ಕಲಬುರ್ಗಿಯ ಕುಖ್ಯಾತ ರೌಡಿ ಶೀಟರ್ ಕೆಂಚ್ಯಾಶಾಣ್ಯ ಹಡಗಿಲ್ ಚಾಮರಾಜನಗರಕ್ಕೆ ಗಡಿಪಾರು

ಕಲಬುರ್ಗಿಯ ರೌಡಿ ಶೀಟರ್ ಕೆಂಚ್ಯಾಶಾಣ್ಯ ಹಡಗಿಲ್ ನನ್ನು ಇಂದಿನಿಂದ ಆರು ತಿಂಗಳ ಕಾಲ ಗಡಿಪಾರು ಮಾಡಿದ್ದು, ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರಕ್ಕೆ ಗಡಿಪಾರು ಮಾಡಲಾಗಿದೆ

news18-kannada
Updated:September 18, 2020, 10:49 PM IST
ಕಲಬುರ್ಗಿಯ ಕುಖ್ಯಾತ ರೌಡಿ ಶೀಟರ್ ಕೆಂಚ್ಯಾಶಾಣ್ಯ ಹಡಗಿಲ್ ಚಾಮರಾಜನಗರಕ್ಕೆ ಗಡಿಪಾರು
ರೌಡಿ ಶೀಟರ್ ಕೆಂಚ್ಯಾಶಾಣ್ಯ ಹಡಗಿಲ್
  • Share this:
ಕಲಬುರ್ಗಿ (ಸೆಪ್ಟೆಂಬರ್​. 18): ಕಲಬುರ್ಗಿ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಮಿತಿ ಮೀರಿವೆ. ಹಾಡಹಗಲೇ ಕೊಲೆಗಳು, ಫೈರಿಂಗ್ ಮಾಡುವುದು ಎಗ್ಗಿಲ್ಲದೆ ನಡೆದಿದೆ. ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವವರಿಗೆ ಕಾನೂನೆಂದರೆ ಗೌರವವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಅಪರಾಧ ಕೃತ್ಯಗಳನ್ನು ಮಟ್ಟ ಹಾಕಲು ಕಲಬುರ್ಗಿ ಪೊಲೀಸರು ಮುಂದಾಗಿದ್ದಾರೆ. ಇತ್ತೀಚೆಗಷ್ಟೇ ಓರ್ವ ರೌಡಿ ಶೀಟರ್ ನ ಮೇಲೆ ಫೈರಿಂಗ್ ಮಾಡಿದ್ದ ಪೊಲೀಸರು, ಇದೀಗ ಮತ್ತೋರ್ವ ಕುಖ್ಯಾತ ರೌಡಿ ಶೀಟರ್ ನನ್ನು ಗಡಿಪಾರು ಮಾಡಿದ್ದಾರೆ. ಕಲಬುರ್ಗಿಯ ಕುಖ್ಯಾತ ರೌಡಿ ಶೀಟರ್ ಶರಣು @ ಕೆಂಚ್ಯಾಶಾಣ್ಯ ಹಡಗಿಲ್ ನನ್ನು ಗಡಿಪಾರು ಮಾಡಲಾಗಿದೆ. ಕಲಬುರ್ಗಿಯ ರಾಘವೇಂದ್ರನಗರ ಠಾಣೆಯ ವ್ಯಾಪ್ತಿಯಲ್ಲಿದ್ದ ರೌಡಿಶೀಟರ್, ಹಲವಾರು ಪಾತಕ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಹೊತ್ತಿದ್ದಾನೆ. ರೌಡಿಶೀಟರ್ ಶರಣುನನ್ನು ಗಡಿಪಾರು ಮಾಡಿ ಕಲಬುರ್ಗಿ ಪೊಲೀಸ್ ಕಮೀಷನರ್ ಸತೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಬ್ರಹ್ಮಪುರ ಕಾಲೋನಿಯ ಕನಕ ನಗರ ನಿವಾಸಿಯಾಗಿರುವ ಕೆಂಚ್ಯಾ ಹಡಗಿಲ್, ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಒಂದು ಕೊಲೆ ಪ್ರಕರಣ, ಎರಡು ಕೊಲೆ ಯತ್ನ ಪ್ರಕರಣ, ಮಾರಾಕಾಸ್ತ್ರಗಳೊಂದಿಗೆ ದರೋಡೆ ಸೇರಿದಂತೆ 9 ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿ. ಆಗಾಗ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಲೇ ಇರುವ ರೌಡಿಶೀಟರ್. ಈ ಹಿನ್ನೆಲೆಯಲ್ಲಿ ಗಡಿಪಾರುಗೊಳಿಸಿ ಆದೇಶ ಹೊರಡಿಸಲಾಗಿದೆ. ಕಲಬುರ್ಗಿ ನಗರ ಮತ್ತು ಕಲಬುರ್ಗಿ ಜಿಲ್ಲೆಯ ವ್ಯಾಪ್ತಿಯಿಂದ ಗಡಿಪಾರು ಮಾಡಲಾಗಿದೆ.

ಇಂದಿನಿಂದ ಆರು ತಿಂಗಳ ಕಾಲ ಗಡಿಪಾರು ಮಾಡಿದ್ದು, ರಾಜ್ಯದ ಗಡಿ ಜಿಲ್ಲೆ ಚಾಮರಾಜ ನಗರಕ್ಕೆ ಗಡಿಪಾರು ಮಾಡಲಾಗಿದೆ. ಚಾಮರಾಜನಗರ ಜಿಲ್ಲೆ ಹನೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ. ಒಂದು ವೇಳೆ ಗಡೀಪಾರು ಆಗದೇ ಇದ್ದಲ್ಲಿ ಕಠಿಣ ಕ್ರಮ ಕೈಗೊಳ್ಳೋದಾಗಿ ಸತೀಶ್ ಕುಮಾರ್ ಎಚ್ಚಸಿದ್ದಾರೆ.

ಇದನ್ನೂ ಓದಿ : Kodagu Rain: ಕೊಡಗಿನಲ್ಲಿ ಭಾರೀ ಮಳೆ ಸಾಧ್ಯತೆ; ನಾಳೆಯಿಂದ ರೆಡ್​ ಆಲರ್ಟ್​ ಘೋಷಣೆ

ರೌಡಿಶೀಟರ್ ಚಲನವಲನದ ಮೇಲೆ ನಿಗಾ ಇಡುವಂತೆಯೂ ಪೊಲೀಸರಿಗೆ ಕಮೀಷನರ್ ಸೂಚನೆ ನೀಡಿದ್ದಾರೆ. ಕೆಂಚ್ಯಾನ ಗಡಿಪಾರಿನಿಂದಾಗಿ ಇತರೆ ರೌಡಿ ಶೀಟರ್ ಗಳಲ್ಲಿ ನಡುಕ ಶುರವಾಗಿದೆ. ತಮ್ಮನ್ನೂ ಎಲ್ಲಿ ಗಡಿಪಾರು ಮಾಡುತ್ತಾರೆ ಅಥವಾ ಕೋಕಾ ಕಾಯ್ದೆ ಅಡಿ ತಮ್ಮ ವಿರುದ್ಧ ಪ್ರಕರಣ ದಾಖಲಿಸುತ್ತಾರೆ ಎಂಬ ಭೀತಿ ಆವರಿಸಿದೆ.

ಪೊಲೀಸರ ನಡೆಯಿಂದಾಗಿ ಜನತೆ ಮಾತ್ರ ಸಮಾಧನಗೊಂಡಿದ್ದಾರೆ. ಈಗಲಾದರೂ ಕಲಬುರ್ಗಿ ನಗರದಲ್ಲಿ ಅಪರಾಧ ಕೃತ್ಯಗಳಿಗೆ ಕಡಿವಾಣ ಬೀಳಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.
Published by: G Hareeshkumar
First published: September 18, 2020, 10:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading