ಭೂಮಿಯ ತೇವಾಂಶದಿಂದ ಕೈಕೊಟ್ಟ ಈರುಳ್ಳಿ; ಕಣ್ಣೀರಲ್ಲಿ ಬಸವ ನಾಡಿನ ರೈತ

ರಾಜ್ಯದಲ್ಲಿ ಅತೀ ಹೆಚ್ಚು ಉಳ್ಳಾಗಡ್ಡೆ ಬೆಳೆಯುವ ಎರಡನೇ ಜಿಲ್ಲೆ ವಿಜಯಪುರ.  ಜಿಲ್ಲೆಯ ವಿಜಯಪುರ, ಬಸವನ ಬಾಗೇವಾಡಿ, ಸಿಂದಗಿ ಮತ್ತು ದೇವರ ಹಿಪ್ಪರಗಿ ತಾಲೂಕೂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದೆ. 

news18-kannada
Updated:September 17, 2020, 7:18 AM IST
ಭೂಮಿಯ ತೇವಾಂಶದಿಂದ ಕೈಕೊಟ್ಟ ಈರುಳ್ಳಿ; ಕಣ್ಣೀರಲ್ಲಿ ಬಸವ ನಾಡಿನ ರೈತ
ಕೈಕೊಟ್ಟಿರುವ ಈರುಳ್ಳಿ ಬೆಳೆ.
  • Share this:
ವಿಜಯಪುರ; ವಿಜಯಪುರ ಜಿಲ್ಲೆಯಲ್ಲಿ ಆಗಾಗ ಸುರಿಯುತ್ತಿರುವ ಅತಿಯಾದ ಮಳೆಯಿಂದಾಗಿ ಈ ಬಾರಿ ಉಳ್ಳಾಗಡ್ಡಿ ಬೆಳಗಾರರು ಕಂಗಾಲಾಗುವಂತೆ ಮಾಡಿದೆ. ಬರಪೀಡಿತ ಜಿಲ್ಲೆ ಎಂದು ಹೆಸರಾಗಿರುವ ವಿಜಯಪುರ ಜಿಲ್ಲೆಯಲ್ಲಿ ಈ ವರ್ಷ ಈರುಳ್ಳಿ ಬೆಳೆಯುವ ಪ್ರದೇಶಗಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಕಳೆದ ವರ್ಷ ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ ಈ ಬಾರಿ ರೈತರು ಕಣ್ಣೀರು ಹಾಕುವಂತೆ ಮಾಡಿದೆ.  ಮಂಜು ಮುಸುಕಿದ ವಾತಾವರಣ, ನೀರು ನೆಲದಲ್ಲಿ ಅತೀಯಾದ ನೀರು ಸಂಗ್ರಹದಿಂದಾಗಿ ಈ ಬೆಳೆಯೀಗ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯದೇ ರೈತರನ್ನು ಕಂಗಾಲಾಗುವಂತೆ ಮಾಡಿದೆ. ಉತ್ತಮ ಗಾತ್ರದಲ್ಲಿ ಬೆಳೆಯಬೇಕಾಗಿದ್ದ ಈರುಳ್ಳಿ ಗಡ್ಡೆಯ ಗಾತ್ರ ಈಗ ಕುಂಠಿತವಾಗಿದ್ದು, ಅದರ ತಪ್ಪಲು ಕೂಡ ಸೊರಗಿ ಹೋಗಿದೆ.  ವಿಜಯಪುರ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ಲಕ್ಷಾಂತರ ಎಕರೆಯಲ್ಲಿ ಈರುಳ್ಳಿ ಬೆಳೆಯಲಾಗುತ್ತಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ದಿದ್ದ ಈರುಳ್ಳಿ ಕೊಳೆ ರೋಗದಿಂದಾಗಿ ಹಳದಿ ಬಣ್ಣಕ್ಕೆ ತಿರುಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.  ಸರಕಾರ ಕೂಡಲೇ ನೆರವಾಗಬೇಕು ಎಂದು ಹಡಗಲಿ ರೈತರ ಅನಿಲ ಎಲ್. ರಾಠೋಡ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಅತೀ ಹೆಚ್ಚು ಉಳ್ಳಾಗಡ್ಡೆ ಬೆಳೆಯುವ ಎರಡನೇ ಜಿಲ್ಲೆ ವಿಜಯಪುರ.  ಜಿಲ್ಲೆಯ ವಿಜಯಪುರ, ಬಸವನ ಬಾಗೇವಾಡಿ, ಸಿಂದಗಿ ಮತ್ತು ದೇವರ ಹಿಪ್ಪರಗಿ ತಾಲೂಕೂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದೆ.  ಪ್ರತಿ ವರ್ಷ ಜಿಲ್ಲೆಯಲ್ಲಿ ಸುಮಾರು 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದ್ದು, ಜಿಲ್ಲೆಯಲ್ಲಿ ದ್ರಾಕ್ಷಿ ಮತ್ತು ನಿಂಬೆ ಬಿಟ್ಟರೆ ಈರುಳ್ಳಿ ಬೆಳೆಗೆ ರೈತರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.  ಆದರೆ ಈ ವರ್ಷ 3.50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದ್ದರೂ ಸತತ ಮಳೆಯಿಂದ ಬೆಳೆಗೆ ಮಂಜು ಕವಿದು ಫಸಲು ಕೈಗೆ ಬರುವ ಮುನ್ನವೇ ಹಾಳಾಗಿ ಹೋಗುತ್ತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯಪುರ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಂತೋಷ ಇನಾಮದಾರ, ಉಳ್ಳಾಗಡ್ಡೆಗೆ ಔಷಧಿ ಸಿಂಪಡಿಸಿದರೆ ಸರಿ ಹೋಗುತ್ತದೆ.  ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದೂ ಕೂಡ ಇದಕ್ಕೆ ಕಾರಣ;ಾಗಿದೆ.  ನೀರು ನಿಲ್ಲದಂತೆ ಬಸಿ ಕಾಲುವೆ ಮಾಡುವುದರಿಂದ ಬೆಳೆಯನ್ನು ರಕ್ಷಿಸಿಕೊಳ್ಳಹುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : Nitin Gadkari: ಕೇಂದ್ರ ಸಚಿವ ನಿತಿನ್​ ಗಡ್ಕರಿಗೆ ಕೊರೋನಾ ಸೋಂಕು ಧೃಢ

ಈ ಬಾರಿ ಜಿಲ್ಲೆಯಲ್ಲಿ ಈಗಾಗಲೇ ಡೌನಿಮಿಲ್ಡ್ ಬಾಧೆಯಿಂದ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ.  ಈಗ ಮತ್ತೋಂದು ವಾಣಿಜ್ಯ ಬಳೆ ಈರುಳ್ಳಿ ಸಹ ನೆಲಕಚ್ಚಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೊರೋನಾದಿಂದ ಕಂಗೆಟ್ಟಿರುವ ರೈತರು ಈಗಾಗಲೇ ಸಾಕಷ್ಟು ಸಂಕಷ್ಟದಲ್ಲಿದ್ದಾರೆ.  ಈಗ ಈರುಳ್ಳಿ ಬೆಳೆ ಕೈ ಕೊಟ್ಟಿದ್ದು ರೈತರಿಗೆ ಮತ್ತಷ್ಟು ಆತಂಕಗೊಳ್ಳುವಂತೆ ಮಾಡಿದೆ.  ಸರಕಾರ ಇನ್ನಾದರೂ ರೈತರ ಕಡೆಗೆ ಗಮನ ಹರಿಸಿ ಅವರಿಗೆ ನೆರವಾಗುವುದು ಅಗತ್ಯವಾಗಿದೆ.

ಕಳೆದ ವರ್ಷ ಪ್ರವಾಹದ ಹಿನ್ನೆಲೆಯಲ್ಲಿ ರೈತರನ್ನು ಕಂಗಾಲಾಗಿಸಿ ಗ್ರಾಹಕರಿಗೆ ಕಣ್ಣೀರು ತರಿಸಿತ್ತು ಇದೇ ಉಳ್ಳಾಗಡ್ಡಿ.  ಈ ಬಾರಿ ಸತತ ಮಳೆ, ಭೂಮಿಯಲ್ಲಿ ತೇವಾಂಶದ ಹೆಚ್ಚಳದಿಂದಾಗಿ ಬಿತ್ತನೆ ಮಾಡಿದ ಬೆಳೆ ಮತ್ತು ನೆಲದಲ್ಲಿರುವ ಗಡ್ಡೆ ಎರಡೂ ಕೊಳೆಯುತ್ತಿವೆ.  ಈ ಕೊಳೆ ರೋಗ ಈರುಳ್ಳಿ ಬೆಳೆಗಾರರನ್ನು ಮತ್ತಷ್ಟು ಹೈರಾಣಾಗಿಸುತ್ತಿದ್ದು, ಸರಕಾರ ಈಗಲೇ ಇವರ ನೆರವಿಗೆ ಧಾವಿಸದಿದ್ದರೆ, ಮುಂಬರುವ ದಿನಗಳಲ್ಲಿ ಈರುಳ್ಳಿ ಕೊರತೆ ಉಂಟಾಗಿ ಗ್ರಾಹಕರ ಕಣ್ಣಲ್ಲಿ ಇದೇ ಉಳ್ಳಾಗಡ್ಡಿ ನೀರು ತರಿಸುವುದರಲ್ಲಿ ಸಂಶಯವಿಲ್ಲ.
Published by: MAshok Kumar
First published: September 17, 2020, 7:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading