ಕೊರೋನಾ ಗೆದ್ದ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು; ಕರ್ತವ್ಯಕ್ಕೆ ಹಾಜರಾಗಲು ಕಾತುರ!

ಆಸ್ಪತ್ರೆಯಿಂದ ಬಿಡುಗಡೆಯಾಗಿರುವ 8 ಸಿಬ್ಬಂದಿಯ ಪೈಕಿ ಇಬ್ಬರು ಹೋಂ ಕ್ವಾರೆಂಟೈನ್ ಅವಧಿಯನ್ನೂ ಸಹ ಮುಗಿಸಿದ್ದು ಕರ್ತವ್ಯಕ್ಕೆ ಮರಳಲು ಕಾತುರರಾಗಿದ್ದಾರೆ. ಇನ್ನುಳಿದ ಆರು ಮಂದಿ ಹೋಂ ಕ್ವಾರೆಂಟೈನ್ ನಲ್ಲಿದ್ದಾರೆ ಎಂದು ತಿಳಿದುಬಂದಿದೆ.

news18-kannada
Updated:July 26, 2020, 3:07 PM IST
ಕೊರೋನಾ ಗೆದ್ದ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು; ಕರ್ತವ್ಯಕ್ಕೆ ಹಾಜರಾಗಲು ಕಾತುರ!
ವಾಯುವ್ಯ ಕರ್ನಾಟಕ ಸಾರಿಗೆ ಸಿಬ್ಬಂದಿಗಳು.
  • Share this:
ಹುಬ್ಬಳ್ಳಿ (ಜುಲೈ 26); ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ಸಾರಿಗೆ ವಿಭಾಗದ 11 ಸಿಬ್ಬಂದಿಗಳಿಗೆ ಕೊರೋನಾ ಸೋಂಕು ತಗುಲಿತ್ತು. ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಮತ್ತು ವಿವಿಧ ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಇದೀಗ ಎಲ್ಲರೂ ಗುಣಮುಖರಾಗಿದ್ದು, ಈ ಪೈಕಿ 8 ಸಿಬ್ಬಂದಿಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ 3 ಸಿಬ್ಬಂದಿ ಸಹ ಒಂದೆರಡು ದಿನಗಳಲ್ಲಿ ಬಿಡುಗಡೆಯಾಗಲಿದ್ದಾರೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್ ತಿಳಿಸಿದ್ದಾರೆ.

ಆಸ್ಪತ್ರೆಯಿಂದ ಬಿಡುಗಡೆಯಾಗಿರುವ 8 ಸಿಬ್ಬಂದಿಯ ಪೈಕಿ ಇಬ್ಬರು ಹೋಂ ಕ್ವಾರೆಂಟೈನ್ ಅವಧಿಯನ್ನೂ ಸಹ ಮುಗಿಸಿದ್ದು ಕರ್ತವ್ಯಕ್ಕೆ ಮರಳಲು ಕಾತುರರಾಗಿದ್ದಾರೆ. ಇನ್ನುಳಿದ ಆರು ಮಂದಿ ಹೋಂ ಕ್ವಾರೆಂಟೈನ್ ನಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಹುಬ್ಬಳ್ಳಿ ವಿಭಾಗದಲ್ಲಿ  ಒಟ್ಟು 2170 ಸಿಬ್ಬಂದಿಗಳಿದ್ದಾರೆ. 55 ವರ್ಷ ಮೇಲ್ಪಟ್ಟ  ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿನಾಯಿತಿ ನೀಡಲಾಗಿದೆ.  ವಯಸ್ಸಿನ ಮಿತಿಯಿಲ್ಲದೆ ಹೃದಯ ರೋಗ ಮಧುಮೇಹ, ಬಿಪಿ  ಮತ್ತಿತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ನೌಕರರಿಗೆ ರಜೆ ನೀಡಲಾಗಿದೆ. ಪ್ರತಿದಿನ ಕರ್ತವ್ಯಕ್ಕೆ ಹಾಜರಾಗುವ ಎಲ್ಲಾ ಸಿಬ್ಬಂದಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ.

ವಿಭಾಗೀಯ ಕಚೇರಿ, ವಿಭಾಗೀಯ ಕಾರ್ಯಾಗಾರ, ಬಸ್ ಘಟಕಗಳು, ಬಸ್ಸುಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ. ಸಾರಿಗೆ ಸಿಬ್ಬಂದಿಗಳು ಅದರಲ್ಲೂ ಮುಖ್ಯವಾಗಿ ಚಾಲಕರು ಮತ್ತು ರ್ವಾಹಕರು ಕರ್ತವ್ಯದ ಸಮಯದಲ್ಲಿ ನಿತ್ಯವೂ  ವಿವಿಧ ಸ್ಥರದ ಹಲವಾರು ಜನರ ಸಂಪರ್ಕಕ್ಕೆ ಬರುವ ಅನಿವಾರ್ಯತೆ ಇರುತ್ತದೆ. ಆದ್ದರಿಂದ  ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ತಿಳುವಳಿಕೆ ನೀಡಲಾಗಿದೆ.

ಕಿಮ್ಸ್ ಮತ್ತು ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿನ  ವೈದ್ಯರು ಹಾಗೂ ನರ್ಸ್ ಗಳು ನಿರಂತರವಾಗಿ ಸೋಂಕಿತ ಸಿಬ್ಬಂದಿಗಳ ಆರೋಗ್ಯ ತಪಾಸಣೆ ಮಾಡುತ್ತಾ, ಯೋಗಕ್ಷೇಮ ವಿಚಾರಿಸಿ ನಿಯಮಿತವಾಗಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಜೊತೆಗೆ ಉತ್ತಮ ಊಟೋಪಚಾರ  ಹಾಗೂ ಪ್ರಾರಂಭದಿಂದಲೇ  ಧೈರ್ಯ ಹೇಳಿ ಅವರಲ್ಲಿನ ಭಯ ನಿವಾರಿಸಿ ಆತ್ಮವಿಶ್ವಾಸ ತುಂಬಿದ್ದರಿಂದ ಎಲ್ಲರೂ ಶೀಘ್ರವಾಗಿ ಗುಣಮುಖರಾಗಲು ಕಾರಣವಾಗಿದೆ.

ಇದನ್ನೂ ಓದಿ : ಆಗಸ್ಟ್‌ 15 ರಂದು ಕೊರೋನಾ ಸೋಂಕಿನಿಂದ ಸ್ವಾತಂತ್ಯ್ರ ಪಡೆಯುವ ಸಂಕಲ್ಪ ಮಾಡೋಣ; ನರೇಂದ್ರ ಮೋದಿ


ಸಕಾಲಿಕ ನೆರವು ನೀಡಿದ ಜಿಲ್ಲಾಡಳಿತದ, ಆರೋಗ್ಯ ಇಲಾಖೆಯ ಹಾಗೂ ಕಿಮ್ಸ್ ನ ಹಿರಿಯ ಅಧಿಕಾರಿಗಳಿಗೆ ವಾಕರಸಾ ಸಂಸ್ಥೆಯ ವತಿಯಿಂದ ಕೃತಜ್ಞತೆಗಳನ್ನು ಸಲ್ಲಿಸಲಾಗಿದೆ ಎಂದು ರಾಮನಗೌಡರ ತಿಳಿಸಿದ್ದಾರೆ.
Published by: MAshok Kumar
First published: July 26, 2020, 3:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading