ಕೊರೋನಾ ತಲೆನೋವಿನಿಂದ ಮುಕ್ತಿ ಹೊಂದಿದ ರಾಯಚೂರಿನ ತಲಮಾರಿ ಗ್ರಾಮ ; ಜಿಲ್ಲಾಡಳಿತದ ದಿಟ್ಟಕ್ರಮಕ್ಕೆ ಸಿಕ್ಕಿ ಫಲ

ಜಿಲ್ಲಾಡಳಿತ ಪ್ರತ್ಯೇಕವಾಗಿ ಲಾಕ್ ಡೌನ್ ಘೋಷಣೆ ಮಾಡಿ ಗ್ರಾಮಕ್ಕೆ ಹೊರಗಿನವರು ಬಾರದಂತೆ, ಗ್ರಾಮದಿಂದ ಹೊರಗಡೆ ಹೋಗದಂತೆ ಕಠಿಣ ಕ್ರಮ‌ ಕೈಗೊಂಡಿದ್ದರು.

news18-kannada
Updated:August 26, 2020, 7:18 AM IST
ಕೊರೋನಾ ತಲೆನೋವಿನಿಂದ ಮುಕ್ತಿ ಹೊಂದಿದ ರಾಯಚೂರಿನ ತಲಮಾರಿ ಗ್ರಾಮ ; ಜಿಲ್ಲಾಡಳಿತದ ದಿಟ್ಟಕ್ರಮಕ್ಕೆ ಸಿಕ್ಕಿ ಫಲ
ತಲಮಾರಿ ಗ್ರಾಮ
  • Share this:
ರಾಯಚೂರು(ಆಗಸ್ಟ್​. 26): ರಾಯಚೂರು ತಾಲೂಕಿನಲ್ಲಿ ತಲಮಾರಿ ಎಂಬ ಗ್ರಾಮವಿದೆ, ಈ ಗ್ರಾಮದಲ್ಲಿ ಕಳೆದ ತಿಂಗಳ ಬರೋಬ್ಬರಿ 72 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದವು. ಇದರಿಂದಾಗಿ ಗ್ರಾಮದಲ್ಲಿ ಆತಂಕ ಸೃಷ್ಠಿಯಾಗಿತ್ತು, ಆದರೆ ಗ್ರಾಮಸ್ಥರು, ಜಿಲ್ಲಾಡಳಿತದ ದಿಟ್ಟ ಕ್ರಮದಿಂದಾಗಿ ಈ ಗ್ರಾಮದಲ್ಲಿ ಕೊರೋನಾ ದೂರವಾಗಿದೆ.

ಕೊರೋನಾದಿಂದ ಆಸ್ಪತ್ರೆ ಸೇರಿದವರು ಈಗ ಗುಣಮುಖರಾಗಿ ತಮ್ಮ ನಿತ್ಯ ಕೆಲಸದಲ್ಲಿ ತೊಡಗಿದ್ದಾರೆ. ತಲಮಾರಿ ಗ್ರಾಮವು ಜುಲೈ ತಿಂಗಳದಲ್ಲಿ ಕೊರೋನಾ ಭಯದಿಂದ ಆತಂಕಗೊಳ್ಳುವಂತಾಗಿತ್ತು, ಈ ಗ್ರಾಮದಲ್ಲಿ ಐದು ಮದುವೆಗಳಾಗಿರುವ ಹಿನ್ನಲೆಯಲ್ಲಿ ಹದಿನೈದು ದಿನಗಳಲ್ಲಿ ಗ್ರಾಮದಲ್ಲಿ ಬರೋಬ್ಬರಿ 72 ಜನರಲ್ಲಿ ಸೋಂಕು ಕಾಣಿಸಿಕೊಂಡಿತು.

ಸುಮಾರು 1080 ಮನೆಗಳಿರುವ ಐದು ಸಾವಿರ ಜನಸಂಖ್ಯೆ ಇರುವ ತಲಮಾರಿ ಗ್ರಾಮದಲ್ಲಿ ನಿತ್ಯ ಕೊರೋನಾ ಸೋಂಕಿತ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದವು. ಒಂದೇ ದಿನ 30 ಜನರಿಗೆ ಸೋಂಕು ದೃಡಪಟ್ಟ ನಂತರ ಏನಾದರೂ ಮಾಡಿ ನಿಯಂತ್ರಿಸಲೇ ಬೇಕೆಂದು ತೀರ್ಮಾನಿಸಿದ ಜಿಲ್ಲಾಡಳಿತ ಪ್ರತ್ಯೇಕವಾಗಿ ಲಾಕ್ ಡೌನ್ ಘೋಷಣೆ ಮಾಡಿ ಗ್ರಾಮಕ್ಕೆ ಹೊರಗಿನವರು ಬಾರದಂತೆ, ಗ್ರಾಮದಿಂದ ಹೊರಗಡೆ ಹೋಗದಂತೆ ಕಠಿಣ ಕ್ರಮ‌ ಕೈಗೊಂಡಿದ್ದರು.

ಅಲ್ಲದೆ ಸಂಪರ್ಕಿತರು, ಗ್ರಾಮದಲ್ಲಿ ವಯಸ್ಸಾದವರ ಗಂಟಲ ದ್ರವ ಪರೀಕ್ಷೆ ಮಾಡಿ ಸೋಂಕಿತರಿಗೆ ಐಸೋಲೆಷನ್ ಮಾಡಿದ್ದು, ಜಿಲ್ಲಾಧಿಕಾರಿಗಳು ಜಿಲ್ಲಾ‌ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಗ್ರಾಮದಲ್ಲಿ‌ ಕೊರೋನಾ ನಿಯಂತ್ರಣಕ್ಕೆ ಯತ್ನಿಸಿದ್ದು, ಆಗಸ್ಟ್​  ಆರಂಭದಿಂದ ಈ ಗ್ರಾಮದಲ್ಲಿ ಸೋಂಕು ಮತ್ತೆ ಪತ್ತೆಯಾಗಿಲ್ಲ.

ಇದನ್ನೂ ಓದಿ : ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ನಡುವೆ ಮುಸುಕಿನ ಗುದ್ದಾಟ..?

ಈ ಬಗ್ಗೆ ಗ್ರಾಮಸ್ಥರ ಸಹಕಾರ ಅಗತ್ಯವಾಗಿತ್ತು, ಇಲ್ಲಿಯ ಸೋಂಕಿತರ ಈಗ ಚಿಕಿತ್ಸೆಯ ನಂತರ ಸಂಪೂರ್ಣ ವಾಗಿ ಗುಣಮುಖರಾಗಿ ಬಂದಿದ್ದು ಬಹುತೇಕರು ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ. ಒಂದಿಷ್ಟು ಆತಂಕಗೊಂಡವರಲ್ಲಿ ಈಗ ಆತಂಕ ದೂರವಾಗಿದೆ. 72 ಜನರು ಈಗ ಗುಣಮುಖರಾಗಿ ಬಂದಿದ್ದಾರೆ, ಅವರೆಲ್ಲರನ್ನು ಯರಮರಸ್ ನಲ್ಲಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿ ಆರೈಕೆಗೆ ಇರಿಸಲಾಗಿತ್ತು, ಮಾತ್ರೆಗಳನ್ನು ನೀಡಿ ಗುಣಮುಖ ಮಾಡಿದ್ದು ಕೊರೋನಾ ಬಂದರೂ ನಾವು ಗುಣಮುಖರಾಗಿ ಬಂದಿದ್ದೇವೆ, ಯಾರು ಭಯ ಪಡುವುದು ಬೇಡ ಎಂದಿದ್ದಾರೆ.
ಕೊರೋನಾ ತಗುಲಿದಾಗ ಭಯ ಪಡದೇ ಧೈರ್ಯದಿಂದ ಇರಬೇಕು, ಸರಕಾರ ಸೂಚಿಸಿದ ಮಾರ್ಗಸೂಚಿಯನ್ನು ಪಾಲಿಸಿದರೆ ಕೊರೋನಾ ಗೆಲ್ಲಬಹುದು ಎಂಬುವದಕ್ಕೆ ಈ ಗ್ರಾಮ ಸಾಕ್ಷಿಯಾಗಿದೆ.
Published by: G Hareeshkumar
First published: August 26, 2020, 7:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading