ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ; ಬೈಕ್ ಕಳ್ಳ ಅಂದರ್

ಬಂಧಿಸಲಾದ ಆರೋಪಿಯನ್ನು ವಿಚಾರಿಸಿದಾಗ ಅತ ವಿಜಯಪುರ ನಗರದ ಸೋಪಾಲುರ ರಸ್ತೆಯಲ್ಲಿರುವ ಕೆಹೆಚ್​ಬಿ ಕಾಲನಿ ಹಿಂಭಾಗದ ಜೈ ಹನುಮಾನ ನಗರದ ನಿವಾಸಿ ರವಿ ಹಾಜಪ್ಪ ಚಲವಾದಿ(35) ಎಂದು ತನ್ನ ಗುರುತನ್ನು ಬಾಯಿ ಬಿಟ್ಟಿದ್ದಾನೆ.

news18-kannada
Updated:September 26, 2020, 6:46 PM IST
ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ; ಬೈಕ್ ಕಳ್ಳ ಅಂದರ್
ಸಾಂದರ್ಭಿಕ ಚಿತ್ರ.
  • Share this:
ವಿಜಯಪುರ, ಸೆ. 26- ವಿಜಯಪುರ ಪೊಲೀಸರು ಮತ್ತೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.  ಬೈಕ್ ಕಳ್ಳನೊಬ್ಬನನ್ನು ಬಂಧಿಸಿರುವ ವಿಜಯಪುರ ನಗರದ ಗಾಂಧಿಚೌಕ್ ಪೊಲೀಸರು ಆತನ ಬಳಿಯಿದ್ದ 4 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ವಿಜಯಪುರ ನಗರದಲ್ಲಿ ಇತ್ತೀಚೆಗೆ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ.  ಸಾರ್ವಜನಿಕರು ಮಾರುಕಟ್ಟೆ ಪ್ರದೇಶಗಳಲ್ಲಿ ಪಾರ್ಕಿಂಗ್ ಮಾಡಿ ಹೋದ ಬೈಕ್ ಗಳು ಅವರು ಬರುವಷ್ಟರಲ್ಲಿಯೇ ಕಣ್ಮರೆಯಾಗುತ್ತಿವೆ.  ಈ ಹಿನ್ನೆಲೆಯಲ್ಲಿ ವಿಜಯಪುರ ಎಸ್ಪಿ ಅನುಪಮ ಅಗ್ರವಾಲ, ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ ನೇತೃತ್ತವದಲ್ಲಿ ಬೈಕ್ ಕಳ್ಳರನ್ನು ಪತ್ತೆ ಮಾಡಲು ತಂಡವೊಂದನ್ನು ರಚಿಸಿದ್ದಾರೆ.  ಈ ತಂಡ ಬೈಕ್ ಕಳ್ಳತನ ಮತ್ತು ಮನೆ ಕಳ್ಳತನ ಪ್ರಕಣಗಳಿಗೆ ಸಂಬಂಧಿಸಿದಂತೆ ಕಳ್ಳರ ಬೆನ್ನು ಬಿದ್ದಿದೆ.  ಈಗಾಗಲೇ ಮನೆ ಕಳ್ಳರನ್ನೂ ಬಂಧಿಸಲಾಗಿದೆ. ವಿಜಯಪುರ ನಗರದ ಅಥಣಿ ರಸ್ತೆಯಲ್ಲಿ ರಾತ್ರಿ 8 ಗಂಟೆಯ ಸುಮಾರಿಗೆ ಪೊಲೀಸರು ಗಸ್ತು ತಿರುಗುತ್ತಿದ್ದರು.  ಆಗ, ಪೊಲೀಸರನ್ನು ಗಮನಿಸಿದ ವ್ಯಕ್ತಿಯೊಬ್ಬ ತಾನು ಬಂದಿದ್ದ ಸ್ಕೂಟರ್ ಬಿಟ್ಟು ಸಂಶಯಾಸ್ಪದವಾಗಿ ಓಡಿ ಹೋಗಿದ್ದಾನೆ.  ಆಗ ಪೊಲೀಸರು ಜಾಗೃತರಾಗಿ ಆರೋಪಿಯನ್ನು ಬಂಧಿಸಿದಾಗ ಬೈಕ್ ಕಳ್ಳತನದ ವಿಚಾರ ಬೆಳಕಿಗೆ ಬಂದಿದೆ.

ಬಂಧಿಸಲಾದ ಆರೋಪಿಯನ್ನು ವಿಚಾರಿಸಿದಾಗ ಅತ ವಿಜಯಪುರ ನಗರದ ಸೋಪಾಲುರ ರಸ್ತೆಯಲ್ಲಿರುವ ಕೆಹೆಚ್​ಬಿ ಕಾಲನಿ ಹಿಂಭಾಗದ ಜೈ ಹನುಮಾನ ನಗರದ ನಿವಾಸಿ ರವಿ ಹಾಜಪ್ಪ ಚಲವಾದಿ(35) ಎಂದು ತನ್ನ ಗುರುತನ್ನು ಬಾಯಿ ಬಿಟ್ಟಿದ್ದಾನೆ. ನಂತರ ಪೊಲೀಸರು ಆರೋಪಿಯನ್ನು ತನಿಖೆಗೆ ಒಳಪಡಿಸಿದಾಗ ಆತ ನಡೆಸಿದ ಬೈಕ್ ಕಳ್ಳತನಗಳ ಬಗ್ಗೆ ಬಾಯಿ ಬಿಟ್ಟಿದ್ದಾನೆ.

ಈ ಆರೋಪಿ ಗೋಲಗುಂಬಜ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಎರಡು ಬೈಕ್ ಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ.  ಅಲ್ಲದೇ, ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿಯೂ ಎರಡು ಬೈಕ್ ಗಳನ್ನು ಕದ್ದಿರುವುದಾಗಿ ಬಾಯಿ ಬಿಟ್ಟಿದ್ದಾನೆ.

ಇದನ್ನೂ ಓದಿ : ಸದನದಲ್ಲಿ ಭೂ ಸುಧಾರಣಾ ತಿದ್ದುಪಡಿ ಮಸೂದೆಗೆ ವಿರೋಧ ಪಕ್ಷಗಳಿಂದ ತೀವ್ರ ವಿರೋಧ; ಗದ್ದಲದ ನಡುವೆ ಬಿಲ್ ಪಾಸ್

ಬಳಿಕ ಆರೋಪಿ ಕಳುವು ಮಾಡಿದ್ದ ಎರಡು ಬಜಾಜ್ ಪಲ್ಸರ್ ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.  ಅ;ುಗಳಲ್ಲಿ ಒಂದು ಪಜಾಜ್ ಪ್ಸರ್ 150 ಸಿಸಿ ಮತ್ತೊಂದು 220 ಸಿಸಿ ಬೈಕ್‌ ಗಳು ಹಾಗೂ ಒಂದು ಹಿರೋ ಹೊಂಡಾ ಸ್ಪ್ಲೆಂಡರ್ ಮತ್ತು ಹೊಂಡಾ ಡಿಯೋ ಸ್ಕೂಟರ್ ನ್ನು ವಶಪಡಿಸಿಕೊಂಡಿದ್ದಾರೆ.  ಇವುಗಳ ಒಟ್ಟು ಮೌಲ್ಯ ರೂ. 2.59 ಲಕ್ಷ ಎಂದು ಅಂದಾಜಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ವಿಜಯಪುರ ಡಿವೈಎಸ್ಪಿ ಲಕ್ಷ್ಮಿನಾರಾಯಣ, ಗಾಂಧಿಚೌಕ್ ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್‌ಐ ಎಸ್. ಬಿ. ಗೌಡರ, ಆರ್. ಬಿ. ಕೂಡಗಿ ಮತ್ತು ಸಿಬ್ಬಂದಿ ಪಾಲ್ಗೋಂಡಿದ್ದರು ಎಂದು ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
Published by: MAshok Kumar
First published: September 26, 2020, 6:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading