ಕರ್ನಾಟಕದಲ್ಲಿದೆ ಏಕೈಕ ಸಂಸ್ಕೃತ ಗ್ರಾಮ : ವ್ಯಾಪಾರ ವಹಿವಾಟು, ಸಂಭಾಷಣೆ ಸಹ ಸಂಸ್ಕೃತ ಭಾಷೆಯಲ್ಲೆ ಅದು ಎಲ್ಲಿದೆ ಗೊತ್ತಾ ?

ವ್ಯವಹಾರಿಕವಾಗಿ ಸಂಸ್ಕೃತ ಭಾಷೆ ಬೆಳೆಯಬೇಕು ಎಂದು ಗ್ರಾಮದಲ್ಲಿ  ವ್ಯಾಪಾರ ವಹಿವಾಟು ಸಹ ಸಂಸ್ಕೃತ ಭಾಷೆಯಲ್ಲೇ ನಡೆಯುತ್ತಿದೆ. ಮಾತುಕತೆ ಎಲ್ಲವೂ ಸಂಸ್ಕೃತದಲ್ಲೇ ನಡೆಯುತ್ತದೆ.

news18-kannada
Updated:September 2, 2020, 2:59 PM IST
ಕರ್ನಾಟಕದಲ್ಲಿದೆ ಏಕೈಕ ಸಂಸ್ಕೃತ ಗ್ರಾಮ : ವ್ಯಾಪಾರ ವಹಿವಾಟು, ಸಂಭಾಷಣೆ ಸಹ ಸಂಸ್ಕೃತ ಭಾಷೆಯಲ್ಲೆ ಅದು ಎಲ್ಲಿದೆ ಗೊತ್ತಾ ?
ಮತ್ತೂರು ಗ್ರಾಮ
  • Share this:
ಶಿವಮೊಗ್ಗ(ಸೆಪ್ಟೆಂಬರ್​ 02): ಇದು ರಾಜ್ಯದ ಏಕೈಕ ಸಂಸ್ಕೃತ ಮಾತನಾಡುವ ಗ್ರಾಮವಿದು. ಜಾತಿ-ವರ್ಗಗಳ ಹಂಗಿಲ್ಲದೆ ಎಲ್ಲರೂ ಸಂಸ್ಕೃತ ಮಾತನಾಡುವ ಅಪರೂಪದ ಗ್ರಾಮ. ಇದು ಇರುವುದು ಶಿವಮೊಗ್ಗ ಜಿಲ್ಲೆಯಲ್ಲಿ. ಅಭಿಜಾತ ಭಾಷೆ ಸಂಸ್ಕೃತದ ಮೂಲಕವೇ ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಈ ಗ್ರಾಮವೇ ಮತ್ತೂರು. ಶಿವಮೊಗ್ಗದ ನಗರದಿಂದ 10 ಕಿಲೋಮೀಟರ್ ದೂರದಲ್ಲಿರುವ ಈ ಗ್ರಾಮದ ಹೆಸರು ಮತ್ತೂರು. ಮಲೆನಾಡಿನ ಸೌಂದರ್ಯದ ಸೆರಗಿನ ಈ ಪುಟ್ಟ ಗ್ರಾಮ ಇಂದು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ಅದಕ್ಕೆ ಪ್ರಮುಖ ಕಾರಣ ಸಂಸ್ಕೃತ ಭಾಷೆ. 1983 ರಲ್ಲಿ ಈ ಗ್ರಾಮದಲ್ಲಿ ಆರಂಭಗೊಂಡ ಸಂಸ್ಕೃತ ಅಧ್ಯಯನ ಇಂದಿಗೂ ನಡೆಯುತ್ತಿದೆ.

ಹತ್ತು ದಿನದಲ್ಲೇ ಸಂಸ್ಕೃತ ಕಲಿಯಬೇಕು ಎಂಬ ಆಶಯದಿಂದ ಆರಂಭಗೊಂಡ ಭಾಷಾ ಕಲಿಕಾ ಶಿಬಿರದ ಸ್ಫೂರ್ತಿಯಿಂದ ಕೆಲವೇ ವರ್ಷಗಳಲ್ಲಿ ಇಡೀ ಗ್ರಾಮವೇ ಸಂಸ್ಕೃತ ಮಯವಾಗಿ ಮಾರ್ಪಟ್ಟಿತು. ಆರಂಭದ ದಿನಗಳಲ್ಲಿ ಶಿಬಿರಕ್ಕೆ ಆಗಮಿಸಿದ್ದ ಉಡುಪಿ ಪೇಜಾವರ ಶ್ರೀಗಳು ಈ ಗ್ರಾಮ ಸಂಸ್ಕೃತ ಮಾತನಾಡುವ ಗ್ರಾಮವಾಗಿ ಪರಿವರ್ತಿತವಾಗಲಿ ಎಂದು ಕರೆ ನೀಡಿದ್ದರು. ಅಲ್ಲಿಂದ ಆರಂಭವಾದ ಸಂಸ್ಕೃತ ಭಾಷೆಯ ಅಭಿಯಾನ ಇಂದಿಗೂ ನಡೆಯುತ್ತಲೇ ಇದೆ.

ವ್ಯವಹಾರಿಕವಾಗಿ ಸಂಸ್ಕೃತ ಭಾಷೆ ಬೆಳೆಯಬೇಕು ಎಂದು ಗ್ರಾಮದಲ್ಲಿ ವ್ಯಾಪಾರ ವಹಿವಾಟು ಸಹ ಸಂಸ್ಕೃತ ಭಾಷೆಯಲ್ಲೇ ನಡೆಯುತ್ತಿದೆ. ಮಾತುಕತೆ ಎಲ್ಲವೂ ಸಂಸ್ಕೃತದಲ್ಲೇ ನಡೆಯುತ್ತದೆ. ಗ್ರಾಮದ ಶೇ. 80 ರಷ್ಟು ಜನರು ಸಂಸ್ಕೃತದಲ್ಲೇ ಮಾತನಾಡುತ್ತಾರೆ. ಜಾತಿ ಮತ ಬೇಧವಿಲ್ಲದೆ ಎಲ್ಲರೂ ಸಂಸ್ಕೃತವನ್ನು ಕಲಿತಿದ್ದಾರೆ. ಗ್ರಾಮದ ಬಹುತೇಕ ವಿದ್ಯಾರ್ಥಿಗಳು ಸಂಸ್ಕೃತವನ್ನೇ ಪ್ರಥಮ ಭಾಷೆಯನ್ನಾಗಿ ವ್ಯಾಸಂಗ ಮಾಡಿದ್ದಾರೆ. ಹಲವರು ಸಂಸ್ಕೃತದಲ್ಲೇ ಸ್ನಾತಕೋತ್ತರ ಪದವಿ ಪಡೆದು ಪಿ.ಎಚ್.ಡಿ. ಕೂಡ ಮಾಡಿದ್ದಾರೆ.

ಇದನ್ನೂ ಓದಿ : ಜಿಡಿಪಿ ಮಹಾ ಕುಸಿತಕ್ಕೆ ಅಡ್ಡಕಸುಬಿ ಆರ್ಥಿಕ ನಿರ್ವಹಣೆಯೇ ಕಾರಣ ; ಸಿದ್ದರಾಮಯ್ಯ

ಇನ್ನೊಂದು ವಿಶೇಷವೆಂದರೆ ಗ್ರಾಮದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರೂ ಕೂಡ ನಿರರ್ಗಳವಾಗಿ ಸಂಸ್ಕೃತ ಮಾತನಾಡುತ್ತಾರೆ. ಸಂಸ್ಕೃತ ಸಂಶೋಧನ ಕೇಂದ್ರ ಸಹ ಈ ಗ್ರಾಮದಲ್ಲಿ ಇದ್ದು, ಇಲ್ಲಿ ಸಹ ಸಾಕಷ್ಟು ವಿದ್ಯಾರ್ಥಿಗಳು ಸಂಸ್ಕೃತದ ಅಧ್ಯಾಯನ ನಡೆಸುತ್ತಿದ್ದಾರೆ. ಅಂಗಡಿಗಳಲ್ಲಿ ಸಹ ವ್ಯವಹಾರವನ್ನು ಸಂಸ್ಕೃತ ಭಾಷೆಯಲ್ಲೇ ಮಾಡುತ್ತಾರೆ.

ಭಾರತದ ಅಭಿಜಾತ ಭಾಷೆಯಾದ ಸಂಸ್ಕೃತವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮತ್ತೂರು ಗ್ರಾಮ ನೀಡುತ್ತಿರುವ ಕೊಡುಗೆ ಶ್ಲಾಘನೀಯ. ಸಂಸ್ಕೃತ ಭಾಷೆಯನ್ನು ಜನಮಾನಸದಲ್ಲಿ ಉಳಿಸುವ ನಿಟ್ಟಿನಲ್ಲಿ ಇದೊಂದು ಸ್ಫೂರ್ತಿದಾಯಕ ಕಾರ್ಯವಾಗಿದೆ.
Published by: G Hareeshkumar
First published: September 2, 2020, 2:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading