ಕರಾವಳಿಯಲ್ಲಿ ಮಳೆಯ ಆರ್ಭಟ; ಜಲ ಪ್ರಳಯ ಸೃಷ್ಟಿಸಿದೆ ಹಲವು ಅವಾಂತರ!

ಉಡುಪಿ ಜಿಲ್ಲೆಯಲ್ಲಿ 31 ಗಂಟೆಗಳ ಕಾಲ ನಿರಂತರ ಮಳೆ ಯಾಗಿದೆ. ಜಿಲ್ಲೆಯಾದ್ಯಂತ 117ಮಿಲಿ ಮೀಟರ್ ಸರಾಸರಿ ಮಳೆಯಾಗಿತ್ತು. ಇನ್ನೆರಡು ದಿನ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಯಾಗಿದೆ.ನದಿಪಾತ್ರದ ನಡು ಗಡ್ಡೆಯ ಜನ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

news18-kannada
Updated:September 21, 2020, 8:59 PM IST
ಕರಾವಳಿಯಲ್ಲಿ ಮಳೆಯ ಆರ್ಭಟ; ಜಲ ಪ್ರಳಯ ಸೃಷ್ಟಿಸಿದೆ ಹಲವು ಅವಾಂತರ!
ಮಳೆ ಸೃಷ್ಟಿಸಿರುವ ಅವಾಂತರ.
  • Share this:
ಉತ್ತರ ಕನ್ನಡ (ಸೆಪ್ಟೆಂಬರ್​ 21): ಕೃಷ್ಣ ನಗರಿಯಲ್ಲಿ ಸುರಿದ ಮಹಾಮಳೆಗೆ ಅಪಾರ ಹಾನಿ ಸಂಭವಿಸಿದೆ. ನೆರೆಯ ನೀರು ಇಳಿಯುತ್ತಿದ್ದಂತೆ ಸಮಸ್ಯೆಗಳ ಮಹಾಪೂರವೇ ಎದ್ದುಬರುತ್ತಿದೆ‌. ನಾಲ್ಕು ದಶಕಗಳಲ್ಲಿ ಕಂಡುಕೇಳರಿಯದ ಮಹಾಮಳೆಗೆ ಮನೆಗಳು ಧರಾಶಾಹಿಯಾಗಿವೆ. ನಿನ್ನೆ ಬಿಡುವಿಲ್ಲದೆ ಸುರಿದ ಮಳೆಯಿಂದಾಗಿ ಉಡುಪಿ ಜಿಲ್ಲಾದ್ಯಂತ ನೆರೆ ಆವರಿಸಿಕೊಂಡಿತ್ತು. ಇಂದು ಮಳೆರಾಯ ಮಾತ್ರ ಸ್ವಲ್ಪ ವಿರಾಮ ನೀಡಿದ್ದಾನೆ. ಸಮಸ್ಯೆಗಳ ವಿರಾಟ್ ದರ್ಶನ ಮಾಡಿಸಿದ್ದಾನೆ. ಇಂದು  ಮಳೆ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಹೃದಯ ಭಾಗದಲ್ಲಿರುವ ಕಲ್ಸಂಕ ಪರಿಸರದ ಅಂಗಡಿ ಸಿಬ್ಬಂದಿಗಳು ಸ್ವಚ್ಛತೆ ಕಾರ್ಯಕ್ಕೆ ಮುಂದಾಗಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳ ಜೊತೆಗೆ ಉಡುಪಿ ಶಾಸಕ ರಘುಪತಿ ಭಟ್ ಭೇಟಿ ಮಾಡಿ ವೀಕ್ಷಣೆ ಮಾಡಿದ್ದಾರೆ. ಇನ್ನು ಹಲವು ಕಡೆ ನೆರೆ ಪ್ರಮಾಣ ಇನ್ನೂ ಹಾಗೆ ಇದೆ. ಉದ್ಯಾವರ,ಕಲ್ಯಾಣಪುರ, ಬ್ರಹ್ಮಾವರ ಭಾಗದಲ್ಲಿ ನೆರೆ ಪ್ರಮಾಣ ಇನ್ನೂ ಇಳಿದಿಲ್ಲ. ತಮ್ಮ ಮನೆಗಳಿಗೆ ದೋಣಿ ಮೂಲಕ ಬಂದು ನೋಡಿದ್ರೆ ಮನೆಯೊಳಗೆ ಸೇರಿರುವ ನೀರು ಇನ್ನೂ‌ ಇಳಿದಿಲ್ಲ ಹೀಗಾಗಿ ನೀರು ಇಳಿಯೋವರೆಗೆ ಕಾಯುತ್ತಿದ್ದಾರೆ ಜನ.

‌ ಜೊತೆಗೆ ಅಲೆವೂರು ಗ್ರಾಮದಲ್ಲಿ ನೆರೆಯಲ್ಲಿ ‌ಸಿಲುಕಿದ್ದ ನಿವಾಸಿಗಳನ್ನ ಮಣಿಪಾಲ‌ ಪೊಲೀಸ್ ಠಾಣೆಯ ಕ್ರೈಂ ಬ್ರ್ಯಾಂಚ್ ಸಿಬ್ಬಂದಿಗಳಿಂದ ರೆಸ್ಕ್ಯೂ ಕಾರ್ಯ ನಡೆದಿದೆ. ಅಬ್ದುಲ್ ರಜಾಕ್ ‌ಹಾಗೂ ಥಾಮ್ಸನ್‌ ಸ್ಥಳೀಯರ ಜೊತೆ ರೆಸ್ಕ್ಯೂ  ಮಾಡಿದ್ದಾರೆ. ಮನೆಯಲ್ಲಿ ಸಿಲುಕಿದ್ದ ವೃದ್ದರು,ಮಕ್ಕಳ ರಕ್ಷಣೆ ಅಲ್ಲದೆ ಮನೆಯಲ್ಲಿದ್ದ ಗೋವುಗಳನ್ನು ಕೂಡ  ರೆಸ್ಕ್ಯೂ ಮಾಡಿ ಪೊಲೀಸರು ಶ್ಲಾಘನೆಗೆ ಕಾರಣರಾಗಿದ್ದಾರೆ.- ಇನ್ನು ಜಿಲ್ಲೆಯ‌ ನದಿಗಳು‌ ಉಕ್ಕಿ ಹರಿಯುತ್ತಿದ್ದು ಪಾಪನಾಶಿನಿ ನದಿ ನಿನ್ನೆ ಉಕ್ಕಿ ಹರಿದ ಪರಿಣಾಮ ಕುಂದಾಪುರ ಕಮಲಶಿಲೆ ದೇವಾಲಯದ ಒಳಗೆ ನೀರು ನುಗ್ಗಿದೆ.

ವರ್ಷಕ್ಕೊಮ್ಮೆ ಒಳಬರುವ ಪಾಪನಾಶಿನಿ ನದಿ ಈ ವರ್ಷ ಎರಡನೇ ಬಾರಿ ಕಾಲಿಟ್ಟಿದೆ.
ಇನ್ನು ಜಲಪ್ರಳಯ ರಾಜಕಾರಣಿ ಮನೆಯನ್ನೂ ಬಿಟ್ಟಿಲ್ಲ. ಮಾಜಿ ಸಚಿವ ದಿವಂಗತ ವಸಂತ್ ಸಾಲಿಯಾನ್ ಮನೆ ಜಲಾವೃತವಾಗಿದ್ದು ಮನೆಯವರು ನಿನ್ನೆ ಮನೆ ಮೇಲೆ ತಂಗಿದ್ದು ಇನ್ನೂ ಕೆಳಗೆ ಬರಲು ಬಿಟ್ಟಿಲ್ಲ ನೆರೆ ಸ್ಥಿತಿ.  ಇನ್ನು ಉದ್ಯಾವರ ಸೇರಿದಂತೆ ಹಲವು ಗ್ರಾಮಗಳಲ್ಲಿ ಕೃಷಿ ಭೂಮಿ ಕೆರೆಯಂತಾಗಿದ್ದು ಕೋಟ್ಯಾಂತರ ‌ನಷ್ಡ ಸಂಭವಿಸಿದೆ.

ಇದನ್ನೂ ಓದಿ : ಉತ್ತರ ಕನ್ನಡ; ನಿರಂತರ ಮಳೆಗೆ ಸಮಸ್ಯೆಗಳ ಮಹಾಪೂರ, ಕಡಲ ನಡುವೆ ತತ್ತರಿಸಿದ್ದ ಮೀನುಗಾರರ ರಕ್ಷಣೆ

ಜೊತೆಗೆ 20 ಲಕ್ಷ ಕ್ಕೂ ಹೆಚ್ಚು ಮೌಲ್ಯದ ಪಂಜರ ಮೀನುಗಳು ಕೃಷಿ ಸಂಪೂರ್ಣ ನಾಶಒಟ್ಟು 9 ಗೂಡುಗಳು ಸಂಪೂರ್ಣ ನೀರುಪಾಲಾಗಿದ್ದು 2 ಕೆಜಿ ಗಾತ್ರದ 6000 ಮೀನುಗಳು, 4 ಇಂಚಿನ ಮೀನಿನ ಮರಿಗಳು ಸಂಪೂರ್ಣ ನಾಶವಾಗಿದೆ. ಸದ್ಯ ಉಡುಪಿ ಜಿಲ್ಲೆಯಾದ್ಯಂತ ಮಳೆ ಇಳಿಮುಖ ವಾಗುತ್ತಿದೆ. ಕಳೆದ ರಾತ್ರಿಯಿಂದ ಸಂಪೂರ್ಣ ಮಳೆರಾಯ ವಿರಾಮ ಕೊಟ್ಟಿದ್ದ  ನಗರ ಪ್ರದೇಶದ ನೆರೆ ನೀರು ಸಂಪೂರ್ಣ ಇಳಿಮುಖವಾಗಿದೆ.
ನದಿಪಾತ್ರದಲ್ಲಿ ಕೆಲವೆಡೆ ನೆರೆಯ ವಾತಾವರಣ ಇನ್ನೂ ಮುಂದುವರಿದೆ. ಇಂದು ಸಂಜೆಯ ವೇಳೆಗೆ ನೆರೆ ಇಳಿಯುವ ಸಾಧ್ಯತೆ ಹೆಚ್ಚಾಗಿದೆ. ಉಡುಪಿ ಜಿಲ್ಲೆಯಲ್ಲಿ 31 ಗಂಟೆಗಳ ಕಾಲ ನಿರಂತರ ಮಳೆ ಯಾಗಿದೆ. ಜಿಲ್ಲೆಯಾದ್ಯಂತ 117ಮಿಲಿ ಮೀಟರ್ ಸರಾಸರಿ ಮಳೆಯಾಗಿತ್ತು. ಇನ್ನೆರಡು ದಿನ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಯಾಗಿದೆ.ನದಿಪಾತ್ರದ ನಡು ಗಡ್ಡೆಯ ಜನ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
Published by: MAshok Kumar
First published: September 21, 2020, 8:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading