ವಿಜಯಪುರದಲ್ಲಿ ಆಂಬುಲೆನ್ಸ್ ಅಪಘಾತ; ಸ್ಟಾಫ್​ನರ್ಸ್ ಗಂಭೀರ ಗಾಯ; ಗರ್ಭಿಣಿ ಅದೃಷ್ಟವಶಾತ್ ಪಾರು

ಶುಕ್ರವಾರ ಬೆಳಗ್ಗೆ 5ಗಂಟೆಗೆ ಗರ್ಭಿಣಿಯೊಬ್ಬರನ್ನು ವಿಜಯಪುರದ ಆಸ್ಪತ್ರೆಗೆ ಸಾಗಿಸುತ್ತಿದ್ದ ಆಂಬುಲೆನ್ಸ್ ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಸ್ಟಾಫ್​ ನರ್ಸ್​ವೊಬ್ಬರಿಗೆ ಗಂಭೀರ ಗಾಯವಾಗಿದೆ. ಅದೃಷ್ಟಕ್ಕೆ ಗರ್ಭಿಣಿ ಸುರಕ್ಷಿತವಾಗಿದ್ದಾರೆ.

news18-kannada
Updated:September 18, 2020, 1:56 PM IST
ವಿಜಯಪುರದಲ್ಲಿ ಆಂಬುಲೆನ್ಸ್ ಅಪಘಾತ; ಸ್ಟಾಫ್​ನರ್ಸ್ ಗಂಭೀರ ಗಾಯ; ಗರ್ಭಿಣಿ ಅದೃಷ್ಟವಶಾತ್ ಪಾರು
ವಿಜಯಪುರದಲ್ಲಿ ಸಂಭವಿಸಿದ ಅಪಘಾತ
  • Share this:
ವಿಜಯಪುರ(ಸೆ. 18): ಗರ್ಭಿಣಿ ಮಹಿಳೆಯನ್ನು ಸಾಗಿಸುತ್ತಿದ್ದ ಆ್ಯಂಬ್ಯೂಲನ್ಸ್ ಅಪಘಾತವಾಗಿ ಕೊರೊನಾ ವಾರಿಯರ್​ವೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ವಿಜಯಪುರ ನಗದ ಹೊರವಲಯದ ರೇಡಿಯೋ ಕೇಂದ್ರದ ಬಳಿ ನಡೆದಿದೆ.

ಇಂದು ನಸುಕಿನ ಜಾವ 5 ಗಂಟೆಯ ಸುಮಾರಿಗೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಿಂದ ವಿಜಯಪುರ ಜಿಲ್ಲಾಸ್ಪತ್ರೆಗೆ ಗರ್ಭಿಣಿ ಮಹಿಳೆಯನ್ನು ಆ್ಯಂಬ್ಯೂಲನ್ಸ್ ಕರೆ ತರುತ್ತಿತ್ತು.  ಈ ಸಂದರ್ಭದಲ್ಲಿ ರೇಡಿಯೋ ಮೈದಾನದ ಬಳಿ ಕೆಟ್ಟು ನಿಂತಿದ್ದ ಲಾರಿಗೆ ಆ್ಯಂಬ್ಯೂಲನ್ಸ್ ಹಿಂದಿನಿಂದ ಜೋರಾಗಿ ಢಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ EMT ಸ್ಟ್ಯಾಫ್ ನರ್ಸ್ ತುಳಸಿ ಎಂಬುವರ ತಲೆಗೆ ಗಂಭೀರ ಗಾಯವಾಗಿದೆ. ಆ್ಯಂಬ್ಯೂಲನ್ಸ್ ಚಾಲಕ ಶ್ರೀಶೈಲ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗರ್ಭಿಣಿ ಮಹಿಳೆ ಅದೃಷ್ಠವಶಾತ್ ಯಾವುದೇ ಸಮಸ್ಯೆ ಇಲ್ಲದೆ ಪಾರಾಗಿದ್ದಾಳೆ. ಗರ್ಭಿಣಿ ಮಹಿಳೆಯನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಸಾವಿರಾರು ಚೀನೀಯರಲ್ಲಿ ಪುರುಷತ್ವ ನಾಶಮಾಡಬಲ್ಲ ಬ್ಯಾಕ್ಟೀರಿಯಾ ಸೋಂಕು ಪತ್ತೆ

ಗಂಭೀರವಾಗಿ ಗಾಯಗೊಂಡ ಸ್ಟಾಫ್ ನರ್ಸ್ ತುಳಸಿ ಅವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ರವಾನೆ ಮಾಡಲಾಗಿದೆ. ಈ ಅಪಘಾತ ನಡೆದರೂ ಯಾರೊಬ್ಬ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದಿಲ್ಲ ಮತ್ತು ಗಾಯಗೊಂಡಿರುವ ಕೊರೊನಾ ವಾರಿಯರ್ ಪರಿಸ್ಥಿತಿಯನ್ನು ವಿಚಾರಿಸಿಲ್ಲ ಎಂದು ಸಿಬ್ಬಂದಿ ಆಕ್ರೋಶ ಹೊರ ಹಾಕಿದ್ದಾರೆ.

ವರದಿ: ಮಹೇಶ ವಿ. ಶಟಗಾರ
Published by: Vijayasarthy SN
First published: September 18, 2020, 1:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading