಾಸಿಟಿವ್ ಎಂದು ಬಂದಿದೆ.

`ನನ್ನ ಜೊತೆ ಮನೆಯಲ್ಲಿ ಅಪ್ಪ, ಅಮ್ಮ ಹಾಗೂ ಸಂಬಂಧಿಕರಿದ್ದರು. ನನ್ನ ಮತ್ತು ಮಗಳ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದ ಕೂಡಲೇ ಮನೆಯವರಿಗೆ ತಿಳಿಸಿದ್ದೇವೆ.  ಎಲ್ಲರನ್ನೂ ಬೇರೆ ಮನೆಗೆ ಕಳುಹಿಸಿದ್ದೇವೆ. ಈಗ ನಾನು ಮತ್ತು ಮಗಳು ಇಬ್ಬರೂ  ಹೋಮ್ ಕ್ವಾರಂಟೈನ್‌ನಲ್ಲಿದ್ದೇವೆ. ಹಾಗೇ ಕೊರೋನಾ ಸೋಂಕಿನ ಲಕ್ಷಣಗಳು ಮೊದಲೇ ಕಂಡು ಬಂದಿದ್ದು ಕಾರಣ ಕೊವಿಡ್ ಟೆಸ್ಟ್ ಮಾಡಿಸುವ ಮುನ್ನವೇ ಮಾತ್ರೆ ಹಾಗೂ ಔಷಧಗಳನ್ನು ತರಿಸಿದ್ದೆ, ಪ್ರಾರಂಭದಲ್ಲೇ ಎಚ್ಚೆತ್ತುಕೊಂಡ ಕಾರಣ, ಅಂತಹ ಗಂಭೀರ ಸಮಸ್ಯೆ ಆಗಿಲ್ಲ' ಎಂದು ನ್ಯೂಸ್ ೧೮ ಕನ್ನಡಕ್ಕೆ ಮತ್ತಷ್ಟು ಮಾಹಿತಿ ನೀಡುತ್ತಾರೆ ನಟಿ ಅನಿತಾ ಭಟ್. ಸದ್ಯ ಅವರ ಮಗಳಿಗೆ ಇನ್ನೂ ಸ್ವಲ್ಪ ಜ್ವರವಿದ್ದು, ಅನಿತಾ ಭಟ್ ಕೊಂಚ ಆರಾಮಾಗಿದ್ದಾರಂತೆ. ಇನ್ನು ಸಿನಿಮಾಗಳ ವಿಷಯಕ್ಕೆ ಬಂದರೆ ಅನಿತಾ ಭಟ್ ಅವರು ನಟಿಸಿರುವ ಜೂಟಾಟ, ಬಳೇಪೇಟೆ, ಬೆಂಗಳೂರು ೬೯ ಸಿನಿಮಾಗಳು ರಿಲೀಸ್ ಆಗಲು ರೆಡಿಯಿವೆ. ಜೊತೆಗೆ ತೆಲುಗಿನಲ್ಲಿಯೂ ಕೃಷ್ಣ ಲಂಕ ಎಂಬ ಚಿತ್ರದಲ್ಲಿ ಅನಿತಾ ಭಟ್ ನಟಿಸಲಿದ್ದಾರೆ.
Youtube Video

ಉತ್ತಮ ಯೋಗಪಟು ಕೂಡ ಆಗಿರುವ ನಟಿ ಅನಿತಾ ಭಟ್ ಯೋಗ ತರಬೇತಿ ಕೇಂದ್ರವನ್ನೂ ನಡೆಸುತ್ತಿದ್ದಾರೆ. ಆದರೆ ಕಳೆದ ವರ್ಷದ ಲಾಕ್‌ಡೌನ್‌ನಿಂದ ರಿಲೀಫ್ ಸಿಕ್ಕ ಬಳಿಕ ಸಾಕಷ್ಟು ಬ್ಯುಸಿಯಾಗಿದ್ದರು. ಆದರೆ ಈಗ ಮತ್ತೆ ಲಾಕ್‌ಡೌನ್ ಹೇರಿರುವ ಕಾರಣ ಸಿನಿಮಾ ಶೂಟಿಂಗ್ ಸೇರಿದಂತೆ ಎಲ್ಲ ಕೆಲಸಗಳಿಗೂ ಬ್ರೇಕ್ ಬಿದ್ದಿದೆ. ಅದರ ಬೆನ್ನಲ್ಲೇ ಅವರಿಗೂ ಕೊರೊನಾ ಸೋಂಕು ತಗುಲಿರುವ ಕಾರಣ ಸದ್ಯ ಅನಿತಾ ಭಟ್ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ. ಹೀಗಾಗಿಯೇ ಮತ್ತೆ ಯೋಗ ಹಾಗೂ ಧ್ಯಾನಗಳಿಗೆ ಸಮಯ ನೀಡಬಹುದು ಎಂಬ ಆಲೋಚನೆ ಅವರದು. ಇನ್ನು ಎರಡು ವಾರಗಳ ಕಾಲ ಅಮ್ಮ, ಮಗಳು ಇಬ್ಬರೂ ಹೋಮ್ ಐಸೊಲೇಷನ್‌ನಲ್ಲಿ ಇರಲಿದ್ದಾರೆ. ಅದೇನೇ ಇರಲಿ ನಟಿ ಅನಿತಾ ಭಟ್ ಮತ್ತು ಅವರ ಪುತ್ರಿ ಇಬ್ಬರೂ ಆದಷ್ಟು ಬೇಗ ಕೊರೊನಾ ಮುಕ್ತರಾಗಿ ಉತ್ತಮ ಆರೋಗ್ಯದೊಂದಿಗೆ ವಾಪಸ್ ಬರಲಿ.

ಇತ್ತೀಚೆಗಷ್ಟೇ ಸ್ಟಾರ್ ದಂಪತಿ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಮತ್ತು ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಚಂದ್ರನ್, ಸುಮನ್ ನಗರ್ಕರ್ ಸೇರಿದಂತೆ ಹಲವಾರು ಮಂದಿ ಕೋವಿಡ್ ಸೋಂಕಿನಿಂದ ಅನಾರೋಗ್ಯಕ್ಕೊಳಗಾಗಿ ಚಿಕಿತ್ಸೆ ಪಡೆದು ನೆಗಟಿವ್ ವರದಿಯೊಂದಿಗೆ ವಾಪಸ್ಸಾಗಿದ್ದರು.
Published by: Seema R
First published: May 6, 2021, 6:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories