ಉಡುಪಿ ಜಿಲ್ಲೆಯಲ್ಲಿ ಲಾಕ್​ಡೌನ್ ಬದಲಾಗಿ ಗಡಿಗಳು ಸೀಲ್​ಡೌನ್; ಜಿಲ್ಲಾಧಿಕಾರಿ ಜಿ.ಜಗದೀಶ್ ಅಧಿಕೃತ ಆದೇಶ

ಧಾರ್ಮಿಕ ಕೇಂದ್ರಗಳಿಲ್ಲಿ 20 ಕ್ಕಿಂತ ಹೆಚ್ಚು ಜ‌ನ ಸೇರುವಂತಿಲ್ಲ, ವಿಶೇಷ ಪೂಜೆ, ಸಮಾರಂಭ ಕಾರ್ಯಕ್ರಮ ಮಾಡುವಂತಿಲ್ಲ ಸರಕಾರ ಆದೇಶದಂತೆ ಭಾನುವಾರ ಸಂಪೂರ್ಣ ಲಾಕ್ ಡೌನ್ ಇರುತ್ತದೆ ಎಂದರು.

news18-kannada
Updated:July 14, 2020, 7:10 PM IST
ಉಡುಪಿ ಜಿಲ್ಲೆಯಲ್ಲಿ ಲಾಕ್​ಡೌನ್ ಬದಲಾಗಿ ಗಡಿಗಳು ಸೀಲ್​ಡೌನ್; ಜಿಲ್ಲಾಧಿಕಾರಿ ಜಿ.ಜಗದೀಶ್ ಅಧಿಕೃತ ಆದೇಶ
ಸಾಂದರ್ಭಿಕ ಚಿತ್ರ
  • Share this:
ಉಡುಪಿ(ಜು.14): ಉಡುಪಿ ಜಿಲ್ಲೆಯಲ್ಲಿ ನಾಳೆಯಿಂದ ಲಾಕ್ ಡೌನ್ ಬದಲಾಗಿ ಜಿಲ್ಲೆಯ ಗಡಿಗಳನ್ನು ಸೀಲ್​​​ಡೌನ್ ಮಾಡಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಈ ಆದೇಶ ನಾಳೆ 8 ಗಂಟೆಯಿಂದ 14ದಿನಗಳವರೆಗೆ ಜಾರಿಯಲ್ಲಿರುತ್ತದೆ.

ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ‌ ಡಿಸಿ‌ ಜಿ.ಜಗದೀಶ್ ಲಾಕ್​ಡೌನ್ ಬೇಡ ಎನ್ನುವ ಅಭಿಪ್ರಾಯ ಜಿಲ್ಲೆಯ ಜನ ಪ್ರತಿನಿಧಿಗಳಿಂದ ವ್ಯಕ್ತವಾಗಿದೆ. ಹೀಗಾಗಿ  ಜಿಲ್ಲೆಯ ಗಡಿಯನ್ನು ಸೀಲ್ ಡೌನ್ ಮಾಡಬೇಕು ಎನ್ನುವ ತೀರ್ಮಾನ ಮಾಡಿದ್ದೇವೆ.  ಹೀಗಾಗಿ ಜಿಲ್ಲೆಗೆ ಬರುವವರು ಇದ್ದರೆ ನಾಳೆ‌ ರಾತ್ರಿ 8 ಗಂಟೆ ಮುಂಚೆ ಬರಬೇಕು.‌ ತುರ್ತು ವೈದ್ಯಕೀಯ ಅವಶ್ಯಕತೆಗೆ ಗಡಿ ನಿರ್ಬಂಧ ಇಲ್ಲ. ಸಾರ್ವಜನಿಕ ಸಾರಿಗೆ ನಿರ್ಬಂಧ ಮಾಡಲಾಗುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಯಾವುದೇ ಸಂತೆ ಮಾಡುವುದಕ್ಕೆ ಅವಕಾಶ ಇಲ್ಲ. ಅಂಗಡಿ ಮುಂಗಟ್ಟುಗಳನ್ನ ಮಾಲಿಕರೇ ಬಂದ್ ಮಾಡಿದ್ದಲ್ಲಿ ಅದಕ್ಕೆ ಅವಕಾಶ ಇದೆ.‌ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ.‌ ಸಾರ್ವಜನಿಕ ಹಬ್ಬ ಆಚರಣೆಗೆ ಅವಕಾಶ ಇಲ್ಲ, ಮನೆಯಲ್ಲಿ ಹಬ್ಬ ಮಾಡಬಹುದು.‌ ಧಾರ್ಮಿಕ ಕೇಂದ್ರಗಳಿಲ್ಲಿ 20 ಕ್ಕಿಂತ ಹೆಚ್ಚು ಜ‌ನ ಸೇರುವಂತಿಲ್ಲ, ವಿಶೇಷ ಪೂಜೆ, ಸಮಾರಂಭ ಕಾರ್ಯಕ್ರಮ ಮಾಡುವಂತಿಲ್ಲ ಸರಕಾರ ಆದೇಶದಂತೆ ಭಾನುವಾರ ಸಂಪೂರ್ಣ ಲಾಕ್ ಡೌನ್ ಇರುತ್ತದೆ ಎಂದರು.

ತರಕಾರಿ ವ್ಯಾಪಾರಿಯ ಮಗಳ ಸಾಧನೆ; ವಿಜ್ಞಾನ ವಿಭಾಗದಲ್ಲಿ ಶೇ. 94.5 ಪಡೆದ ಹುಕ್ಕೇರಿ ವಿದ್ಯಾರ್ಥಿನಿ

ಅಗತ್ಯ ವಸ್ತುಗಳ ಖರೀದಿ ವೈದ್ಯಕೀಯ ಸೇವೆಗಳಿಗೆ ಭಾನುವಾರ ಅವಕಾಶ ಇದೆ. ‌ದಿನ ನಿತ್ಯ ಹೊರ ಜಿಲ್ಲೆಗೆ ಹೋಗುವವರಿಗೆ ಜಿಲ್ಲಾಡಳಿತದಿಂದ ಪಾಸ್ ನೀಡುತ್ತೇವೆ ಎಂದ್ರು.‌ ಇನ್ನು ಕೊರೋನಾ ನಿಯಂತ್ರಣ ವಿಚಾರದಲ್ಲಿ 20 ಪ್ರಕರಣದಲ್ಲಿ ಮನೆಯಲೇ ಚಿಕಿತ್ಸೆ ನೀಡುತ್ತಿದ್ದೇವೆ. ಬೆಂಗಳೂರಿನಿಂದ ಬಂದವರು ಸೆಲ್ಪ ಕ್ವಾರಂಟೈನ್ ಆಗಬೇಕಾಗುತ್ತೆ.‌ ಒಟ್ಟಾರೆ ಸ್ಥಿತಿಗತಿಗಳ ಬಗ್ಗೆ  ನಮ್ಮ ಜಿಲ್ಲೆಯ ಕೋವಿಡ್ ಸ್ಥಿತಿಗತಿಗಳ ಬಗ್ಗೆ ತಜ್ಞರೊಂದಿಗೆ ಚರ್ಚೆ ಮಾಡಿದ್ದೇವೆ.‌ಅಂತರ್ ರಾಜ್ಯ, ಅಂತರ ಜಿಲ್ಲೆಯಿಂದ ಬಂದವರಲ್ಲಿ ಹೆಚ್ಚು ಸೋಂಕಿತ ಪ್ರಕರಣ ಕಂಡು ಬಂದಿದೆ.

‌ನಾವು ಕೊರೋನಾ ಎದುರಿಸಲು ತಯಾರಿಲ್ಲ ಎನ್ನುವಾಗ ಲಾಕ್ ಡೌನ್ ಮಾಡಬೇಕು. ‌ಆದರೆ ನಮ್ಮ ಜಿಲ್ಲೆಯಲ್ಲಿ ಅಂತ ಪರಿಸ್ಥಿತಿ ಇಲ್ಲ. ಜಿಲ್ಲೆಯಲ್ಲಿ ಕೊರೊನಾ ಎದುರಿಸಲು ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೇವೆ. ರೋಗ ಲಕ್ಷಣ ಇರುವವರಿಗೆ 470 ಬೆಡ್ ಮೀಸಲು ಇಟ್ಟಿದ್ದೇವೆ.‌ ಒಟ್ಟು 1100 ಬೆಡ್ ಗಳು ನಮ್ಮಲ್ಲಿ ಇದೆ, ಅದರಲ್ಲಿ 700 ಬೆಡ್ ಖಾಲಿ ಇದೆ. ಖಾಸಗಿ ಆಸ್ಪತ್ರೆಯಲ್ಲೂ 1500 ಬೆಡ್ ಮೀಸಲು ಇಟ್ಟಿದ್ದೇವೆ.‌ ಜಿಲ್ಲೆಯಲ್ಲಿ ಪ್ರತಿನಿಧಿ ಸರಾಸರಿ 39 ಪ್ರಕರಣ ಕಂಡು ಬರುತ್ತಿದ್ದು, ಜಿಲ್ಲೆಯಲ್ಲಿ ಯಾವುದೇ ದೊಡ್ಡ ಸಮಸ್ಯೆ ಆಗುವುದಿಲ್ಲ ಅಂತ ಡಿಸಿ‌ ಜಿ.ಜಗದೀಶ್ ಮಾಹಿತಿ‌ ನೀಡಿದರು.
Published by: Latha CG
First published: July 14, 2020, 7:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading