ಕೊರೋನಾ ಸೋಂಕು ಹಿನ್ನೆಲೆ ಬೆಳಗಾವಿ ಜಲಪಾತಗಳಿಗೆ ದಿಗ್ಬಂಧನ; ಪ್ರವಾಸಿಗರಿಗೆ ನಿರಾಶೆ!

ಕರ್ನಾಟಕದ ನಯಾಗಾರ ಫಾಲ್ಸ್ ಎಂದೇ ಗೋಕಾಕ್ ಫಾಲ್ಸ್ ಅನ್ನು ಕರೆಯಲಾಗುತ್ತದೆ. ಗೋಕಾಕ್ ಫಾಲ್ಸ್ ನೋಡಲು ಸದ್ಯ ಯಾವುದೇ ಅಡೆತಡೆ ಇಲ್ಲವದರೂ ಫಾಲ್ಸ್ ಬಳಿಗೆ ಹೋಗಲು ಯಾವುದೇ ಅನುಮತಿ ಇಲ್ಲ. ಹೀಗಾಗಿ ಪ್ರವಾಸಿಗರು ರಸ್ತೆ ಪಕ್ಕದ ವೀಕ್ಷಣಾ ಮಂದರಿದಲ್ಲಿ ನಿಂತು ನೋಡಿ ವಾಪಸ್ ಆಗುವ ಸ್ಥಿತಿ ನಿರ್ಮಾಣವಾಗಿದೆ.

news18-kannada
Updated:July 25, 2020, 3:33 PM IST
ಕೊರೋನಾ ಸೋಂಕು ಹಿನ್ನೆಲೆ ಬೆಳಗಾವಿ ಜಲಪಾತಗಳಿಗೆ ದಿಗ್ಬಂಧನ; ಪ್ರವಾಸಿಗರಿಗೆ ನಿರಾಶೆ!
ಬೆಳಗಾವಿ ಜಲಪಾತದ ದೃಶ್ಯ.
  • Share this:
ಬೆಳಗಾವಿ (ಜುಲೈ 25); ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಸಂಖ್ಯೆ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿದೆ. ಸೋಂಕು ತಡೆಗಟ್ಟಲು ಜಿಲ್ಲಾಡಳಿತ ಅನೇಕ ಕ್ರಮವನ್ನು ಕೈಗೊಂಡಿದೆ. ಇದರ ಭಾಗವಾಗಿ ಜಿಲ್ಲೆಯ ಅನೇಕ ಜಲಾಶಯಗಳಿಗೆ, ಪ್ರವಾಸಿ ತಾಣಗಳಿಗೆ ಪ್ರವಾಸಿಗರ ನಿಷೇಧ ಹೇರಲಾಗಿದೆ. ಇದು ಪ್ರವಾಸಿಗರಿಗೆ ತೀವ್ರ ನಿರಾಶೆಯನ್ನು ಉಂಟು ಮಾಡಿದೆ.

ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ಇತ್ತೀಚಿನ ಕೆಲ ದಿನಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಸೋಂಕು ತಡೆಗಟ್ಟಲು ಅರಣ್ಯ ಇಲಾಖೆ ಜಿಲ್ಲೆಯ ಜಲಾಶಯಗಳಿಗೆ ಪ್ರವೇಶವನ್ನು ನಿರಾಕರಿಸಿರುವುದು ಪ್ರವಾಸಿಗರಿಗೆ ಬೇಸರ ಮೂಡಿಸಿದೆ.

ಪಶ್ಚಿಮ ಘಟ ಪ್ರದೇಶದಲ್ಲಿ ಇರೋ ಜಲಪಾತಗಳ ವೈಭವ ಈಗ ನೋಡುವುದು ಒಂದು ಸೊಬಗು. ಮಳೆಗಾಲದಲ್ಲಿ ಜಲಾಶಯ ನೋಡಲು ರಾಜ್ಯ ಅಷ್ಟೇ ಅಲ್ಲ ಇತರೇ ಕಡೆಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ಆದರೇ ಸದ್ಯ ಎಲ್ಲದಕ್ಕೂ ಬ್ರೇಕ್ ಬಿದ್ದಿದ್ದು, ಪ್ರವಾಸೋದ್ಯಮ ನಂಬಿದ್ದ ಜನರಿಗೆ ಇದರಿಂದ ದೊಡ್ಡ ಹೊಡೆತ ಬಿದ್ದಿದೆ.

ಖಾನಾಪುರ ತಾಲೂಕಿನಲ್ಲಿ ಚಿಕಲೆ ಜಲಾಶಯ ನೋಡುವುದು ಒಂದು ವಿಶಿಷ್ಠ ಅನುಭವ. ದಟ್ಟ ಕಾಡಿನಲ್ಲಿ ಕಾಲ್ನಡಿಗೆಯಲ್ಲಿ ಸಾಗಿ ಜಲಾಶಯ ನೋಡಲು ಪ್ರತಿವರ್ಷ ನೂರಾರು ಪ್ರವಾಸಿಗರು ಆಗಮಿಸುತ್ತಿದ್ದರು. ಇನ್ನೂ ಚಿಕಲೆ ಪಾಲ್ಸ್, ಕಣಕುಂಬಿ ಫಾಲ್ಸ್ ಪ್ರವೇಶವನ್ನು ಅರಣ್ಯ ಇಲಾಖೆ ನಿಷೇಧಿಸಿದೆ.

ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಅಂಬೋಲಿ ಫಾಲ್ಸ್ ಪ್ರತಿ ಭಾನುವಾರು ಸಾವಿರಾರು ಜನ ರಾಜ್ಯದಿಂದ ಹೋಗುತ್ತಿದ್ದರು. ಪ್ರವಾಸಿಗರ ಪಾಲಿಗೆ ಅತ್ಯಂತ ಖುಷಿ ಕೊಡುವ ಜಲಾಶಯ ಇದು.  ಇನ್ನೂ ಅಂಬೋಲಿ ಫಾಲ್ಸ್ ಹೋಗುವ ದಾರಿಯಲ್ಲಿ ಸಿಗುವ ಕವಳೆ ಸ್ಪಾಟ್ ಒಂದು ಅದ್ಭುತ ಅನುಭವ ಉಂಟು ಮಾಡುತ್ತದೆ. ಆದರೆ, ಕೊರೋನಾ ಹಾವಳಿಯಿಂದ ಮಹಾರಾಷ್ಟ್ರ ಗಡಿ ಪ್ರವೇಶವನ್ನು ನಿಷೇಧವಿದ್ದು, ಎಲ್ಲಾ ಮೋಜು, ಮಸ್ತಿಗೆ ಬ್ರೇಕ್ ಬಿದ್ದಿದೆ.

ಕರ್ನಾಟಕದ ನಯಾಗಾರ ಫಾಲ್ಸ್ ಎಂದೇ ಗೋಕಾಕ್ ಫಾಲ್ಸ್ ಅನ್ನು ಕರೆಯಲಾಗುತ್ತದೆ. ಗೋಕಾಕ್ ಫಾಲ್ಸ್ ನೋಡಲು ಸದ್ಯ ಯಾವುದೇ ಅಡೆತಡೆ ಇಲ್ಲವದರೂ ಫಾಲ್ಸ್ ಬಳಿಗೆ ಹೋಗಲು ಯಾವುದೇ ಅನುಮತಿ ಇಲ್ಲ. ಹೀಗಾಗಿ ಪ್ರವಾಸಿಗರು ರಸ್ತೆ ಪಕ್ಕದ ವೀಕ್ಷಣಾ ಮಂದರಿದಲ್ಲಿ ನಿಂತು ನೋಡಿ ವಾಪಸ್ ಆಗುವ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ : ರಾವಣ ವಿಶ್ವದ ಮೊದಲ ವಿಮಾನಯಾನಿ?; ಶ್ರೀಲಂಕಾ ಸಂಶೋಧನೆಗೆ ಸಲ್ಲಿಕೆಯಾಯ್ತು 100ಕ್ಕೂ ಹೆಚ್ಚು ದಾಖಲೆಗಳು

ಗೋಕಾಕ್ ತಾಲೂಕಿನ ಗೊಡಚನಮಲ್ಕಿ ಫಾಲ್ಸ್ ಸಹ ಅತ್ಯಂತ ಸುಂದರವಾದ ಫಾಲ್ಸ್ ಎಂದೇ ಖ್ಯಾತಿ ಪಡೆದಿದೆ. ಈ ಫಾಲ್ಸ್ ಪ್ರವೇಶಕ್ಕೆ ಸ್ಥಳೀಯರು ನಿರ್ಭಂದ ಹೇರಿದ್ದಾರೆ. ಫಾಲ್ಸ್ ಹೋಗುವ ರಸ್ತೆಯನ್ನು ಬಂದ್ ಮಾಡಿದ್ದಾರೆ. ಪ್ರವಾಸಿಗರ ಬರೋದ್ರಿಂದ ಗ್ರಾಮದಲ್ಲಿ ಸೋಂಕು ಹರಡುವ ಭೀತಿಯಿಂದಲೇ  ಪ್ರವೇಶಕ್ಕೆ ನಿರ್ಭಂದ ಹೇರಲಾಗಿದೆ ಎನ್ನಲಾಗುತ್ತಿದೆ.
Published by: MAshok Kumar
First published: July 25, 2020, 3:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading