ರೈತ ಮಸೂದೆ ಖಂಡಿಸಿ ಮಂಗಳೂರಿನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ : ಪ್ರಧಾನಿ ಪ್ರತಿಕೃತಿ ದಹನಕ್ಕೆ ಪೋಲೀಸರಿಂದ ತಡೆ

ರೈತ ಸಂಘಟನೆಗಳು, ಕಾಂಗ್ರೆಸ್ ಸೇರಿದಂತೆ ಕೆಲ ಪಕ್ಷಗಳು ಸಾಂಕೇತಿಕ ಪ್ರತಿಭಟನೆಗಳನ್ನು ಮಾಡಿದೆ. ಕೆಲವೊಂದು ತಾಲೂಕು ಕೇಂದ್ರ ಗಳಲ್ಲಿ ಮತ್ತು ಜಿಲ್ಲಾ ಕೇಂದ್ರದಲ್ಲಿ ಮಾತ್ರ ಪ್ರತಿಭಟನೆ ನಡೆದಿದೆ

news18-kannada
Updated:September 28, 2020, 3:01 PM IST
ರೈತ ಮಸೂದೆ ಖಂಡಿಸಿ ಮಂಗಳೂರಿನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ : ಪ್ರಧಾನಿ ಪ್ರತಿಕೃತಿ ದಹನಕ್ಕೆ ಪೋಲೀಸರಿಂದ ತಡೆ
ಪ್ರತಿಭಟನೆ ಮಾಡುತ್ತಿರುವ ರೈತರು
  • Share this:
ಮಂಗಳೂರು(ಸೆಪ್ಟೆಂಬರ್​. 28): ಕೇಂದ್ರ ಸರಕಾರದ ರೈತ ವಿರೋಧಿ ನೀತಿ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು. ರೈತಸಂಘ, ಹಸಿರುಸೇನೆ, ಕಾಂಗ್ರೆಸ್, ಎಸ್.ಡಿ.ಪಿ.ಐ, ದಲಿತ ಸಂಘಟನೆಗಳು, ಜೆಡಿಎಸ್ ಸೇರಿದಂತೆ 14 ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವು. ಪುತ್ತೂರಿನ ಸರಕಾರಿ ಬಸ್ ನಿಲ್ದಾಣದ ಬಳಿ ನಡೆದ ಈ ಪ್ರತಿಭಟನೆಯಲ್ಲಿ ಸೇರಿದ ನೂರಾರು ಪ್ರತಿಭಟನಾಕಾರರು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರಧಾನಿ ನರೇಂದ್ರ ಮೋದಿಯವರು ಕಾರ್ಪೋರೇಟ್ ಕಂಪನಿಗಳ ಪರವಾಗಿ ವರ್ತಿಸುತ್ತಿದ್ದು, ಕೇಂದ್ರ ಸರಕಾರ ಜಾರಿಗೆ ತಂದ ಹೊಸ ರೈತ ಮಸೂದೆ ಕೃಷಿಕರ ಪಾಲಿನ ಮರಣ ಶಾಸನ ಎಂದು ಪ್ರತಿಭಟನಾನಿರತರು ದೂರಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರುಗಳ ಪ್ರತಿಕೃತಿಯನ್ನು ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಪ್ರತಿಕೃತಿಯನ್ನು ಬಸ್ ನಿಲ್ದಾಣದ ಬಳಿಯೇ ದಲಿಸಲು ಯತ್ನ ನಡೆಸಿದ್ದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೋಲೀಸರು ಪ್ರತಿಕೃತಿಯನ್ನು ದಹಿಸದಂತೆ ತಡೆದಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಪ್ರತಿಕೃತಿಯನ್ನು ಮಿನಿ ವಿಧಾನಸೌಧದ ವರೆಗೆ ಮೆರವಣಿಗೆ ಮಾಡಿ ದಹಿಸಲು ಮತ್ತೆ ಪ್ರಯತ್ನಿಸಿದ್ದರು. ಅಲ್ಲೂ ಪೋಲೀಸರು ಪ್ರತಿಕೃತಿ ದಹಿಸಲು ಪೋಲೀಸರು ತಡೆ ನಡೆಸಿದರಲ್ಲದೆ, ಪ್ರತಿಭಟನೆ ಮುಕ್ತಾಯಗೊಂಡ ಬಳಿಕ ಪ್ರತಿಕೃತಿಯನ್ನು ತಮ್ಮ ವಶಕ್ಕೆ ಪಡೆಯಲು ಯತ್ನಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರತಿಭಟನಾನಿರತರು ಪೋಲೀಸರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು, ಬಳಿಕ ಮುಖಂಡರು ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆ. ಪ್ರತಿಭಟನೆಯ ಕೊನೆಗೆ ಪೋಲೀಸರು ಎರಡೂ ಪ್ರತಿಕೃತಿಗಳನ್ನು ತಮ್ಮ ವಾಹನದಲ್ಲಿ ತುಂಬಿಸಿ ಠಾಣೆಗೆ ಕೊಂಡೊಯ್ದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ಬಂದ್ ಗೆ ಬೆಂಬಕ ವ್ಯಕ್ತವಾಗಿಲ್ಲ. ರೈತ ಸಂಘಟನೆಗಳು ಕರಾವಳಿಯಲ್ಲಿ ಕೇವಲ ನೈತಿಕ ಬೆಂಬಲವಷ್ಟೇ ಅಂತಾ ಘೋಷಿಸಿರುವ ಕಾರಣ ಸಾರಿಗೆ, ಹೊಟೇಲ್ ಉದ್ಯಮ, ವ್ಯಾಪಾರ ಯಾವುದಕ್ಕೂ ತೊಡಕು ಉಂಟಾಗಿಲ್ಲ. ಬೆಳಗ್ಗಿನಿಂದಲೂ ಇಡೀ ಕರಾವಳಿಯಲ್ಲಿ ಜನಜೀವನ ಯಥಾಸ್ಥಿತಿ ಯಲ್ಲಿತ್ತು. ಸರ್ಕಾರಿ ಮತ್ತು ಖಾಸಗಿ ಬಸ್ ಗಳು ಎಂದಿನಂತೆ ರಸ್ತೆಗಿಳಿದವು. ಕರಾವಳಿ ಸಂಚಾರ ವ್ಯವಸ್ಥೆಯ ಪ್ರಮುಖ ಕೊಂಡಿ ಖಾಸಗಿ ಬಸ್ ಗಳು ಸಂಚಾರ ಆರಂಭಿಸಿದ ಬಳಿಕವಂತೂ ಎಲ್ಲೂ ಬಂದ್ ನ ವಾತವರಣವೇ ಕಂಡು ಬರಲಿಲ್ಲ. ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿತ್ತು. ಆಟೋ,ಕ್ಯಾಬ್ ಸಂಚಾರವೂ ಎಂದಿನಂತೆ ಇದ್ದವು.

ಇದನ್ನೂ ಓದಿ : Karnataka Bandh - ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ: ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಸವಾಲು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತಸಂಘಟನೆಗಳು, ಎಡ ಪಕ್ಷಗಳು ಅಷ್ಟಾಗಿ ಪ್ರಬಲವಾಗಿರದ ಹಿನ್ನಲೆ ಬಂದ್ ಗೆ ಯಾರೂ ಬಹಿರಂಗ ಬೆಂಬಲ ಸೂಚಿಸಿರಲಿಲ್ಲ. ಕೇವಲ ಸಾಂಕೇತಿಕ ಪ್ರತಿಭಟನೆ ಗೆ ಮಾತ್ರ ಪಕ್ಷಗಳೂ ಸಿದ್ಧತೆ ಮಾಡಿಕೊಂಡಿದ್ದವು. ಪೊಲೀಸರೂ ಬಂದೋಬಸ್ತ್ ಮಾಡಿರಲಿಲ್ಲ. ಜಿಲ್ಲೆಯಾದ್ಯಂತ ಎಲ್ಲಾ ಅಂಗಡಿಮುಂಗಟ್ಟುಗಳು ತೆರೆದಿದ್ದು, ಜನರ ದೈನಂದಿನ ಕಾರ್ಯಚಟುವಟಿಕೆಗೆ ತೊಡಕು ಉಂಟಾಗಿರಲಿಲ್ಲ.
ರೈತ ಸಂಘಟನೆಗಳು, ಕಾಂಗ್ರೆಸ್ ಸೇರಿದಂತೆ ಕೆಲ ಪಕ್ಷಗಳು ಸಾಂಕೇತಿಕ ಪ್ರತಿಭಟನೆಗಳನ್ನು ಮಾಡಿದೆ. ಕೆಲವೊಂದು ತಾಲೂಕು ಕೇಂದ್ರ ಗಳಲ್ಲಿ ಮತ್ತು ಜಿಲ್ಲಾ ಕೇಂದ್ರದಲ್ಲಿ ಮಾತ್ರ ಪ್ರತಿಭಟನೆ ನಡೆದಿದೆ. ಮಂಗಳೂರು ಮಿನಿ ವಿಧಾನಸೌಧ ಮುಂಭಾಗ ಪ್ರತಿಭಟನೆ ಮಾಡಿದೆ. ರೈತ ಮುಖಂಡರು ಪ್ರತಿಭಟನಾ ಸಭೆ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Published by: G Hareeshkumar
First published: September 28, 2020, 2:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading