Karnataka Bandh: ಚಾಮರಾಜನಗರದಲ್ಲಿ ಬಂದ್ ಯಶಸ್ವಿ; ವಿವಿಧೆಡೆ ರೈತರಿಂದ ಭಾರೀ ಪ್ರತಿಭಟನೆ

ಚಾಮರಾಜನಗರದಲ್ಲಿ ಬೆಳ್ಳಂಬೆಳಿಗ್ಗೆ ವಿವಿಧ ಸಂಘಟನೆಗಳ ಕಾರ್ಯಕರ್ತರು ವಿವಿದೆಡೆ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆಯ ಕಾವು ಹೆಚ್ಚಿಸಿದರು.  ನಗರದ ಭುವನೇಶ್ವರಿ ವೃತ್ತ , ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗ, ಎಪಿಎಂಸಿ   ಹಾಗು ರಾಷ್ಟ್ರೀಯ ಹೆದ್ದಾರಿ 209 ಸೇರಿದಂತೆ ವಿವಿದೆಡೆ ಪ್ರತಿಭಟನೆ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ದ ದಿಕ್ಕಾರದ ಘೋಷಣೆ ಕೂಗಿದರು.

news18-kannada
Updated:September 28, 2020, 6:47 PM IST
Karnataka Bandh: ಚಾಮರಾಜನಗರದಲ್ಲಿ ಬಂದ್ ಯಶಸ್ವಿ; ವಿವಿಧೆಡೆ ರೈತರಿಂದ ಭಾರೀ ಪ್ರತಿಭಟನೆ
ಚಾಮರಾಜನಗರ.
  • Share this:
ಚಾಮರಾಜನಗರ (ಸೆ.28) ಭೂಸುಧಾರಣಾ ಕಾಯ್ದೆ ಹಾಗು ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಇಂದು ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಗೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯಾದ್ಯಂತ ಬಂದ್  ಯಶಸ್ವಿಯಾಗಿದ್ದು ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾ ಕೇಂದ್ರ ಹಾಗು ತಾಲೋಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಹಾಗು  ರಾಜ್ಯ ಸರ್ಕಾರದ ವಿರುದ್ದ  ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಅಂಗಡಿ ಮುಂಗಟ್ಟುಗಳು  ಮುಚ್ಚಿದ್ದವು. ಅಗತ್ಯ ವಸ್ತು ಹಾಗು ಸೇವೆ ಹೊರತು ಪಡಿಸಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು‌ ಬೆಳಿಗ್ಗೆ  ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಒಂದೆರೆಡು ಬಸ್ ಗಳು ಮೈಸೂರಿಗೆ ಹೊರಟವು. ಈ ವೇಳೆ ರೈತರು ಪ್ರತಿಭಟನೆ ನಡೆಸಿದಾಗ ಬಸ್ ಸಂಚಾರ ಸ್ಥಗಿತಗೊಳಿಸಲಾಯ್ತು . ಇದಲ್ಲದೆ ಖಾಸಗಿ ಬಸ್ ಸಂಚಾರವನ್ನು ಸಹ ಸ್ಥಗಿತಗೊಳಿಸಲಾಗಿತ್ತು.

ಚಾಮರಾಜನಗರದಲ್ಲಿ ಬೆಳ್ಳಂಬೆಳಿಗ್ಗೆ ವಿವಿಧ ಸಂಘಟನೆಗಳ ಕಾರ್ಯಕರ್ತರು ವಿವಿದೆಡೆ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆಯ ಕಾವು ಹೆಚ್ಚಿಸಿದರು.  ನಗರದ ಭುವನೇಶ್ವರಿ ವೃತ್ತ , ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗ, ಎಪಿಎಂಸಿ   ಹಾಗು ರಾಷ್ಟ್ರೀಯ ಹೆದ್ದಾರಿ 209 ಸೇರಿದಂತೆ ವಿವಿದೆಡೆ ಪ್ರತಿಭಟನೆ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ದ ದಿಕ್ಕಾರದ ಘೋಷಣೆ ಕೂಗಿದರು.

ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗ  ರೈತರು ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ನೀರು ಹಾಕಿ ಬೆಂಕಿ ನಂದಿಸಿದರು. ಈ ವೇಳೆ ಪೊಲೀಸರನ್ನು   ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ರೈತರು ಬಿಜೆಪಿ ಕಾಂಗ್ರೆಸ್ ಪಕ್ಷಗಳು ಹೀಗೆ ಪ್ರತಿಭಟನೆ ನಡೆಸಿದಾಗ ಹೀಗೆಯೇ ಬೆಂಕಿ ನಂದಿಸಿದ್ದೀರಾ , ಸರ್ಕಾರದ  ನೀತಿಗಳಿಂದ ನಮ್ಮ ಮನೆಗಳು ಉರಿದು ಹೋಗುತ್ತಿವೆ ನೀವು ರೈತರ ಮಕ್ಕಳಲ್ಲವೇ ಎಂದು ಆಕ್ರೋಶ   ವ್ಯಕ್ತಪಡಿಸಿದರು.

ಇನ್ನು ಎಪಿಎಂಸಿ ಮುಂಭಾಗ ಇರುವ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ಕೆಲಕಾಲ  ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು ಹೆದ್ದಾರಿಯಲ್ಲಿ  ಸತ್ತೋಯ್ತಪ್ಪ ಸತ್ತೋಯ್ತು.. ಸರ್ಕಾರ ಸತ್ತೋಯ್ತು ಎಂದು ಲಯಬದ್ಧವಾಗಿ ಘೋಷಣೆ ಕೂಗುತ್ತಾ ಡ್ಯಾನ್ಸ್ ಮಾಡುತ್ತಾ ವಿನೂತನ ರೀತಿಯಲ್ಲಿ ರೈತರು ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಿದ ರೈತರು ಹಾಗು ವಿವಿಧ ಸಂಘಟನೆಗಳ ಕಾರ್ಯಕರ್ತರು ತೆರೆದಿದ್ದ  ಕೆಲವು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸಹಕರಿಸುವಂತೆ ಕೈಮುಗಿದು ಮನವಿ ಮಾಡುತ್ತಿದ್ದ ದೃಶ್ಯ ಕಂಡು ಬಂತು. ಜೋಡಿ ರಸ್ತೆಯಲ್ಲಿ ತೆರೆದಿದ್ದ ಹೊಟೇಲ್ ಒಂದರ ಮುಂದೆ ನಿಜಧ್ವನಿ ಹೋರಾಟ ಸಮಿತಿಯ ಗೋವಿಂದರಾಜು ಎಂಬುವವರು ದೀರ್ಘ ದಂಡ ನಮಸ್ಕಾರ ಹಾಕಿ ಬಂದ್ ಬೆಂಬಲಿಸುವಂತೆ ಮನವಿ ಮಾಡಿದ್ದು ವಿಶೇಷವಾಗಿತ್ತು .

ಇದೇ ವೇಳೆ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನಾ ನಿರತರ ಮೇಲೆ ಪೊಲೀಸರು ಡ್ರೋನ್  ಕಣ್ಗಾವಲು ಇಟ್ಟಿದ್ದು ಸಹ ಕಂಡು ಬಂತು. ಇನ್ನು ಗುಂಡ್ಲುಪೇಟೆ ಯಲ್ಲು ಸಹ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯ್ತು. ಬಂದ್ ವೇಳೆ ಪ್ರತಿಭಟನೆ ನಡೆಸುತ್ತಿದ್ದ 25 ಕ್ಕು ಹೆಚ್ಚು ರೈತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಇದನ್ನೂ ಓದಿ : ಕೊರೋನಾ ಪರೀಕ್ಷೆಯ ಜೊತೆಗೆ ಇನ್ಮುಂದೆ ಕ್ಷಯರೋಗ ಪರೀಕ್ಷೆಯೂ ಕಡ್ಡಾಯ; ಏಕೆ ಗೊತ್ತಾ?ಯಳಂದೂರು ಪಟ್ಟಣದಲ್ಲು ರೈತ ಸಂಘದ ಕಾರ್ಯಕರ್ತರು ಹೆದ್ದಾರಿಯಲ್ಲಿ  ಪ್ರತಿಭಟಿಸಿ ನ ರಸ್ತೆ ತಡೆ ನಡೆಸಿದರು. ಇಲ್ಲಿಯು ಸಹ ಬಂದ್ ಬಹುತೇಕ ಯಶಸ್ವಿಯಾಯ್ತು
ಇನ್ನು ಕೊಳ್ಳೇಗಾಲ ದಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಯ್ತು. ರೈತರು ನಡೆಸಿದ ಪ್ರತಿಭಟನೆಯಲ್ಲಿ ಹನೂರು ಶಾಸಕ ಆರ್.ನರೇಂದ್ರ, ಕೊಳ್ಳೇಗಾಲದ ಶಾಸಕ ಎನ್ ಮಹೇಶ್, ಮಾಜಿ ಶಾಸಕರಾದ ಎ‌ಆರ್.ಕೃಷ್ಣಮೂರ್ತಿ, ಜಯಣ್ಣ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.ಇಂದಿನ ಬಂದ್ ಗೆ ಕಾಂಗ್ರೆಸ್, ಬಿಎಸ್ಪಿ,  ಎಸ್‌ಡಿ.ಪಿ.ಐ,, ವಿವಿಧ ಕನ್ನಡಪರ ಸಂಘಟನೆಗಳು, ಸಿಐಟಿಯು, ದಲಿತ ಸಂಘಟನೆಗಳು ಪ್ರಗತಿಪರ ಸಂಘಟನೆಗಳು ಸೇರಿದಂತೆ ಹಲವಾರು ಸಂಘಸಂಸ್ಥೆಗಳ ಬೆಂಬಲ ವ್ಯಕ್ತಪಡಿಸಿದ್ದವು.
Published by: MAshok Kumar
First published: September 28, 2020, 4:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading