ರಾಯಚೂರು: ಎತ್ತುಗಳಿಗೆ ಕಾಡುತ್ತಿದೆ ಸಿಡುಬು ರೋಗ, ಸಕಾಲಕ್ಕೆ ಚಿಕಿತ್ಸೆ ಇಲ್ಲದೆ ಸಮಸ್ಯೆಯಲ್ಲಿ ರೈತ

ರಾಯಚೂರು ಜಿಲ್ಲೆಯಲ್ಲಿ ಈಗ 4700 ಕ್ಕೂ ಅಧಿಕ ದನಗಳಲ್ಲಿ ಲಿಂಪಿಸ್ಕೀನ್ ರೋಗ ಕಾಣಿಸಿಕೊಂಡಿದ್ದು ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಈಗ 4000 ದನಗಳಿಗೆ ಚಿಕಿತ್ಸೆ ನೀಡಲಾಗಿದೆ. ಅವಶ್ಯವಿದ್ದಲ್ಲಿ ಗ್ರಾಮದಲ್ಲಿಯೇ ಶಿಬಿರ ಮಾಡಲಾಗುವುದು ಎಂದು‌ ಜಿಲ್ಲೆಯ ಪಶು ವೈದ್ಯರು ತಿಳಿಸಿದ್ದಾರೆ.

news18-kannada
Updated:September 15, 2020, 3:13 PM IST
ರಾಯಚೂರು: ಎತ್ತುಗಳಿಗೆ ಕಾಡುತ್ತಿದೆ ಸಿಡುಬು ರೋಗ, ಸಕಾಲಕ್ಕೆ ಚಿಕಿತ್ಸೆ ಇಲ್ಲದೆ ಸಮಸ್ಯೆಯಲ್ಲಿ ರೈತ
ಸಿಡುಬು ರೋಗಕ್ಕೆ ತುತ್ತಾಗಿರುವ ಎತ್ತು.
  • Share this:
ರಾಯಚೂರು (ಸೆಪ್ಟೆಂಬರ್‌ 15); ಕಳೆದ ಹದಿನೈದು ದಿನಗಳ‌ ಹಿಂದೆ ಕಲಬುರಗಿ ಹಾಗೂ ಯಾದಗಿರಿಯಲ್ಲಿ ಕಾಣಿಸಿಕೊಂಡಿದ್ದ ಲಿಂಪಿಸ್ಕೀನ್ (ಸಿಡುಬು ರೋಗ) ರೋಗ ಈಗ ರಾಯಚೂರು ಜಿಲ್ಲೆಗೂ ವ್ಯಾಪಿಸಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ದನಗಳಿಗೆ ಈ ರೋಗದಿಂದಾಗಿ ರೈತ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. ಸಕಾಲಕ್ಕೆ ಚಿಕಿತ್ಸೆ ನೀಡಿದರೆ ಎತ್ತುಗಳ ಚೇತರಿಸಿಕೊಂಡು ಉಳುಮೆಗೆ ಸಿದ್ದವಾಗುತ್ತವೆ. ಆದರೆ, ಸಕಾಲಕ್ಕೆ ಚಿಕಿತ್ಸೆ ಸಿಗುತ್ತಿಲ್ಲ. ಪರಿಣಾಮ ಎತ್ತುಗಳು ಸಾವಿನ ದವಡೆಗೆ ನೂಕುವಂತಾಗಿದೆ ಎಂದು ರೈತರು ಆರೋಪಿಸಿದ್ದಾರೆ. ಒಂದು ಕಡೆ ಕೊರೋನಾ ಮಹಾಮಾರಿ‌ ಜನರನ್ನು ಕಾಡುತ್ತಿದ್ದರೆ, ಇನ್ನೊಂದು ಕಡೆ ದನಗಳಲ್ಲಿ ಈಗ ಲಿಂಪಿಸ್ಕೀನ್( ದನಗಳಿಗೆ ಬಂದ ಸಿಡುಬು ರೋಗ) ಕಾಡುತ್ತಿದೆ. ರಾಯಚೂರು ಜಿಲ್ಲೆಯ ಹಲವು ಕಡೆ ಈ ರೋಗ ಉಲ್ಬಣಿಸುತ್ತಿದೆ, ಬಹುತೇಕ ಎತ್ತುಗಳಲ್ಲಿ ಕಾಣಿಸಿಕೊಂಡ ಈ ರೋಗದಿಂದಾಗಿ ಎತ್ತುಗಳ ಚಪ್ಪೆಗಳಲ್ಲಿ ದೊಡ್ಡ ದೊಡ್ಡ ಗಂಟುಗಳಾಗಿ, ಎತ್ತುಗಳು ನಡೆದಾಡಲು ಆಗದಂಥ ಸ್ಥಿತಿ ಇದೆ.

ಮೊದಲು ಎತ್ತುಗಳ ದೇಹದಲ್ಲಿ ಸಣ್ಣ ಗಾದರಿಯಂತೆ ಕಾಣಿಸಿಕೊಂಡು ಅದು ಗಡ್ಡೆಗಳಾಗುತ್ತಿವೆ, ಎತ್ರುಗಳ‌ ಚಪ್ಪೆಗಳಲ್ಲಿ ಈ ಗಂಟುಗಳಾಗುತ್ತಿರುವದರಿಂದ‌ ಎತ್ತುಗಳಿಗೆ ನಡೆದಾಡಲು ಆಗಯವುದಿಲ್ಲ,ಈಗ ಹೊಲಗಳಲ್ಲಿ ಉಳುಮೆ ಕಾಲ ಈ ಸಂದರ್ಭದಲ್ಲಿಯೇ ಎತ್ರುಗಳಲ್ಲಿ ಕಾಣಿಸಿಕೊಂಡ‌ ಲಿಂಪಿಸ್ಕೀನ್ ರೋಗದಿಂದಾಗಿ ರೈತ ಏನು ಮಾಡಲು ಆಗದಂಥ ಸ್ಥಿತಿಯಲ್ಲಿದ್ದಾನೆ.

ಇದನ್ನೂ ಓದಿ : ಐಎಸಿ ಹುಟ್ಟುಹಾಕಿದ್ದೇ ಬಿಜೆಪಿ, ಆರೆಸ್ಸೆಸ್ ಎಂದ ಪ್ರಶಾಂತ್ ಭೂಷಣ್; ಐಎಸಿ, ಎಎಪಿಯ ಬಣ್ಣ ಬಯಲಾಯಿತೆಂದ ರಾಹುಲ್

ರಾಯಚೂರು ತಾಲೂಕಿನ ಉಡಮಗಲ್ ಖಾನಾಪುರದಲ್ಲಿ ಸುಮಾರು 200ಕ್ಕೂ ಅಧಿಕ ದನಗಳಲ್ಲಿ ಈ ರೋಗ ಕಾಣಿಸಿಕೊಂಡಿದೆ. ಎತ್ತುಗಳಲ್ಲಿ ಕಾಣಿಸಿಕೊಂಡ ರೋಗಗಳಿಗೆ ಖಾಸಗಿಯಾಗಿ ವೈದ್ಯರು ಬಂದು ಇಂಜಕ್ಷನ್ ಮಾಡಿ ಪ್ರತಿಯೊಂದು ಎತ್ತುಗಳಿಗೆ 300 ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ ಎಂದು ರೈತರು ಹೇಳುತ್ತಿದ್ದಾರೆ. ದುಡ್ಡು ಕೊಟ್ಟು ಇಂಜಿಕ್ಷನ್ ಹಾಕಿಸಿದರೂ ಪ್ರಯೋಜನವಾಗಿಲ್ಲ. ದನಗಳಲ್ಲಿ ರೋಗ ನಿಯಂತ್ರಣಕ್ಕೆ ಬಂದಿಲ್ಲ ಎನ್ನುತ್ತಾರೆ ರೈತರು.

ಈ‌ ಮಧ್ಯೆ ಉಡಮಗಲ್ ಬಳಿಯಲ್ಲಿ ಮರ್ಚೆಟ್ ಹಾಳದಲ್ಲಿಯ ಪಶು ವೈದ್ಯರು ಸಹ ಸರಿಯಾದ ಸಮಯಕ್ಕೆ ಬರುತ್ತಿಲ್ಲ, ಯಾವಾಗಲೊ ಒಮ್ಮೆ ಬಂದು ಹೋಗುತ್ತಾರೆ, ಇಲ್ಲಿಯೇ ಶಿಬಿರ ಮಾಡಿ ದನಗಳಿಗೆ ಚಿಕಿತ್ಸೆ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಈಗ 4700 ಕ್ಕೂ ಅಧಿಕ ದನಗಳಲ್ಲಿ ಲಿಂಪಿಸ್ಕೀನ್ ರೋಗ ಕಾಣಿಸಿಕೊಂಡಿದ್ದು ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಈಗ 4000 ದನಗಳಿಗೆ ಚಿಕಿತ್ಸೆ ನೀಡಲಾಗಿದೆ. ಅವಶ್ಯವಿದ್ದಲ್ಲಿ ಗ್ರಾಮದಲ್ಲಿಯೇ ಶಿಬಿರ ಮಾಡಲಾ ಗುವುದು ಎಂದು‌ ಜಿಲ್ಲೆಯ ಪಶು ವೈದ್ಯರು ತಿಳಿಸಿದ್ದಾರೆ.
Published by: MAshok Kumar
First published: September 15, 2020, 3:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading