ಕಲಬುರ್ಗಿ ಪೊಲೀಸರಿಂದ ಇಬ್ಬರು ಗಾಂಜಾ ಮಾರಾಟಗಾರರ ಬಂಧನ, ನಾಡ ಪಿಸ್ತೂಲ್ 2.94 ಲಕ್ಷ ನಗದು ವಶ

ಆರೋಪಿಗಳ ಹಿಂದೆ ದೊಡ್ಡ ಜಾಲವೇ ಇದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಮೊಬೈಲ್ ಮೂಲಕ ವ್ಯವಹಾರ ಕುದುರಿಸಿ ಕೊಳ್ಳುತ್ತಿದ್ದ ಆರೋಪಿಗಳು ಅವರಿಗೆ ತಲುಪಿಸಲು ತಮ್ಮದೇ ವ್ಯವಸ್ಥೆ ಮಾಡಿಕೊಂಡಿದ್ದರು. ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳು, ನೇರವಾಗಿ ಗ್ರಾಹಕರಿಗೆ ತಲುಪಿಸೋ ವ್ಯವಸ್ಥೆ ಮಾಡುತ್ತಿದ್ದರು ಎನ್ನಲಾಗಿದೆ.

news18-kannada
Updated:September 26, 2020, 7:10 AM IST
ಕಲಬುರ್ಗಿ ಪೊಲೀಸರಿಂದ ಇಬ್ಬರು ಗಾಂಜಾ ಮಾರಾಟಗಾರರ ಬಂಧನ, ನಾಡ ಪಿಸ್ತೂಲ್ 2.94 ಲಕ್ಷ ನಗದು ವಶ
ಗಾಂಜಾ ಸೊಪ್ಪು
  • Share this:
ಕಲಬುರ್ಗಿ: ಜಿಲ್ಲಾ ಪೊಲೀಸರು ಗಾಂಜಾ ಅಕ್ರಮಕಾರರ ಬೆನ್ನು ಬಿದ್ದಿದ್ದಾರೆ. ಕಾಳಗಿ ಅಕ್ರಮ ಗಾಂಜಾ ಪ್ರಕರಣದ ವೈಫಲ್ಯದಿಂದ ಎಚ್ಚೆತ್ತಿರೋ ಪೊಲೀಸರು ಗಾಂಜಾ ಅಕ್ರಮಗಳನ್ನು ಪತ್ತೆ ಹಚ್ಚುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಪೊಲೀಸರು ಮತ್ತಿಬ್ಬರು ಅಕ್ರಮಕಾರರನ್ನು ಬಲೆಗೆ ಬೀಳಿಸಿದ್ದಾರೆ. ಕಲಬುರ್ಗಿ ಜಿಲ್ಲೆ ಜೇವರ್ಗಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀರು ಇಬ್ಬರು ಗಾಂಜಾ ಮಾರಾಟಗಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಲಾಲ್‌ ಅಹ್ಮದ್ ಮತ್ತು ಚಂದ್ರಶೇಖರ ಎಂದು ಗುರುತಿಸಲಾಗಿದೆ. ಬಂಧಿತರ ಪೈಕಿ ಲಾಲ್ ಅಹ್ಮದ್ ಯಾದಗಿರಿ ಜಿಲ್ಲೆ ಠಾಣಾಗುಂಡಿ ಗ್ರಾಮದವನಾಗಿದ್ದಾನೆ. ಮತ್ತೋರ್ವನ ಆರೋಪಿ ಚಂದ್ರಶೇಖರ್ ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿ ಗ್ರಾಮದನವಾಗಿದ್ದಾನೆ.  ಬಂಧಿತರಿಂದ 10 ಸಾವಿರ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಜೊತೆಗೆ 1 ಕಂಟ್ರಿಮೇಡ್ ಪಿಸ್ತೂಲ್, ಒಂದು ಜೀವಂತ ಗುಂಡು, ಸ್ವಿಫ್ಟ್ ಕಾರು, 2.94 ಲಕ್ಷ ರೂಪಾಯಿ ನಗದು ಮತ್ತು 3 ಮೊಬೈಲ್ ಜಪ್ತಿ ಮಾಡಲಾಗಿದೆ. 

ಕಲಬುರ್ಗಿ ಗ್ರಾಮೀಣ ಡಿವೈಎಸ್ಪಿ ಟಿ.ಜೆ.ದೊಡಮನಿ ಮತ್ತು ಜೇವರ್ಗಿ ಸಿಪಿಐ ರಮೇಶ್ ರೊಟ್ಟಿ ಮಾರ್ಗದರ್ಶನದಲ್ಲಿ ಜೇವರ್ಗಿ ಪಿಎಸ್ಐ ಮಂಜುನಾಥ ಹೂಗಾರ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಕಾರಿನಲ್ಲಿ ಗಾಂಜಾ ಸಾಗಾಟ ಮಾಡ್ತಿದ್ದ ವೇಳೆ ಜೇವರ್ಗಿ-ಶಹಾಪುರ ರಸ್ತೆಯ ಆಂದೋಲ ಕ್ರಾಸ್ ಬಳಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ. ಆಂದೋಲ ಕಡೆಯಿಂದ ಕಾರಿನಲ್ಲಿ ಬಂದ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ : ಕೇಂದ್ರ ಕೃಷಿ ಮಸೂದೆ; ಸೆ.28ಕ್ಕೆ ಭಾರತ್​ ಬಂದ್​, ಇಂದಿನಿಂದ ಸೆ.29ರ ವರೆಗೆ ಪಂಜಾಬ್​ನಲ್ಲಿ ರೈಲ್​ ರೋಖೋ ಚಳುವಳಿ

ಆರೋಪಿಗಳ ಹಿಂದೆ ದೊಡ್ಡ ಜಾಲವೇ ಇದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಮೊಬೈಲ್ ಮೂಲಕ ವ್ಯವಹಾರ ಕುದುರಿಸಿ ಕೊಳ್ಳುತ್ತಿದ್ದ ಆರೋಪಿಗಳು ಅವರಿಗೆ ತಲುಪಿಸಲು ತಮ್ಮದೇ ವ್ಯವಸ್ಥೆ ಮಾಡಿಕೊಂಡಿದ್ದರು. ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪಿಗಳು, ನೇರವಾಗಿ ಗ್ರಾಹಕರಿಗೆ ತಲುಪಿಸೋ ವ್ಯವಸ್ಥೆ ಮಾಡುತ್ತಿದ್ದರು ಎನ್ನಲಾಗಿದೆ.

ಮೊಬೈಲ್ ಮೂಲಕ ವ್ಯವಹಾರ ಕುದುರಿಸಿಕೊಳ್ಳುತ್ತಿದ್ದರಲ್ಲದೆ, ಹಣವನ್ನು ನೇರವಾಗಿ ತಮ್ಮ ಖಾತೆಗೆ ಹಾಕಿಸಿಕೊಳ್ತಿದ್ದರೆಂಬ ಮಾಹಿತಿ ಸಿಕ್ಕಿದೆ. ಆರೋಪಿಗಳ ಬಳಿ ಇದ್ದ ಡೆಬಿಟ್ ಕಾರ್ಡ್ ಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೊಬೈಲ್ ಹಾಗೂ ಡೆಬಿಟ್ ಕಾರ್ಡ್ ಗಳ ವ್ಯವಹಾರ ಆಧಾರದ ಮೇಲೂ ತನಿಖೆ ನಡೆಸಲು ಪೊಲೀಸರು ತೀರ್ಮಾನಿಸಿದ್ದಾರೆ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
Published by: MAshok Kumar
First published: September 26, 2020, 7:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading