ಮಾದರಿ ಶಿಕ್ಷಕ ನಾಗಭೂಷಣ್; ಮನೆ, ದೇವಸ್ಥಾನಗಳಲ್ಲಿ ಮಕ್ಕಳನ್ನ ಸೇರಿಸಿ ಪ್ರಾಯೋಗಿಕ ಪಾಠ

ಚಿತ್ರದುರ್ಗ ಜಿಲ್ಲೆಯ ಶಿಕ್ಷಕ ಕೆ.ಟಿ. ನಾಗಭೂಷಣ್ ಅವರು ಆನ್ಲೈನ್ ಪಾಠ ಬಿಟ್ಟು ಮನೆ ಮನೆಗಳಿಗೆ ತೆರಳಿ ಪಾಠ ಮಾಡ್ತಿದ್ದಾರೆ. ಅಲ್ಲದೇ ವಿಜ್ಞಾನ ಪ್ರಾಯೋಗಿಕ ಪಾಠಗಳನ್ನ ಮನೆಯಂಗಳದಲ್ಲೇ ಮಾಡಿ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

news18-kannada
Updated:September 18, 2020, 8:39 AM IST
ಮಾದರಿ ಶಿಕ್ಷಕ ನಾಗಭೂಷಣ್; ಮನೆ, ದೇವಸ್ಥಾನಗಳಲ್ಲಿ ಮಕ್ಕಳನ್ನ ಸೇರಿಸಿ ಪ್ರಾಯೋಗಿಕ ಪಾಠ
ಚಿತ್ರದುರ್ಗದ ಶಿಕ್ಷಕ ಕೆ.ಟಿ. ನಾಗಭೂಷಣ್ ಅವರಿಂದ ವಿಜ್ಞಾನ ಪ್ರಯೋಗ ಪಾಠ
  • Share this:
ಚಿತ್ರದುರ್ಗ: ರಾಜ್ಯದಲ್ಲಿ ಕೊರೋನಾ ಮಹಾಮಾರಿಯಿಂದ  ಶಿಕ್ಷಣ ಇಲಾಖೆ ಶಾಲೆಗಳನ್ನ ಸಂಪೂರ್ಣವಾಗಿ ಲಾಕ್ ಮಾಡಿದೆ. ಕಳೆದ ನಾಲ್ಕೈದು ತಿಂಗಳಿಂದ ಶಾಲೆಗೆ ತೆರಳಿ ಪಾಠ ಕಲಿಯಬೇಕಿದ್ದ ವಿದ್ಯಾರ್ಥಿಗಳಿಗೆ ಶಿಕ್ಷಣದ ಕೊರತೆ ಆದಂತಾಗಿದೆ. ಇದರಿಂದ ವಿಧ್ಯಾರ್ಥಿಗಳ ಶಿಕ್ಷಣ ಕುಗ್ಗಬಾರದು ಅಂತ ಶಿಕ್ಷಣ ಇಲಾಖೆ ಆನ್​ಲೈನ್ ಪಾಠ-ಪ್ರವಚನಗಳನ್ನ ಮಾಡಲಾಗುತ್ತಿದೆ. ಆನ್​ಲೈನ್ ಶಿಕ್ಷಣದ ಮೂಲಕ ಪ್ರಾಯೋಗಿಕ ಪರೀಕ್ಷೆಗಳು ಮಕ್ಕಳಿಗೆ ಪರಿಣಾಮಕಾರಿ ಆಗಲ್ಲ ಅನ್ನೋ ಅಭಿಪ್ರಾಯಗಳು ಕೇಳಿ ಬಂದಿವೆ. ಇವುಗಳನ್ನ ಅರಿತ ಚಳ್ಳಕೆರೆ ತಾಲೂಕಿನ ರೇಖಲಗೆರೆ ಸರ್ಕಾರಿ‌ ಶಾಲಾ ಶಿಕ್ಷಕ ಕೆ.ಟಿ. ನಾಗಭೂಷಣ್ ವಿನೂತನ ಬೋಧನಾ ಪರಿಕಲ್ಪನೆ ಮುಂದಾಗಿದ್ದಾರೆ.

ನಾಗಭೂಷಣ್ ಅವರು ವಿದ್ಯಾರ್ಥಿಗಳ ಮನೆಯಂಗಳಕ್ಕೆ ವಿಜ್ಞಾನ ಕಿಟ್ ಅನ್ನುವ ಶಿರ್ಷಿಕೆಯಡಿಯಲ್ಲಿ ವಿದ್ಯಾಗಮ ಯೋಜನೆ ಮೂಲಕ, ಮನೆಗಳು ಹಾಗೂ ದೇವಸ್ಥಾನಗಳಿಗೆ ವಿದ್ಯಾರ್ಥಿಗಳನ್ನ ಸೇರಿಸಿ ಪ್ರಾಯೋಗಿಕ ಪಾಠ ಮಾಡ್ತಿದ್ದಾರೆ. ಅಲ್ಲದೆ, ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ನೀಡುವ ಮೂಲಕ ಕೊರೋನಾ ಜಾಗೃತಿವಹಿಸಿ, ಬೋಧನೆಯ ಹೊಸ ಪ್ರಯೋಗ ಮಾಡಿದ್ದಾರೆ.

ಇದನ್ನೂ ಓದಿ: Bengaluru Accident: ಸಿಗ್ನಲ್​ನಲ್ಲಿ ಕಾರುಗಳ ನಡುವೆ ಅಪ್ಪಚ್ಚಿಯಾಯ್ತು ಬೈಕ್; ಅಮಾಯಕ ಸಾವು, ಕಾರು ಚಾಲಕ ಬಂಧನ

ಇನ್ನು, ನಾಗಭೂಷಣ್ ಅವರು ಕರ್ತವ್ಯ ನಿರ್ವಹಿಸುತ್ತಿರುವ ರೇಖಲಗೆರೆ ಪ್ರೌಢಶಾಲಾ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ವಿದ್ಯಾರ್ಥಿಗಳ ಮನೆಗಳಿಗೆ ನಿತ್ಯವೂ ನಾಗಭೂಷನ್ ಭೇಟಿ ನೀಡಿ ಪಾಠ ಹೇಳಿಕೊಡುತ್ತಿದ್ದಾರೆ. ಅಷ್ಟೇ ಅಲ್ಲದೆ, ವಿಜ್ಞಾನದಲ್ಲಿ ವಿದ್ಯಾರ್ಥಿಗಳ ಅತ್ಯುತ್ತಮ  ಜ್ಞಾನಾರ್ಜನೆಗೆ ಮನೆ, ದೇಗುಲಗಳಲ್ಲಿಯೇ ಪಠ್ಯದಲ್ಲಿನ ಪ್ರಯೋಗಿಕ ತರಬೇತಿ ಶಿಕ್ಷಣ ನೀಡುತ್ತಿದ್ದಾರೆ. 8, 9 ಮತ್ತು 10 ನೇ ತರಗತಿಯ ಮಕ್ಕಳಿಗೆ ಅನುಭವಾತ್ಮಕ ಕಲಿಕೆಗೆ ಉತ್ತೇಜಿಸುತ್ತಿರುವ ನಾಗಭೂಷಣ್ ಅವರ ಪ್ರಯತ್ನಕ್ಕೆ ವಿದ್ಯಾರ್ಥಿಗಳು ಆತ್ಮಾಭಿಮಾನದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಶಿಕ್ಷಕರ ಈ ಪ್ರಯತ್ನಕ್ಕೆ ವಿದ್ಯಾರ್ಥಿಗಳು ಕೂಡ ಬೆಂಬಲ ನೀಡುತ್ತಿದ್ದು, ಪ್ರಾಯೋಗಿಕ ತರಗತಿಗಳಿಗೆ ತಪ್ಪದೇ ಹಾಜರಾಗುತ್ತಿದ್ದಾರೆ. ಪಠ್ಯದಲ್ಲಿರುವ ವಸ್ತುಗಳಲ್ಲಿ ಆಮ್ಲತೆ- ಪ್ರತ್ಯಮ್ಲತೆಯ ಕಂಡು ಹಿಡಿಯುವುದು, ದ್ಯುತಿ ಸಂಶ್ಲೇಷಣೆ ಕ್ರಿಯೆ, ಸೇರಿ ವಿವಿಧ ಪ್ರಯೋಗಗಳನ್ನ ನಾಗಭೂಷನ್ ವಿದ್ಯಾರ್ಥಿಗಳಿಗೆ ತೋರಿಸಿ, ಪರಿಣಾಮಕಾರಿ ಬೋಧನೆ ಮಾಡ್ತಿದ್ದಾರೆ. ಈ ವಿಶಿಷ್ಟ ಪಾಠದ ಪರಿಕಲ್ಪನೆಗೆ ಮುಂದಾಗಿರುವ ನಾಗಭೂಷಣ್ ಅವರು ಇತರೇ ಶಿಕ್ಷಕರಿಗೂ ಮಾದರಿಯಾಗಿದ್ದಾರೆ.

ವರದಿ: ವಿನಾಯಕ ತೊಡರನಾಳ್
Published by: Vijayasarthy SN
First published: September 18, 2020, 8:39 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading