ಕೊರೋನಾ ಭೀತಿಯಲ್ಲೂ ವೈದ್ಯರು ಮುಷ್ಕರಕ್ಕೆ ಮುಂದಾಗಿರುವುದು ಮಾನವೀಯತೆಯಲ್ಲ : ಡಾ.ಕೆ.ಸುಧಾಕರ್

ಕೊರೋನಾ ಸಂದರ್ಭದಲ್ಲಿ ವೈದ್ಯರ ಪಾತ್ರ ಮಹತ್ವದ್ದು, ಇದನ್ನೇ ಬಂಡವಾಳ ಮಾಡಿಕೊಂಡು ಬೇಡಿಕೆ ಮುಂದಿಟ್ಟು ಮುಷ್ಕರ ಹೂಡುವುದು ಮಾನವೀಯತೆ ಅಲ್ಲ.

news18-kannada
Updated:September 18, 2020, 4:42 PM IST
ಕೊರೋನಾ ಭೀತಿಯಲ್ಲೂ ವೈದ್ಯರು ಮುಷ್ಕರಕ್ಕೆ ಮುಂದಾಗಿರುವುದು ಮಾನವೀಯತೆಯಲ್ಲ : ಡಾ.ಕೆ.ಸುಧಾಕರ್
ಸಚಿವ ಡಾ.ಕೆ.ಸುಧಾಕರ್
  • Share this:
ಬೆಂಗಳೂರು(ಸೆಪ್ಟೆಂಬರ್​. 18): ಕೊರೋನಾದಂತ ಸಂದರ್ಭವನ್ನು ಬಳಸಿಕೊಂಡು ವೈದ್ಯರು  ಮುಷ್ಕರ ಹೂಡುವುದು ಮಾನವೀಯತೆಯಲ್ಲ. ವೈದ್ಯರು ಮುಷ್ಕರ ಹಿಂಪಡೆಯುವ ವಿಶ್ವಾಸವಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಅಭಿಪ್ರಾಯ ಪಟ್ಟಿದ್ದಾರೆ.  ಕಾಡುಗೊಂಡನ ಹಳ್ಳಿಯಲ್ಲಿ ಇರುವ ಡಾ.ಬಿ.ಆರ್. ಅಂಬೇಡ್ಕರ್‌ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್‌ ಪರೀಕ್ಷಾ ಪ್ರಯೋಗಾಲಯ ಹಾಗೂ ಕೌಶಲ್ಯ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ವೇತನ ಪರಿಷ್ಕರಣೆ ವೈದ್ಯರ ಪ್ರಮುಖ ಬೇಡಿಕೆ. ಈ ಸಂಬಂಧ ಈಗಾಗಲೇ ನಾಲ್ಕೈದು ಬಾರಿ ಅವರೊಂದಿಗೆ ಸಭೆ ನಡೆಸಿದ್ದೇವೆ. ಸಭೆಯ ನಿರ್ಣಯಕ್ಕೆ ಬಹುಪಾಲು ಒಪ್ಪಿದ್ದಾರೆ. ಆದರೂ ಮುಷ್ಕರ ನಡೆಸುತ್ತೇವೆ ಎನ್ನುವ ಹಠ ಸರಿಯಲ್ಲ. ಕೊರೋನಾ ಸಂದರ್ಭದಲ್ಲಿ ವೈದ್ಯರ ಪಾತ್ರ ಮಹತ್ವದ್ದು, ಇದನ್ನೇ ಬಂಡವಾಳ ಮಾಡಿಕೊಂಡು ಬೇಡಿಕೆ ಮುಂದಿಟ್ಟು ಮುಷ್ಕರ ಹೂಡುವುದು ಮಾನವೀಯತೆ ಅಲ್ಲ. ಇದು ಅವರ ವೃತ್ತಿಗೆ ಗೌರವ ತರುವುದಿಲ್ಲ. ವೈದ್ಯ ಸಂಘದ ಪದಾಧಿಕಾರಿಗಳು ಪ್ರಜ್ಞಾವಂತರು. ಅವರು ಮುಷ್ಕರ ಕೈ ಬಿಡುವ ವಿಶ್ವಾಸವಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣದಲ್ಲಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕೊರೋನಾ ಪರೀಕ್ಷಾ ಪ್ರಮಾಣ ದಿನಕ್ಕೆ 75 ಸಾವಿರ ಇದೆ. ಇದರಿಂದ ಸೋಂಕು ಪ್ರಕರಣಗಳು ಹೆಚ್ಚೆನಿಸುತ್ತದೆ. ಇಷ್ಟು ದಿನ ಕೇರಳದಲ್ಲಿ ಟೆಸ್ಟ್ ಪ್ರಮಾಣ ಕಡಿಮೆ ಇದ್ದರಿಂದ ಅಲ್ಲಿ ಸೋಂಕು ಪ್ರಮಾಣವೂ ಕಡಿಮೆ ಇತ್ತು. ಈಗ ಟೆಸ್ಟ್ ಪ್ರಮಾಣ ಹೆಚ್ಚಿಸಿದ್ದರಿಂದ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ತಮಿಳುನಾಡು, ಆಂಧ್ರಕ್ಕೆ ಹೋಲಿಸಿದರೆ ಕೊರೋನಾ ನಿಯಂತ್ರಣದಲ್ಲಿದೆ ಎಂದರು.

ಐಸಿಯು ಬೆಡ್‌ಗಳ ಹೆಚ್ಚಳಕ್ಕೆ ಕ್ರಮ :

ನಮ್ಮಲ್ಲಿ ಸಾಮಾನ್ಯ ಬೆಡ್‌ಗಳು ಹೆಚ್ಚಿವೆ. ಆದರೆ, ಅಗತ್ಯವಿರುವುದು ವೆಂಟಿಲೇಟರ್ ಹಾಗೂ ಐಸಿಯೂ ಬೆಡ್‌ಗಳು. ಪ್ರಕರಣದ ತೀವ್ರತೆ ನೋಡಿಕೊಂಡು ಅವುಗಳ ಹೆಚ್ಚಳ ಮಾಡಲಿದ್ದೇವೆ. ನೆಲಮಂಗಲ ಬಳಿಯ ಅತಿ ದೊಡ್ಡ ಕೋವಿಡ್‌ ಕೇರ್‌ ಸೆಂಟರ್‌ ಮುಚ್ಚಿದ್ದರಿಂದ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ರೋಗ ಲಕ್ಷಣವಿಲ್ಲದೇ ಇರುವವರನ್ನು ಮನೆಯಲ್ಲಿಯೇ ಐಸೋಲೇಷನ್ ಮಾಡಿಸಲಾಗುತ್ತಿದೆ. ಅವಶ್ಯಕತೆ ಬಿದ್ದರೆ ಕೋವಿಡ್ ಕೇರ್‌ ಸೆಂಟರ್‌ ಅನ್ನು ಪುನಾರಾಂಭಿಸುತ್ತೇವೆ ಎಂದು ಹೇಳಿದರು.

ಇಂದು ವೈದ್ಯರ ಜೊತೆ ಮತ್ತೆ ಸಭೆ

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮುಷ್ಕರಕ್ಕೆ ಮುಂದಾಗಿದ್ದ ವೈದ್ಯರೊಂದಿಗೆ ಆರೋಗ್ಯ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಸೆಪ್ಟೆಂಬರ್​ 15 ರಂದು ನಡೆದ ಸಭೆ ವಿಫಲವಾಗಿದೆ. ವಿಧಾನಸೌಧದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು, ಡಿಸಿಎಂ ಅಶ್ವತ್ಥ್ ನಾರಾಯಣ, ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ವೈದ್ಯರ ಜೊತೆ ಸಭೆ ನಡೆಸಿದ್ದರು. ಸಭೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ವೈದ್ಯರ ಪ್ರತಿನಿಧಿಗಳ ಮನವೊಲಿಕೆ ಮಾಡುವಲ್ಲಿ ಸಚಿವರು ವಿಫಲರಾದರು. ಇಂದು ಮತ್ತೆ ವೈದ್ಯರು ಸಚಿವರ ಜೊತೆ ಸಭೆ ನಡೆಸಲಿದ್ದಾರೆ.

ಇದನ್ನೂ ಓದಿ : Sandalwood Drug Case: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಟಿಯರ ಹೈಡ್ರಾಮ: ಸಂಜನಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ನ್ಯಾಯಾಲಯ..!ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ. ವೈದ್ಯರು ಪ್ರತಿಭಟನೆ ಬಿಟ್ಟು ಜನರ ಸೇವೆ ಮಾಡುವ ಕೆಲಸ ಮಾಡಬೇಕು. ವೃತ್ತಿಯ ಬಗ್ಗೆ ಜನರು ಮತ್ತು ಸರಕಾರ ಇಟ್ಟಿರುವ ಭರವಸೆಯನ್ನು ಉಳಿಸಿಕೊಳ್ಳಬೇಕು. ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಸಂಬಳ ಹೆಚ್ಚಳ ಮಾಡುವ ನಿಶ್ಚಯ ಆಗಿದೆ. ವೈದ್ಯರು ತಮ್ಮ ಸಹೋದ್ಯೋಗಿಗಳ ಜೊತೆ ಚರ್ಚಿಸಿ ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ.

ಕಳೆದ ಒಂದು ವಾರದಿಂದ ವೈದ್ಯರ ಜೊತೆ ಸಮಾಲೋಚನೆ ಮಾಡಲಾಗುತ್ತಿದೆ. ಆರ್ಥಿಕ ದುಸ್ಥಿತಿ ಹಾಗೂ ಅವರ ಬೇಡಿಕೆ ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳಲಾಗಿದೆ‌ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
Published by: G Hareeshkumar
First published: September 18, 2020, 3:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading