ಶಿವಮೊಗ್ಗದಲ್ಲಿ ಕೊರೋನಾ ಚಿಕಿತ್ಸೆ ಗೆ ಖಾಸಗಿ ವೈದ್ಯರ ಸೇವೆ ಪಡೆಯಲು ನಿರ್ಧಾರ: ಸಚಿವ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗದಲ್ಲಿ ಈಗ ಏರುತ್ತಿರುವ ಕೊರೋನಾ ಪ್ರಕರಣಗಳನ್ನ ಗಮನಿಸಿದರೆ ಖಾಸಗಿ ವೈದ್ಯರ ಸೇವೆ ಅಗತ್ಯ ಬೀಳುತ್ತದೆ. ಹಾಗೆಯೇ, ಆಯುರ್ವೇದ ವೈದ್ಯರ ಸೇವೆಯನ್ನೂ ಪಡೆಯಲಾಗುವುದು ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

news18-kannada
Updated:August 18, 2020, 4:34 PM IST
ಶಿವಮೊಗ್ಗದಲ್ಲಿ ಕೊರೋನಾ ಚಿಕಿತ್ಸೆ ಗೆ ಖಾಸಗಿ ವೈದ್ಯರ ಸೇವೆ ಪಡೆಯಲು ನಿರ್ಧಾರ: ಸಚಿವ ಕೆ.ಎಸ್. ಈಶ್ವರಪ್ಪ
ಕೆಎಸ್ ಈಶ್ವರಪ್ಪ
  • Share this:
ಶಿವಮೊಗ್ಗ(ಆ. 18): ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಖಾಸಗಿ ವೈದ್ಯರ ಸೇವೆಯನ್ನು ಪಡೆದುಕೊಳ್ಳಲು ನಿರ್ಧರಿಸಲಾಗಿದೆ. ಖಾಸಗಿ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸೇವೆಯನ್ನು ಒದಗಿಸಲು ಮುಂದೆ ಬರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಮನವಿ ಮಾಡಿದರು. ಈಗಾಗಲೇ ಒಟ್ಟು 30 ಖಾಸಗಿ ವೈದ್ಯರು ಸೇವೆಯನ್ನು ಒದಗಿಸಲು ಮುಂದೆ ಬಂದಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಐಎಂಎ, ಕೆಪಿಎಂಇ ಸೇರಿದಂತೆ ವಿವಿಧ ವೈದ್ಯಕೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಈ ಕುರಿತು ಸಚಿವರು ಸಮಾಲೋಚನೆ ನಡೆಸಿದರು. ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ವೈದ್ಯರ ಸೇವೆ ಪಡೆದುಕೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ತಿಳಿಸಿದರು.

ಮೆಗ್ಗಾನ್ ಆಸ್ಪತ್ರೆಗೆ ಅಗತ್ಯವಿರುವ ಡಿ ಗ್ರೂಪ್ ಹಾಗೂ ನರ್ಸ್​ಗಳ ನೇಮಕಾತಿಗೆ ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರದ ಕಾಯ್ದೆ ಪ್ರಕಾರ ಎಲ್ಲಾ ಎಂಬಿಬಿಎಸ್ ಪದವೀಧರರು ಕನಿಷ್ಠ ಒಂದು ವರ್ಷ ಸರ್ಕಾರಿ ಸೇವೆ ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ, ಕೆಲವೇ ದಿನಗಳಲ್ಲಿ ಈ ವರ್ಷದ ಹೊಸ ಪದವೀಧರರ ಸೇವೆ ಲಭ್ಯವಾಗಲಿದೆ. ಇದರ ಜತೆಯಲ್ಲೇ ಖಾಸಗಿ ವೈದ್ಯರು ಕೊರೋನಾ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕು ಎಂದು ಕೆಎಸ್ ಈಶ್ವರಪ್ಪ ಕರೆ ನೀಡಿದರು.

ಇದನ್ನೂ ಓದಿ: ತಮಿಳುನಾಡಿನ ಸ್ಟೆರ್​ಲೈಟ್ ಕಾಪರ್ ಘಟಕ ಪುನಾರಂಭಕ್ಕೆ ಮದ್ರಾಸ್ ಹೈಕೋರ್ಟ್ ನಕಾರ

ಇದೇ ವೇಳೆ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು  ಮಾತನಾಡಿ, ಈಗಾಗಲೇ ಸುಬ್ಬಯ್ಯ ಮೆಡಿಕಲ್ ಕಾಲೇಜು, ನಂಜಪ್ಪ ಆಸ್ಪತ್ರೆ ಹಾಗೂ ನಾರಾಯಣ ಹೃದಯಾಲಯದಲ್ಲಿ 600 ಬೆಡ್​ಗಳು ಲಭ್ಯವಿದ್ದು, ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೆಗ್ಗಾನ್ ಆಸ್ಪತ್ರೆ ಹಾಗೂ ಇನ್ನಿತರ ಕೋವಿಡ್ ಆಸ್ಪತ್ರೆಯಲ್ಲಿ ಖಾಸಗಿ ವೈದ್ಯರ ಸೇವೆಯನ್ನು ಪಡೆದುಕೊಳ್ಳುವ ಕುರಿತು ಜಿಲ್ಲಾ ಮಟ್ಟದ ತಜ್ಞರ ಸಮಿತಿಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಸರ್ಕಾರದ ಮಾರ್ಗಸೂಚಿ ಪ್ರಕಾರ ಸೇವೆ ಸಲ್ಲಿಸಲು ಮುಂದೆ ಬರುವ ವೈದ್ಯರಿಗೆ ಸೂಕ್ತ ಸಂಭಾವನೆಯನ್ನು ನೀಡಲಾಗುವುದು ಎಂದು ಹೇಳಿದರು.ಪ್ರಸ್ತುತ ಕೊರೋನಾ ಪೀಡಿತರ ಪ್ರಮಾಣವನ್ನು ಗಮನಿಸಿದರೆ ಮುಂದಿನ ಒಂದೆರಡು ದಿನಗಳಲ್ಲಿ ಖಾಸಗಿ ವೈದ್ಯರ ಸೇವೆಯ ಅಗತ್ಯ ಬೀಳಬಹುದು. ಇದರೊಂದಿಗೆ ಆಯುರ್ವೇದಿಕ್ ವೈದ್ಯರ ಸೇವೆಯನ್ನು ಟ್ರಯಾಜ್ ಸೆಂಟರ್ ಹಾಗೂ ಕೋವಿಡ್ ಕೇರ್ ಸೆಂಟರ್​ನಲ್ಲಿ ಪಡೆಯಲಾಗುವುದು ಎಂದರು.

ಇದನ್ನೂ ಓದಿ: ಅನುದಾನ ವಾಪಸ್ಸಾದರೆ ಇಲಾಖಾ ಅಧಿಕಾರಿಗಳೇ ಹೊಣೆ; ಹಾವೇರಿ ಜಿ.ಪಂ. ಅಧ್ಯಕ್ಷ ಎಚ್ಚರಿಕೆಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್. ವೈಶಾಲಿ, ಐ.ಎಂ.ಎ, ಕೆಪಿಎಂಇ, ಫಿಸಿಷಿಯನ್ಸ್ ಅಸೋಸಿಯೇಶನ್ ಪ್ರತಿನಿಧಿಗಳು ಸೇರಿದಂತೆ ಹಿರಿಯ ವೈದ್ಯಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

ವರದಿ: ಹೆಚ್ ಆರ್ ನಾಗರಾಜ
Published by: Vijayasarthy SN
First published: August 18, 2020, 4:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading