Power Star Appu - ಅಭಿಮಾನಿಯ ಜನ್ಮದಿನಕ್ಕೆ ಹಾಡು ಹಾಡಿ ವಿಡಿಯೋ ಕಳುಹಿಸಿದ ಪುನೀತ್ ರಾಜಕುಮಾರ್

ಅಪ್ಪು ಅಭಿಮಾನಿ ಸಂಘದ ಅಧ್ಯಕ್ಷರು ಹಾಗೂ ಚಾಮರಾಜನಗರದಲ್ಲಿ ಟೀ ಕ್ಯಾಂಟೀನ್ ನಡೆಸುತ್ತಿರುವ ಮಂಜು ಅವರ ಜನ್ಮದಿನಕ್ಕೆ ಪುನೀತ್ ರಾಜಕುಮಾರ್ ಒಂದು ಹಾಡು ಹಾಡಿ ವಿಡಿಯೋ ಮಾಡಿ ವಾಟ್ಸಾಪ್ ಕಳುಹಿಸಿ ಶುಭಹಾರೈಸಿದ್ಧಾರೆ.

news18-kannada
Updated:August 26, 2020, 4:54 PM IST
Power Star Appu - ಅಭಿಮಾನಿಯ ಜನ್ಮದಿನಕ್ಕೆ ಹಾಡು ಹಾಡಿ ವಿಡಿಯೋ ಕಳುಹಿಸಿದ ಪುನೀತ್ ರಾಜಕುಮಾರ್
ತಮ್ಮ ಅಭಿಮಾನಿ ಮಂಜು ಅವರ ಹುಟ್ಟುಹಬ್ಬಕ್ಕೆ ಹಾಡಿನ ಗಿಫ್ಟ್ ಕೊಟ್ಟ ಪುನೀತ್ ರಾಜಕುಮಾರ್
  • Share this:
ಚಾಮರಾಜನಗರ (ಆಗಸ್ಟ್ 26): ಸಾಮಾನ್ಯವಾಗಿ ಸೆಲಿಬ್ರಿಟಿಗಳಿಗೆ ಜನಸಾಮಾನ್ಯರೊಂದಿಗಿನ ಒಡನಾಟ ಅಷ್ಟಕಷ್ಟೆ. ಆದರೆ ಪವರ್ ಸ್ಟಾರ್ ಪುನೀತ್ ರಾಜ ಕುಮಾರ್ ತಮ್ಮ ವಿಭಿನ್ನ ನಡೆಯ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ಅಭಿಮಾನಿಯೊಬ್ಬರ ಹುಟ್ಟು ಹಬ್ಬಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಶುಭಾಶಯ ಕೋರಿರುವ ವಾಟ್ಸಪ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅಪ್ಪು ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಚಾಮರಾಜನಗರದಲ್ಲಿ ಟೀ ಕ್ಯಾಂಟೀನ್ ನಡೆಸುತ್ತಿರುವ ಮಂಜು ಎಂಬುವರು ರಾಜ್ ಕುಟುಂಬದ ಕಟ್ಟಾ ಅಭಿಮಾನಿ. ರಾಜರತ್ನ ಅಪ್ಪು ಯುವ ಸೇನಾ ಸಮಿತಿಯ ಅಧ್ಯಕ್ಷರೂ ಆಗಿರುವ  ಮಂಜು ನಿನ್ನೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇದನ್ನು ಅರಿತ ನಟ ಪುನೀತ್ ರಾಜ್​ಕುಮಾರ್ “ನಗುತಾ ನಗುತಾ ಬಾಳು ನೀನು ನೂರು ವರ್ಷ; ಎಂದೂ ಹೀಗೆ ಇರಲಿ ಇರಲಿ ಹರುಷ ಹರುಷ” ಎಂಬ ಹಾಡು ಹಾಡಿ ಅದನ್ನು ವಿಡಿಯೋ ಮಾಡಿ ಮಂಜು ಅವರಿಗೆ ವಾಟ್ಸಪ್​ನಲ್ಲಿ ಕಳುಹಿಸಿದ್ದಾರೆ.

“ಹ್ಯಾಪಿ ಬರ್ತ್ ಡೇ ಮಂಜು, God bless you with happiness, good health, take care” ಎಂದು ತಮ್ಮ ಅಭಿಮಾನಿಗೆ ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ: ಹೈದರಾಬಾದ್​ನ ಯುವಕ ಭಾನುಪ್ರಕಾಶ್ ವಿಶ್ವದ ಅತಿವೇಗದ ಹ್ಯೂಮನ್ ಕ್ಯಾಲ್ಕುಲೇಟರ್

ಪುನೀತ್ ರಾಜ್ ಕುಮಾರ್ ಶುಭಾಶಯ ಕೋರುತ್ತಿದ್ದಂತೆ ಅವರನ್ನು ಅನುಸರಿಸಿದ ಸ್ಯಾಂಡಲ್​ವುಡ್​ನ ಕೆಲ ನಿರ್ದೇಶಕರು ಸಹ ಅಪ್ಪು ಅಭಿಮಾನಿಗೆ ವಿಡಿಯೋ ಮೂಲಕ ಶುಭಾಶಯ ಕೋರಿದ್ದಾರೆ. ನಿರ್ದೇಶಕ ಪವನ್ ಒಡೆಯರ್, ‌ಭಜರಂಗಿ ಹರ್ಷ, ರಾಮಚಾರಿ ನಿರ್ದೇಶಕ ಸಂತೋಷ್ ರಾಮ್,  ಚೇತನ್ ಕುಮಾರ್  ಅವರು ಪುನೀತ್ ಅಭಿಮಾನಿಗೆ ಜನ್ಮದಿನದ ಶುಭ ಹಾರೈಸಿದ್ದಾರೆ.



ಪವರ್ ಸ್ಟಾರ್ ಹಾಗು ಸ್ಯಾಂಡಲ್​ವುಡ್ ನಿರ್ದೇಶಕರ ವಿಶ್​ಗೆ ರಾಜ್ ಕುಟುಂಬದ ಅಭಿಮಾನಿಗಳು ಫಿದಾ ಆಗಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ಅಭಿಮಾನಿಗೆ ಮಾಡಿರುವ ಬರ್ಡ್​ಡೇ ವಿಶ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ವರದಿ: ಎಸ್.ಎಂ. ನಂದೀಶ್
Published by: Vijayasarthy SN
First published: August 26, 2020, 4:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading