ಶಾಲೆಗೆ ಹೋಗದೆ ಇದ್ದಿದ್ದರೆ , ಲಾಯರ್ ಆಗುತ್ತಿರಲಿಲ್ಲ, ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ : ಸಿದ್ದರಾಮಯ್ಯ

ಶಿಕ್ಷಕರು ಪಠ್ಯ ಪಠ್ಯೇತರ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಹೇಳುವ ಮೂಲಕ ಜಾಗೃತರನ್ನಾಗಿಸಬೇಕು. ಅರಿವು ವಿಸ್ತಾರವಾಗಬೇಕೆಂದರೆ ಕತ್ತಲಿನಿಂದ ಬೆಳಕಿನೆಡೆಗೆ ಹೋಗುವುದು ಶಿಕ್ಷಣದಿಂದ ಮಾತ್ರ ಸಾಧ್ಯ

news18-kannada
Updated:September 15, 2020, 4:06 PM IST
ಶಾಲೆಗೆ ಹೋಗದೆ ಇದ್ದಿದ್ದರೆ , ಲಾಯರ್ ಆಗುತ್ತಿರಲಿಲ್ಲ, ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ : ಸಿದ್ದರಾಮಯ್ಯ
ಸಿದ್ದರಾಮಯ್ಯ
  • Share this:
ಬಾಗಲಕೋಟೆ(ಸೆಪ್ಟೆಂಬರ್. 15): ನನ್ನನ್ನು ರಾಜಪ್ಪ ಮೇಸ್ಟ್ರು ನೇರವಾಗಿ ಐದನೇ ತರಗತಿಗೆ ಸೇರಿಸಿದರು. ಒಂದು ವೇಳೆ ನಾನು ಶಾಲೆಗೆ ಹೋಗದೆ ಇದ್ದಿದ್ದರೆ, ಲಾಯರ್ ಆಗುತ್ತಿರಲಿಲ್ಲ, ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಬಾಲ್ಯದ ಶಿಕ್ಷಣವನ್ನು ಮೆಲುಕು ಹಾಕಿದರು. ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ಕರನಂದಿ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿದರು. ನಾನು ಕಾನೂನು ಕಾಲೇಜಿನಲ್ಲಿ ಉಪನ್ಯಾಸಕನಾಗಿದ್ದೆ, ನಾವು ಚಿಕ್ಕವರಿದ್ದಾಗ ಶಿಕ್ಷಕರ ಮನೆಯಲ್ಲಿ ನೀರು ತುಂಬುವದು, ಸೇರಿದಂತೆ ಇತರೆ ಶಿಕ್ಷಕರ ಸೇವೆ ಮಾಡುತ್ತಿದ್ದೇವು. ಈಗ ಯಾರು ಗುರಿವಿನ ಸೇವೆ ಮಾಡುವುದಿಲ್ಲ ಎಂದರು. ನನ್ನ ಜೀವನದಲ್ಲಿ ರಾಜಪ್ಪ ಮೇಸ್ಟ್ರುರನ್ನು ಮರೆಯಲು ಸಾಧ್ಯವಿಲ್ಲ. ಶಿಕ್ಷಕರು ಕೂಡಾ ಮಕ್ಕಳಾಗಿ ಕಲಿಸಬೇಕು, ನಾವು ಶಿಕ್ಷಕರು ಆಗಿದ್ದೇವೆ ಎಂದ ಮಾತ್ರಕ್ಕೆ ಎಲ್ಲವೂ ಗೊತ್ತು ಎಂದೆಲ್ಲ‌‌. ಮಕ್ಕಳ ಜೊತೆಗೂ ಕಲಿಯಬೇಕಾಗುತ್ತದೆ. ಶಿಕ್ಷಕರು ಮಕ್ಕಳಲ್ಲಿ ವೈಚಾರಿಕತೆ ಮೂಡಿಸಿ, ವಿದ್ಯಾವಂತರನ್ನಾಗಿ ಮಾಡಬೇಕು ಎಂದರು.

ಇತಿಹಾಸವನ್ನು ಯಾರು ತಿರುಚಬಾರದು, ಇತಿಹಾಸವನ್ನು ತಿರುಚುವವರು ಇತಿಹಾಸವನ್ನು ಸೃಷ್ಟಿಸಲಾರರು. ಇತಿಹಾಸದಲ್ಲಿರುವದನ್ನು ಇದ್ದಂತೆ ಹೇಳಬೇಕು, ಆದರೆ, ಕಡಿತ, ಮತ್ತೇನೋ ವೈಭವಿಕರಿಸಿ ಹೇಳಬಾರದು ಎಂದು ಸೂಚ್ಯವಾಗಿ ಇತಿಹಾಸ ಪಠ್ಯ ಕಡಿತವನ್ನು ಸಿದ್ದರಾಮಯ್ಯ ವಿರೋಧಿಸಿದರು.

ಶಿಕ್ಷಕರು ಪಠ್ಯ ಪಠ್ಯೇತರ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಹೇಳುವ ಮೂಲಕ ಜಾಗೃತರನ್ನಾಗಿಸಬೇಕು. ಅರಿವು ವಿಸ್ತಾರವಾಗಬೇಕೆಂದರೆ ಕತ್ತಲಿನಿಂದ ಬೆಳಕಿನೆಡೆಗೆ ಹೋಗುವುದು ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣ ಮೂಲಭೂತ ಹಕ್ಕಾಗಿದೆ. ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಕಾರ್ಯ ಮಾಡಬೇಕೆಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು. ನಾನು ಹೇಳುವುದು ಪಥ್ಯ ಅಪಥ್ಯವೆನಿಸಬಹುದು ಹಾಗಾಗಿ ಶಿಕ್ಷಕರು ಮೆಲುಕು ಹಾಕಿಕೊಳ್ಳಿ ಎಂದರು.

ಕುಡಿಯುವ ನೀರಿನ ಕಾಮಗಾರಿ ವೀಕ್ಷಣೆ

ಆಲಮಟ್ಟಿ ಜಲಾಶಯದಿಂದ ಬಾದಾಮಿ ಕ್ಷೇತ್ರಕ್ಕೆ ಕುಡಿಯುವ ನೀರು ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, 227ಕೋಟಿ ವೆಚ್ಚದಲ್ಲಿ ಬಾದಾಮಿ, ಗುಳೇದಗುಡ್ಡ, ಕೆರೂರು ಪಟ್ಟಣ ಸೇರಿದಂತೆ ಮಾರ್ಗ ಮಧ್ಯೆ 16 ಗ್ರಾಮಗಳಿಗೆ ಕುಡಿಯುವ ನೀರು ಯೋಜನೆ ಜಾರಿಯಲ್ಲಿದ್ದು, ಬಾದಾಮಿ ಪಟ್ಟಣದ ಹೊರವಲಯದಲ್ಲಿ ಮೇಲ್ಮಟ್ಟ ಜಲ ಸಂಗ್ರಹಣಾ ಘಟಕದ ಕಾಮಗಾರಿ, ಜೊತೆಗೆ ಗುಳೇದಗುಡ್ಡ ಪಟ್ಟಣಕ್ಕೆ ತೆರಳುವ ಮಾರ್ಗ ಮಧ್ಯೆ ತೋಗುಣಸಿ ಗ್ರಾಮದ ಬಳಿ ಕಾಮಗಾರಿ ಪರಿಶೀಲಿಸಿದರು.

ಈ ವೇಳೆ ಗುತ್ತಿಗೆದಾರ ಚಂದ್ರಪ್ಪ ಎಂಬುವರಿಗೆ ಯಾವಾಗ ಕಾಮಗಾರಿ ಮುಗಿಯಿಸುತ್ತಿರಿ ಎಂದು ಸಿದ್ದರಾಮಯ್ಯ ಕೇಳಿದರು. ಆಗ ಗುತ್ತಿಗೆದಾರ, ಮಾರ್ಚ್ ಒಳಗೆ ಪೈಪ್ ಲೈನ್ ಕಾಮಗಾರಿ ಮುಗಿಯುತ್ತೇ, ಜಾಕ್ ವೆಲ್ ನಿರ್ಮಾಣಕ್ಕೆ ಕಾಲಾವಕಾಶ ಬೇಕಾಗುತ್ತೆಂದರು. ಕಾಮಗಾರಿ ಗುಣಮಟ್ಟದಿಂದ ಮಾಡುವಂತೆ ಅಧಿಕಾರಿಗಳು, ಗುತ್ತಿಗೆದಾರರಿಗೆ ಸಿದ್ದರಾಮಯ್ಯ ಸೂಚಿಸಿದರು.

ಇದನ್ನೂ ಓದಿ : ವಯಸ್ಸು ಮೀರುತ್ತಿದೆ ನಮ್ಮನ್ನ ಕೈ ಬಿಡಬೇಡಿ : ಪೊಲೀಸ್‌ ನೇಮಕಾತಿಗೆ ವಯೋಮಿತಿ ಹೆಚ್ಚಳಕ್ಕೆ ಆಕಾಂಕ್ಷಿಗಳ ಆಗ್ರಹಕಾಮಗಾರಿ ಪರಿಶೀಲನೆ ವೇಳೆ ಸಿದ್ದರಾಮಯ್ಯ ಅವರಿಗೆ ಮಗ ಶಾಸಕ ಡಾ. ಯತೀಂದ್ರ, ಮಾಜಿ ಸಚಿವ ಬಿ ಬಿ ಚಿಮ್ಮನಕಟ್ಟಿ,ಎಚ್ ವೈ ಮೇಟಿ, ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಸೇರಿದಂತೆ ಮುಖಂಡರು ಸಾಥ್​ ನೀಡಿದ್ದರು.

ಇನ್ನು ಕ್ಷೇತ್ರ ತ್ಯಾಗ ಮಾಡಿದ್ದ ಮಾಜಿ ಸಚಿವ ಬಿ ಬಿ ಚಿಮ್ಮನಕಟ್ಟಿ, ಸಿದ್ದರಾಮಯ್ಯ ಆಪ್ತ ಹೊಸಬಸು ಶೆಟ್ಟರ್ ಕ್ಷೇತ್ರದಲ್ಲಿ ಮೂಗುತೂರಿಸುವದಕ್ಕೆ  ಚಿಮ್ಮನಕಟ್ಟಿ  ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನಿನ್ನೆ ರಾತ್ರಿ ಚಿಮ್ಮನಕಟ್ಟಿ ಮನೆಗೆ ಭೇಟಿ ನೀಡಿ, ಅಸಮಾಧಾನ, ವೈಮನಸ್ಸು ನಿಟ್ಟಿನಲ್ಲಿ ಚಿಮ್ಮನಕಟ್ಟಿ ಜೊತೆ ಸಿದ್ದರಾಮಯ್ಯ 15 ನಿಮಿಷಕ್ಕೂ ಹೆಚ್ಚು ಕಾಲ ಮಾತುಕತೆ ನಡೆಸಿ, ಕೊನೆಗೆ ಬಿ ಬಿ ಚಿಮ್ಮನಕಟ್ಟಿ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯ ನಡೆಸುವ ಭರವಸೆ ನೀಡಿ ಸಿದ್ದರಾಮಯ್ಯ ಮನವೊಲಿಸಿದರು.

ನಿನ್ನೆ ಕ್ಷೇತ್ರಕ್ಕೆ ಸಿದ್ದರಾಮಯ್ಯ ಭೇಟಿ ವೇಳೆ ಬಿ ಬಿ ಚಿಮ್ಮನಕಟ್ಟಿ ದೂರ ಉಳಿದಿದ್ದರು. ಮನವೊಲಿಕೆ ಹಿನ್ನೆಲೆಯಲ್ಲಿ ಇವತ್ತು ಬಿ ಬಿ ಚಿಮ್ಮನಕಟ್ಟಿ , ಸಿದ್ದರಾಮಯ್ಯ ಜೊತೆಗೆ ಕಾರಿನಲ್ಲಿ ಮುಂದೆ ಕುಳಿತು ಕ್ಷೇತ್ರದಲ್ಲಿ ಓಡಾಟ ನಡೆಸಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಸಿದ್ದರಾಮಯ್ಯ ಆಪ್ತ ಗುಳೇದ ಗುಡ್ಡದ ಹೊಳೆ ಬಸು ಶೆಟ್ಟರ್ ನಿನ್ನೆಯಿಂದ ಸಿದ್ದರಾಮಯ್ಯ ಜೊತೆಗೆ ಕ್ಷೇತ್ರದ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದಕ್ಕೆ ಕಾರ್ಯಕರ್ತರಲ್ಲಿ ಗುಸುಗುಸು ಮಾತುಗಳು ಕೇಳಿ ಬಂದಿವು.
Published by: G Hareeshkumar
First published: September 15, 2020, 4:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading