ಮಳೆ ಅಬ್ಬರದಲ್ಲಿಯೇ ತುಂಗಾ ನದಿಯಲ್ಲಿ ರಿವರ್ ರ‍್ಯಾಪ್ಟಿಂಗ್ ; ಗಮನ ಸೆಳೆದ ಯುವಕರ ಸಾಹಸ

ಕಳೆದ 18 ವರ್ಷಗಳಿಂದ ನಿರಂತರವಾಗಿ ತರುಣೋದಯ ಘಟಕ, ಯೂತ್ ಹಾಸ್ಟೆಲ್ ಆಸೋಷಿಯೇಷನ್ ಆಫ್ ಇಂಡಿಯಾ ಶಿವಮೊಗ್ಗ ಘಟಕದ ಸದಸ್ಯರು ತುಂಗಾ ನದಿ ತುಂಬಿದ ಸಂದರ್ಭದಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ರಿವರ್ ರ‍್ಯಾಪ್ಟಿಂಗ್ ಹಮ್ಮಿಕೊಂಡು ಬರುತ್ತಿದೆ

news18-kannada
Updated:August 7, 2020, 5:32 PM IST
ಮಳೆ ಅಬ್ಬರದಲ್ಲಿಯೇ ತುಂಗಾ ನದಿಯಲ್ಲಿ ರಿವರ್ ರ‍್ಯಾಪ್ಟಿಂಗ್ ; ಗಮನ ಸೆಳೆದ ಯುವಕರ ಸಾಹಸ
ರಿವರ್ ರ‍್ಯಾಪ್ಟಿಂಗ್ ಮಾಡಿದ ಯುವಕರು
  • Share this:
ಶಿವಮೊಗ್ಗ(ಆಗಸ್ಟ್​ .07): ಮಲೆನಾಡಿನಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಶಿವಮೊಗ್ಗದ ಸಾಹಸಿಗರ ತಂಡವೊಂದು ತುಂಗಾ ನದಿಯಲ್ಲಿ ಕಯಾಕ್ ಬೋಟ್ ನಲ್ಲಿ ರಿವರ್ ರ‍್ಯಾಪ್ಟಿಂಗ್ ಮಾಡಿ ಗಮನ ಸೆಳೆಯಿತು. 60 ಕೀ.ಮಿ ಇವರ ಪ್ರಯಾಣ ಸಾಗಲಿದ್ದು, ಸಾರ್ವಜನಿಕರಿಗೆ ಸಾಹಸ ಕ್ರೀಡೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿತು. ಜೊತೆಗೆ ಪ್ರವಾಹದ ಸಮಯದಲ್ಲಿ ನಾವು ಸಹ ಜಿಲ್ಲಾಡಳಿತದ ಜೊತೆ ಕೈ ಜೋಡಿಸುತ್ತೇವೆ ಎಂಬ ಮಾತು ಸಾಹಸಿ ತಂಡದ್ದಾಗಿದೆ. 

ಮಲೆನಾಡಿನಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ತುಂಗಾ ಜಲಾಶಯ ಭರ್ತಿಯಾಗಿದ್ದು ಜಲಾಶಯದಿಂದ 71 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿ ಬಿಡಲಾಗಿದೆ. ತುಂಗಾ ನದಿ ತುಂಬಿ ಹರಿಯುತ್ತಿದೆ. ಮೈದುಂಬಿ ಹರಿಯುತ್ತಿರುವ ತುಂಗಾ ನದಿಯಲ್ಲಿಂದು 5 ಜನ ಸಾಹಸಿಗರ ತಂಡ ಸಾರ್ವಜನಿಕರಿಗೆ ಹಲವು ವಿಚಾರದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಿವರ್ ರ‍್ಯಾಪ್ಟಿಂಗ್ ನಡೆಸಿತು.

ಶಿವಮೊಗ್ಗದ ಹೊಸ ಸೇತುವೆಯಿಂದ ಹೊನ್ನಾಳಿ ತಾಲೂಕಿನ ರಾಂಪುರದ ವರೆಗೆ ಸುಮಾರು 60 ಕಿ. ಮೀ ತುಂಗಾ ನದಿಯಲ್ಲಿ ಪ್ರಯಾಣ ನಡೆಸುತ್ತಿದ್ದಾರೆ. ಪ್ರಮುಖವಾಗಿ ಹೊನ್ನಾಳಿ ತಾಲೂಕಿನ ರಾಂಪುರದಲ್ಲಿ ಈ ಹಿಂದೆ ದನಗಳ ಜಾತ್ರೆ ನಡೆಯುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಅದು ಸ್ಥಗಿತಗೊಂಡಿದೆ. ಇದನ್ನು ಪುನರ್ ಆರಂಭಿಸುವ ಬಗ್ಗೆ ಜಾಗೃತಿ ಮೂಡಿಸುವುದು ಜೊತೆಗೆ ದನಗಳ ಜಾತ್ರೆ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಸಾಹಸ ಕೈಗೊಂಡಿದ್ದಾರೆ.ಅಲ್ಲದೇ ಜನರಿಗೆ ಸಾಹಸ ಕ್ರೀಡೆಗಳ ಬಗ್ಗೆ ಅರಿವು ಮೂಡಿಸುವುದಕ್ಕೂ ಸಹ ಈ ಒಂದು ಪ್ರಯಾಣ ಮಾಡುತ್ತಿದ್ದಾರೆ. ಕಳೆದ 18 ವರ್ಷಗಳಿಂದ ನಿರಂತರವಾಗಿ ತರುಣೋದಯ ಘಟಕ, ಯೂತ್ ಹಾಸ್ಟೆಲ್ ಆಸೋಷಿಯೇಷನ್ ಆಫ್ ಇಂಡಿಯಾ ಶಿವಮೊಗ್ಗ ಘಟಕದ ಸದಸ್ಯರು ತುಂಗಾ ನದಿ ತುಂಬಿದ ಸಂದರ್ಭದಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ರಿವರ್ ರ‍್ಯಾಪ್ಟಿಂಗ್ ಹಮ್ಮಿಕೊಂಡು ಬರುತ್ತಿದೆ.

ಇದನ್ನೂ ಓದಿ : ಧಾರವಾಡ ಜಿಲ್ಲೆಯಲ್ಲಿ ಮುಂದುವರಿದ ವರುಣನ ಆರ್ಭಟ ; ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ

ಸಾರ್ವಜನಿಕರಿಗೆ ಹಲವು ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಈ ಮೂಲಕ ಮಾಡುತ್ತಿದ್ದಾರೆ. ಅದೇ ರೀತಿ ಈ ಬಾರಿ ರಾಂಪುರ ದನಗಳ ಜಾತ್ರೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಮತ್ತು ಆ ಜಾತ್ರೆಯ ವಿಶೇಷತೆಗಳ ಬಗ್ಗೆ ಪುಸ್ತಕ ರಚನೆ ಮಾಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ.

ತುಂಬಿ ಹರಿಯುತ್ತಿದ್ದ ತುಂಗಾ ನದಿಯಲ್ಲಿ ರಿವರ್ ರ‍್ಯಾಪ್ಟಿಂಗ್ ನಡೆಸಿದ ದೃಶ್ಯ ಮೈ ಜುಮ್ಮೆನಿಸುವಂತಿತ್ತು. ಒಟ್ಟಾರೆ ಸದುದ್ದೇಶದಿಂದ ಹಮ್ಮಿಕೊಂಡಿದ್ದ ಈ ಒಂದು ತುಂಗಾ ಪ್ರಯಣ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.
Published by: G Hareeshkumar
First published: August 7, 2020, 3:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading