ಎನ್ಐಎ ತಂಡದಿಂದ ಶಿರಸಿ ಯುವಕನ ವಿಚಾರಣೆ; ಉಗ್ರ ಚಟುವಟಿಕೆಗೆ ಸಿಮ್ ಬಳಕೆ ಆರೋಪ

ಶಿರಸಿಯ ಅರೆಕೊಪ್ಪ ಗ್ರಾ.ಪಂ. ಮಾಜಿ ಸದಸ್ಯರೊಬ್ಬರ ಮಗನ ಸಿಮ್ ಅನೇಕ ಉಗ್ರ ಚಟುವಟಿಕೆಗಳಿಗೆ ಬಳಕೆಯಾಗಿತ್ತೆನ್ನಲಾಗಿದ್ದು ಎನ್ಐಎ ತಂಡ ಶಿರಸಿಗೆ ಆಗಮಿಸಿ ಯುವಕನ ವಿಚಾರಣೆ ನಡೆಸಿ ಹೋಗಿದೆ.

news18-kannada
Updated:September 28, 2020, 9:52 AM IST
ಎನ್ಐಎ ತಂಡದಿಂದ ಶಿರಸಿ ಯುವಕನ ವಿಚಾರಣೆ; ಉಗ್ರ ಚಟುವಟಿಕೆಗೆ ಸಿಮ್ ಬಳಕೆ ಆರೋಪ
ಸಾಂದರ್ಭಿಕ ಚಿತ್ರ
  • Share this:
ಕಾರವಾರ(ಸೆ. 28): ದೇಶದ ವಿವಿಧೆಡೆ ನಡೆದ ವಿಧ್ವಂಸಕ ಕೃತ್ಯದಲ್ಲಿ ಬಾಗಿಯಾದ ಉಗ್ರರೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಯುವಕನ ನಂಟು ಇದೆಯಾ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಲು ರಾಷ್ಟ್ರೀಯ ತನಿಖಾ ಸಂಸ್ಥೆ ಎನ್​ಐಎ ತಂಡ ಶಿರಸಿಗೆ ಆಗಮಿಸಿ ತೆರಳಿದ್ದು ಯುವಕನ ತೀವ್ರ ತನಿಖೆ ಮಾಡಿದೆ ಎಂಬ ಮಾಹಿತಿ ಪೋಲಿಸ್ ಮೂಲದಿಂದ ತಿಳಿದು ಬಂದಿದೆ.

ವಿಚಾರಣೆಗೆ ಒಳಗಾದ ಯುವಕ ಶಿರಸಿ ತಾಲೂಕಿನ ಅರೆಕೊಪ್ಪ ಗ್ರಾ.ಪಂ ಮಾಜಿ ಸದಸ್ಯರೊಬ್ಬರ ಪುತ್ರನಾಗಿದ್ದಾನೆ. ಕಳೆದ ಒಂದೆರಡು ತಿಂಗಳ ಬೆಳವಣಿಗೆಯಲ್ಲಿ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾದ ಆರೋಪದಡಿಯಲ್ಲಿ ಹತ್ತಕ್ಕೂ ಹೆಚ್ಚು ಶಂಕಿತರನ್ನ ಎನ್.ಐ.ಎ ತಂಡ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದೆ. ಜತೆಗೆ ಕಳೆದ ಒಂದು ತಿಂಗಳ ಹಿಂದಷ್ಟೇ ರಾಷ್ಟ್ರೀಯ ಗುಪ್ತಚರ ತನಿಖಾ ದಳದ ತಂಡ ಕೂಡಾ ಶಿರಸಿಯ ಬನವಾಸಿಗೆ ಬಂದು ಇದೇ ಪ್ರಕರಣದಲ್ಲಿ ಓರ್ವ ಯುವಕನ ವಿಚಾರಣೆ ಮಾಡಿದ್ದರು ಎನ್ನಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಈಗ ಮತ್ತು ರಾಷ್ಟ್ರೀಯ ತನಿಖಾ ದಳ ತಂಡ ದಿಢೀರ್ ಆಗಿ ಬಂದು ಸ್ಥಳೀಯ ಪೋಲಿಸರ ಸಹಾಯ ಪಡೆದು ಅರೆಕೊಪ್ಪ ಯುವಕನ ವಿಚಾರಣೆ ಮಾಡಿದ್ದಾರೆ. ಅರೆಕೊಪ್ಪ ಯುವಕನ ಹೆಸರಿನಲ್ಲಿ ಇದ್ದ ಮೊಬೈಲ್ ಸಿಮ್ ಕಾರ್ಡ್ ಭಯೋತ್ಪಾದಕ ಚಟುವಟಿಕೆಯಲ್ಲಿ ಬಳಕೆಯಾಗಿದೆ ಎನ್ನುವ ಮಾಹಿತಿಯ ಜಾಡು ಹಿಡಿದು ಶಿರಸಿಯವರೆಗೂ ಬಂದ ಎನ್.ಐ.ಎ ತಂಡ ಯುವಕನಿಗೆ ಸತತ ನಾಲ್ಕು ಘಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ಜಲ್ಲಿ ಕ್ರಷರ್​ಗಳಿಂದ ರೈತರ ಜಮೀನಿಗೆ ಧಕ್ಕೆ; ರಾಮನಗರದ ಮಂಚೇಗೌಡನಪಾಳ್ಯ, ಸೀಬೆಕಟ್ಟೆಯಲ್ಲಿ ಪ್ರತಿಭಟನೆ

ಏನಂತಾರೆ ಅಧಿಕಾರಿಗಳು?

ಈ ವಿಚಾರಣೆಯ ಮಾಹಿತಿ ಬಹಿರಂಗ ಪಡಿಸಲು ಉತ್ತರ ಕನ್ನಡ ಪೋಲಿಸ್ ಇಲಾಖೆ ಹಿಂದೇಟು ಹಾಕುತ್ತಿದೆ. ಎನ್.ಐ.ಎ ತಂಡ ಬಂದು ಯುವಕನ ವಿಚಾರಣೆ ಮಾಡಿದ್ದಾರೆ. ಆದ್ರೆ ಅವರನ್ನ ವಶಕ್ಕೆ ಪಡೆಯುವುದಾಗಲಿ ಬಂಧಿಸುವುದಾಗಲಿ ಮಾಡಿಲ್ಲ. ವಿಚಾರಣೆಗೆ ಒಳಗಾದ ಯುವಕನ ವಿರುದ್ದ ಪೋಲಿಸ್ ದೂರು ದಾಖಲಾಗಿಲ್ಲ ಎಂದು ಉತ್ತರ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಆದ್ರೆ ಅಧಿಕೃತವಾಗಿ ಪ್ರಕರಣದ ಜಾಡು ಹಿಡಿದು ಎನ್.ಐ.ಎ ತಂಡ ಇಲ್ಲಿಯವರೆಗೆ ಬಂದಿದೆ ಎಂಬ ಸ್ಪಷ್ಟ ಮಾಹಿತಿ ನೀಡಲು ಹಿಂದೇಟು ಹಾಕುತ್ತಿರುವುದು ಸ್ಪಷ್ಟವಾಗಿದೆ.

ಭಟ್ಕಳ ಆಯ್ತು ಈಗ ಶಿರಸಿ?

ಹಾಗೆ ನೋಡಿದರೆ ಭಯೋತ್ಪಾದಕ ಚಟುವಟಿಕೆ ಎಂದಮೇಲೆ ಜಿಲ್ಲೆಯ ಭಟ್ಕಳ ತಾಲೂಕು ಮೊದಲು ಪರದೆಯ ಮೇಲೆ ಕಾಣಸಿಕೊಳ್ಳುತ್ತದೆ. ಆದ್ರೆ ಈಗ ಕಳೆದ ಎರಡು ತಿಂಗಳಿಂದ ಶಿರಸಿಯ ಹೆಸರು ಕೇಳಿ ಬರತೊಡಗಿದ್ದು ಮತ್ತು ಶಿರಸಿಗೆ ಪದೆಪದೆ ರಾಷ್ಟ್ರೀಯ ತನಿಖಾ ತಂಡಗಳು ಗುಪ್ತವಾಗಿ ಬಂದು‌ಹೊಗೋದು ಶಿರಸಿ ಉಗ್ರ ಚಟುವಟಿಕೆಯಲ್ಲಿ ತಳಕು ಹಾಕಿಕೊಂಡಿದ್ಯಾ ಎಂಬ ಬಗ್ಗೆ ಸಂಶಯ ಈಗ ಗಲ್ಲಿ ಗಲ್ಲಿಯಲ್ಲಿ ಕೇಳಿ ಬರುತ್ತಿದೆ. ಒಟ್ಟಾರೆ ಈಗ ಸದ್ಯದ ಮಾಹಿತಿ ಪ್ರಕಾರ ರಾಷ್ಟ್ರೀಯ ತನಿಖಾ ತಂಡ ಶಿರಸಿಯತ್ತ ಬಂದು ವಿಚಾರಣೆ ಮಾಡಿದ್ದು ಖಾತ್ರಿ ಆಗಿದೆ. ಬೆಂಕಿ ಇಲ್ಲದೆ ಹೊಗೆ ಆಡಲ್ಲ ಎಂಬ ಮಾತು ಈಗ ಜೋರಾಗಿದೆ. ಅದು ಸತ್ಯವಾ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗುವ ನಿರೀಕ್ಷೆ ಇದೆ.ವರದಿ: ದರ್ಶನ್ ನಾಯ್ಕ್
Published by: Vijayasarthy SN
First published: September 28, 2020, 9:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading