HOME » NEWS » District » MANY RELIGION ASSOCIATION HAD DONE CREMATION WHO DIED FROM CORONAVIRUS RHHSN RSK

ಕೊಡಗಿನಲ್ಲಿ ವಿವಿಧ ಧಾರ್ಮಿಕ ಸಂಘಟನೆಗಳಿಂದ ಕೋವಿಡ್​ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ!

ಮುಸ್ಲಿಂ ಸಂಘಟನೆಯ ಮುಖಂಡರ ತಂಡವೂ ಕೂಡ ಜಿಲ್ಲೆಯಲ್ಲಿ ಸ್ವಯಪ್ರೇರಿತವಾಗಿ ಕೋವಿಡ್ ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ. ಈಗಾಗಲೇ  ಈ ತಂಡ ಕೂಡ 26 ಕ್ಕೂ ಹೆಚ್ಚು ಶವಸಂಸ್ಕಾರ ನೆರವೇರಿಸಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ವಿವಿಧ ಧಾರ್ಮಿಕ ಸಂಘಟನೆಗಳು ಕೋವಿಡ್ ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಮಾಡುವ ಮೂಲಕ ಬೇರೆ ಜಿಲ್ಲೆಗಳಿಗೆ ಮಾದರಿಯಾಗಿದ್ದಾರೆ. 

news18-kannada
Updated:April 21, 2021, 9:43 PM IST
ಕೊಡಗಿನಲ್ಲಿ ವಿವಿಧ ಧಾರ್ಮಿಕ ಸಂಘಟನೆಗಳಿಂದ ಕೋವಿಡ್​ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ!
ಅಂತ್ಯಸಂಸ್ಕಾರ ನೆರವೇರಿಸುತ್ತಿರುವುದು.
  • Share this:
ಕೊಡಗು: ಕೋವಿಡ್ ಸೋಂಕು ಎಂದ ಕೂಡಲೇ ಜನರು ದೂರ ಸರಿದು ನಿಲ್ಲುತ್ತಾರೆ. ಇನ್ನು ಕೋವಿಡ್​ನಿಂದ ಮೃತಪಟ್ಟವರ ಮೃತದೇಹ ಮುಟ್ಟೋದಕ್ಕೆ ಯಾರು ತಾನೆ ಹತ್ತಿರ ಸುಳಿಯುತ್ತಾರೆ ಹೇಳಿ. ಆದರೆ ಕೊಡಗಿನಲ್ಲಿ ವಿವಿಧ ಧಾರ್ಮಿಕ ಸಂಘಟನೆಗಳು ಕೋವಿಡ್ ನಿಂದ ಮೃತಪಟ್ಟವರ ಅಂತ್ಯ ಕ್ರಿಯೆಯನ್ನು ಉಚಿತವಾಗಿ ನೆರವೇರಿಸುತ್ತಿವೆ. ಹೌದು ಮಡಿಕೇರಿಯಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳಗಳ ನೇತೃತ್ವದಲ್ಲಿ 50 ಜನರ ತಂಡ ಹಾಗೂ ಮುಸ್ಲಿಂ ಸಂಘಟನೆ ಕಳೆದ ಒಂದು ವರ್ಷದಿಂದ ಕೋವಿಡ್ ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ನೆರವೇರಿಸುತ್ತಿವೆ.

ಕೆಲವು ಜಿಲ್ಲೆಗಳಲ್ಲಿ ಕೋವಿಡ್ ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಸಾವಿರಾರು ರೂಪಾಯಿ ಹಣ ಪಡೆದ ಸಾಕಷ್ಟು ಉದಾಹರಣೆಗಳಿವೆ. ಅಷ್ಟೇ ಏಕೆ ಅತ್ಯಂತ ಅಮಾನವೀಯವಾಗಿ ಅಂತ್ಯ ಸಂಸ್ಕಾರ ನೆರವೇರಿಸಿದ ಉದಾಹರಣೆ ನಮ್ಮ ಕಣ್ಮುಂದೆ ಇವೆ. ಇಂತಹ ಹಲವು ಘಟನೆಗಳನ್ನು ನೋಡಿದ್ದ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಐವತ್ತು ಜನರ ಸ್ವಯಂಸೇವಕರ ತಂಡ ಕಳೆದ ಒಂದು ವರ್ಷದಿಂದ ಕೋವಿಡ್ ನಿಂದ ಮೃತಪಡುತ್ತಿರುವವರ ಅಂತ್ಯ ಸಂಸ್ಕಾರ ನೆರವೇರಿಸುತ್ತಿವೆ. ಈ ತಂಡ ಯಾರಿಂದಲೂ ನಯಾ ಪೈಸೆ ಪಡೆಯದೆ ತಮ್ಮ ಸ್ವಂತ ಖರ್ಚಿನಿಂದಲೇ ಅಂತ್ಯಸಂಸ್ಕಾರದ ವಿಧಿವಿಧಾನಕ್ಕೆ ಬೇಕಾಗಿರುವ ವೆಚ್ಚ ಭರಿಸುತ್ತಿದೆ.

2020ರ ಆರಂಭದಲ್ಲಿ ಕೋವಿಡ್​ನಿಂದ ಮೃತಪಟ್ಟವರನ್ನು ರಾಜ್ಯದ ವಿವಿಧೆಡೆ ಹೀನಾಯವಾಗಿ ಅಂತ್ಯಸಂಸ್ಕಾರ ಮಾಡುತ್ತಿದ್ದನ್ನು ನೋಡಿದ್ದೆವು. ಯಾವುದೇ ವ್ಯಕ್ತಿ ಸತ್ತಾಗ ಅವರ ಸಂಸ್ಕಾರವಾದರು ಗೌರವಯುತವಾಗಿ ನಡೆಯಬೇಕೆಂದು ನಿರ್ಧರಿಸಿದೆವು. ಬಳಿಕ 50 ಜನರ ನಮ್ಮ ತಂಡ ಆರೋಗ್ಯ ಇಲಾಖೆಯಿಂದ ತರಬೇತಿ ಪಡೆದು ಸಿದ್ಧಗೊಂಡಿತು. ಅಂದಿನಿಂದ ಇಂದಿನವರೆಗೆ ಕೋವಿಡ್ ನಿಂದ ಮೃತಪಟ್ಟ 56 ಮೃತದೇಹಗಳ ಅಂತ್ಯಸಂಸ್ಕಾರ ಮಾಡಿದ್ದೇವೆ ಎನ್ನುತ್ತಾರೆ ಸ್ವಯಂಸೇವಕ ವಿನಯ್.

ಇದನ್ನು ಓದಿ: ಕೊರೋನಾ ವಾರಿಯರ್ಸ್ ಪೊಲೀಸ್ ಸಿಬ್ಬಂದಿಗೂ ವಕ್ಕರಿಸಿದ ಮಾರಕ ಕೋವಿಡ್ ಸೋಂಕು

ಅಂತ್ಯ ಸಂಸ್ಕಾರದ ಸಂದರ್ಭ ನಮ್ಮ ಆರೋಗ್ಯದ ಬಗ್ಗೆ ಜಾಗೃತೆ ವಹಿಸಲು ಅಗತ್ಯವಿರುವ ಪಿಪಿಇ ಕಿಟ್ ಅನ್ನು ಆರೋಗ್ಯ ಇಲಾಖೆಯಿಂದ ಪಡೆದುಕೊಳ್ಳುತ್ತೇವೆ. ಇನ್ನು ಮೃತದೇಹಗಳ ಸುಡಲು ಬೇಕಾದ ಸೌದೆಗಳನ್ನು ನಮ್ಮ ಮತ್ತು ನಮ್ಮ ಸ್ನೇಹಿತರ ತೋಟಗಳಿಂದ ತರುತ್ತಿದ್ದೇವೆ. ಅವುಗಳನ್ನು ಸ್ಮಶಾನದಲ್ಲಿ ಸೀಳಿ ಕಟ್ಟಿಯಾಗಿ ನಮ್ಮ ಸ್ವಯಂಸೇವಕರೇ ಮಾಡುತ್ತಾರೆ. ಹಿಂದೂ ಧರ್ಮದವರಲ್ಲದೆ ಬೇರೆ ಬೇರೆ ಧರ್ಮದವರು ಕೋವಿಡ್ ನಿಂದ ಮೃತಪಟ್ಟಾಗಲೂ ಅಂತ್ಯ ಸಂಸ್ಕಾರ ಮಾಡಿದ್ದೇವೆ ಎನ್ನುತ್ತಾರೆ ವಿಎಚ್ ಪಿ ಮಡಿಕೇರಿ ತಾಲ್ಲೂಕು ಮುಖಂಡ ಸುರೇಶ್.

ಒಟ್ಟಿನಲ್ಲಿ ಕೋವಿಡ್​ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೂ ಹಣ ಸುಲಿಗೆ ಮಾಡುತ್ತಿರುವ ಈ ಸಂದರ್ಭದಲ್ಲಿ ವಿಎಚ್ ಪಿ ಮತ್ತು ಭಜರಂಗದಳದ ಕಾರ್ಯಕರ್ತರು ಸ್ವಯಂಪ್ರೇರಣೆಯಿಂದ ಉಚಿತವಾಗಿ ಅಂತ್ಯ ಸಂಸ್ಕಾರ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇನ್ನು ಮುಸ್ಲಿಂ ಸಂಘಟನೆಯ ಮುಖಂಡರ ತಂಡವೂ ಕೂಡ ಜಿಲ್ಲೆಯಲ್ಲಿ ಸ್ವಯಪ್ರೇರಿತವಾಗಿ ಕೋವಿಡ್ ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಮಾಡುತ್ತಿದ್ದಾರೆ. ಈಗಾಗಲೇ  ಈ ತಂಡ ಕೂಡ 26 ಕ್ಕೂ ಹೆಚ್ಚು ಶವಸಂಸ್ಕಾರ ನೆರವೇರಿಸಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ವಿವಿಧ ಧಾರ್ಮಿಕ ಸಂಘಟನೆಗಳು ಕೋವಿಡ್ ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಮಾಡುವ ಮೂಲಕ ಬೇರೆ ಜಿಲ್ಲೆಗಳಿಗೆ ಮಾದರಿಯಾಗಿದ್ದಾರೆ.
Published by: HR Ramesh
First published: April 21, 2021, 9:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories