ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಬದುಕನ್ನು ತ್ಯಾಗ ಮಾಡಿದವರಿಗೆ ಇನ್ನೂ ಸಿಕ್ಕಿಲ್ಲ ಬೆಳಕು

ಸುಮಾರು 500 ಎಕರೆ ಪ್ರದೇಶದಲ್ಲಿ 110 ಕುಟುಂಬಗಳು ಇಲ್ಲಿ ಕೃಷಿ ಮಾಡಿಕೊಂಡೇ ಜೀವನ ನಡೆಸುತ್ತಿದ್ದಾರೆ. ಸಚಿವರು, ಮುಖ್ಯಮಂತ್ರಿಗಳು, ಈ ಗ್ರಾಮಕ್ಕೆ ಭೇಟಿ ನೀಡಿದ್ದು, ಬರವಸೆ ಕೊಟ್ಟಿದ್ದು, ಬಿಟ್ಟರೆ, ಇವರ ಬದುಕು ಮಾತ್ರ ಹಸನಾಗಲಿಲ್ಲ

news18-kannada
Updated:September 13, 2020, 3:21 PM IST
ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಬದುಕನ್ನು ತ್ಯಾಗ ಮಾಡಿದವರಿಗೆ ಇನ್ನೂ ಸಿಕ್ಕಿಲ್ಲ ಬೆಳಕು
ಶೆಟ್ಟಿಹಳ್ಳಿ ಗ್ರಾಮ
  • Share this:
ಶಿವಮೊಗ್ಗ(ಸೆಪ್ಟೆಂಬರ್​. 13): ರಾಜ್ಯಕ್ಕೆ ವಿದ್ಯುತ್ ನೀಡಲು ತಮ್ಮದೆಲ್ಲವನ್ನು ತ್ಯಾಗ ಮಾಡಿದ್ದರು. ಇಂದಿಗೂ ಇವರ ಮನೆಯಲ್ಲಿ ಬೆಳಗಲಿಲ್ಲ ವಿದ್ಯುತ್ ದೀಪಗಳು. ಜಿಲ್ಲಾ ಕೇಂದ್ರದಿಂದ ಹತ್ತಿರದಲ್ಲೇ ಇದ್ದರೂ, ಬಸ್ಸಿನ ವ್ಯವಸ್ಥೆ ಇಲ್ಲ, ರಸ್ತೆ ಸಂಪರ್ಕವಿಲ್ಲ. ನೆಂಟರು, ಸಂಬಂಧಿಕರು ಈ ಗ್ರಾಮಕ್ಕೆ ಬರಬೇಕು ಎಂದರೆ, ಅರಣ್ಯ ಇಲಾಖೆಯ ಅನುಮತಿ ಬೇಕು. ಇಲ್ಲವೇ ಅವರನ್ನು ಕರೆ ತರಲು ಗ್ರಾಮಸ್ಥರು ಚೆಕ್ ಫೋಸ್ಟ್ ಬಳಿ ನಿಂತಿರಬೇಕು. ಅಕ್ಷರ ಸಹ ಕಾಡಿನ ಮಧ್ಯದಲ್ಲೇ ಇವರ ಜೀವನ ಕತ್ತಲಾಗಿದೆ. ಶೆಟ್ಟಿಹಳ್ಳಿ, ಚಿತ್ರ ಶೆಟ್ಟಿಹಳ್ಳಿ ಗ್ರಾಮಗಳು, ಜಿಲ್ಲಾ ಕೇಂದ್ರದಿಂದ ಕೇವಲ 15 ಕಿ.ಮೀ ದೂರದಲ್ಲಿದೆ. ದಟ್ಟ ಅರಣ್ಯದ ನಡುವೆ ಸುಂದರ ಪರಿಸರದಲ್ಲಿ 110 ಕುಟುಂಬಗಳು ನೆಲೆಸಿವೆ. ಸರಿ ಸುಮಾರು 1960ರಲ್ಲಿ ಈ ಕಾಡಿಗೆ ಇವರನ್ನು ಲಾರಿಗಳ ಮೂಲಕ ತಂದು ಬಿಟ್ಟು ಹೋಗಲಾಯಿತು. ಅಂದಿನಿಂದ ಇಂದಿನವರೆಗೆ ಇವರ ಬದುಕು ದುಸ್ತರ ಸ್ಥಿತಿಯಲ್ಲೇ ನಡೆಯುತ್ತಿದೆ. 110 ಕುಟುಂಬಗಳು ರಾಜ್ಯಕ್ಕೆ ವಿದ್ಯುತ್ ಯೋಜನೆಗಾಗಿ ಜಮೀನು ಮನೆ, ಆಸ್ತಿಪಾಸ್ತಿ ಗಳನ್ನು ಕಳೆದು ಕೊಂಡಿದ್ದರು. ಲಿಂಗನಮಕ್ಕಿ ಜಲಾಶಯಕ್ಕಾಗಿ ಸಂಪೂರ್ಣ ಬುದುಕನ್ನು ತ್ಯಾಗ ಮಾಡಿದ್ದರು.

ರಾಜ್ಯದ ಕತ್ತಲೆ ನಿವಾರಿಸಲು, ತಮ್ಮ ಬದುಕು ಕೊಟ್ಟ ಇವರು ಈಗ ಕತ್ತಲೆಯಲ್ಲಿ ಜೀವನ ನಡೆಸುತ್ತಿದ್ದಾರೆ. ನಾಡಿಗೆ ಬೆಳಕನ್ನು ನೀಡಲು ತಮ್ಮ ಬದುಕಿನ ನೆಲೆಯನ್ನು ಕಳೆದಕೊಂಡಿರುವ, ಇವರಿಗೆ ಸರಿಯಾದ ಪುನರ್ವಸತಿ ಮತ್ತು ಪರಿಹಾರವನ್ನು ಕಾಣದೆ ಆದೇ ಕರಾಳ ನೆನಪುಗಳೊಂದಿಗೆ ಬುದುಕು ಸಾಗಿಸುತ್ತಿದ್ದಾರೆ. ಮೂಲಭೂತ ಸೌಕರ್ಯಗಳು ಇಲ್ಲದೇ ಕಾಡಿನಲ್ಲಿ ಪ್ರಾಣಿಗಳಂತೆ ಜೀವನ ನಡೆಸುತ್ತಿದ್ದಾರೆ. ಲಿಂಗನಮಕ್ಕಿ ಯೋಜನೆಯಿಂದ ಮುಳುಗಡೆಯಾದ ಕುಟುಂಬಗಳು ಸ್ವಲ್ಪ ಪ್ರಮಾಣದಲ್ಲಿ ಶೆಟ್ಟಿಹಳ್ಳಿ ಭಾಗದಲ್ಲಿ ನೆಲೆ ಕಂಡು ಕೊಂಡಿವೆ. ಅದರೆ ಅನೇಕ ಸಮಸ್ಯೆಗಳನ್ನು ಈ ಭಾಗದ ಜನರು ಇಂದಿಗೂ ಅನುಭವಿಸುತ್ತಿದ್ದಾರೆ.ವಿದ್ಯುತ್ ಸಮಸ್ಯೆ, ಸೂಕ್ತ ರಸ್ತೆ ಸಾರಿಗೆ ಸಂಪರ್ಕ ವ್ಯವಸ್ಥೆ ಇಲ್ಲದಿರುವುದು. ಇಂದಿಗೂ ಈ ಗ್ರಾಮಗಳಿಗೆ ವಿದ್ಯುತ್ ವ್ಯವಸ್ಥೆ ಇಲ್ಲ ಎಂದರೆ ಎಲ್ಲರೂ ನಂಬಲೇ ಬೇಕು. ಕಳೆದ 5 ವರ್ಷಗಳಿಂದ ಸೋಲಾರ್ ವ್ಯವಸ್ಥೆ ಮಾಡಲಾಗಿದೆ. ರಸ್ತೆಯಂತೂ ಇಲ್ಲವೇ ಇಲ್ಲ, ಕಲ್ಲು, ಮುಳ್ಳು, ಗುಂಡಿಯ ಹಾದಿಯಲ್ಲೇ ಸಾಗಬೇಕು. ಮಕ್ಕಳ ಶಿಕ್ಷಣಕ್ಕಾಗಿ ಇವರ ಪಡುತ್ತಿರುವ ಕಷ್ಟ ಹೇಳ ತೀರದು. ಸುಮಾರು 500 ಎಕರೆ ಪ್ರದೇಶದಲ್ಲಿ 110 ಕುಟುಂಬಗಳು ಇಲ್ಲಿ ಕೃಷಿ ಮಾಡಿಕೊಂಡೇ ಜೀವನ ನಡೆಸುತ್ತಿದ್ದಾರೆ. ಸಚಿವರು, ಮುಖ್ಯಮಂತ್ರಿಗಳು, ಈ ಗ್ರಾಮಕ್ಕೆ ಭೇಟಿ ನೀಡಿದ್ದು, ಬರವಸೆ ಕೊಟ್ಟಿದ್ದು, ಬಿಟ್ಟರೆ, ಇವರ ಬದುಕು ಮಾತ್ರ ಹಸನಾಗಲಿಲ್ಲ.

ಇದನ್ನೂ ಓದಿ : ಜೆಡಿಎಸ್ ಶಾಸಕರು ಕೊಲಂಬೋದ ಕ್ಯಾಸಿನೋಗೆ ಹೋಗಿದ್ದು ರಾಜಕೀಯ ಚರ್ಚೆಗೆ: ಬಸವರಾಜ ಹೊರಟ್ಟಿ

ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆ ಕಾಯ್ದೆ ಕಾನೂನುಗಳು ಕಠಿಣವಾಗುತ್ತಿದ್ದ ಆಗ ಇವರ ಜೀವನ ಮತ್ತಷ್ಟು ದುಸ್ತರವಾಗುತ್ತಿದೆ. ಹೊಸ ಮನೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಹೊಲ, ಗದ್ದೆಗಳಿಗೆ ಬೋರ್ ವೆಲ್ ತೆಗೆಸಲು ಅನುಮತಿ ಸಿಗುತ್ತಿಲ್ಲ. ಇರುವಂತ ಬೋರ್ ವೆಲ್ ಗಳಿಗೆ ವಿದ್ಯುತ್ ಸೌಲಭ್ಯವಿಲ್ಲ, ಸೋಲಾರ್ ಶಕ್ತಿಯಿಂದ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಿ 6 ತಿಂಗಳು ಇವರ ಸಮಸ್ಯೆ ದುಪ್ಪಟ್ಟಾಗುತ್ತದೆ. ಮಳೆಗಾಲದ್ಲಲೇ ಈ ಊರಿಗೆ ಹೋಗುವುದೇ ಒಂದು ಸಾಹಸದ ಕೆಲಸವಾಗಿದೆ.
ಸಿಎಂ ತವರು ಜಿಲ್ಲೆಯಲ್ಲೇ ಇಂತಹ ಕಷ್ಟು ಅನುಭವಿಸುತ್ತಿರುವ ಜನರ ಪಾಲಿಗೆ ಸರ್ಕಾರ ಇದ್ದು ಇಲ್ಲದಂತಾಗಿದೆ. ಯಡಿಯೂರಪ್ಪ ಸಿಎಂ ಸಹ ಆಗಿದ್ದಾರೆ. ಅವರು ಮನಸ್ಸು ಮಾಡಿದರೆ, ಶೆಟ್ಟಿಹಳ್ಳಿ ಗ್ರಾಮದ ಜನರಿಗೆ ಹೊಸ ಬದುಕು ಕಲ್ಪಿಸಬಹುದು. ಇಲ್ಲದೇ ಹೋದರೆ, ಆಭಯಾರಣ್ಯದೊಳಗಿನ ಕೂಗು, ಆಗೆ ಕಮರಿ ಹೋಗಲಿದೆ.
Published by: G Hareeshkumar
First published: September 13, 2020, 3:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading