HOME » NEWS » District » INCREASING INFECTION IN RURAL PART OF BELGAUM DISTRICT CSB MAK

ಬೆಳಗಾವಿಯ ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಸೋಂಕು; ರೋಗ ಲಕ್ಷಣವಿದ್ದರೂ ಪರೀಕ್ಷೆಗೆ ಒಳಗಾಗುತ್ತಿಲ್ಲ ಜನ!

ಬೆಳಗಾವಿ ಜಿಲ್ಲೆಯಲ್ಲಿ 1300ಕ್ಕೂ ಹೆಚ್ಚು ಗ್ರಾಮಗಳು ಇವೆ. ಪ್ರತಿಯೊಂದು ಗ್ರಾಮದಲ್ಲಿ ಇದೀಗ ಕೊರೋನಾ ಸೋಂಕು ಆವರಿಸಿಕೊಂಡಿದೆ. ಪ್ರತಿ ಗ್ರಾಮದಲ್ಲಿ ಸಾವು, ನೋವು ಸಂಭವಿಸಿದೆ.

news18-kannada
Updated:June 1, 2021, 6:22 AM IST
ಬೆಳಗಾವಿಯ ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಸೋಂಕು; ರೋಗ ಲಕ್ಷಣವಿದ್ದರೂ ಪರೀಕ್ಷೆಗೆ ಒಳಗಾಗುತ್ತಿಲ್ಲ ಜನ!
ಸಾಂದರ್ಭಿಕ ಚಿತ್ರ.
  • Share this:
ಬೆಳಗಾವಿ; ಕೊರೊನಾ ಸೋಂಕಿನ ಎರಡನೇ ಅಲೆ ಬೆಳಗಾವಿ ನಗರ ಪ್ರದೇಶಕ್ಕಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿ ಮಾಡಿದೆ. ಬೆಳಗಾವಿ ಅಂತಹ ದೊಡ್ಡ ಜಿಲ್ಲೆಯಲ್ಲಿ ಇದು ಸಾಕಷ್ಟು ಸಾವು, ನೋವಿಗೆ ಕಾರಣವಾಗಿದೆ. ಇನ್ನೂ ಗ್ರಾಮೀಣ ಭಾಗದಲ್ಲಿ ಜನ ರೋಗ ಲಕ್ಷಣ ಇದ್ರು ಪರೀಕ್ಷೆಗೆ ಒಳಗಾಗುತ್ತಿಲ್ಲ ಈ ಕಾರಣದಿಂದ ಹಳ್ಳಿಗಳಲ್ಲಿ ಅತಿ ಹೆಚ್ಚು ಜನ ಮೃತಪಟ್ಟಿದ್ದಾರೆ. ಜತೆಗೆ ಬೆಳಗಾವಿ ಜಿಲ್ಲಾಢಳಿತ 130 ತಂಡ ರಚನೆ ಮಾಡಿ ಗ್ರಾಮೀಣ ಜನರ ಪರೀಕ್ಷೆಗೆ ಮುಂದಾಗಿದೆ. ಆದರೇ ಕೊರೋನಾ ಸೋಂಕಿನ ಪರೀಕ್ಷೆಯ ಸಂಖ್ಯೆ ಇನ್ನಷ್ಟು ಹೆಚ್ಚಾಗಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ 1300ಕ್ಕೂ ಹೆಚ್ಚು ಗ್ರಾಮಗಳು ಇವೆ. ಪ್ರತಿಯೊಂದು ಗ್ರಾಮದಲ್ಲಿ ಇದೀಗ ಕೊರೋನಾ ಸೋಂಕು ಆವರಿಸಿಕೊಂಡಿದೆ. ಪ್ರತಿ ಗ್ರಾಮದಲ್ಲಿ ಸಾವು, ನೋವು ಸಂಭವಿಸಿದೆ. ಸೋಂಕಿನ ಭೀತಿಯಿಂದ ಜನ ಲಕ್ಷಣ ಇದ್ರು ಸಹ ಪರೀಕ್ಷೆಗೆ ಒಳಗಾಗುತ್ತಿಲ್ಲ. ಇದು ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮತ್ತಷ್ಟು ಆತಂಕವನ್ನು ಸೃಷ್ಠಿಸಿದೆ. ಬೆಳಗಾವಿ ಜಿಲ್ಲೆಯ ಬಡಾಲ್ ಅಂಕಲಗಿ ಗ್ರಾಮದಲ್ಲಿ ಈ ಬಗ್ಗೆ ರಿಯಾಲಿಟಿ ಚೆಕ್ ಮಾಡಿದಾಗ ಅನೇಕ ವಿಷಯಗಳು ಬೆಳಕಿಗೆ ಬಂದಿವೆ.

ಗ್ರಾಮದಲ್ಲಿ 5-6 ಸಾವಿರ ಜನ ಸಂಖ್ಯೆ ಅನೇಕರಲ್ಲಿ ಸೋಂಕಿನ ಲಕ್ಷಣ ಸಹ ಇದೆ. ಆದರೇ  ಆರೋಗ್ಯ ಇಲಾಖೆಯಿಂದ ಕೇವಲ ನೂರು ಜನರ ಪರೀಕ್ಷೆ ಮಾಡಿದೆ.  ನೂರು ಜನರ ಪರೀಕ್ಷೆಯಲ್ಲಿ ಇಬ್ಬರಿಗೆ ಮಾತ್ರ ಸೋಂಕು ದೃಢಪಟ್ಟಿದೆ. ಗ್ರಾಮದಲ್ಲಿ ಕಳೆದ 15 ದಿನದಲ್ಲಿ 32ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಮನೆಗೆ ಓರ್ವರಂತೆ ಗ್ರಾಮದಲ್ಲಿ ಅನಾರೋಗ್ಯ ಪೀಡಿತರು ಇದ್ದಾರೆ. ಇಷ್ಟೇಲ್ಲ ಸಮಸ್ಯೆ ಇದ್ರು ಸಹ ಜನ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲಿಸುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಇದನ್ನೂ ಓದಿ: Rahul Gandhi: ಜನತೆಗೆ ಲಸಿಕೆ ಕೊಡುವಲ್ಲಿ ಮೋದಿ ಸರ್ಕಾರದ ಸೋಲು ಭಾರತ ಮಾತೆಯ ಎದೆಗೆ ಇರಿದಂತೆ: ರಾಹುಲ್ ಗಾಂಧಿ ​​

ಬೆಳಗಾವಿ ಜಿಲ್ಲಾಡಳಿತದಿಂದ ಸರ್ಕಾರ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಹಮ್ಮಿಕೊ ಳ್ಳಾಗಿದೆ. 130 ತಂಡವನ್ನು ರಚಿಸಿಕೊಂಡು ಹಳ್ಳಿ ಹಳ್ಳಿಗಳಲ್ಲಿ ಸೋಂಕಿನ ಪರೀಕ್ಷೆ ನಡೆಸಲಾಗುತ್ತಿದ್ದು. ಕೇವಲ ಗ್ರಾಮದಲ್ಲಿ ಲಕ್ಷಣ ಹೊಂದಿರೋ 100 ಜನರಿಗೆ ಮಾತ್ರ ಪರೀಕ್ಷೆ ಮಾಡಲಾಗುತ್ತಿದೆ ಎನ್ನುವ ಆರೋಪ ಇದೆ.  ಬೆಳಗಾವಿ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಗ್ರಾಮಗಳಲ್ಲಿ ಇದೆ 5 ಸಾವಿರಕ್ಕೂ ಹೆಚ್ಚಿನ ಸಂಖ್ಯೆ ಹೊಂದಿವೆ. ಈ ಗ್ರಾಮದಲ್ಲಿ ಹೆಚ್ಚಿನ ಕೊರೋನಾ ಪರೀಕ್ಷೆಯನ್ನು ನಡೆಸಬೇಕು ಎನ್ನುವ ಆಗ್ರಹ ಇದೆ.

ಇದನ್ನೂ ಓದಿ: ನಮ್ಮ ಕಣ್ಣು ಮುಚ್ಚಿಸಿ, ನಮ್ಮ ಮೇಲೆ ಸವಾರಿ ಮಾಡಲು ಸಾಧ್ಯವಿಲ್ಲ; ಗೌತಮ್ ಗಂಭೀರ್​ಗೆ ದೆಹಲಿ ಹೈಕೋರ್ಟ್​ ಛೀಮಾರಿ

ಬೆಳಗಾವಿ ಗ್ರಾಮೀಣ ಕ್ಷೇತ್ರದ ಅನೇಕ ಗ್ರಾಮಗಳಲ್ಲಿ ಸೋಂಕು ಉಲ್ಭಣಗೊಂದಿದೆ. ಈ ಬಗ್ಗೆ ಮಾತನಾಡಿದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್. ಪಿಎಚ್ ಸಿ, ಸಿಎಚ್ ಸಿಗಳು 25 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ.  ಪಿಎಚ್ ಸಿ ಮೇಲ್ದರ್ಜೆಗೆ ಏರಿಸಲು ಪ್ರಯತ್ನ ಮಾಡಿದ್ರು ವಿಫಲವಾಗಿದೆ. ಪಿಎಚ್ ಸಿ ಮೇಲ್ದರ್ಜೆಗೆ ಏರಿಸಲು ಕೇಂದ್ರ ಸರ್ಕಾರದ ಅನುಮತಿ ಬೇಕು. ಆದರೇ ದೆಹಲಿ, ಬೆಂಗಳೂರಿನ ತಿಕ್ಕಾಟದಲ್ಲಿ ಪೈಲ್ ಹಾಗೆ ಉಳಿದು ಕೊಂಡಿವೆ. ವೈದ್ಯರು, ತಾಂತ್ರಿಕ ಸಿಬ್ಬಂದಿ, ನರ್ಸ್ ಎಲ್ಲರ ಕೊರತೆ ಇದೆ. ಬೆಳಗಾವಿ ಜಿಲ್ಲಾಡಳಿತ 130 ತಂಡದಿಂದ ಎಲ್ಲಾ ಗ್ರಾಮ ತಲುಪುವುದು ಅಸಾಧ್ಯ ಎಂದರು.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸು ವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: MAshok Kumar
First published: June 1, 2021, 6:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories